ನಿರ್ಭಯ ಯೋಜನೆ: ಮಹಿಳೆಯರು, ಮಕ್ಕಳ ಸುರಕ್ಷತೆಗೆ ಸಾರ್ವಜನಿಕ ವಾಹನಗಳಲ್ಲಿ `ತುರ್ತು ಬಟನ್ʼ

ರಾಜ್ಯದಲ್ಲಿ 1.17 ಲಕ್ಷ ಸಾರ್ವಜನಿಕ ವಾಹನಗಳಿಗೆ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಡಿವೈಸ್ (ವಿಎಲ್ಟಿ) ಆ್ಯಂಡ್ ಎಮರ್ಜೆನ್ಸಿ ಬಟನ್ ಅಳವಡಿಸಲಾಗಿದೆ.
Panic Buttons in Karnataka Buses

ರಾಜ್ಯದಲ್ಲಿ 1.17 ಲಕ್ಷ ಸಾರ್ವಜನಿಕ ವಾಹನಗಳಿಗೆ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಡಿವೈಸ್ (ವಿಎಲ್ಟಿ) ಆ್ಯಂಡ್ ಎಮರ್ಜೆನ್ಸಿ ಬಟನ್ ಅಳವಡಿಸಲಾಗಿದೆ. ಸದ್ಯ ಈ ಸಂಖ್ಯೆ ರಾಜ್ಯದ ಒಟ್ಟು ಸಾರ್ವಜನಿಕ ವಾಹನಗಳ ಶೇ. 19ರಷ್ಟಿದ್ದು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಈ ಯೋಜನೆಯನ್ನು ರೂಪಿಸಲಾಗಿತ್ತು. 

ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಸಾರ್ವಜನಿಕ ಸೇವಾ ವಾಹನಗಳಲ್ಲಿ ವಿಎಲ್ಟಿ ಮತ್ತು ಎಮರ್ಜೆನ್ಸಿ ಬಟನ್ ಅಳವಡಿಸುವ ಯೋಜನೆಯನ್ನು ಕೇಂದ್ರ ಸರ್ಕಾರವು ‘ನಿರ್ಭಯ’ ಯೋಜನೆಯಡಿ ರೂಪಿಸಿತ್ತು. ರಾಜ್ಯದಲ್ಲಿ ಸಾರಿಗೆ ಇಲಾಖೆಯು ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ತೆರೆದು 2024ರ ಜೂನ್ನಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು. 

ಬಸ್, ಶಾಲಾ ವಾಹನ, ಖಾಸಗಿ ಸೇವಾ ವಾಹನ, ಮ್ಯಾಕ್ಸಿಕ್ಯಾಬ್, ಮೋಟಾರ್ ಕ್ಯಾಬ್, ಒಪ್ಪಂದದ ಆಧಾರದಲ್ಲಿ ಸಂಚರಿಸುವ ವಾಹನ, ರಾಷ್ಟ್ರೀಯ ಪರ್ಮಿಟ್ ಹೊಂದಿದ ಸರಕು ಸಾಗಣೆ ವಾಹನಗಳಿಗೆ ವಿಎಲ್ಟಿ ಮತ್ತು ಎಮರ್ಜೆನ್ಸಿ ಬಟನ್ ಅಳವಡಿಸುವ ಕಾರ್ಯ ಆರಂಭವಾಗಿತ್ತು.

ಕರ್ನಾಟಕದಲ್ಲಿ 6.04ಲಕ್ಷ ಸಾರ್ವಜನಿಕ ವಾಹನಗಳಿವೆ. ಒಂದು ವರ್ಷದಲ್ಲಿ 1.17ಲಕ್ಷ ವಾಹನಗಳಿಗೆ ಈ ಬಟನ್ ಅಳವಡಿಸಲಾಗಿದೆ. ಈ ಬಟನ್ಗಳ ಮೂಲಕ 18ನೈಜ ದೂರುಗಳು ಕಮಾಂಡ್ ಸೆಂಟರ್ಗೆ ರವಾನೆಯಾಗಿದ್ದು, ಮೂರು ಪ್ರಕರಣಗಳನ್ನು ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆಗೆ (ಇಆರ್ಎಸ್ಎಸ್) ಕಳುಹಿಸಿ ಕೊಡಲಾಗಿದೆ ನಂತರ ಪೊಲೀಸರು ಆ ಪ್ರಕರಣಗಳನ್ನು ಪರಿಶೀಲಿಸುತ್ತಾರೆ.

ಇಂತಹ ನಾಲ್ಕು ಪ್ರಕರಣಗಳನ್ನು ವಾಹನದ ಮಾಲೀಕರೊಂದಿಗೆ ಮಾತನಾಡಿ ಇತ್ಯರ್ಥ ಮಾಡಲಾಗಿದೆ. ಉಳಿದ 11 ಪ್ರಕರಣಗಳು ಸ್ಥಳದಲ್ಲಿಯೇ ಮುಕ್ತಾಯವಾಗಿವೆ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಹೆಚ್ಚುವರಿ ಆಯುಕ್ತ (ಆಡಳಿತ) ಪಿ.ಪಿ. ಉಮಾಶಂಕರ್ ಪ್ರಜಾವಾಣಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. 

ಈ ತುರ್ತು (ವಿಎಲ್ಟಿಸಿ) ಬಟನ್ ಯಾಕೆ?

  • ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳಲ್ಲಿ ಸಾರಿಗೆ ವಿಭಾಗದ ಭಾರಿ ಪ್ರಯಾಣಿಕ ವಾಹನಗಳು ಅತಿ ವೇಗದಲ್ಲಿ ಚಲಿಸಿದಾಗ ಅಪಘಾತ ಉಂಟಾಗುವ ಸಾಧ್ಯತೆಗಳಿರುತ್ತವೆ.
  • ವಿಎಲ್ಟಿಸಿ ಆಧಾರಿತ ಜಿಪಿಆರ್ಎಸ್ ವ್ಯವಸ್ಥೆಯ ಉಪಕರಣ ಅಳವಡಿಸಿದಾಗ ವಾಹನದ ವೇಗ, ನಿಗದಿ ಪಡಿಸಿದ ಸ್ಥಳಗಳಲ್ಲಿ ಸರಿಯಾದ ಸಮಯಕ್ಕೆ ತಲುಪುತ್ತಿದೆಯೇ? ಆ ಸ್ಥಳಗಳಲ್ಲಿ ನಿಲುಗಡೆ ಮಾಡಲಾಗುತ್ತಿವೆಯೇ? ಸೂಚಿತ ಮಾರ್ಗದಲ್ಲಿಯೇ ಸಂಚರಿಸುತ್ತಿವೆಯೇ ಎಂದು ಪತ್ತೆ ಹಚ್ಚಲು ಸಹಕಾರಿ.
  • ವಾಹನಗಳನ್ನು ಕದ್ದು ಸಾಗಾಟ ಮಾಡಿದಾಗ ಪತ್ತೆಹಚ್ಚಲು ಸುಲಭ ವಾಗಲಿದೆ. ರಹದಾರಿ ನಿಬಂಧನೆಗಳನ್ನು ಉಲ್ಲಂಘಿಸಿ ಸಂಚರಿಸುವ ವಾಹನಗಳ ಮೇಲೆ ನಿಗಾ ಇರಿಸಲು ಸಾಧ್ಯ
  • ಪ್ರಯಾಣಿಕರಿಗೆ ತೊಂದರೆ ಉಂಟಾದರೆ, ಮಹಿಳೆಯರಿಗೆ ಸಾರ್ವಜನಿಕ ವಾಹನಗಳಲ್ಲಿ ಕಿರುಕುಳ ಉಂಟಾದರೆ ಎಮರ್ಜೆನ್ಸಿ ಬಟನ್ ಒತ್ತಿದಲ್ಲಿ ಕಮಾಂಡ್ ಕೇಂದ್ರಕ್ಕೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ.

ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಇರುವ ಎಮರ್ಜೆನ್ಸಿ ಬಟನ್ಗಳನ್ನು ಒಂದು ವರ್ಷದಲ್ಲಿ 83,554 ಜನರು ಬಳಸಿದ್ದಾರೆ. 18 ಪ್ರಕರಣಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಜನರು ಪರಿಶೀಲಿಸುವುದಕ್ಕಾಗಿ ಸುಮ್ಮನೆ ಒತ್ತಿರುವುದಾಗಿದೆ. ಸಾರ್ವಜನಿಕರು ಅಗತ್ಯ ಸಂದರ್ಭ ಹೊರತುಪಡಿಸಿ ಪರೀಕ್ಷೆ ನಡೆಸಲು, ಕುತೂಹಲ ತಣಿಸಲು ಈ ಬಟನ್ ಒತ್ತಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಈ ವ್ಯವಸ್ಥೆಯಲ್ಲಿ ದೋಷ ಕಂಡುಬಂದಲ್ಲಿ ಅಂದರೆ, ವಿಎಲ್ಟಿ ಸಾಧನಗಳ ತಂತಿ ತುಂಡಾಗಿರುವುದು, ಅಸಮರ್ಪಕ ಜೋಡಣೆ, ಸ್ವಿಚ್ ಆನ್ ಆಗದೇ ಇರುವುದು ಮುಂತಾದ ದೋಷಗಳು ಕಂಡು ಬಂದರೆ surakshamitr-ka@cda.inಗೆ ಮೇಲ್ ಕಳುಹಿಸಬಹುದು. ಇಲ್ಲವೇ ಮೊಬೈಲ್: 9059955319 ಸಂಪರ್ಕಿಸಿ ಪರಿಹಾರ ಪಡೆದು ಕೊಳ್ಳಬಹುದು

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »