ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಜೈಲಿನಲ್ಲೇ ಕಗ್ಗೊಲೆಯಾದ್ರಾ?

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಕೊಲೆಯಾಗಿದ್ದಾರೆ ಎಂಬ ವದಂತಿ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದ್ದು ಚರ್ಚೆಗೆ ಗ್ರಾಸವಾಗಿದೆ. 
imran khan death rumor

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಕೊಲೆಯಾಗಿದ್ದಾರೆ ಎಂಬ ವದಂತಿ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದ್ದು ಚರ್ಚೆಗೆ ಗ್ರಾಸವಾಗಿದೆ. 

ಈ ವದಂತಿಯ ಬೆನ್ನಲ್ಲೇ, ಜೈಲು ಅಧಿಕಾರಿಗಳು ಇದನ್ನು ಶುದ್ಧ ಸುಳ್ಳು ಎಂದು ತಳ್ಳಿಹಾಕಿ, ಖಾನ್ ಅವರು ಜೈಲಿನಲ್ಲೇ ಆರೋಗ್ಯವಾಗಿ ಇದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಈ ವದಂತಿಯಿಂದಾಗಿ ಪಿಟಿಐ (ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್) ಬೆಂಬಲಿಗರು ಜೈಲು ಆವರಣದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದು, ಕೆಲವು ಸ್ಥಳಗಳಲ್ಲಿ ಸೇನಾ ನಿಯಂತ್ರಣಕ್ಕೆ ಒಳಗಾಗಿದೆ.

ಅಫ್ಘಾನಿಸ್ತಾನ್ ಟೈಮ್ಸ್ ಎಂಬ ಖಾತೆಯೊಂದು “ಪಾಕಿಸ್ತಾನದ ವಿಶ್ವಾಸಾರ್ಹ ಮೂಲಗಳಿಂದ ಖಚಿತಪಡಿಸಲಾಗಿದೆ, ಪಿಟಿಐ ಅಧ್ಯಕ್ಷ ಇಮ್ರಾನ್ ಖಾನ್ ಅವರು ಜೈಲಿನಲ್ಲಿ ರಹಸ್ಯವಾಗಿ ಕೊಲೆಯಾಗಿದ್ದಾರೆ. ಅವರ ಶವವನ್ನು ಜೈಲಿನಿಂದ ತೆಗೆದುಕಿದೆ” ಎಂದು ಪೋಸ್ಟ್ ಮಾಡಿತ್ತು. ಇದು ವೈರಲ್ ಆಗಿ, ಬಲುಚಿಸ್ತಾನ್ ವಿದೇಶಾಂಗ ಸಚಿವಾಲಯದ ಖಾತೆಯೂ “ಅಸೀಮ್ ಮುನೀರ್ ಮತ್ತು ಐಎಸ್‌ಐಯ ಅಧಿಕಾರಿಗಳು ಖಾನ್ ಅವರನ್ನು ಕೊಂದಿದ್ದಾರೆ” ಎಂದು ಆರೋಪಿಸಿತು.

ಈ ವದಂತಿಯಿಂದ ಉಂಟಾದ ಗೊಂದಲದಲ್ಲಿ, ಇಮ್ರಾನ್ ಅವರ ಸಹೋದರಿಯರು, ನೂರೀನ್ ಖಾನ್ (ನಿಯಾಝಿ), ಅಲೀಮಾ ಖಾನ್ ಮತ್ತು ಉಜ್ಮಾ ಖಾನ್ ಜೈಲಿಗೆ ಭೇಟಿ ನೀಡಲು ಹೋದಾಗ ಪೊಲೀಸ್ ಅವರನ್ನು ಹಿಂಸಿಸಿದರು. ಇಸ್ಲಾಮಾಬಾದ್ ಹೈಕೋರ್ಟ್ ಅವರಿಗೆ ವಾರಕ್ಕೆ ಎರಡು ಬಾರಿ ಭೇಟಿಗೆ ಅನುಮತಿ ನೀಡಿದ್ದರೂ ಕೂಡಾ ಅಧಿಕಾರಿಗಳು ಅಧಿಕ ಸುರಕ್ಷತೆ ಎಂದು ಭೇಟಿಗೆ ನಿರಾಕರಿಸಿದ್ದಾರೆ. ಕೆಲವು ವರದಿಗಳ ಪ್ರಕಾರ ಇದರಿಂದ ಸಹಸ್ರಾರು ಪಿಟಿಐ ಬೆಂಬಲಿಗರು ಜೈಲು ಆವರಣಕ್ಕೆ ನುಗ್ಗಲು ಯತ್ನಿಸಿದಾಗ 6 ಜನರು ಸಾವನಪ್ಪಿದ್ದಾರೆ. ಪಾಕಿಸ್ತಾನ ಸೇನೆಯು ಶೂಟ್ ಆಟ್ ಸೈಟ್ ಆದೇಶ ಹೊರಡಿಸಿ, ಪ್ರತಿಭಟನಾಕಾರರನ್ನು ದಮನ ಮಾಡಿದೆ.

ಅಧಿಕಾರಿಗಳಿಂದ ಸ್ಪಷ್ಟನೆ

ಇಂದು (ಶುಕ್ರವಾರ) ಜೈಲು ಅಧಿಕಾರಿಗಳು ಜಿಯೋ ನ್ಯೂಸ್‌ಗೆ ಹೇಳಿಕೆ ನೀಡಿ, “ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ಹಬ್ಬುತ್ತಿರುವ ಊಹಾಪೋಹಗಳು ಸಂಪೂರ್ಣ ತಪ್ಪು. ಅವರು ಜೈಲಿನಲ್ಲೇ ಇದ್ದಾರೆ, ಪೂರ್ಣ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವುದೇ ಸ್ಥಳಾಂತರದ ಯೋಜನೆ ಇಲ್ಲ” ಎಂದು ಸ್ಪಷ್ಟಪಡಿಸಿದರು. ರಕ್ಷಣಾ ಸಚಿವ ಖ್ವಾಜಾ ಅಸೀಫ್ ಅವರು “ಇಮ್ರಾನ್ ಅವರಿಗೆ ಜೈಲಿನಲ್ಲಿ ಫೈ ಸ್ಟಾರ್‌ನಂತಹ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹಿಂದಿನ ಜೈಲು ಜೀವನಕ್ಕಿಂತಲೂ ಈಗ ಉತ್ತಮ” ಎಂದು ಹೇಳಿದರು. ಪಿಟಿಐ ಪಕ್ಷವು “ಇಂತಹ ಅಪಾಯಕಾರಿ ವದಂತಿಗಳ ಹಿನ್ನೆಲೆಯನ್ನು ತನಿಖೆ ಮಾಡಿ, ಖಾನ್ ಅವರ ಸುರಕ್ಷತೆಯ ಬಗ್ಗೆ ಅಧಿಕೃತ ಹೇಳಿಕೆ ನೀಡಿ” ಎಂದು ಒತ್ತಾಯ ಮಾಡಿದೆ.

ಇದನ್ನೂ ಓದಿ | ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಡಿಕೆಶಿ

ಇಮ್ರಾನ್ ಖಾನ್ ಅವರು 2023ರ ಆಗಸ್ಟ್‌ನಿಂದ ಅಡಿಯಾಲಾ ಜೈಲಿನಲ್ಲಿ ಇದ್ದಾರೆ. ಭ್ರಷ್ಟಾಚಾರ, ಭಯೋತ್ಪಾದನೆ ಮತ್ತು ಇತರ ಆರೋಪಗಳಲ್ಲಿ 20ಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗಿವೆ. 2022ರಲ್ಲಿ ಅವಿಶ್ವಾಸ ಮತದಿಂದ ಅಧಿಕಾರದಿಂದ ತೆಗೆದುಹಾಕಲ್ಪಟ್ಟ ನಂತರ, ಅವರ ವಿರುದ್ಧ ಸೇನಾ ಮತ್ತು ಸರ್ಕಾರದ ದುರ್ಬಲತೆಗಳು ಹೆಚ್ಚಾಗಿವೆ. ಕುಟುಂಬಸ್ಥರು “ಅವರು ಏಕಾಂತ ಕಾರಾಗೃಹದಲ್ಲಿದ್ದಾರೆ, ಭೇಟಿಗಳನ್ನು ನಿರಾಕರಿಸುತ್ತಿದ್ದಾರೆ” ಎಂದು ಆರೋಪಿಸುತ್ತಿದ್ದಾರೆ. ಇಸ್ಲಾಮಾಬಾದ್ ಹೈಕೋರ್ಟ್ ಭೇಟಿಗೆ ಅನುಮತಿ ನೀಡಿದ್ದರೂ, ಸೇನಾ ಅಧಿಕಾರಿಗಳ ನಿಯಂತ್ರಣದಲ್ಲಿ ಜೈಲು ನಡೆಯುತ್ತಿದೆ ಎಂದು ಖಾನ್ ಅವರ ಬೆಂಬಲಿಗರು ಹೇಳುತ್ತಾರೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »