ಧರ್ಮಸ್ಥಳ ಪ್ರಕರಣ: ಜೈಲಿಂದ ಬಂದ ‘ಮಾಸ್ಕ್ ಮ್ಯಾನ್’ ಚಿನ್ನಯ್ಯನಿಂದ ತಿಮರೋಡಿ ವಿರುದ್ಧವೇ ದೂರು!

ಸಂಚಲನ ಮೂಡಿಸಿದ್ದ ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 'ಮಾಸ್ಕ್ ಮ್ಯಾನ್' ಚಿನ್ನಯ್ಯ ಈಗ ಜೈಲಿನಿಂದ ಬಿಡುಗಡೆಯಾಗಿದ್ದು, ಪ್ರಕರಣಕ್ಕೆ ತಿರುವು ನೀಡಿದ್ದಾನೆ.
dharmasthala case mask man

ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಮಾಸ್ಕ್ ಮ್ಯಾನ್’ ಎಂದೇ ಕುಖ್ಯಾತಿಗಳಿಸಿದ್ದ ಚಿನ್ನಯ್ಯ ಇದೀಗ ಜೈಲಿನಿಂದ ಬಿಡುಗಡೆಯಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾನೆ. ಇಷ್ಟು ದಿನ ಸುಳ್ಳು ಆರೋಪ ಮತ್ತು ಜನರನ್ನು ದಾರಿ ತಪ್ಪಿಸಿದ ಆರೋಪದ ಮೇಲೆ ಶಿವಮೊಗ್ಗ ಜೈಲಲ್ಲಿದ್ದ ಚಿನ್ನಯ್ಯ, ಹೊರಬರುತ್ತಿದ್ದಂತೆಯೇ ನ್ಯಾಯಕ್ಕಾಗಿ ಹೋರಾಡುತ್ತಿರುವ ಪ್ರಮುಖ ನಾಯಕರ ವಿರುದ್ಧವೇ ತಿರುಗಿ ಬಿದ್ದಿದ್ದಾನೆ.

ಸುಮಾರು ನಾಲ್ಕು ತಿಂಗಳ ಕಾಲ ಶಿವಮೊಗ್ಗ ಜೈಲಿನಲ್ಲಿ ಕಾಲ ಕಳೆದ ಚಿನ್ನಯ್ಯ, ಜೈಲಿನಿಂದ ಬಿಡುಗಡೆಯಾದ ತಕ್ಷಣವೇ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ತಾನು ಮತ್ತು ತನ್ನ ಪತ್ನಿ ತೀವ್ರ ಆತಂಕದಲ್ಲಿದ್ದು, ನಮಗೆ ಪ್ರಮುಖ ಹೋರಾಟಗಾರರಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾನೆ. ಈ ದೂರು ಇದೀಗ ಸೌಜನ್ಯ ಹೋರಾಟದ ಮುಂಚೂಣಿಯಲ್ಲಿರುವ ನಾಯಕರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

ಚಿನ್ನಯ್ಯ ನೀಡಿದ ದೂರಿನಲ್ಲಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಹೆಸರನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ತಿಮರೋಡಿ ಅವರಲ್ಲದೆ, ಗಿರೀಶ್ ಮಟ್ಟಣ್ಣವರ್, ವಿಠಲ ಗೌಡ, ಜಯಂತ್ ಹಾಗೂ ಸಮೀರ್ ಎಂ.ಡಿ. ಅವರ ವಿರುದ್ಧವೂ ಚಿನ್ನಯ್ಯ ಆರೋಪ ಮಾಡಿದ್ದಾನೆ. “ಈ ಐವರು ನನ್ನ ಮತ್ತು ನನ್ನ ಪತ್ನಿಯ ಜೀವಕ್ಕೆ ಸಂಚು ರೂಪಿಸಿದ್ದಾರೆ, ನಮಗೆ ಇವರಿಂದ ರಕ್ಷಣೆ ಬೇಕು,” ಎಂದು ಚಿನ್ನಯ್ಯ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಚಿನ್ನಯ್ಯನಿಗೆ ಕಳೆದ ನವೆಂಬರ್ 24 ರಂದೇ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. 1 ಲಕ್ಷ ರೂಪಾಯಿ ಬಾಂಡ್ ಹಾಗೂ ಇಬ್ಬರು ವ್ಯಕ್ತಿಗಳ ಶ್ಯೂರಿಟಿ (ಜಾಮೀನುದಾರರು) ಒದಗಿಸಬೇಕು ಎಂಬ ಷರತ್ತನ್ನು ವಿಧಿಸಲಾಗಿತ್ತು. ಜೊತೆಗೆ ಒಟ್ಟು 12 ಕಠಿಣ ಷರತ್ತುಗಳನ್ನು ನ್ಯಾಯಾಲಯ ಹಾಕಿತ್ತು. ಆದರೆ, ‘ಮಾಸ್ಕ್ ಮ್ಯಾನ್’ ಆಟ ಬಯಲಾಗಿದ್ದರಿಂದ ಆತನಿಗೆ ಶ್ಯೂರಿಟಿ ನೀಡಲು ಯಾರೂ ಮುಂದೆ ಬಂದಿರಲಿಲ್ಲ. ಹೀಗಾಗಿ ಜಾಮೀನು ಸಿಕ್ಕರೂ ಆತ ಜೈಲಿನಲ್ಲೇ ಉಳಿಯುವಂತಾಗಿತ್ತು. ಕೊನೆಗೂ ತಡವಾಗಿ ಜಾಮೀನು ಪ್ರಕ್ರಿಯೆ ಪೂರ್ಣಗೊಂಡು ಆತ ಹೊರಬಂದಿದ್ದಾನೆ.

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಹೋರಾಟ ತಾರಕಕ್ಕೇರಿದ ಸಮಯದಲ್ಲಿ, ಮುಖಕ್ಕೆ ಮಾಸ್ಕ್ ಧರಿಸಿ ಪ್ರತ್ಯಕ್ಷನಾಗಿದ್ದ ವ್ಯಕ್ತಿಯೇ ಈ ಚಿನ್ನಯ್ಯ. ತಾನು ಆ ಕೃತ್ಯವನ್ನು ಕಣ್ಣಾರೆ ಕಂಡಿದ್ದೇನೆ, ಸಾಕ್ಷಿಗಳಿವೆ ಎಂದು ಹೇಳುವ ಮೂಲಕ ಈತ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದನು. ಮಾಧ್ಯಮಗಳ ಮುಂದೆ ಬಂದು ಏನೇನೋ ಹೇಳಿಕೆಗಳನ್ನು ನೀಡಿದ್ದನು. ಆದರೆ, ನಂತರದ ಪೊಲೀಸ್ ತನಿಖೆಯಲ್ಲಿ ಈತನ ಹೇಳಿಕೆಗಳು ಸುಳ್ಳು (ಬುರುಡೆ) ಎಂಬುದು ಸಾಬೀತಾಗಿತ್ತು. ಪ್ರಕರಣದ ದಿಕ್ಕು ತಪ್ಪಿಸಲು ಮತ್ತು ಪ್ರಚಾರ ಪಡೆಯಲು ಈತ ನಾಟಕವಾಡಿದ್ದ ಎಂಬ ಆರೋಪದ ಮೇಲೆ ಪೊಲೀಸರು ಈತನನ್ನು ಬಂಧಿಸಿದ್ದರು.

ಇದನ್ನೂ ಓದಿ | ಸಿರಿಯಾದಲ್ಲಿ ಐಸಿಸ್‌ ವಿರುದ್ಧ ‘ಆಪರೇಷನ್ ಹಾಕೈ ಸ್ಟ್ರೈಕ್’ ಘೋಷಿಸಿದ ಪೆಂಟಗನ್!

ಹೋರಾಟಗಾರರ ಆಕ್ರೋಶ

ಇದೀಗ ಚಿನ್ನಯ್ಯ ಜೈಲಿನಿಂದ ಹೊರಬಂದು, ಯಾರು ಸೌಜನ್ಯ ಪರ ನೈಜ ಹೋರಾಟ ಮಾಡುತ್ತಿದ್ದಾರೋ ಅವರ ವಿರುದ್ಧವೇ ದೂರು ನೀಡಿರುವುದು ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. “ಇದು ಹೋರಾಟವನ್ನು ಹತ್ತಿಕ್ಕುವ ಅಥವಾ ಹೋರಾಟಗಾರರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ತಂತ್ರ,” ಎಂದು ತಿಮರೋಡಿ ಬೆಂಬಲಿಗರು ಅಭಿಪ್ರಾಯಪಟ್ಟಿದ್ದಾರೆ. ಚಿನ್ನಯ್ಯನ ಹಿಂದೆ ಬೇರೆ ಯಾರಾದರೂ ಪ್ರಭಾವಿ ಶಕ್ತಿಗಳು ಕೆಲಸ ಮಾಡುತ್ತಿದ್ದಾರೆಯೇ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ.

ಸೌಜನ್ಯ ಪ್ರಕರಣವು ತಾರ್ಕಿಕ ಅಂತ್ಯ ಕಾಣುವ ಬದಲು, ದಿನಕ್ಕೊಂದು ತಿರುವು ಪಡೆಯುತ್ತಿದ್ದು, ‘ಮಾಸ್ಕ್ ಮ್ಯಾನ್’ನ ಈ ಹೊಸ ‘ಬುರುಡೆ’ ಅಥವಾ ದೂರು ಪೊಲೀಸರಿಗೆ ಮತ್ತು ಹೋರಾಟಗಾರರಿಗೆ ಮುಂದಿನ ದಿನಗಳಲ್ಲಿ ಯಾವ ರೀತಿ ಸವಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

Share:

ಮತ್ತಷ್ಟು ಸುದ್ದಿ

ಪಾಂಡವಪುರದ ಕ್ಯಾತನಹಳ್ಳಿಯಲ್ಲಿ ರಾಜ್ಯಮಟ್ಟದ ‘ಅಧಿಕ ಹಾಲು ಕರೆಯುವ ಸ್ಪರ್ಧೆ’

ಶಾಸಕ ದರ್ಶನ್ ಪುಟ್ಟಣ್ಣಯ್ಯ ಹುಟ್ಟುಹಬ್ಬ ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಜನ್ಮದಿನದ ಪ್ರಯುಕ್ತ ಮಂಡ್ಯ

ಸಾವಯವ ಉತ್ಪನ್ನಗಳ ಗ್ರಾಹಕರೇ ಬೆಂಗಳೂರಿನ ಲಾಲ್‌ ಬಾಗ್‌ ಗೆ ಬನ್ನಿ

ಜೈವಿಕ ಕೃಷಿಕ ಸೊಸೈಟಿ (ರಿ)ಯಿಂದ ಕೃಷಿ ಉತ್ಪನ್ನಗಳ ನೇರ ಮಾರುಕಟ್ಟೆ  ಬೆಂಗಳೂರು: ಜೈವಿಕ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಜೈವಿಕ

ಮುಂದೆ ಓದಿ »

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಆರ್.ಪಾಟೀಲ್‌ ರಾಜೀನಾಮೆ

ಬೆಂಗಳೂರು: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನಾನು ದಿನಾಂಕ 05.06.2026ರಂದು ರಾಜೀನಾಮೆ ಸಲ್ಲಿಸಿದ್ದೇನೆ ಎಂದು

ಮುಂದೆ ಓದಿ »

ರೈತರ ತೆಂಗಿನ ತೋಟಗಳಿಗೆ ಆಸರೆಯಾದ ಪುಟ್ಟಣ್ಣಯ್ಯ ಫೌಂಡೇಶನ್

ಬನ್ನಂಗಾಡಿ ಗ್ರಾ.ಪಂನಲ್ಲಿ ಕೀಟ ನಿರ್ವಹಣೆ ಜಾಗೃತಿ ಮತ್ತು ಪ್ರಾತ್ಯಕ್ಷಿಕೆ! ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ

ಮುಂದೆ ಓದಿ »