ಭಾರತಕ್ಕೆ ಮೊದಲ ಮಹಿಳಾ ವಿಶ್ವಕಪ್‌; ಇತಿಹಾಸ ಬರೆದ ವನಿತೆಯರು

ದಕ್ಷಿಣಾ ಆಫ್ರಿಕಾ ತಂಡವನ್ನು ಸೋಲಿಸಿ 52 ವರ್ಷಗಳ ಬಳಿಕ ಮಹಿಳಾ ಕ್ರಿಕೆಟ್ ವಿಶ್ವಕಪ್ ತನ್ನದಾಗಿಸಿಕೊಂಡ ಭಾರತೀಯ ಮಹಿಳೆಯರ ಕ್ರಿಕೆಟ್‌ ತಂಡ.
indian womens cricket team wins world cup 2025
indian womens cricket team wins world cup 2025

ಭಾರತದ ಮಹಿಳಾ ಕ್ರಿಕೆಟ್‌ ತಂಡ ಇಂದು (ನವೆಂಬರ್ 2) ಇತಿಹಾಸ ಬರೆಯಿತು. ನವಿಮುಂಬೈನ ಡಿವೈ ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಪೇರಿಸಿದ್ದ 298 ಗುರಿ ಮುಟ್ಟದಂತೆ ಎದುರಾಳಿಯನ್ನು 52 ರನ್‌ಗಳಿಗೆ ಮೊದಲ ಮಹಿಳಾ ವಿಶ್ವಕಪ್‌ ತನ್ನದಾಗಿಸಿಕೊಂಡಿತು.

ಆಸ್ಪ್ರೇಲಿಯಾ ವಿರುದ್ಧ ಸೆಮಿಫೈನಲ್‌ ಪಂದ್ಯ ಇಡೀ ದೇಶವೇ ಹೆಮ್ಮೆಯಿಂದ ಬೀಗುವಂತೆ ಮಾಡಿತ್ತು. ಎರಡು ಬಾರಿ ಫೈನಲ್‌ ತಲುಪಿದ್ದರು, ಕಪ್‌ನಿಂದ ದೂರ ಉಳಿದಿದ್ದ ಭಾರತದ ವನಿತೆಯರು ಸೆಮಿಫೈನಲ್‌ ನೀಡಿದ ಪ್ರದರ್ಶನದಿಂದಾಗಿ ಈ ಬಾರಿ ಕಪ್‌ ನಮ್ದೇ ಎಂಬ ಕ್ಷಣಕ್ಕಾಗಿ ಕಾತರದಿಂದ ಕಾದಿದ್ದರು. ನೀಲಿ ಜೆರ್ಸಿ ತೊಟ್ಟ ವನಿತೆಯರು ಭಾರತೀಯರ ನಿರೀಕ್ಷೆಯನ್ನು ಹುಸಿ ಮಾಡದೆ ಕಪ್‌ ತಮ್ಮದಾಗಿಸಿಕೊಂಡರು.

ಮೊದಲು ಬ್ಯಾಟ್‌ ಮಾಡಿದ ಭಾರತ ತಂಡದ ಪರ ಸ್ಮೃತಿ ಮಂಧಾನ 45, ಶೆಫಾಲಿ ವರ್ಮಾ 87 , ದೀಪ್ತಿ ವರ್ಮಾ 58 ರನ್‌ಗಳಿಸುವ ಮೂಲಕ ಭಾರತ ಉತ್ತಮ ರನ್‌ ಪೇರಿಸಲು ನೆರವಾದರು. ಭಾರತ 7 ವಿಕೆಟ್‌ ಕಳೆದುಕೊಂಡು 50 ಓವರ್‍ಗಳಲ್ಲಿ 298 ರನ್‌ಗಳನ್ನು ದಾಖಲಿಸಿತು.

ದಕ್ಷಿಣ ಭಾರತದ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಅಯಾಬೊಂಗಾ, 3 ವಿಕೆಟ್‌ಗಳನ್ನು ಪಡೆದರು.

299ರನ್‌ಗಳ ಗುರಿಯನ್ನು ಬೆನ್ನು ಹತ್ತಿದ ಸೌತ್‌ ಆಫ್ರಿಕಾ ತಂಡಕ್ಕೆ ಭಾರತದ ಬೌಲರ್‍ಗಳು 50 ರನ್‌ ಗಡಿ ದಾಟುತ್ತಿದ್ದಂತೆ ಆಘಾತ ನೀಡಿದರು. 9ನೇ ಓವರಿನಲ್ಲಿ ಮೊದಲ ವಿಕೆಟ್‌ ಕಳೆದುಕೊಂಡ ಆಫ್ರಿಕಾ ತಂಡ ಹನ್ನೊಂದನೆಯ ಓವರಿನ ಅಂತ್ಯದ ಹೊತ್ತಿಗೆ ಇನ್ನೊಂದು ವಿಕೆಟ್‌ ಒಪ್ಪಿಸಿತು. ಕುರಿಯುತ್ತಿದ್ದ ರನ್‌ ರೇಟ್‌ ಕಾಪಾಡಿಕೊಳ್ಳಲು ಹೆಣಗಿದ ದಕ್ಷಿಣ ಆಫ್ರಿಕಾದ ಬ್ಯಾಟರ್‍ಗಳನ್ನು ಭಾರತದ ಬೌಲರ್‍ಗಳು ದೃತಿಗೆಡಿಸುವಲ್ಲಿ ಯಶಸ್ವಿಯಾದರು.

ದಕ್ಷಿಣ ಆಫ್ರಿಕಾ ಪರ ಲಾರಾ ವೋಲ್‌ವಾರ್ಟ್ ಶತಕಗಳಿಸಿದರೂ ತಂಡವನ್ನು ಗೆಲ್ಲಿಸುವುದಕ್ಕೆ ನೆರವಾಗಲಿಲ್ಲ. ಇತ್ತ ಭಾರತ ತಂಡದ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶ ನೀಡಿದ ದೀಪ್ತಿ ಮತ್ತು ಶೆಫಾಲಿ ಬೌಲಿಂಗ್‌ನಲ್ಲೂ ತಮ್ಮ ಕೈ ಚಳಕ ತೋರಿಸಿ, 5 ಮತ್ತು 2 ವಿಕೆಟ್‌ಗಳನ್ನು ಗಳಿಸಿ, ದಕ್ಷಿಣ ಆಫ್ರಿಕಾದ ಗೆಲುವಿನ ಕನಸನ್ನು ಭಗ್ನ ಮಾಡಿದರು.

ದಕ್ಷಿಣಾ ಆಫ್ರಿಕಾ ಗೆದ್ದಿದ್ದರೆ, ವಿಶ್ವಕಪ್‌ ಮೊದಲ ಬಾರಿಗೆ ತಮ್ಮದಾಗಿಸಿಕೊಂಡ ಕೀರ್ತಿ ತಮ್ಮದಾಗಿಸಿಕೊಳ್ಳುತ್ತಿದ್ದರು. ಆದರೆ ಸತತ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದ ಭಾರತ ತಂಡದ ವನಿತೆಯರು ಕಪ್‌ ಗೆಲ್ಲುವ ಕನಸನ್ನು ಸಾಕಾರಗೊಳಿಸಿಕೊಂಡರು.

ಅರ್ಧ ಶತಮಾನದ ಇತಿಹಾಸ, ಭಾರತಕ್ಕೆ ಈಗ ಕಿರೀಟ

1973ರಿಂದ ಐಸಿಸಿ ಮಹಿಳೆಯರ ವಿಶ್ವಕಪ್‌ ಪಂದ್ಯಗಳು ನಡೆಯುತ್ತಿವೆ. ಈ ಪೈಕಿ ಆಸ್ಟ್ರೇಲಿಯಾ 7 ಬಾರಿ, 4 ಬಾರಿ ಇಂಗ್ಲೆಂಡ್, ನ್ಯೂಜಿಲೆಂಡ್‌ ತಂಡ ಒಂದು ಬಾರಿ ವಿಶ್ವಕಪ್‌ ಗೆದ್ದಿದ್ದವು. ಹದಿಮೂರು ಬಾರಿ ನಡೆದ ವಿಶ್ವಕಪ್‌ ನಲ್ಲಿ ಭಾರತ 2005ರಲ್ಲಿ ಆಸ್ತ್ರೇಲಿಯಾ ವಿರುದ್ಧ 98 ರನ್‌ಗಳಿಂದ ಸೋತು ಕಪ್‌ ಗೆಲ್ಲುವ ಅವಕಾಶ ಕಳದುಕೊಂಡಿತ್ತು. ಪುನಃ 2017ರಲ್ಲಿ ಇಂಗ್ಲೆಂಡ್‌ ವಿರುದ್ಧ ಫೈನಲ್‌ ಪಂದ್ಯದಲ್ಲಿ ಕೇವ 9 ರನ್‌ಗಳಿಗೆ ಕಪ್‌ ಕಳೆದುಕೊಂಡಿತ್ತು. ಅದರೆ ಈ ಭಾರಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡವನ್ನು ಸೆಮಿಫೈನಲ್‌ನಲ್ಲೇ ಮಣಿಸಿದ ಭಾರತದ ವನಿತೆಯರ ತಂಡ ಫೈನಲ್‌ನಲ್ಲಿ ಜಯಗಳಿಸುವ ಆತ್ಮವಿಶ್ವಾಸದಲ್ಲಿತ್ತು.

ಹರ್ಮನ್‌ಪ್ರೀತ್‌ಕೌರ್‍ ನಾಯಕತ್ವದ, ತಂಡದ ಎಲ್ಲ ಆಟಗಾರರ ಒಗ್ಗಟ್ಟು ಭಾರತಕ್ಕೆ ವಿಶ್ವಕಪ್‌ ಗೆದ್ದು ತರುವಲ್ಲಿ ಯಶಸ್ವಿಯಾದವು.

ಪ್ರಶಂಸೆ, ಮೆಚ್ಚುಗೆ, ಅಭಿನಂದನೆ

ಭಾರತದ ಮಹಿಳಾ ತಂಡ ವಿಶ್ವಕಪ್‌ ಗೆದ್ದ ಹಿನ್ನೆಲೆಯಲ್ಲಿ ಹಿರಿಯ ಕ್ರಿಕೆಟಿಗರು ಅಪಾರ ಪ್ರಶಂಸೆ ಹಾಗೂ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ.

ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಸಚಿನ್‌ ತೆಂಡೂಲ್ಕರ್ ಟ್ವೀಟ್‌ ಮಾಡಿ, “1983, (ಭಾರತ ವಿಶ್ವಕಪ್‌ ಗೆದ್ದ ವರ್ಷ) ದೊಡ್ಡದಾಗಿ ಕನಸು ಕಾಣುವುದಕ್ಕೆ ಮತ್ತು ಆ ಕನಸುಗಳನ್ನು ಬೆನ್ನು ಹತ್ತುವುದಕ್ಕೆ ಸ್ಫೂರ್ತಿ ನೀಡಿತು. ಇಂದು ನಮ್ಮ ಮಹಿಳಾ ಕ್ರಿಕೆಟ್ ತಂಡ, ನಿಜಕ್ಕೂ ವಿಶೇಷವಾದದ್ದನ್ನು ಸಾಧಿಸಿದೆ. ದೇಶಾದ್ಯಂತ ಇರುವ ಯುವತಿಯರು ಬ್ಯಾಟ್‌ ಮತ್ತು ಬಾಲ್‌ ನೊಂದಿಗೆ ಕ್ರೀಡಾಂಗಣಕ್ಕೆ ಇಳಿಯುವುದಕ್ಕೆ ಮತ್ತು ಒಂದು ದಿನ ನಾವೂ ಟ್ರೋಫಿ ಎತ್ತಿ ಹಿಡಿಯಬಲ್ಲೆವು ಎಂದು ನಂಬುವುದಕ್ಕೆ ಸ್ಫೂರ್ತಿಯಾಗಿದೆ. ಇದು ಭಾರತೀಯ ಮಹಿಳಾ ಕ್ರಿಕೆಟ್‌ನ ಪಯಣದಲ್ಲಿ ಒಂದು ನಿರ್ಣಾಯಕ ಕ್ಷಣ.ವೆಲ್‌ ಡನ್‌ ಟೀಮ್‌ ಇಂಡಿಯಾ. ದೇಶವೇ ಹೆಮ್ಮೆ ಪಡುವಂತೆ ಮಾಡಿದಿರಿ”

ವಿವಿಎಸ್‌ಲಕ್ಷ್ಮಣ್‌ ಕೂಡ ಟ್ವೀಟ್‌ ಮಾಡಿದ್ದು, ” ವಿಶ್ವ ಚಾಂಪಿಯನ್ನರಿಗೆ ನಮನ. ವಿಶ್ವಕಪ್‌ ಗೆದ್ದ ಭಾರತದ ತಂಡಕ್ಕೆ ಹೃದಯಪೂರ್ವಕ ಅಭಿನಂದನೆಗಳು. ನಿಜಕ್ಕೂ ಸ್ಫೂರ್ತಿ ತುಂಬುವಂತಹ ಪ್ರದರ್ಶನ. ಇದು ದೇಶಕ್ಕೆ ಅತೀವ ಹೆಮ್ಮೆ ಮೂಡಿಸಿರುವುದಷ್ಟೇ ಅಲ್ಲ, ಒಂದು ತಲೆಮಾರು ದೊಡ್ಡದಾಗಿ ಕನಸು ಕಾಣುವುದಕ್ಕೆ ಪ್ರೇರಣೆಯಾಗಿದೆ. ಈ ಗೆಲುವಿನ ಸದ್ದು ತಲೆಮಾರುಗಳ ಕಾಲ ಪ್ರತಿಧ್ವನಿಸಲಿದೆ”ಎಂದಿದ್ದಾರೆ.

ಕನ್ನಡಿಗ, ರಾಬಿನ್‌ ಉತ್ತಪ್ಪ ತಮ್ಮ ಟ್ವೀಟ್‌ನಲ್ಲಿ , ಅಮೋಲ್‌ ಮಜುಮ್‌ದಾರ್‍ ಅವರನ್ನು ನೆನೆದಿದ್ದು, ” ಅಮೋಲ್‌ ಆಟದ ಅಂಗಣದಲ್ಲಿ ತಮಗೆ ಸಿಗಬೇಕಾದ ಶ್ರೇಯ ಸಿಗದೇ ಹೋಗಿದ್ದನ್ನು ಈತ ವಿಶ್ವ ಚಾಂಪಿಯನ್‌ ರೂಪದಲ್ಲಿ ಪಡೆದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂಬೈ ಮತ್ತು ಅಸ್ಸಾಮ್‌ ತಂಡಗಳ ಪರ ಆಡಿದ ಅಮೋಲ್‌ ಮಂಜುಮ್‌ದಾರ್‍ ಅವರಿಗೆ ರಾಷ್ಟ್ರೀಯ ತಂಡದ ಭಾಗ ಆಗುವ, ಭಾರತ ಪ್ರತಿನಿಧಿಸುವ ಅವಕಾಶವೇ ಸಿಗಲಿಲ್ಲ. ಆದರೆ ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಕೋಚ್‌ ಆಗಿ, ವಿಶ್ವ ಚಾಂಪಿಯನ್‌ ತಂಡದ ಭಾಗವಾಗಿದ್ದಾರೆ ಎಂಬುದನ್ನು ಉತ್ತಪ್ಪ ತಮ್ಮ ಟ್ವೀಟ್‌ ಮೂಲಕ ಹೇಳಲು ಯತ್ನಿಸಿದ್ದಾರೆ.

ಇದನ್ನೂ ಓದಿ | ಜೆಮಿಮಾ ಶತಕದ ಆಟ: ಫೈನಲ್‌ಗೆ ಲಗ್ಗೆ ಇಟ್ಟ ಭಾರತ ಮಹಿಳಾ ತಂಡ

ಗೂಗಲ್‌ನ ಸಿಇಒ, ಸುಂದರ್ ಪಿಚ್ಚೈ,” ಉಗುರು ಕಚ್ಚಿ ಕಾತರದಿಂದ ನೋಡಿದಂತಹ ವಿಶ್ವಕಪ್‌ ಫೈನಲ್ ಪಂದ್ಯವಾಗಿತ್ತು. 1983, 2011ರ ನೆನಪುಗಳನ್ನು ಮರುಕಳಿಸುವಂತೆ ಮಾಡಿತು.ಭಾರತ ತಂಡಕ್ಕೆ ಅಭಿನಂದನೆಗಳು. ಒಂದು ಇಡೀ ತಲೆಮಾರಿಗೆ ಇದು ಸ್ಫೂರ್ತಿ ಎಂಬುದು ಖಚಿತ. ದಕ್ಷಿಣಾ ಆಫ್ರೀಕ ತಂಡ ಕೂಡ ಉತ್ತಮ ಪ್ರದರ್ಶನ ನೀಡಿತು’ ಎಂದು ಟ್ವೀಟ್‌ ಮಾಡಿದ್ದಾರೆ.

Share:

ಮತ್ತಷ್ಟು ಸುದ್ದಿ

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »