ಸ್ಕ್ಯಾಮ್ ತಪ್ಪಿಸಿಕೊಳ್ಳಲು ಕನ್ನಡದಲ್ಲಿ ಮಾತನಾಡಿ!

ಇತ್ತೀಚಿನ ದಿನಗಳಲ್ಲಿ ಸೈಬರ್ ಸ್ಕ್ಯಾಮಗಳು ಹೆಚ್ಚಾಗಿವೆ ಮತ್ತು ನಮ್ಮ ವೈಯಕ್ತಿಕ ಡೇಟಾ ಕೂಡ ಸುರಕ್ಷಿತವಾಗಿಲ್ಲ. ಈ ಸ್ಕ್ಯಾಮ್ ತಪ್ಪಿಸಿಕೊಳ್ಳಲು ಕನ್ನಡದಲ್ಲಿ ಮಾತನಾಡಿ.
Protect Your Data: Use Kannada to Outsmart Scammers

ಇತ್ತೀಚಿನ ದಿನಗಳಲ್ಲಿ ಸೈಬರ್ ಸ್ಕ್ಯಾಮಗಳು ಹೆಚ್ಚಾಗಿವೆ ಮತ್ತು ನಮ್ಮ ವೈಯಕ್ತಿಕ ಡೇಟಾ ಕೂಡ ಸುರಕ್ಷಿತವಾಗಿಲ್ಲ. ನಾವು ಎಷ್ಟೇ ಭುದ್ಧಿವಂತರಾಗಿದ್ದರು ಎಷ್ಟೋ ಬಾರಿ ಸೈಬರ್ ಮೋಸಕ್ಕೆ ಒಳಗಾಗುತ್ತೇವೆ. ಸೈಬರ್ ಸ್ಕ್ಯಾಮ್ ತಪ್ಪಿಸಿಕೊಳ್ಳಲು ಕೆಲವು ವಿಧಾನಗಳನ್ನು ತಿಳಿಯೋಣ.

1. ನಮ್ಮ ಮೊಬೈಲ್ ನಂಬರ್ ನಲ್ಲಿ DND (“Do Not Disturb) ಸೇವೆಯನ್ನು ಸಕ್ರಿಯಗೊಳಿಸಿ. (ಇದು ಉಚಿತ ಸೇವೆ: ಏರ್ಟೆಲ್ ಅಥವಾ ಜಿಯೋ). ಇದರಿಂದ ಅರ್ಧ ಸ್ಕ್ಯಾಮ್ ಕಾಲ್ ಗಳು ಕಡಿಮೆಯಾಗುತ್ತವೆ.

2.  ನಮ್ಮ ಸ್ಮಾರ್ಟ್ಫೋನಿನಲ್ಲಿ ಫೋನ್ ಬುಕ್‌/ಗೂಗಲ್ ಫೋನ್ ಆ್ಯಪ್ನ ಸೆಟ್ಟಿಂಗ್ಸ್ ನಲ್ಲಿ  caller id and spam protection ಫಿಲ್ಟರ್ ಅನ್ನು ಆನ್ ಮಾಡಿ. ಇದರಿಂದ ಇನ್ನು ಹಲವು ಸ್ಕ್ಯಾಮ್ ಕಾಲ್ ಗಳಿಂದ ತಪ್ಪಿಸಿಕೊಳ್ಳಬಹುದು.

3. ಸ್ಕ್ಯಾಮ್ ತಪ್ಪಿಸಿಕೊಳ್ಳಲು ಕನ್ನಡದಲ್ಲಿ ಮಾತನಾಡಿ

ಸಾಮಾನ್ಯವಾಗಿ ಸ್ಕ್ಯಾಮರ್ ಗಳು ಇಂಗ್ಲೀಷ್‌ ಅಥವೇ ಹಿಂದಿ ಭಾಷೆಯಲ್ಲಿ ಮಾತನಾಡುತ್ತಾರೆ. ಹಾಗು ಅವರ ಇಂಗ್ಲೀಷ್‌ ಬಹಳ ಕೆಟ್ಟದಾಗಿರುತ್ತದೆ, ನಮಗೆ ಇಂಗ್ಲೀಷ್‌ ಬರದಿದ್ದರೂ ಬೇರೆಯವರು ತಪ್ಪು ತಪ್ಪಾಗಿ ಮಾತನಾಡಿದರೆ ಬೇಗ ತಿಳಿಯುತ್ತದೆ. ನಮಗೆ ಮಾತಾನಾಡುವವರ ಬಗ್ಗೆ ಸಂದೇಹವಿದ್ದರೆ ನಾವು ಕನ್ನಡದಲ್ಲಿ ಮಾತನಾಡಬೇಕು. ಅವರು ಸಾಮಾನ್ಯವಾಗಿ ‘which language are you comfortable with’/ ನೀವು ಯಾವಭಾಷೆಯಲ್ಲಿ ಮಾತನಾಡುವಿರಿ ಎಂದು ಕೇಳಿದರೆ ಕನ್ನಡ ಎಂದು ಹೇಳಿ. ಒಂದು ಅವರಿಗೆ ಕನ್ನಡ ಬರುವುದಿಲ್ಲ. ಅಥವಾ ಕನ್ನಡದಲ್ಲಿ ಮಾತನಾಡುವವರಿಗೆ ಕಾಲ್ ವರ್ಗಾವಣೆ ಮಾಡಲಾಗುವುದಿಲ್ಲ.

  • ಸ್ಕ್ಯಾಮರ್‌ಗಳಿಗೆ ಸ್ಥಳೀಯ ಭಾಷೆ ಮಾತನಾಡುವ ಸಾಮರ್ಥ್ಯವಿಲ್ಲ.
  • ನಿಜವಾದ ಕಂಪನಿ ಅಥವಾ ಬ್ಯಾಂಕ್ ನವರು ಕನ್ನಡದಲ್ಲೂ ಸೇವೆ ನೀಡುತ್ತಾರೆ, ಸ್ಕ್ಯಾಮ್ಮರ್ ಗಳಿಗೆ ಇದು ಸಾಧ್ಯವಿಲ್ಲ.

ಸೇವೆಯನ್ನು ಕನ್ನಡದಲ್ಲಿ  ಕೇಳುವುದು ನಮ್ಮ ಹಕ್ಕು

ಟೆಲಿ ಕಾಲ್ ಸೇವೆ ಪಡೆಯುವಾಗ ನಾವು ಕನ್ನಡದಲ್ಲಿ ಮಾತನಾಡಿದರೆ ಸ್ಕ್ಯಾಮ್ಮರ್‌ಗಳಿಂದ ತಪ್ಪಿಸಿಕೊಳ್ಳುತ್ತೇವೆ ಸರಿ. ಆದರೆ ಟೆಲಿ ಕಾಲ್ ಸೇವೆಯನ್ನು ಕನ್ನಡದಲ್ಲಿ ಕೊಡಬೇಕೆಂದು ಕೇಳುವುದು ನಮ್ಮ  ಹಕ್ಕು. ಪ್ರಸ್ತುತ ಎಲ್ಲ ಸರ್ಕಾರಿ, ಖಾಸಗಿ ಮತ್ತು ಬ್ಯಾಂಕ್ ಸೇವೆಗಳು ಕನ್ನಡದಲ್ಲಿ ಲಭ್ಯವಿದೆ. ಆದರೆ ಕೆಲವು ಕಡೆ ಇಲ್ಲವಾದಾಗ ಅವರು ಕನ್ನಡ ವಿಭಾಗಕ್ಕೆ ಕೆರೆಗಳನ್ನು ವರ್ಗಾಯಿಸುತ್ತಾರೆ.

ಒಂದು ಬಾರಿ ಇಂಟರ್ನೆಟ್ ಸರ್ವಿಸ್‌ನಿಂದ ಕರೆ ಬಂದಾಗ ಅವರು ಮೊದಲಿಗೆ: “ಆ್ಯಮ್‌ ಐ ಸ್ಪೀಕಿಂಗ್ ವಿಥ್ ಮಿಸ್ಟರ್ ಅರುಣ್” ಎಂದು ಕೇಳಿದರೆ ನಾನು: “ಹಾ, ಹೌದು, ಹೇಳಿ” ಎಂದೇ ತಕ್ಷಣ ಅವರು ನಮಸ್ಕಾರ ಸರ್ ನಿಮ್ಮ ಇಂಟರ್ನೆಟ್ ಬಿಲ್… ಎಂದು ಮುಂದುವರೆಸಿದರು; ಅಲ್ಲಿಗೆ ನಾನು ತಪ್ಪು ತಪ್ಪು ಇಂಗ್ಲಿಷ್ ಮಾತನಾಡುವುದರಿಂದ ತಪ್ಪಿಸಿಕೊಂಡೆ ಮತ್ತು ನನ್ನ ಭಾಷಾ ಸ್ವತಂತ್ರ ಉಳಿಯಿತು.

ಎಚ್ಚರಿಕೆ ಸಲಹೆಗಳು

  • ನಮ್ಮ  ಮೊಬೈಲ್ ನಂಬರ್ ಗೆ DND ಸೇವೆ ಸಕ್ರಿಯಗೊಳಿಸಿ.
  • ಟೆಲಿ ಕಾಲ್ ಸೇವೆ ಪಡೆಯುವಾಗ ಕನ್ನಡದಲ್ಲಿ ಮಾತನಾಡಿ.
  • ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತನಾಡಲು ಬಲವಂತ ಪಡಿಸಿದ ಸೇವೆ ಸಂಶಯಾಸ್ಪದ.
  • OTP, ಪಾಸ್‌ವರ್ಡ್, KYC ಮಾಹಿತಿ ಎಂದಿಗೂ ಹಂಚಿಕೊಳ್ಳಬೇಡಿ.

ಕೊನೆಯದಾಗಿ ಸ್ಕ್ಯಾಮ್ಮರ್‌‌ಗಳು ಕನ್ನಡದವರಾಗಿದ್ದರೆ?

ಮೊದಲನೆಯದಾಗಿ ನಾವು ಮಾತೃಭಾಷೆಯಲ್ಲಿ ಮಾತನಾಡುತ್ತಿರುವುದರಿಂದ ಅವರ ಮಾತಿನ ಹಿಂದಿನ ಉದ್ದೇಶವನ್ನು ತಿಳಿಯಬಹುದು; ಮತ್ತು ಅವರ ಮೇಲೆ ಸಂಶಯ ಎನ್ನಿಸಿದರೆ ಮುಂದುವರೆಯುವ ಅಗತ್ಯವಿಲ್ಲ. ನಾನು ಪೊಲೀಸ್ ಎಂದು ಯಾರಾದರೂ ಕರೆಮಾಡಿ ಭಯಪಡಿಸಲು ಪ್ರಯತ್ನ ಪಟ್ಟರೆ, ನನ್ನ ಹತ್ತಿರದ ಠಾಣೆಯ ಮೂಲಕ ಸಂಪರ್ಕಿಸಿ ಎಂದು ಹೇಳಬಹುದು.

Share:

ಮತ್ತಷ್ಟು ಸುದ್ದಿ

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »