ಅಮನ್‌ಜೋತ್: ಫೈನಲ್ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್‌

ಸೌತ್ ಆಫ್ರಿಕಾದ ಕ್ಯಾಪ್ಟನ್ ಲಾರಾ ವೊಲ್ವಾರ್ಡ್ಟ್ ಬಾರಿಸಿದ ಚೆಂಡನ್ನು ಹಿಡಿದ ಅಮನ್‌ಜೋತ್ ಕೌರ್‌ ಕೇವಲ ಒಂದು ಕ್ಯಾಚ್ ಅಲ್ಲ. ಅದು ಭಾರತದ ಮಹಿಳಾ ಕ್ರಿಕೆಟ್ ತಂಡದ ಮೊದಲ ವಿಶ್ವಕಪ್ ಗೆಲುವಿನ ಕನಸು.
Amanjoth kaur
ಚಿತ್ರ ಕೃಪೆ : the Circle of Cricket

 ಆ ಒಂದು ಕ್ಷಣ, ಇಡೀ ದೇಶದ ಎಲ್ಲಾ ಕ್ರೀಡಾಭಿಮಾನಿಗಳ ಗಮನ ಸೆಳೆಯಿತು!. ಸೌತ್ ಆಫ್ರಿಕಾದ ಕ್ಯಾಪ್ಟನ್ ಲಾರಾ ವೊಲ್ವಾರ್ಡ್ಟ್ ಬಾರಿಸಿದ ಚೆಂಡನ್ನು ಹಿಡಿದ ಅಮನ್‌ಜೋತ್ ಕೌರ್‌ ಕೇವಲ ಒಂದು ಕ್ಯಾಚ್ ಅಲ್ಲ. ಅದು ಭಾರತದ ಮಹಿಳಾ ಕ್ರಿಕೆಟ್ ತಂಡದ ಮೊದಲ ವಿಶ್ವಕಪ್ ಗೆಲುವಿನ ಕನಸು! 2025ರ ನವೆಂಬರ್ 2ರಂದು ನವಿ ಮುಂಬೈಯ ಡಿ.ವೈ. ಪಟೀಲ್ ಸ್ಟೇಡಿಯಂನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಆ ಕ್ಯಾಚ್ ಮತ್ತು ತಜ್‌ಮಿನ್ ಬ್ರಿಟ್ಸ್‌ರ ರನ್-ಔಟ್ ಭಾರತಕ್ಕೆ ಗೆಲುವು ತಂದಿತು. ಆದರೆ ಆ ಮೈದಾನದಲ್ಲಿ ಆಡುತ್ತಿದ್ದ ಅಮನ್‌ಜೋತ್‌ಗೆ ತಿಳಿಯದೇ ಇದ್ದ ಸತ್ಯ ಅಂದರೆ ಅವಳ 90 ವರ್ಷದ ಅಮ್ಮಮ್ಮ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಹೋರಾಡುತ್ತಿದ್ದರು ಎಂದು. ಗೆಲುವಿನ ನಂತರ  ಅಮನ್‌ಜೋತ್‌ ಅವರ ಕಣ್ಣಲ್ಲಿ ಹರಿದ ಕಣ್ಣೀರ ಕಥೆ ಸಾಮಾನ್ಯ ಕುಟುಂಬದ ಹುಡುಗಿಯಿಂದ ವಿಶ್ವಕಪ್ ನಾಯಕಿಯಾಗಿ ಬದಲಾಗಿರುವ ಕಥೆ.

ಬಾಲ್ಯ ಮತ್ತು ಕುಟುಂಬ

ಅಮನ್‌ಜೋತ್ ಕೌರ್ 2000ರ ಆಗಸ್ಟ್ 25ರಂದು ಪಂಜಾಬ್‌ನ ಮೊಹಾಲಿ ಜಿಲ್ಲೆಯಲ್ಲಿ ಸಾಮಾನ್ಯ ಸಿಖ್ ಕುಟುಂಬದಲ್ಲಿ ಜನಿಸಿದರು. ತಂದೆ ಭುಪಿಂದರ್ ಸಿಂಗ್ ಮರದ ಕೆಲಸ (ಕಾರ್ಪೆಂಟರ್) ಮಾಡುತ್ತಾರೆ. ಅವರೇ ಅಮನ್‌ಜೋತ್‌ಗೆ ಮೊದಲ ಬ್ಯಾಟ್ ಮಾಡಿಕೊಟ್ಟರು. ಸಣ್ಣ ಮರದ ತುಂಡುಗಳಿಂದ ರೂಪಿಸಿದ ಆ ಬ್ಯಾಟ್ ಇಂದು ವಿಶ್ವಕಪ್ ಗೆದ್ದ ಬ್ಯಾಟ್‌ಗಳ ಜೊತೆ ನಿಂತಿದೆ. ತಾಯಿ ಪರ್ಮೀಂದರ್ ಕೌರ್ ಮನೆ ನಡೆಸುತ್ತಾ ಮಗಳಿಗೆ ಬೆಂಬಲ ಕೊಟ್ಟರು. ಅಮ್ಮಮ್ಮ ಭಗ್ವಂತಿ (ಈಗ 90 ವರ್ಷ) ಅವರ ಜೀವನದ ಬೆಳಕು. ಕುಟುಂಬದಲ್ಲಿ ಕ್ರಿಕೆಟ್ ಯಾವಾಗಲೂ ಮಾತಿನಲ್ಲಿತ್ತು, ಆದರೆ ಅದನ್ನು ಆಡಲು ಸುಲಭವಿರಲಿಲ್ಲ.

Amanjot kaur

ಕ್ರಿಕೆಟ್ ಪಯಣದ ಆರಂಭ

ಸಣ್ಣ ವಯಸ್ಸಿನಲ್ಲಿ ಅಮನ್‌ಜೋತ್ ಹಾಕಿ, ಫುಟ್‌ಬಾಲ್, ಹ್ಯಾಂಡ್‌ಬಾಲ್ ಆಡಿದರು. 15ನೇ ವರ್ಷದಲ್ಲಿ ಕ್ರಿಕೆಟ್ ಆರಂಭಿಸಿದರು. 2015ರಲ್ಲಿ ಔಪಚಾರಿಕ ತರಬೇತಿ ಶುರುವಾಯಿತು. ಪಂಜಾಬ್‌ನ ಗ್ರಾಮಗಳಲ್ಲಿ ಹುಡುಗಿಯರಿಗೆ ಕ್ರಿಕೆಟ್ ಸೌಲಭ್ಯ ಕಡಿಮೆ ಇದ್ದರು ಬಾಲ್ಯದ ಕ್ರಿಕೆಟ್‌ ಕೋಚ್ ನಾಗೇಶ್ ಗುಪ್ತಾ ಅವರ ಸಹಾಯದಿಂದ ದಿನವಿಡೀ ಮೈದಾನದಲ್ಲಿ ರನ್ ಓಡಿ, ಬೌಲಿಂಗ್ ಪ್ರ್ಯಾಕ್ಟೀಸ್ ಮಾಡಿ ತನ್ನನ್ನು ತಾನು ರೂಪಿಸಿಕೊಂಡಳು. ತಂದೆ ತಮ್ಮ ಆರೋಗ್ಯ ಸಮಸ್ಯೆಗಳ ನಡುವೆಯೂ ಪಂದ್ಯಗಳನ್ನು ನೋಡುತ್ತಿದ್ದರು, ಆದರೆ ಮಗಳ ಮೇಲೆ ಯಾವತ್ತು ಒತ್ತಡ ಹಾಕಿರಲಿಲ್ಲ.

ದೇಶೀಯ ಕ್ರಿಕೆಟ್ ಯಶಸ್ಸು

2017-18ರಲ್ಲಿ ಪಂಜಾಬ್ ತಂಡಕ್ಕೆ ಅಮನ್‌ಜೋತ್ ಸೇರಿದರು. 2019-20ರಿಂದ 2021-22ರವರೆಗೆ ಚಂಡೀಗಢ್ ತಂಡದೊಂದಿಗೆ ಆಡಿದರು. ಮಧ್ಯ ಕ್ರಮಾಂಕದಲ್ಲಿ ಬ್ಯಾಟಿಂಗ್, ಡೆತ್ ಓವರ್‌ಗಳಲ್ಲಿ ಬೌಲಿಂಗ್  ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದರು. 2023ರಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ 6 ಕೋಟಿ ರೂಪಾಯಿಗೆ ಖರೀದಿಸಲಾಯಿತು. ಅಲ್ಲಿ ತಂಡದ ಮುಖ್ಯ ಆಟಗಾರ್ತಿಯಾದರು.

Amanjot kaur

ಅಂತರರಾಷ್ಟ್ರೀಯ ಆರಂಭ

2023ರ ಜನವರಿ 19ರಂದು ಸೌತ್ ಆಫ್ರಿಕಾ ವಿರುದ್ಧ ಟಿ20 ಡೆಬ್ಯೂ  ಅಲ್ಲಿ 41 ರನ್ ಅಜೇಯ ಆಡಿದ್ದು, ಪ್ಲೇಯರ್ ಆಫ್ ದಿ ಮ್ಯಾಚ್ ಸಿಕ್ಕಿತು. ಜುಲೈ 16ರಂದು ಬಾಂಗ್ಲಾದೇಶ ವಿರುದ್ಧದ ಏಕದಿನ ಡೆಬ್ಯೂನಲ್ಲಿ  4 ವಿಕೆಟ್ ಪಡೆದರು. 2023ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕಕ್ಕೆ ಅಮನ್‌ಜೋತ್ ಕೊಡುಗೆ ನೀಡಿದರು.

2025 ವಿಶ್ವಕಪ್ – ಇತಿಹಾಸದ ಕ್ಷಣ

2025ರ ಮಹಿಳಾ ವಿಶ್ವಕಪ್ ಅಮನ್‌ಜೋತ್‌ರ ಜೀವನದ ದೊಡ್ಡ ಮೈಲುಗಲ್ಲು. 8 ಒಡಿಐ ಪಂದ್ಯಗಳಲ್ಲಿ 78 ರನ್, 12 ವಿಕೆಟ್, 3 ಕ್ಯಾಚ್ ಗಳಿಸಿದ್ದರು. ಅಂತಿಮ ಪಂದ್ಯದಲ್ಲಿ:

  • ಲಾರಾ ವೊಲ್ವಾರ್ಡ್ಟ್‌ರ ಕ್ಯಾಚ್
  • ತಜ್‌ಮಿನ್ ಬ್ರಿಟ್ಸ್‌ರ ರನ್-ಔಟ್ ಇವೆರಡೂ ಭಾರತಕ್ಕೆ ಮೊದಲ ವಿಶ್ವಕಪ್ ತಂದಿತು.
Amanjot kaur

ಹೃದಯಕ್ಕೆ ಮುಟ್ಟಿದ ಕುಟುಂಬದ ಕಥೆ

ಅಂತಿಮ ಪಂದ್ಯ ನಡೆಯುತ್ತಿದ್ದಾಗ ಅಮನ್‌ಜೋತ್‌ರ 90 ವರ್ಷದ ಅಮ್ಮಮ್ಮ ಭಗ್ವಂತಿಗೆ ಹೃದಯಾಘಾತವಾಗಿತ್ತು. ಕುಟುಂಬದವರು ಅಮನ್‌ಜೋತ್‌ಗೆ ಒತ್ತಡ ಆಗಬಾರದು ಎಂದು ತಿಳಿಸಿರಲಿಲ್ಲ. ತಂದೆ ತಮ್ಮ ಆರೋಗ್ಯ ಸಮಸ್ಯೆಗಳ ನಡುವೆಯೂ ಪಂದ್ಯ ನೋಡಿದರು. ಗೆಲುವಿನ ನಂತರ ಅಮನ್‌ಜೋತ್ ಕಣ್ಣೀರು ಹಾಕಿದರು – ಸಂತೋಷ, ಚಿಂತೆ, ಹೆಮ್ಮೆ ಒಟ್ಟಿಗೆ ಆಯಿತು. ಈಗ ಅವರ ಅಮ್ಮಮ್ಮ ಗುಣಮುಖರಾಗಿ ಮನೆಗೆ ಬಂದರು.

ಆದರೆ ಗೆಲುವಿನ ನಂತರ ಸೋಷಿಯಲ್ ಮೀಡಿಯಾದಲ್ಲಿ ಅವರ “ಅಮ್ಮಮ್ಮ ಸತ್ತರು” ಎಂಬ ತಪ್ಪು ಸುದ್ದಿ ಹರಡಿತು. ಅಮನ್‌ಜೋತ್ ಇನ್‌ಸ್ಟಾಗ್ರಾಮ್‌ನಲ್ಲಿ “ನನ್ನ 90ರ ಕಿಡ್ ಪೂರ್ತಿ ಚೆನ್ನಾಗಿದ್ದಾರೆ” ಎಂದು ಬರೆದು ಸ್ಪಷ್ಟಪಡಿಸಿದರು.

ಇದನ್ನೂ ಓದಿ | ವಿಶಿಷ್ಟ ಬೌಲಿಂಗ್‌ ಶೈಲಿಯ ಮೂಲಕ ವಿಶ್ವಕಪ್ ಗೆಲ್ಲಿಸಿ ಕೊಟ್ಟ ಚರಣಿ 

ಇಂದಿನ ಅಮನ್‌ಜೋತ್

25 ವರ್ಷದ ಅಮನ್‌ಜೋತ್ ಭಾರತದ ಮಹಿಳಾ ಕ್ರಿಕೆಟ್‌ನ ಪ್ರಮುಖ ಭಾಗ. 15 ಟಿ20 ಪಂದ್ಯಗಳಲ್ಲಿ 162 ರನ್ (ಒಂದು 63* ಅಜೇಯ), 6 ವಿಕೆಟ್ ಪಡೆದಿದ್ದಾರೆ. ತಂದೆಯ ಮರದ ಬ್ಯಾಟ್‌ನಿಂದ ವಿಶ್ವಕಪ್ ಟ್ರೋಫಿ ವರೆಗೆ  ಕಷ್ಟದ ಮಧ್ಯೆ  ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಇದು ಲಕ್ಷಾಂತರ ಹುಡುಗಿಯರಿಗೆ ಸ್ಫೂರ್ತಿ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »