ವಿಶ್ವ ಚೆಸ್ ದಿನ: ಭಾರತದ ಚದುರಂಗ ಚಾಂಪಿಯನ್‌ಗಳ ಆಚರಣೆ

ಚದುರಂಗ ಎಂದಾಕ್ಷಣ ನಮಗೆಲ್ಲ ಮೊದಲು ನೆನಪಾಗುವುದೇ ಮಹಾಭಾರತ. ಪಾಂಡವರನ್ನು ಚದುರಂಗ ಆಟಕ್ಕೆ ಕರೆದ ಕೌರವರು ಅವರಿಂದ ಎಲ್ಲವನ್ನೂ ಕಿತ್ತುಕೊಂಡಿದ್ದು.
World Chess Day

ಚದುರಂಗ ಎಂದಾಕ್ಷಣ ನಮಗೆಲ್ಲ ಮೊದಲು ನೆನಪಾಗುವುದೇ ಮಹಾಭಾರತ. ಪಾಂಡವರನ್ನು ಚದುರಂಗ ಆಟಕ್ಕೆ ಕರೆದ ಕೌರವರು ಅವರಿಂದ ಎಲ್ಲವನ್ನೂ ಕಿತ್ತುಕೊಂಡು, ಕೊನೆಗೆ ದ್ರೌಪದಿಯ ವಸ್ತ್ರಾಪಹರಣ ಮಾಡಿ ಕುರುಕ್ಷೇತ್ರದಂತಹ ಮಹಾಯುದ್ಧಕ್ಕೆ ಕಾರಣವಾದದ್ದೇ ಈ ಚದುರಂಗದ ಆಟ.

ಜುಲೈ 20 ವಿಶ್ವ ಚೆಸ್ ದಿನವಾಗಿದ್ದು, ಮೊಟ್ಟಮೊದಲ ಬಾರಿಗೆ ಯುನೆಸ್ಕೊ (UNESCO) ಚೆಸ್ ದಿನಾಚರಣೆಯನ್ನು ಪ್ರಸ್ತಾಪಿಸಿತು. 1966ರಲ್ಲಿ ಎಫ್‌ಐಡಿಇ ಚೆಸ್ ದಿನಾಚರಣೆಯನ್ನು ಆರಂಭಿಸಿತು. ಸದ್ಯ ಒಳಾಂಗಣ ಆಟಗಳಲ್ಲಿ ಪ್ರಪಂಚದ ಅತ್ಯಂತ ಜನಪ್ರಿಯ ಆಟವೆಂದರೆ ಅದು ಚೆಸ್.

ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಚೆಸ್ ಆಡಿಯೇ ಇರುತ್ತಾರೆ. ಕೆಲವರು ಹವ್ಯಾಸವಾಗಿ ಬೆಳೆಸಿಕೊಂಡರೆ, ಇನ್ನೂ ಕೆಲವರು ಅದನ್ನು ಒಮ್ಮೆ ಆಡಿ ಬಿಟ್ಟು ಬಿಡುತ್ತಾರೆ. ಇನ್ನೂ ಕೆಲವರು ಚೆಸ್‌ನನ್ನು ತಮ್ಮ ನೆಚ್ಚಿನ ಆಟವಾಗಿಸಿಕೊಂಡು ಅದರಲ್ಲಿ ಸಾಧನೆಗಳನ್ನೂ ಮಾಡಿದ್ದಾರೆ.

ಚೆಸ್ ಅಥವಾ ಚದುರಂಗ ಬುದ್ಧಿವಂತಿಕೆ, ಜಾಣತನದ ಆಟ ಅಲ್ಲದೇ ಇದೊಂದು ಮೈಂಡ್‌ಗೇಮ್ ಎನ್ನಬಹುದು. ಈ ಆಟವು ಆಟಗಾರನ ಆಲೋಚನೆ, ಯೋಜನಾ ಮತ್ತು ಯೋಚನಾ ಸಾಮರ್ಥ್ಯ ಹಾಗೂ ಮುಂದಾಲೋಚನೆಗಳನ್ನು ಅವಲಂಬಿಸಿದ ಆಟ. ಇಲ್ಲಿ ಅದೃಷ್ಟದ ಆಟಕ್ಕೆ ಅವಕಾಶವಿಲ್ಲ.

ಚದುರಂಗದ ಇತಿಹಾಸ

ಸುಮಾರು 1500 ವರ್ಷಗಳ ಹಿಂದಿನ ಬೇರುಗಳನ್ನು ‘ಚದುರಂಗ’ ಆಟವು ಹೊಂದಿದೆ. ಈ ಆಟ ಭಾರತದಲ್ಲಿ ಹುಟ್ಟಿಕೊಂಡಿತು ಎಂಬ ನಂಬಿಕೆ ಇದೆ. 6ನೇ ಶತಮಾನಕ್ಕೂ ಮೊದಲೇ ಚತುರಂಗ ಎಂಬ ಹೆಸರಿನಿಂದ ಈ ಆಟವನ್ನು ಆಡಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಈ ಆಟವು ಭಾರತದಲ್ಲಿ ಜನಪ್ರಿಯವಾಯಿತು, ನಂತರ ಪರ್ಷಿಯಾ, ಅರೇಬಿಯಾ, ಹಾಗೂ ಯೂರೋಪ್ ದೇಶಗಳಿಗೆ ಹರಡಿತು.

ನಂತರ, ಪ್ರಪಂಚದಾದ್ಯಂತ ಜನಪ್ರಿಯ ಆಟವಾದ ನಂತರ, ಚೆಸ್ ಸಂಸ್ಥೆಯೊಂದನ್ನು ಸ್ಥಾಪಿಸಲಾಯಿತು. ಅದುವೇ ಸ್ವಿಟ್ಜರ್‌ಲೆಂಡ್ ಮೂಲದ ಅಂತರರಾಷ್ಟ್ರೀಯ ಸಂಸ್ಥೆ ಎಫ್‌ಐಡಿಇ (ಇಂಟರ್‌ನ್ಯಾಷನಲ್ ಚೆಸ್ ಫೆಡರೇಶನ್). ಈ ಸಂಸ್ಥೆಯ ಸ್ಥಾಪನೆಗಿದ್ದ ಎಲ್ಲ ಅಡೆತಡೆಗಳನ್ನು ಮೀರಿ ಇದು 1924ರಲ್ಲಿ ಅಧಿಕೃತ ಸಂಸ್ಥೆಯಾಗಿ ರಚನೆಯಾಯಿತು.

1924ರಿಂದ ಎಫ್‌ಐಡಿಇ ಒಲಿಂಪಿಯಾಡ್‌ಗಳು, ವಿಶ್ವ ಚಾಂಪಿಯನ್‌ಶಿಪ್‌ಗಳು ಮತ್ತು ಸಾವಿರಾರು ಇತರ ಪಂದ್ಯಾವಳಿಗಳನ್ನು ನಡೆಸುತ್ತಿದೆ ಮತ್ತು ನಿಯಮಗಳು ಮತ್ತು ಪ್ರಶಸ್ತಿಗಳನ್ನು ವಿತರಿಸುವ ಉಸ್ತುವಾರಿಯನ್ನು ಹೊಂದಿದೆ.

ಆಧುನಿಕ ಚೆಸ್ ಆರಂಭವಾದಾಗಿನಿಂದ ಇಂದಿನವರೆಗೆ ಅದರ ಪಯಣ ಬಹುದೂರ ಸಾಗಿದೆ. ಚೆಸ್ ಆಡಿ ವಿಶ್ವ ಮಟ್ಟದ ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದಾರೆ. ಕಾಸ್ಪರೊವ್ ನಂತರ, ರಷ್ಯಾದ ವ್ಲಾಡಿಮಿರ್ ಕ್ರಾಮ್‌ನಿಕ್ ಮತ್ತು ಭಾರತದ ವಿಶ್ವನಾಥನ್ ಆನಂದ್ ಚೆಸ್ ಆಟದ ದಂತಕಥೆಯಾದವರು.

ಚೆಸ್ ಆಟದಲ್ಲಿ ಭಾರತೀಯರ ಸಾಧನೆ

ವಿಶ್ವನಾಥನ್ ಆನಂದ್ ವಿಶ್ವ ಚಾಂಪಿಯನ್‌ಶಿಪ್ ಪಂದ್ಯಗಳನ್ನು ಸತತವಾಗಿ ಗೆಲ್ಲುವ ಮೂಲಕ ಮತ್ತು 7 ವರ್ಷಗಳಿಗೂ ಹೆಚ್ಚು ಕಾಲ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಮೂಲಕ ಚೆಸ್‌ನ ದಂತಕಥೆಯಾಗಿದ್ದಾರೆ. ಯುವ ಚೆಸ್ ಆಟಗಾರರಿಗೆ ಸ್ಪೂರ್ತಿಯಾಗಿದ್ದಾರೆ.

ಭಾರತದಲ್ಲಿ ಚೆಸ್ ಆಟದಲ್ಲಿ ಸಾಧನೆ ಮಾಡಿದ ಅನೇಕ ಆಟಗಾರರಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದವರೂ ಇದ್ದಾರೆ. ಗುಕೇಶ್ ಡೊಮ್ಮರಾಜು, ವಿಶ್ವನಾಥನ್ ಆನಂದ್‌ರ ನಂತರ ಭಾರತದ ಎರಡನೇ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಕೇವಲ 18 ವರ್ಷ ವಯಸ್ಸಿನಲ್ಲಿ ವಿಶ್ವ ಚೆಸ್ ಚಾಂಪಿಯನ್ ಆದ ಭಾರತೀಯ ಚೆಸ್ ಆಟಗಾರ ಇವರು. ಈ ಯುವ ಆಟಗಾರ ಚೀನಾದ ಡಿಂಗ್ ಲಿರೇನ್ ಅವರನ್ನು ಸೋಲಿಸಿ ವಿಶ್ವದ ಅತ್ಯಂತ ಚಿಕ್ಕವಯಸ್ಸಿನ ಚಾಂಪಿಯನ್ ಆದರು.

ಇದನ್ನೂ ಓದಿ | “ಕ್ಯಾಪ್ಟನ್ ಕೂಲ್: ಧೋನಿಯ ಐತಿಹಾಸಿಕ ಕ್ರಿಕೆಟ್ ಯಾತ್ರೆ”

ಆರ್. ಪ್ರಗ್ನಾನಂದ, ಯುವ ಚೆಸ್ ಆಟಗಾರ, 2023ರ ಚೆಸ್ ವಿಶ್ವಕಪ್‌ನಲ್ಲಿ ರನ್ನರ್-ಅಪ್ ಆಗಿದ್ದರು ಮತ್ತು ವಿಶ್ವನಾಥನ್ ಆನಂದ್‌ರ ನಂತರ ಟಾಟಾ ಸ್ಟೀಲ್ ಚೆಸ್ ಪಂದ್ಯಾವಳಿಯನ್ನು ಗೆದ್ದ ಏಕೈಕ ಭಾರತೀಯ.

ಕೊನೇರು ಹಂಪಿ, ಇವರು ಭಾರತದ ಪ್ರಮುಖ ಮಹಿಳಾ ಚೆಸ್ ಆಟಗಾರ್ತಿ. ಅವರು ಮಹಿಳಾ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ ರನ್ನರ್-ಅಪ್ ಮತ್ತು ಎರಡು ಬಾರಿ ಮಹಿಳಾ ವಿಶ್ವ ರಾಪಿಡ್ ಚೆಸ್ ಚಾಂಪಿಯನ್ ಆಗಿದ್ದಾರೆ. ಹೀಗೆ ಹೇಳುತ್ತಾ ಹೋದರೆ ಚೆಸ್ ಆಟಗಾರರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇತ್ತೀಚಿನ ದಿನಗಳಲ್ಲಿ ಚೆಸ್‌ನತ್ತ ಯುವಸಮೂಹ ಹೆಚ್ಚಿನ ಆಸಕ್ತಿತೋರುತ್ತಿದೆ.

ಒಂದು ಚದುರಂಗದ ಫಲಕ ಅಥವಾ ಮಣೆಯ ಮೇಲೆ 64 ಚೌಕಗಳಿದ್ದು, ಕಪ್ಪು ಮತ್ತು ಬಿಳಿ ಬಣ್ಣದಲ್ಲಿರುತ್ತವೆ. ಆಟಗಾರರು ಬಿಳಿ ಅಥವಾ ಕಪ್ಪು ಬಣ್ಣದ ಕಾಯಿಗಳ ಗುಂಪನ್ನು ಬಳಸಬಹುದು. ಸಾಮಾನ್ಯವಾಗಿ ಬಿಳಿ ಬಣ್ಣದ ಕಾಯಿಹೊಂದಿರುವ ಆಟಗಾರ ಮೊದಲು ಆಟ ಆರಂಭಿಸುತ್ತಾನೆ.

ಪ್ರತಿಯೊಬ್ಬ ಆಟಗಾರನು 16 ಕಾಯಿಗಳೊಂದಿಗೆ ಪ್ರಾರಂಭಿಸುತ್ತಾನೆ: ಒಂದು ರಾಜ, ಒಂದು ರಾಣಿ, ಎರಡು ಆನೆ, ಎರಡು ಕುದುರೆ, ಎರಡು ಒಂಟೆ ಮತ್ತು ಎಂಟು ಪದಾತಿಗಳು. ಈ ಪ್ರತಿಯೊಂದು ತುಣುಕು ತನ್ನದೇ ಆದ ವಿಶಿಷ್ಟ ಚಲನೆಯ ವಿಧಾನವನ್ನು ಹೊಂದಿವೆ.

ಹೀಗೆ ವಿಶಿಷ್ಟ ರೀತಿಯಲ್ಲಿ ಚಲಿಸುವ ಕಾಯಿಗಳು ಎದುರಾಳಿಯ ಕಾಯಿಗಳ ಮೇಲೆ ದಾಳಿ ನಡೆಸುತ್ತವೆ. ಆಟದ ಉದ್ದೇಶ ಎದುರಾಳಿಯ ರಾಜನ ಮೇಲೆ ದಾಳಿ ನಡೆಸಿ ರಾಜನಿಗೆ ತಪ್ಪಿಸಿಕೊಳ್ಳಲು ಯಾವ ಚೌಕಗಳೂ ಇಲ್ಲದ ಹಾಗೆ ಮಾಡುವುದು. ಇದಕ್ಕೆ ‘ಚೆಕ್‌ಮೇಟ್’ ಎಂದು ಕರೆಯಲಾಗುತ್ತದೆ. ‘ರಾಜ ಸತ್ತಿದ್ದಾನೆ’ ಎಂಬ ಅರ್ಥವನ್ನು ನೀಡುವ ‘ಶಾ ಮತ್’ ಎಂಬ ಪದವನ್ನು ಅರೇಬಿಯನ್ನರು ಸೃಷ್ಟಿಸಿದರು. ‘ಚೆಕ್‌ಮೇಟ್’ ಎಂಬ ಪದವು ಅರೇಬಿಯಾದಿಂದ ಬಂದಿದೆ.

ಚೆಸ್‌ನ ಕೆಲವು ಸೋಜಿಗದ ಸಂಗತಿಗಳು

  • ಅರ್ಮೇನಿಯಾದಲ್ಲಿ ಚದುರಂಗ ಕಡ್ಡಾಯ ಶಾಲಾ ವಿಷಯ.
  • ಅತಿ ಹೆಚ್ಚು ಸಮಯದ ಅಧಿಕೃತ ಚೆಸ್ ಆಟ 1989ರಲ್ಲಿ ನಡೆದಿತ್ತು. ಅದು 20 ಗಂಟೆಗಳ ದೀರ್ಘಾವಧಿಯದಾಗಿತ್ತು ಮತ್ತು 269 ಚಲನೆಗಳನ್ನು ಹೊಂದಿತ್ತು.
  • ಒಂದು ಚದುರಂಗದ ಪಂದ್ಯದಲ್ಲಿ, ಪ್ರತಿ ನಡೆಯ ನಂತರ 400 ಸಂಭವನೀಯ ಚಲನೆಗಳಿವೆ.
  • ಕೇವಲ ಎರಡು ಚಲನೆಗಳಲ್ಲಿ ನಿಮ್ಮ ಎದುರಾಳಿಯನ್ನು ಚೆಕ್‌ಮೇಟ್ ಮಾಡಲು ಸಾಧ್ಯ.
  • ಸ್ಮರಣಶಕ್ತಿಯನ್ನು ಸುಧಾರಿಸಲು ಚದುರಂಗವು ಒಂದು ಸಾಬೀತಾದ ಮಾರ್ಗ.

ಚೆಸ್ ದಿನ ಆಚರಿಸಲು ಕೆಲವು ಸಲಹೆಗಳು

  • ಚೆಸ್ ಬಗ್ಗೆ ಚರ್ಚಿಸಿ: ನಿಮ್ಮ ಸ್ನೇಹಿತರ ಜೊತೆ ಅಥವಾ ಕುಟುಂಬದವರ ಜೊತೆ ಚೆಸ್ ಬಗ್ಗೆ ಮಾತನಾಡಿ.
  • ಆಟ ವೀಕ್ಷಿಸಿ: ಇತ್ತೀಚಿನ ಚೆಸ್ ಆಟಗಳನ್ನು ನೋಡಿ.
  • ಚೆಸ್ ಆಡಿ: ಮನೆಯಲ್ಲಿ ಅಥವಾ ನಿಮ್ಮ ಗೆಳೆಯರೊಟ್ಟಿಗೆ ಚೆಸ್ ಆಡಿ.
  • ಚೆಸ್ ಚಟುವಟಿಕೆಯಲ್ಲಿ ಭಾಗವಹಿಸಿ: ಎಲ್ಲಿಯಾದರೂ ಚೆಸ್ ದಿನಾಚರಣೆ ಚಟುವಟಿಕೆ ಆಯೋಜಿಸಿದ್ದರೆ ಭಾಗವಹಿಸಿ.
  • ಮಕ್ಕಳನ್ನು ಪ್ರೋತ್ಸಾಹಿಸಿ: ನಿಮ್ಮ ಮಕ್ಕಳು ಚೆಸ್ ಆಡಲು ಪ್ರೋತ್ಸಾಹಿಸಿ ಮತ್ತು ಅವರೊಟ್ಟಿಗೆ ಆಡಿ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »