ಸಕ್ರಿಯ ಸಿಮ್ ಇಲ್ಲದೆ ವಾಟ್ಸಾಪ್ ಬಳಸಲು ಅಸಾಧ್ಯ! ಇಲ್ಲಿದೆ ಕಾರಣ

ಸೈಬರ್‌ ಕ್ರೈಮ್‌ ವಿರುದ್ಧ ಕೇಂದ್ರ ಸರ್ಕಾರ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದು, ದೂರಸಂಪರ್ಕ ಇಲಾಖೆ (DoT) ನವೆಂಬರ್ 28, 2025ರಂದು “ದೂರಸಂಪರ್ಕ ಸೈಬರ್ ಸುರಕ್ಷತಾ (ಸಂಶೋಧನೆ) ನಿಯಮಗಳು 2025” ಅಧಿಸೂಚನೆ ಹೊರಡಿಸಿದೆ.
India Whatsapp Sim Card
AI ಚಿತ್ರ

ಆನ್‌ಲೈನ್ ಹಗರಣಗಳು ದಿನೇ ದಿನೇ ಭಯಾನಕ ರೂಪ ಪಡೆಯುತ್ತಿರುವ ಈ ಸಮಯದಲ್ಲಿ ಕೇಂದ್ರ ಸರ್ಕಾರ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ದೂರಸಂಪರ್ಕ ಇಲಾಖೆ (DoT) ನವೆಂಬರ್ 28, 2025ರಂದು “ದೂರಸಂಪರ್ಕ ಸೈಬರ್ ಸುರಕ್ಷತಾ (ಸಂಶೋಧನೆ) ನಿಯಮಗಳು 2025” ಅಧಿಸೂಚನೆ ಹೊರಡಿಸಿದೆ. ಈ ನಿಯಮದ ಮೂಲಕ ವಾಟ್ಸ್‌ಆಪ್, ಟೆಲಿಗ್ರಾಮ್, ಸಿಗ್ನಲ್, ಸ್ನ್ಯಾಪ್‌ಚಾಟ್, ಡಿಸ್ಕಾರ್ಡ್, ಶೇರ್‌ಚಾಟ್, ಜಿಯೋಚಾಟ್, ಅರಟ್ಟೈ, ಜೋಶ್‌ನಂತಹ ಎಲ್ಲ OTT ಸಂದೇಶ ಸೇವೆಗಳನ್ನು “ಟೆಲಿಕಾಂ ಐಡೆಂಟಿಫೈಯರ್ ಯೂಸರ್ ಎಂಟಿಟಿ (TIUE)” ವರ್ಗಕ್ಕೆ ಸೇರಿಸಲಾಗಿದೆ. ಇದರಿಂದ ಈ ಆ್ಯಪ್‌ಗಳ ಮೇಲೆ ಟೆಲಿಕಾಂ ಕಂಪನಿಗಳಂತೆಯೇ ಕಟ್ಟುನಿಟ್ಟಿನ ಸೈಬರ್ ಸುರಕ್ಷತಾ ನಿಯಮಗಳು ಅನ್ವಯವಾಗಲಿವೆ.

ಪ್ರಮುಖ ನಿಯಮಗಳು:

  • ಎಲ್ಲ ಸಂದೇಶ ಆ್ಯಪ್ ಖಾತೆಗಳು ಕಡ್ಡಾಯವಾಗಿ ಭಾರತದಲ್ಲಿ ಸಕ್ರಿಯ ಸಿಮ್ ಕಾರ್ಡ್‌ಗೆ ಲಿಂಕ್ ಆಗಿರಬೇಕು.
  • ಸಿಮ್ ತೆಗೆದರೆ, ನಿಷ್ಕ್ರಿಯಗೊಂಡರೆ ಅಥವಾ e-SIM ಆಫ್‌ಲೈನ್ ಆದರೆ – ಕೇವಲ 6 ಗಂಟೆಗಳ ಒಳಗೆ ಆ್ಯಪ್ ಸಂಪೂರ್ಣ ಲಾಗ್‌ಔಟ್ ಆಗಬೇಕು.
  • ವಾಟ್ಸ್‌ಆಪ್ ವೆಬ್, ಡೆಸ್ಕ್‌ಟಾಪ್, ಟೆಲಿಗ್ರಾಮ್ ವೆಬ್ ಮುಂತಾದವು ಪ್ರತಿ 6 ಗಂಟೆಗೊಮ್ಮ್ಮೆ ಸ್ವಯಂಚಾಲಿತ ಲಾಗ್‌ಔಟ್ ಆಗಲಿವೆ. ಮರು ಲಾಗಿನ್‌ಗೆ ಮೊಬೈಲ್‌ನಲ್ಲಿ QR ಕೋಡ್ ಸ್ಕ್ಯಾನ್ ಮಾಡಲೇಬೇಕು.
  • ವಿದೇಶಿ ಸಿಮ್ ಅಥವಾ ವರ್ಚುಯಲ್ ನಂಬರ್‌ಗಳಿಂದ ಭಾರತೀಯ ಖಾತೆ ರನ್ ಮಾಡುವುದು ಅಸಾಧ್ಯವಾಗಲಿದೆ.

ಈ ನಿಯಮಗಳ ಹಿಂದಿನ ಕಾರಣವೇನು?

2024-25ರಲ್ಲಿ ₹1,700 ಕೋಟಿಗಿಂತ ಹೆಚ್ಚು ಸೈಬರ್ ಹಗರಣಗಳು ನಡೆದಿವೆ. ಕಾಂಬೋಡಿಯಾ, ದುಬೈ, ಮ್ಯಾನ್ಮಾರ್‌ನಲ್ಲಿರುವ ಹಗರಣಗಾರರು ಭಾರತೀಯ ಸಿಮ್ ಖರೀದಿಸಿ, ತೆಗೆದು ವಿದೇಶದಲ್ಲಿ ಬಳಸಿ ಡಿಜಿಟಲ್ ಅರೆಸ್ಟ್, ಸ್ಟಾಕ್ ಮಾರ್ಕೆಟ್ ಮೋಸ, ಸೆಕ್ಸ್‌ಟಾರ್ಷನ್ ಮಾಡುತ್ತಿದ್ದರು. ಈಗ ಸಿಮ್ ಭಾರತದಲ್ಲೇ ಸಕ್ರಿಯವಿರಬೇಕಾದ ಕಾರಣ ಆ ದಾರಿ ಬಹಳ ಕಷ್ಟವಾಗಲಿದೆ.

ಆ್ಯಪ್ ಕಂಪನಿಗಳಿಗೆ 90 ದಿನಗಳಲ್ಲಿ (ಫೆಬ್ರವರಿ 2026ರೊಳಗೆ) ತಾಂತ್ರಿಕ ಬದಲಾವಣೆ ಮಾಡಬೇಕು ಮತ್ತು 120 ದಿನಗಳಲ್ಲಿ DoTಗೆ ಅನುಷ್ಠಾನ ವರದಿ ಸಲ್ಲಿಸಬೇಕು. ಅನುಸರಿಸದಿದ್ದರೆ ಟೆಲಿಕಾಂ ಕಾಯ್ದೆ 2023ರಡಿ ದೊಡ್ಡ ದಂಡ ಮತ್ತು ಸೇವೆ ರದ್ದತಿ ಸಾಧ್ಯ. ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (COAI) ಈ ನಿರ್ಧಾರವನ್ನು ಶ್ಲಾಘಿಸಿದ್ದು, “ಮೊಬೈಲ್ ನಂಬರ್ ಭಾರತದ ಅತ್ಯಂತ ದೃಢ ಡಿಜಿಟಲ್ ಗುರುತು; ಇದು ಸೈಬರ್ ಅಪರಾಧವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ” ಎಂದಿದೆ.

ಇದನ್ನೂ ಓದಿ | ಭಾರತೀಯ ಬ್ಯಾಂಕಿಂಗ್‌ನ ವಿದೇಶಿಕರಣ: ರಾಷ್ಟ್ರೀಯ ಹಿತಾಸಕ್ತಿಗೆ ಹಣಕಾಸು ಸಚಿವಾಲಯದ ದ್ರೋಹವೇ?

ಆದರೆ ಕೆಲವು ಆತಂಕಗಳೂ ಇವೆ. ವಿದೇಶ ಪ್ರಯಾಣಿಕರು, NRIs, ಡ್ಯುಯಲ್ ಸಿಮ್ ಬಳಕೆದಾರರಿಗೆ ತೊಂದರೆ ಆಗಬಹುದು. ಹಗರಣಗಾರರು ನಕಲಿ ಐಡಿಯಿಂದ ಹೊಸ ಸಿಮ್ ತೆಗೆದುಕೊಂಡರೆ ಈ ನಿಯಮ ಸೀಮಿತ ಪರಿಣಾಮ ಬೀರಬಹುದು ಎಂಬ ಟೀಕೆಯೂ ಇದೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಸಾಮಾನ್ಯ ಬಳಕೆದಾರರಿಗೆ ಸ್ವಲ್ಪ ಅನಾನುಕೂಲ ಆದರೂ ದೊಡ್ಡ ಮಟ್ಟದ ಸೈಬರ್ ರಾಕ್ಷಸನ ಕೊರಳು ಕತ್ತರಿಸುವ ಈ ಕ್ರಮ ಭಾರತದ ಡಿಜಿಟಲ್ ಭವಿಷ್ಯಕ್ಕೆ ಬಹಳ ಮುಖ್ಯವಾದ ಹೆಜ್ಜೆಯಾಗಿದೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »