‘ನಮ್ಮ ಅಣ್ಣ ಇಸ್‌ ರೆಡಿ ಟು ಶೈನ್‌’: ರೋಹನ್‌ಗೆ ಕನ್ನಡದಲ್ಲಿ ಹಾರೈಸಿದ ವಿಂಬಲ್ಡನ್‌!

ವಿಂಬಲ್ಡನ್‌ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಭಾರತ ಪ್ರತಿನಿಧಿಸುವ ಕನ್ನಡದ ಆಟಗಾರ ರೋಹನ್‌ ಬೋಪಣ್ಣಗೆ ಕನ್ನಡದಲ್ಲಿ ಹಾರೈಸುವ ಮೂಲಕ ಗಮನಸೆಳೆದಿದೆ.
Namma Anna ready to Shines: Wimbledon Honors Rohan Bopanna in Kannada

ವಿಂಬಲ್ಡನ್‌ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಭಾರತ ಪ್ರತಿನಿಧಿಸುವ ಕನ್ನಡದ ಆಟಗಾರ ರೋಹನ್‌ ಬೋಪಣ್ಣಗೆ ಕನ್ನಡದಲ್ಲಿ ಹಾರೈಸುವ ಮೂಲಕ ಗಮನಸೆಳೆದಿದೆ.

ಬುಧವಾರ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ” ನಮ್ಮ ಅಣ್ಣ ಇಸ್‌ ರೆಡಿ ಟು ಶೈನ್‌’ ಎಂದು ಕಂಗ್ಲಿಷ್‌ನಲ್ಲಿ ಪೋಸ್ಟ್‌ ಮಾಡಿದೆ. ಈ ಪೋಸ್ಟ್‌ನ ಜೊತೆಗೆ, ‘ಗೋಲ್ಡನ್‌ ಸ್ಟಾರ್’ ಶೀರ್ಷಿಕೆ ಇರುವ ರೋಹನ್‌ ಬೋಪಣ್ಣ ಅವರ ಚಿತ್ರವನ್ನು ಹಂಚಿಕೊಂಡಿದೆ.

ಸಾವಿರಾರು ಮಂದಿ ಈ ಪೋಸ್ಟರ್‌ನಲ್ಲಿ ಲೈಕ್‌ ಮಾಡಿದ್ದು, ಹಂಚಿಕೊಂಡಿದ್ದಾರೆ.

45 ವರ್ಷದ ರೋಹನ್ ಬೋಪಣ್ಣ, 2006ರಿಂದ ವಿಂಬಲ್ಡನ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಕಳೆದ ವರ್ಷ 2ನೇ ರನ್ನರ್ ಅಪ್‌ ಆಗುವ ಮೂಲಕ ಇತಿಹಾಸ ಬರೆದಿದ್ದರು.

ಆಸ್ಟ್ರೇಲಿಯನ್‌ ಕಪ್‌ ಗೆದ್ದಿರುವ ರೋಹನ್‌ ಬೋಪಣ್ಣ ಈ ಬಾರಿ ಇನ್ನೂ ಮೂವರು ಆಟಗಾರರೊಂದಿಗೆ ವಿಂಬಲ್ಡನ್‌ಗೆ ಬಂದಿಳಿದಿದ್ದಾರೆ. ಯೂಕಿ ಭಾಂಬ್ರಿ, ರಿತ್ವಿಕ್‌ ಬೊಲ್ಲಿಪಲ್ಲಿ ಮತ್ತು ಎನ್ ಶ್ರೀರಾಮ್‌ ಬಾಲಾಜಿ ಇತರ ಮೂವರು.

ಇತ್ತೀಚೆಗೆ ತಾನೆ ಬುಕರ್ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡದ ಅನುವಾದಕಿ ದೀಪಾ ಭಾಸ್ತಿ ಹಾಗೂ ಮೂಲ ಲೇಖಕಿ ಬಾನು ಮುಷ್ತಾಕ್‌ ಕನ್ನಡದ ಕಂಪನ್ನು ಹರಡಿದ್ದರು. ಈಗ ರೋಹನ್ ಬೋಪಣ್ಣ ಅವರ ಮೂಲಕ ವಿದೇಶಿದಲ್ಲಿ ಕನ್ನಡ ಕುಣಿದಾಡುತ್ತಿರುವುದು ಕನ್ನಡಿಗರಲ್ಲಿ ಸಂಭ್ರಮ ಮೂಡಿಸಿದೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »