ಸ್ಟಾಲಿನ್ ಮನೆ ಬಾಗಿಲಿಗೆ ಹೋಗೋದು ಯಾಕೆ?: ಕಾಂಗ್ರೆಸ್‌ಗೆ ದೇವೇಗೌಡರ ಪ್ರಶ್ನೆ

"ನಮ್ಮ ಪಕ್ಷಕ್ಕೆ ಶಕ್ತಿ ಇಲ್ಲದ ಕಾರಣ NDA ಜೊತೆ ಕೈಜೋಡಿಸಿದ್ದೇವೆ. ಆದರೆ, ತಮ್ಮದು ರಾಷ್ಟ್ರೀಯ ಪಕ್ಷ ಸ್ಟಾಲಿನ್ ಅವರ ಮನೆ ಬಾಗಿಲಿಗೆ ಏಕೆ ಹೋಗುತ್ತೀರಿ?" -ಹೆಚ್‌ಡಿಡಿ
hd deve gowda

“ನಮ್ಮ ಪಕ್ಷಕ್ಕೆ ಶಕ್ತಿ ಇಲ್ಲದ ಕಾರಣ ನಾವು ಅನಿವಾರ್ಯವಾಗಿ ಎನ್‌ಡಿಎ (NDA) ಜೊತೆ ಕೈಜೋಡಿಸಿದ್ದೇವೆ. ಆದರೆ, ತಾವು ರಾಷ್ಟ್ರೀಯ ಪಕ್ಷ ಎಂದು ಬೀಗುವ ಕಾಂಗ್ರೆಸ್ ನಾಯಕರು ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ (MK Stalin) ಅವರ ಮನೆ ಬಾಗಿಲಿಗೆ ಏಕೆ ಹೋಗುತ್ತಾರೆ?” ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕಾಂಗ್ರೆಸ್ ನಾಯಕರಿಗೆ ಪ್ರಶ್ನಿಸಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ತಮ್ಮ ಸ್ವಗ್ರಾಮ ಹರದನಹಳ್ಳಿಗೆ ಭೇಟಿ ನೀಡಿದ್ದ ಅವರು, ಮನೆ ದೇವರು ಶ್ರೀ ದೇವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜೆಡಿಎಸ್-ಬಿಜೆಪಿ ಮೈತ್ರಿಯ ಬಗ್ಗೆ ಕಾಂಗ್ರೆಸ್ ನಾಯಕರು ಆಡಿಕೊಳ್ಳುವುದಕ್ಕೆ ಮೈತ್ರಿ 

ಅನಿವಾರ್ಯತೆ ಮತ್ತು ಪ್ರಾದೇಶಿಕ ಪಕ್ಷದ ಉಳಿವು:

ಜೆಡಿಎಸ್ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ಬಲವಾಗಿ ಸಮರ್ಥಿಸಿಕೊಂಡ ದೇವೇಗೌಡರು, “ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದನ್ನು ಉಳಿಸಿಕೊಳ್ಳಲು ಮತ್ತು ನಮ್ಮ ಸಾವಿರಾರು ಕಾರ್ಯಕರ್ತರ ಹಿತರಕ್ಷಣೆಗಾಗಿ ನಾವು ಎನ್‌ಡಿಎ ಮೈತ್ರಿಕೂಟದೊಂದಿಗೆ ಸೇರಿದ್ದೇವೆ. ನಮಗೆ ಸ್ವಂತ ಶಕ್ತಿಯ ಮೇಲೆ ಹೋರಾಡುವಷ್ಟು ಬಲವಿಲ್ಲದಿರಬಹುದು, ಆದರೆ ಪ್ರಾದೇಶಿಕ ಅಸ್ಮಿತೆಯನ್ನು ಉಳಿಸಿಕೊಳ್ಳುವ ಛಲವಿದೆ. ಕಾಂಗ್ರೆಸ್ ನಾಯಕರು ನಮ್ಮ ಮೈತ್ರಿಯನ್ನು ಟೀಕಿಸುವ ಮೊದಲು, ಅವರು ತಮಿಳುನಾಡಿನಲ್ಲಿ ಡಿಎಂಕೆ ನಾಯಕ ಸ್ಟಾಲಿನ್ ಅವರ ಬೆಂಬಲಕ್ಕಾಗಿ ಅಂಗಲಾಚುವುದನ್ನು ನೆನಪಿಸಿಕೊಳ್ಳಲಿ,” ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ನಾಯಕರು ಜೆಡಿಎಸ್ ಪಕ್ಷವನ್ನು ರಾಜಕೀಯವಾಗಿ ಮುಗಿಸಲು ವ್ಯರ್ಥ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, “ಕಾಂಗ್ರೆಸ್ ನಾಯಕರು ನಮ್ಮ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಮೂಲಕ ತಾವೇ ರಾಜಕೀಯವಾಗಿ ಮುಳುಗಲಿದ್ದಾರೆ. ಎಚ್.ಡಿ. ರೇವಣ್ಣ ಅವರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅವರ ವರ್ಚಸ್ಸನ್ನು ಕುಗ್ಗಿಸಲು ಕಾಂಗ್ರೆಸ್ ನಾನಾ ತಂತ್ರಗಳನ್ನು ರೂಪಿಸಿತು. ಆದರೆ, ಅದೆಲ್ಲವೂ ವಿಫಲವಾಗಿದೆ. ಜನರು ಮತ್ತು ದೇವರು ನಮ್ಮೊಂದಿಗಿದ್ದಾರೆ,” ಎಂದರು.

ಇದನ್ನೂ ಓದಿ | ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾ ವಿಧಿವಶ!

ಬೃಹತ್ ಸಮಾವೇಶದ ಮುನ್ಸೂಚನೆ:

ಇದೇ ವೇಳೆ ಪಕ್ಷ ಸಂಘಟನೆಯ ಬಗ್ಗೆ ಮಾತನಾಡಿದ ದೇವೆಗೌಡರು, ಮುಂಬರುವ ದಿನಗಳಲ್ಲಿ ಹಾಸನದಲ್ಲಿ ಬೃಹತ್ ಸಮಾವೇಶವೊಂದನ್ನು ಹಮ್ಮಿಕೊಳ್ಳಲಿರುವುದಾಗಿ ಹೇಳಿದರು. “ಜನವರಿ 24, 2026ರಂದು ಹಾಸನದಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಲಿದ್ದೇವೆ. ಆ ಮೂಲಕ ಜೆಡಿಎಸ್ ಶಕ್ತಿ ಏನೆಂಬುದನ್ನು ತೋರಿಸಲಿದ್ದೇವೆ,” ಎಂದು ಸವಾಲು ಹಾಕಿದರು. ಈ ಸಂದರ್ಭದಲ್ಲಿ ಶಾಸಕ ಎಚ್.ಡಿ. ರೇವಣ್ಣ, ಸಂಸದರು ಮತ್ತು ಜೆಡಿಎಸ್‌ನ ಹಿರಿಯ ಮುಖಂಡರು ಉಪಸ್ಥಿತರಿದ್ದರು.

Share:

ಮತ್ತಷ್ಟು ಸುದ್ದಿ

ಪಾಂಡವಪುರದ ಕ್ಯಾತನಹಳ್ಳಿಯಲ್ಲಿ ರಾಜ್ಯಮಟ್ಟದ ‘ಅಧಿಕ ಹಾಲು ಕರೆಯುವ ಸ್ಪರ್ಧೆ’

ಶಾಸಕ ದರ್ಶನ್ ಪುಟ್ಟಣ್ಣಯ್ಯ ಹುಟ್ಟುಹಬ್ಬ ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಜನ್ಮದಿನದ ಪ್ರಯುಕ್ತ ಮಂಡ್ಯ

ಸಾವಯವ ಉತ್ಪನ್ನಗಳ ಗ್ರಾಹಕರೇ ಬೆಂಗಳೂರಿನ ಲಾಲ್‌ ಬಾಗ್‌ ಗೆ ಬನ್ನಿ

ಜೈವಿಕ ಕೃಷಿಕ ಸೊಸೈಟಿ (ರಿ)ಯಿಂದ ಕೃಷಿ ಉತ್ಪನ್ನಗಳ ನೇರ ಮಾರುಕಟ್ಟೆ  ಬೆಂಗಳೂರು: ಜೈವಿಕ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಜೈವಿಕ

ಮುಂದೆ ಓದಿ »

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಆರ್.ಪಾಟೀಲ್‌ ರಾಜೀನಾಮೆ

ಬೆಂಗಳೂರು: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನಾನು ದಿನಾಂಕ 05.06.2026ರಂದು ರಾಜೀನಾಮೆ ಸಲ್ಲಿಸಿದ್ದೇನೆ ಎಂದು

ಮುಂದೆ ಓದಿ »

ರೈತರ ತೆಂಗಿನ ತೋಟಗಳಿಗೆ ಆಸರೆಯಾದ ಪುಟ್ಟಣ್ಣಯ್ಯ ಫೌಂಡೇಶನ್

ಬನ್ನಂಗಾಡಿ ಗ್ರಾ.ಪಂನಲ್ಲಿ ಕೀಟ ನಿರ್ವಹಣೆ ಜಾಗೃತಿ ಮತ್ತು ಪ್ರಾತ್ಯಕ್ಷಿಕೆ! ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ

ಮುಂದೆ ಓದಿ »