ಕನ್ನಡ ಅಕ್ಷರಗಳನ್ನು ನೋಡಿ ಬಹುಭಾಷಾ ಪಂಡಿತರಾದ ಭಾರತರತ್ನ ವಿನೋಬಾ ಭಾವೆ ಅವರು, ಕನ್ನಡ ಲಿಪಿಯನ್ನು “ವಿಶ್ವಲಿಪಿಗಳ ರಾಣಿ” ಎಂದು ಕರೆದಿದ್ದಾರೆ. ಈ ಡಿಜಿಟಲ್ ಯುಗದಲ್ಲಿ ಲಿಪಿಗಳು ಫಾಂಟ್ ಆಗಿ ಬದಲಾಗಿವೆ; ಆದರೆ ನಮ್ಮ ವಿಶ್ವ ಲಿಪಿಗಳ ರಾಣಿಗೆ ಫಾಂಟ್‌ಗಳ ಕೊರತೆ ಕಾಡುತ್ತಿದೆ.
ಫಾಂಟ್‌ಯಂದರೆ ಒಂದು ಸುಲಭವಾದ ಸಾಫ್ಟ್ವೇರ್ ಎಂದು ತಿಳಿಯಬಹುದು. ಅದು ಬರೆಯಲಾದ ಅಕ್ಷರಗಳ ರೂಪ, ಅಕ್ಷರಗಳ ನಡುವಿನ ಅಂತರ, ಪದಗಳ ಅಂತರ ಮತ್ತು ಸ್ವರ ವ್ಯಂಜನಗಳು ಸೇರಿ ಗುಣಿತಾಕ್ಷರ ಮುಡುವುದು, ಇದನ್ನೆಲ್ಲಾ ನಿರ್ಧರಿಸುತ್ತದೆ. ಫಾಂಟ್ ಅನ್ನು ಲಿಪಿಗಳ ವಿಕಸಿತರೂಪ ಎಂದು ಹೇಳಬಹುದು. ಒಂದು ಫಾಂಟ್ ಮಾಡಲು ಡಿಸೈನ್ ಮತ್ತು ಪ್ರೋಗ್ರಾಮಿಂಗ್ ಎರೆಡರ ಅವಶ್ಯಕತೆಯೂ ಇದೆ. ಇದನ್ನು ಕಂಪ್ಯೂಟರ್, ವೆಬ್ಸೈಟ್, ಡಿಜಿಟಲ್ ಪ್ರಿಂಟ್ ಮತ್ತು ಮೊಬೈಲ್ ಫೋನ್ ನಲ್ಲಿ ಬಳಸಲಾಗುತ್ತದೆ. ಒಂದು ಅರ್ಥದಲ್ಲಿ ಮುಂಬರುವ ಸಮಯದಲ್ಲಿ ಲಿಪಿಯನ್ನು ಬರಿ ಫಾಂಟ್‌ನಿಂದ ಮಾತ್ರ ನೋಡಬಹುದು.
ವಿಶ್ವ ಲಿಪಿಗಳ ರಾಣಿಗೆ ಏಕಿಲ್ಲ ವೈವಿಧ್ಯತೆ?
ನೇರವಾಗಿ ಹೇಳುವುದಾದರೆ ಕನ್ನಡ ಭಾಷೆಗೆ ಫಾಂಟ್‌ಗಳು ಕಡಿಮೆ ಇವೆ. ಒಂದು ಭಾಷೆಗೆ ಎಷ್ಟು ಫಾಂಟ್‌ಗಳು ಇರುತ್ತವೆ ಅಷ್ಟು ಆ ಭಾಷೆಯ ಲಿಪಿ ವೈವಿಧ್ಯವಾಗಿ ಕಾಣುತ್ತದೆ. ಆದಕಾರಣ ಕನ್ನಡ ಫಾಂಟ್‌ಗಳ ಕೊರತೆಯಿಂದ ಲಿಪಿಯಲ್ಲಿ ವೈವಿಧ್ಯತೆ ಕಾಣುತ್ತಿಲ್ಲ.
ಕನ್ನಡ ಫಾಂಟ್ ಕೊರತೆಗೆ ಕಾರಣ?
- ಸರ್ಕಾರ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರಾಸಕ್ತಿ.
- ಕನ್ನಡ ಗಣಕ ಪರಿಷತ್ತು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೇರಿ ನುಡಿ ಫಾಂಟ್ ಮಾಡಿದರಾದರು,
- ಅವುಗಳ ನವೀಕರಣ ಮತ್ತು ಸರ್ವಿಸ್ ಮಾಡಲಿಲ್ಲ.
- ಒಂದೆಡೆ ಡೌನ್ಲೋಡ್ ಮಾಡುವ ಅನುಕೂಲ ಮಾಡಲಿಲ್ಲ.
- ನುಡಿ ಫಾಂಟ್‌ಗಳಿಗೆ ಹೆಸರುಗಳಿಲ್ಲ ಬರಿ ನುಡಿ ಮತ್ತು ಸಂಖ್ಯೆಗಳಿವೆ.
- ನುಡಿ ಫಾಂಟ್‌ಗಳು ಮುಕ್ತಬಳಕೆಗೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೇಳಿದ್ದರು. ಆದರೆ ಫಾಂಟ್ ಫೈಲ್‌ಗಳಲ್ಲಿ ಕಾಪಿರೈಟ್ ಹೀಗಿದೆ “Copyright (c) 2012 by Kannada Ganaka Parishat. All rights reserved.” ಏಕೆ?
- ಎಲ್ಲ ಫಾಂಟ್‌ಗಳು ascii ಇಂದ unicode ಗೆ ಫಾಂಟ್ ಬದಲಾವಣೆ ಮಾಡಲಾಗಲಿಲ್ಲ.
- 2014ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಡುಗಡೆ ಮಾಡಿದ ಲಿನೆಕ್ಸ್ ಕನ್ನಡ ಫಾಂಟ್‌ಗಳು ಅಷ್ಟು ಒಳ್ಳೆಯ ಗುಣಮಟ್ಟ ಕಾಣಲಿಲ್ಲ. ಅದರಲ್ಲಿ ಒಂದು ಫಾಂಟ್ ಕೆಲಸ ಮಾಡುವುದಿಲ್ಲ.
- ಕೊನೆಯಾದಾಗ ನಾವು ಕನ್ನಡಿಗರು ಆಸಕ್ತಿ ತೋರಿಸಲಿಲ್ಲ.
ನಾನು ಒಂದು ಟೈಪ್ ಡಿಸೈನ್ ವಿಚಾರ ಗೋಷ್ಠಿಯಲ್ಲಿ ಹಿರಿಯ ಗ್ರಾಫಿಕ್ ಡಿಸೈನರ್ ಎಲಿನ್ ಲಪ್ಟಾನ್ ಅವರಿಗೆ, ಭಾರತೀಯ ಭಾಷೆಗಳಲ್ಲಿ ಫಾಂಟ್‌ಗಳ ವೈವಿದ್ಯತೆಯ ಬಗ್ಗೆ ಕೇಳಿದಾಗ ಅವರು, “ನಮ್ಮ ಇಂಗ್ಲಿಷ್ ಭಾಷೆಗೆ ಸಾಕಷ್ಟು ಫಾಂಟ್‌ಗಳು ಇವೆ; ನಮಗೆ ಅವುಗಳನ್ನು ಏನು ಮಾಡಬೇಕೆಂದು ತಿಳಿಯುವುದಿಲ್ಲ. ಆದರೆ, ಭಾರತೀಯ ಭಾಷೆಗಳಿಗೆ ಫಾಂಟ್‌ಗಳ ಅಭಾವವಿದೆ.” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವೈವಿದ್ಯತೆ ಹೇಗೆ ತರಬಹುದು?
- ಸರ್ಕಾರ ಹೊಸ ಫಾಂಟ್ ಗಳ ಬಗ್ಗೆ ಒಂದು ಯೋಜನೆ ತರಬೇಕು.
- ಹಿಂದಿನ ಎಲ್ಲ ಕನ್ನಡ ಫಾಂಟ್‌ಗಳನ್ನು unicode ಮಾನ್ಯತೆಗೆ ತರಬೇಕು.
- ಸ್ವತಂತ್ರವಾಗಿ ಫಾಂಟ್ ತಯಾರಿಸುತ್ತರುವ ವೈಕ್ತಿ ಮತ್ತು ಸಂಸ್ಥೆಗಳಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು.
- ಕನ್ನಡ ಫಾಂಟ್ಸ್ ಮತ್ತು ಸಾಫ್ಟ್‌ವೇರ್ಗಳನ್ನು ಒಂದೇ ವೆಬ್ಸೈಟ್ ಅಡಿಯಲ್ಲಿ ತರಬೇಕು.
ಪ್ರಸ್ತುತ ಕನ್ನಡಕ್ಕೆ ಉಚಿತ ಅಥವಾ ಮುಕ್ತ ಫಾಂಟ್‌ಗಳನ್ನು ತಯಾರಿಸುತ್ತಿರುವವರು –
1. ಏಕ್ ಟೈಪ್
3. ಸಂಚಯ ಸಂಸ್ಥೆ
ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಕನ್ನಡಿಗರು ಸೇರಿ ಹೊಸ ಫಾಂಟ್‌ಗಳನ್ನು ತಯಾರಿಸಿ ಬಿಡುಗಡೆ ಮಾಡಿದರೆ, ವಿಶ್ವ ಲಿಪಿಗಳ ರಾಣಿ ರಾಣಿಯಾಗೇ ಉಳಿಯುವಳು.







