ಹಾರ್ವರ್ಡ್‌ಗೆ ಟ್ರಂಪ್ ಆಘಾತ: ವಿದೇಶಿ ವಿದ್ಯಾರ್ಥಿಗಳ ದಾಖಲಾತಿ ರದ್ದು

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ವಿದೇಶಿ  ವಿದ್ಯಾರ್ಥಿಗಳನ್ನು ದಾಖಲಿಸುವ ಹಕ್ಕನ್ನು ಕಸಿದುಕೊಂಡಿದೆ

ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ವಿದೇಶಿ  ವಿದ್ಯಾರ್ಥಿಗಳನ್ನು ದಾಖಲಿಸುವ ಹಕ್ಕನ್ನು ಕಸಿದುಕೊಂಡಿದೆ. ಈ ಕ್ರಮವು ಗೃಹ ಭದ್ರತಾ ಇಲಾಖೆಯಿಂದ (DHS) ಘೋಷಿಸಿದ್ದು, ಇದು ಹಾರ್ವರ್ಡ್‌ನಲ್ಲಿ ಓದುತ್ತಿರುವ 6,793 ವಿದೇಶಿ ವಿದ್ಯಾರ್ಥಿಗಳ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಿದೆ. ಈ ನಿರ್ಧಾರವು ಭಾರತೀಯ ವಿದ್ಯಾರ್ಥಿಗಳ ಸೇರಿದಂತೆ ಸಾವಿರಾರು ವಿದೇಶಿ ವಿದ್ಯಾರ್ಥಿಗಳ ಕನಸಿಗೆ ತಣ್ಣೀರು ಎರಚಿದೆ.

ಹಾರ್ವರ್ಡ್‌ನ ಮೇಲೆ ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ಸಹಕರಿಸಿದ ಆರೋಪ, ಹಾಗೂ ಕ್ಯಾಂಪಸ್‌ನಲ್ಲಿ “ಯಹೂದಿ-ವಿರೋಧಿ, ಭಯೋತ್ಪಾದಕ-ಪರ ಮತ್ತು ಹಿಂಸಾತ್ಮಕ ಚಟುವಟಿಕೆಗಳನ್ನು ಉತ್ತೇಜಿಸಿದ” ಆರೋಪಗಳಿವೆ. ಈ ಕಾರಣಕ್ಕಾಗಿ, ವಿಶ್ವವಿದ್ಯಾಲಯದ ಸ್ಟೂಡೆಂಟ್ ಆಂಡ್ ಎಕ್ಸ್‌ಚೇಂಜ್ ವಿಸಿಟರ್ ಪ್ರೋಗ್ರಾಂ (SEVP) ಪ್ರಮಾಣೀಕರಣವನ್ನು ರದ್ದುಗೊಳಿಸಲಾಗಿದೆ.  

2024-25 ಶೈಕ್ಷಣಿಕ ವರ್ಷದಲ್ಲಿ ಹಾರ್ವರ್ಡ್‌ನ ಒಟ್ಟು ವಿದ್ಯಾರ್ಥಿಗಳಲ್ಲಿ 27.2% (6,793) ವಿದೇಶಿ  ವಿದ್ಯಾರ್ಥಿಗಳಾಗಿದ್ದಾರೆ. 2025-26ರ ಶುಲ್ಕವು $59,320 (60 ಲಕ್ಷ ರೂ.) ಆಗಿದ್ದು, ವಸತಿ ಸೇರಿದಂತೆ ಒಟ್ಟು ವೆಚ್ಚ $87,000 (74.79 ಲಕ್ಷ ರೂ.) ತಲುಪಲಿದೆ. ಈ ಶುಲ್ಕದಲ್ಲಿ ಹೆಚ್ಚಿನ  ಭಾಗವನ್ನು ವಿದೇಶಿ ವಿದ್ಯಾರ್ಥಿಗಳು ಭರಿಸುತ್ತಿದ್ದರು. ಈ ನಿರ್ಧಾರದಿಂದಾಗಿ ವಿಶ್ವವಿದ್ಯಾಲಯದ ಆರ್ಥಿಕತೆಗೆ ದೊಡ್ಡ ಹೊಡೆತವಾಗಲಿದೆ.  

ಹಾರ್ವರ್ಡ್ ಈ ಕ್ರಮವನ್ನು “ಕಾನೂನುಬಾಹಿರ” ಮತ್ತು “ಪ್ರತೀಕಾರದ ಕೆಲಸ ” ಎಂದು ಹೇಳಿದೆ. “140ಕ್ಕೂ ಹೆಚ್ಚು ದೇಶಗಳಿಂದ ಬಂದಿರುವ ವಿದೇಶಿ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯನ್ನು ಶ್ರೀಮಂತಗೊಳಿಸುತ್ತಾರೆ,” ಎಂದು ವಿಶ್ವವಿದ್ಯಾಲಯವು ತಿಳಿಸಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಈ ನಿರ್ಧಾರವನ್ನು ಖಂಡಿಸಿದ್ದಾರೆ. “ನಾವು ಇಲ್ಲಿಗೆ ತಲುಪಲು ಜೀವನಪೂರ್ತಿ ಶ್ರಮಿಸಿದ್ದೇವೆ. ಈಗ ವೀಸಾ ಮತ್ತು ವರ್ಗಾವಣೆಯ ಚಿಂತೆಯಲ್ಲಿದ್ದೇವೆ,” ಎಂದು ಆಸ್ಟ್ರಿಯಾದ ವಿದ್ಯಾರ್ಥಿ ಕಾರ್ಲ್ ಮೊಲ್ಡೆನ್ ಹೇಳಿದ್ದಾರೆ. “ಈ ಕ್ರಮವು ಶೈಕ್ಷಣಿಕ ಗುಣಮಟ್ಟಕ್ಕೆ ಹಾನಿಯುಂಟುಮಾಡುತ್ತದೆ,” ಎಂದು ಅರ್ಥಶಾಸ್ತ್ರ ಪ್ರಾಧ್ಯಾಪಕ ಜೇಸನ್ ಫರ್ಮನ್ ಆಕ್ಷೇಪಿಸಿದ್ದಾರೆ.

Share:

ಮತ್ತಷ್ಟು ಸುದ್ದಿ

ಪಾಂಡವಪುರದ ಕ್ಯಾತನಹಳ್ಳಿಯಲ್ಲಿ ರಾಜ್ಯಮಟ್ಟದ ‘ಅಧಿಕ ಹಾಲು ಕರೆಯುವ ಸ್ಪರ್ಧೆ’

ಶಾಸಕ ದರ್ಶನ್ ಪುಟ್ಟಣ್ಣಯ್ಯ ಹುಟ್ಟುಹಬ್ಬ ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಜನ್ಮದಿನದ ಪ್ರಯುಕ್ತ ಮಂಡ್ಯ

ಸಾವಯವ ಉತ್ಪನ್ನಗಳ ಗ್ರಾಹಕರೇ ಬೆಂಗಳೂರಿನ ಲಾಲ್‌ ಬಾಗ್‌ ಗೆ ಬನ್ನಿ

ಜೈವಿಕ ಕೃಷಿಕ ಸೊಸೈಟಿ (ರಿ)ಯಿಂದ ಕೃಷಿ ಉತ್ಪನ್ನಗಳ ನೇರ ಮಾರುಕಟ್ಟೆ  ಬೆಂಗಳೂರು: ಜೈವಿಕ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಜೈವಿಕ

ಮುಂದೆ ಓದಿ »

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಆರ್.ಪಾಟೀಲ್‌ ರಾಜೀನಾಮೆ

ಬೆಂಗಳೂರು: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನಾನು ದಿನಾಂಕ 05.06.2026ರಂದು ರಾಜೀನಾಮೆ ಸಲ್ಲಿಸಿದ್ದೇನೆ ಎಂದು

ಮುಂದೆ ಓದಿ »

ರೈತರ ತೆಂಗಿನ ತೋಟಗಳಿಗೆ ಆಸರೆಯಾದ ಪುಟ್ಟಣ್ಣಯ್ಯ ಫೌಂಡೇಶನ್

ಬನ್ನಂಗಾಡಿ ಗ್ರಾ.ಪಂನಲ್ಲಿ ಕೀಟ ನಿರ್ವಹಣೆ ಜಾಗೃತಿ ಮತ್ತು ಪ್ರಾತ್ಯಕ್ಷಿಕೆ! ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ

ಮುಂದೆ ಓದಿ »