ಭಾರತದಲ್ಲಿ `ಪತ್ರಿಕಾ ಸೆನ್ಸಾರ್ಶಿಪ್ʼ : ಕಳವಳ ವ್ಯಕ್ತಪಡಿಸಿದ ʼಎಕ್ಸ್ʼ

ಭಾರತದಲ್ಲಿ ʼಪತ್ರಿಕಾ ಸೆನ್ಸಾರ್ಶಿಪ್ʼ ನಡೆಯುತ್ತಿದೆ ಎಂದು ಎಲಾನ್‌ ಮಸ್ಕ್‌ ಒಡೆತನದ ʼಎಕ್ಸ್ʼ ಸಾಮಾಜಿಕ ಜಾಲಾತಾಣ ತೀವ್ರ ಕಳವಳ ವ್ಯಕ್ತಪಡಿಸಿದೆ. 
X Slams India’s Press Censorship: 2,355 Accounts Blocked, Including Reuters

ಭಾರತದಲ್ಲಿ ʼಪತ್ರಿಕಾ ಸೆನ್ಸಾರ್ಶಿಪ್ʼ ನಡೆಯುತ್ತಿದೆ ಎಂದು ಎಲಾನ್‌ ಮಸ್ಕ್‌ ಒಡೆತನದ ʼಎಕ್ಸ್ʼ ತೀವ್ರ ಕಳವಳ ವ್ಯಕ್ತಪಡಿಸಿದೆ. 

ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್ನ ಎರಡು ಖಾತೆಗಳು ಸೇರಿದಂತೆ 2,355  ಖಾತೆಗಳನ್ನು ಸ್ಥಗಿತಗೊಳಿಸುವಂತೆ ಭಾರತ ಸರ್ಕಾರ ಜುಲೈ 3ರಂದು ಹೊರಡಿಸಿದ ಆದೇಶವು ಅತ್ಯಂತ ಕಳವಳಕಾರಿ ಸಂಗತಿ ಮತ್ತು ಭಾರತದಲ್ಲಿ ಸಾಮಾಜಿಕ ಜಾಲತಾಣಗಳ ನಿರ್ಬಂಧ ಸೇರಿದಂತೆ ಮುಂದುವರಿದಿರುವ ‘ಮಾಧ್ಯಮ ಸೆನ್ಸಾರ್ಶಿಪ್’ ಆತಂಕಕಾರಿ ಬೆಳವಣಿಗೆ ಎಂದಿದೆ ಎಕ್ಸ್.  

ಭಾರತದಲ್ಲಿ 2 ಸಾವಿರಕ್ಕೂ ಹೆಚ್ಚು ಖಾತೆಗಳನ್ನು ಸ್ಥಗಿತಗೊಳಿಸಿದ ಬಗ್ಗೆ ವಿವರಣೆ ನೀಡಿರುವ ‘ಎಕ್ಸ್’ನ ಜಾಗತಿಕ ವ್ಯವಹಾರಗಳ ತಂಡ, ’ಯಾವುದೇ ಸಮರ್ಥನೆ ನೀಡದೆ, ತುರ್ತಾಗಿ ಒಂದು ಗಂಟೆಯೊಳಗೆ  ರಾಯಿಟರ್ಸ್, ರಾಯಿಟರ್ಸ್ ವರ್ಲ್ಡ್ ಸೇರಿದಂತೆ  2,355 ಎಕ್ಸ್ ಖಾತೆಗಳನ್ನು ಸ್ಥಗಿತಗೊಳಿಸಬೇಕು. ಮುಂದಿನ ಆದೇಶದವರೆಗೆ ಈ ಖಾತೆಗಳ ಮೇಲಿನ ನಿರ್ಬಂಧ ಮುಂದುವರಿಸಬೇಕು’ ಎಂದು ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಜುಲೈ 3ರಂದು ಆದೇಶ ಹೊರಡಿಸಿತ್ತು’ ಎಂದು ಹೇಳಿದೆ.

ʼಲಭ್ಯವಿರುವ ಕಾನೂನಿನ ಎಲ್ಲ ಆಯ್ಕೆಗಳನ್ನು ನಾವೂ ಪರಿಶೀಲಿಸುತ್ತಿದ್ದೇವೆ. ಭಾರತದಲ್ಲಿ ತೊಂದರೆಗೊಳಗಾಗಿರುವ ಬಳಕೆದಾರರು ಕೋರ್ಟ್ ಮೂಲಕ ಕಾನೂನಿನ ನೆರವು ಪಡೆದುಕೊಳ್ಳಬಹುದು ಎಂದು ಎಕ್ಸ್ ಹೇಳಿದೆ.   

ಸ್ಥಗಿತಗೊಳಿಸಲಾಗಿದ್ದ ಖಾತೆಗಳನ್ನು ‘ಎಕ್ಸ್’ ಕೆಲವೇ ಗಂಟೆಗಳಲ್ಲಿ ಪುನಃಸ್ಥಾಪಿಸಿತ್ತು. ಎಕ್ಸ್ಗೆ ತಿರುಗೇಟು ನೀಡಿದ್ದ ಸರ್ಕಾರ, ಸತ್ಯವನ್ನು ತಿರುಚಿದೆ ಮತ್ತು ರಾಯಿಟರ್ಸ್ ಖಾತೆಗಳನ್ನು ಅನಿರ್ಬಂಧಿಸುವುದನ್ನು ವಿಳಂಬ ಮಾಡಿದೆ ಎಂದು ಆರೋಪಿಸಿತ್ತು.

ರಾಯಿಟರ್ಸ್ಗೆ ಲಿಂಕ್ ಮಾಡಲಾದ ಎಕ್ಸ್ ಖಾತೆಗಳನ್ನು ನಿರ್ಬಂಧಿಸಲು ಜುಲೈ 3ರಂದು ಯಾವುದೇ ಹೊಸ ಆದೇಶವನ್ನು ಹೊರಡಿಸಿಲ್ಲ ಎಂದು ಸರ್ಕಾರ ಮತ್ತೊಮ್ಮೆ ಪುನರುಚ್ಚರಿಸಿತ್ತು.

ಭಾರತದಲ್ಲಿ ರಾಯಿಟರ್ಸ್ ಮತ್ತು ರಾಯಿಟರ್ಸ್ ವರ್ಲ್ಡ್ ಅನ್ನು ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ನಿರ್ಬಂಧಿಸಿದ ಕ್ಷಣ, ಸರ್ಕಾರವು ಅವುಗಳನ್ನು ಅನಿರ್ಬಂಧಿಸಲು ಎಕ್ಸ್ಗೆ ಪತ್ರ ಬರೆದಿದೆ. ಸರ್ಕಾರವು ಜುಲೈ 5, 2025ರ ತಡರಾತ್ರಿಯಿಂದ ಎಕ್ಸ್ ಅನ್ನು ಅನುಸರಿಸಿದೆ ಮತ್ತು ನಿರಂತರವಾಗಿ ಅದರೊಟ್ಟಿಗೆ ತೊಡಗಿಕೊಂಡಿತ್ತು ಎಂದು ಸಚಿವಾಲಯ ಹೇಳಿಕೊಂಡಿದೆ.

ಕೇಂದ್ರವು ಎಕ್ಸ್ ಪ್ರಕ್ರಿಯೆಯ ಸುತ್ತಲಿನ ತಾಂತ್ರಿಕ ಅಂಶಗಳನ್ನು ಅನಗತ್ಯವಾಗಿ ಬಳಸಿಕೊಂಡಿತು ಮತ್ತು ಯುಆರ್ಎಲ್ಗಳ ಮೇಲಿನ ನಿರ್ಬಂಧ ತೆಗೆಯಲಿಲ್ಲ ಎಂದು ಹೇಳಿದೆ. ʼಆದಾಗ್ಯೂ, ಗಂಟೆಯ ಆಧಾರದ ಮೇಲೆ ಸಾಕಷ್ಟು ಅನುಸರಣೆಯ ನಂತರ, ಎಕ್ಸ್ ಅಂತಿಮವಾಗಿ ಜುಲೈ 6, 2025 ರಂದು ರಾತ್ರಿ 9ಗಂಟೆಯ ನಂತರ ರಾಯಿಟರ್ಸ್ ಮತ್ತು ಇತರ ಯುಆರ್ಎಲ್ಗಳನ್ನು ಪುನಃಸ್ಥಾಪಿಸಿತು. ರಾಯಿಟರ್ಸ್ ಮೇಲಿನ ನಿರ್ಬಂಧ ತೆಗೆಯಲು ಅವರು 21ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡರು,ʼ ಎಂದು ಸಚಿವಾಲಯ ತಿಳಿಸಿದೆ.

 

Share:

ಮತ್ತಷ್ಟು ಸುದ್ದಿ

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »