ಬೆಳಗಾವಿಯ ಆರ್‌ಸಿಬಿ ಅಭಿಮಾನಿಯಿಂದ ಸಿಎಂಗೆ ವಿಶೇಷ ಪತ್ರ

ಬೆಳಗಾವಿಯ ಶಿವಾನಂದ ಮಲ್ಲನ್ನವರ್ ಎಂಬ ಯುವ ಆರ್‌ಸಿಬಿ ಅಭಿಮಾನಿ, ತಂಡ ಫೈನಲ್‌ನಲ್ಲಿ ಕಪ್ ಗೆದ್ದರೆ ಆ ದಿನವನ್ನು ‘ಕರ್ನಾಟಕ ರಾಜ್ಯ ಆರ್‌ಸಿಬಿ ಫ್ಯಾನ್ಸ್ ಹಬ್ಬ’ ಎಂದು ಘೋಷಿಸಿ, ರಾಜ್ಯ ಸರ್ಕಾರ ರಜೆ ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿನಂತಿ ಪತ್ರ ಬರೆದಿದ್ದಾರೆ.

ಬೆಳಗಾವಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಪ್ಲೇಆಫ್‌ನಲ್ಲಿ ಪಂಜಾಬ್ ಕಿಂಗ್ಸ್‌ಗೆ ಸೋಲುಣಿಸಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಭರ್ಜರಿಯಾಗಿ ಫೈನಲ್‌ಗೆ ಪ್ರವೇಶಿಸಿದೆ. 18 ವರ್ಷಗಳಿಂದ ಐಪಿಎಲ್ ಟ್ರೋಫಿಯ ಕನಸಿನೊಂದಿಗೆ ಚಾತಕ ಪಕ್ಷಿಯಂತೆ ಕಾಯುತ್ತಿರುವ ಆರ್‌ಸಿಬಿ ಅಭಿಮಾನಿಗಳಿಗೆ ಈ ಬಾರಿ ಗೆಲುವಿನ ಸಾಧ್ಯತೆ ಭರವಸೆಯ ಕಿರಣವನ್ನು ಮೂಡಿಸಿದೆ. ಈ ಸಂದರ್ಭದಲ್ಲಿ, ಬೆಳಗಾವಿಯ ಗೋಕಾಕ್‌ನ ಶಿವಾನಂದ ಮಲ್ಲನ್ನವರ್ ಎಂಬ ಯುವ ಆರ್‌ಸಿಬಿ ಅಭಿಮಾನಿ, ತಂಡ ಫೈನಲ್‌ನಲ್ಲಿ ಕಪ್ ಗೆದ್ದರೆ ಆ ದಿನವನ್ನು ‘ಕರ್ನಾಟಕ ರಾಜ್ಯ ಆರ್‌ಸಿಬಿ ಫ್ಯಾನ್ಸ್ ಹಬ್ಬ’ ಎಂದು ಘೋಷಿಸಿ, ರಾಜ್ಯ ಸರ್ಕಾರ ರಜೆ ಘೋಷಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿನಂತಿ ಪತ್ರ ಬರೆದಿದ್ದಾರೆ.

ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ರಾಜ್ಯದ ಕ್ರಿಕೆಟ್‌ಪ್ರಿಯರ ಗಮನ ಸೆಳೆದಿದೆ. ಶಿವಾನಂದ ಅವರ ಪತ್ರದಲ್ಲಿ, ಆರ್‌ಸಿಬಿ ಐಪಿಎಲ್ ಕಪ್ ಗೆದ್ದರೆ ಆ ದಿನವನ್ನು ಪ್ರತಿವರ್ಷ ರಾಜ್ಯ ವ್ಯಾಪಿ ಆಚರಿಸಲು ರಜೆ ಘೋಷಿಸಬೇಕು ಎಂದು ಕೋರಲಾಗಿದೆ. ಈ ವಿಶೇಷ ಮನವಿಯು ಕರ್ನಾಟಕದ ಆರ್‌ಸಿಬಿ ಅಭಿಮಾನಿಗಳಲ್ಲಿ ಉತ್ಸಾಹವನ್ನು ತುಂಬಿದೆ.

ಶಿವಾನಂದ ಮಲ್ಲನ್ನವರ್ ತಮ್ಮ ಪತ್ರದಲ್ಲಿ, “ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕರ್ನಾಟಕವನ್ನು ಪ್ರತಿನಿಧಿಸುತ್ತದೆ. ಇದು ಕೇವಲ ಕ್ರೀಡೆಯ ಗೆಲುವಲ್ಲ, ರಾಜ್ಯದ ಗೌರವದ ವಿಷಯ. ಆರ್‌ಸಿಬಿ ಫೈನಲ್‌ನಲ್ಲಿ ಕಪ್ ಗೆದ್ದರೆ, ಆ ದಿನವನ್ನು ‘ಕರ್ನಾಟಕ ರಾಜ್ಯ ಆರ್‌ಸಿಬಿ ಫ್ಯಾನ್ಸ್ ಹಬ್ಬ’ ಎಂದು ಘೋಷಿಸಿ, ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಆಚರಣೆಗೆ ವ್ಯವಸ್ಥೆ ಮಾಡಬೇಕು. ಪ್ರತಿವರ್ಷ ಈ ದಿನವನ್ನು ರಜೆ ದಿನವಾಗಿ ಆಚರಿಸಬೇಕು,” ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಈ ಮನವಿಯು ಆರ್‌ಸಿಬಿಯ ಐತಿಹಾಸಿಕ ಗೆಲುವಿನ ಕನಸಿನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆರ್‌ಸಿಬಿ ತಂಡವು 2008ರಿಂದ ಐಪಿಎಲ್‌ನಲ್ಲಿ ಭಾಗವಹಿಸುತ್ತಿದ್ದರೂ, ಇದುವರೆಗೆ ಟ್ರೋಫಿ ಗೆದ್ದಿಲ್ಲ. ಈ ಬಾರಿಯ ಫೈನಲ್ ಪ್ರವೇಶವು ತಂಡದ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. 

Share:

ಮತ್ತಷ್ಟು ಸುದ್ದಿ

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »