4-6 ತಿಂಗಳಲ್ಲಿ ಪೆಟ್ರೋಲ್‌ ವಾಹನಗಳ ದರದಲ್ಲಿ EV ಕಾರ್ ಲಭ್ಯ: ಗಡ್ಕರಿ

ಮುಂದಿನ ನಾಲ್ಕರಿಂದ ಆರು ತಿಂಗಳಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬೆಲೆಗಳು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಬೆಲೆಗೆ ಸಮಾನವಾಗುತ್ತವೆ ಎಂದ ಸಚಿವ ನಿತಿನ್ ಗಡ್ಕರಿ .
 Nitin Gadkari EV prices

ಮುಂದಿನ ನಾಲ್ಕರಿಂದ ಆರು ತಿಂಗಳಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬೆಲೆಗಳು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಬೆಲೆಗೆ ಸಮಾನವಾಗುತ್ತವೆ ಎಂದು ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಎಂದು ಹೇಳಿದ್ದಾರೆ. ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘ (FICCI)ದ 20ನೇ ಉನ್ನತ ಶಿಕ್ಷಣ ಸಮ್ಮೇಳನ 2025ರಲ್ಲಿ ಮಾತನಾಡಿದ ಅವರು, ಈ ಬದಲಾವಣೆಯು ದೇಶದ ಸಾರಿಗೆ ಉದ್ಯಮವನ್ನು ವಿಶ್ವದ ಮುಖ್ಯ ಸ್ಥಾನಕ್ಕೆ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಗಡ್ಕರಿ ಅವರು ಹಿಂದಿನ ಅನುಭವಗಳನ್ನು ನೆನಪಿಸುತ್ತಾ, “ನಾನು ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯ ಸಮಯದಲ್ಲಿ ಬ್ಯಾಟರಿ ಬೆಲೆ ಪ್ರತಿ ಕಿಲೋವ್ಯಾಟ್-ಆವರ್‌ಗೆ (kWh) 150 ಡಾಲರ್ ಇತ್ತು. ಇಂದು ಅದು 55ರಿಂದ 65 ಡಾಲರ್‌ಗಳಿಗೆ ಇಳಿಕೆಯಾಗಿದೆ. ಈ ದರ ಕುಸಿತದಿಂದಾಗಿ, ಎಲೆಕ್ಟ್ರಿಕ್ ಸ್ಕೂಟರ್‌ಗಳು, ಕಾರುಗಳು ಮತ್ತು ಬಸ್‌ಗಳ ಬೆಲೆಗಳು ಸದ್ಯದ ಪೆಟ್ರೋಲ್-ಡೀಸೆಲ್ ವಾಹನಗಳಿಗೆ ಸಮಾನವಾಗುತ್ತವೆ” ಎಂದು ಭಾವಿಸುತ್ತೇನೆ ಎಂದಿದ್ದಾರೆ ಎಂದು ಇಕಾನಾಮಿಕ್ ಟೈಮ್ಸ್ ಮತ್ತು ಬಿಸಿನೆಸ್ ಸ್ಟ್ಯಾಂಡರ್ಡ್‌ನಂತಹ ಮೂಲಗಳು ದೃಢಪಡಿಸಿವೆ.

ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯು ಭಾರತದ ಆರ್ಥಿಕತೆಗೆ ದೊಡ್ಡ ಹೊರೆಯಾಗಿದೆ. ವಾರ್ಷಿಕವಾಗಿ 22 ಲಕ್ಷ ಕೋಟಿ ರೂಪಾಯಿಗಳನ್ನು ಇಂಧನ ಆಮದಿಗೆ ಮಾತ್ರ ಖರ್ಚು ಮಾಡುತ್ತಿದ್ದೇವೆ. ಇದು ದೇಶದ ವಿದೇಶೀಯ ವಿನಿಮಯ ಸಂಪನ್ಮೂಲಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಪರಿಸರಕ್ಕೆ ಹಾನಿ ಮಾಡುತ್ತದೆ.

ಇದನ್ನೂ ಓದಿ | ಸಿಗಂದೂರು ಸೇತುವೆಗೆ ʻಚೌಡೇಶ್ವರಿ ದೇವಿʼ ಹೆಸರು: ಗಡ್ಕರಿ ಉದ್ಘಾಟನೆ

ಗಡ್ಕರಿ ಅವರು ಈ ಸಮಸ್ಯೆಯನ್ನು ತಡೆಯಲು ಹಸಿರು ಇಂಧನಗಳತ್ತ ಗಮನ ಹರಿಸುವಂತೆ ಸಲಹೆ ನೀಡಿದರು. ವಿಶೇಷವಾಗಿ, ಕೃಷಿ ಕ್ಷೇತ್ರದಲ್ಲಿ ಬದಲಾವಣೆ ಅಗತ್ಯವಿದೆ. ಟ್ರಾಕ್ಟರ್ ತಯಾರಕರು ಮತ್ತು ಕೃಷಿ ಸಂಶೋಧಕರೊಂದಿಗೆ ನಡೆದ ಸಭೆಯಲ್ಲಿ, ಎಥೆನಾಲ್, ಸಿಎನ್‌ಜಿ ಅಥವಾ ಐಸೊಬುಟನಾಲ್‌ನಲ್ಲಿ ಚಲಿಸುವ ಎಲೆಕ್ಟ್ರಿಕ್ ಟ್ರಾಕ್ಟರ್‌ಗಳು ಮತ್ತು ಎಂಜಿನ್‌ಗಳ ಅಭಿವೃದ್ಧಿಗೆ ಸೂಚನೆ ನೀಡಿದ್ದೇನೆ ಎಂದರು. ಗಡ್ಕರಿ ಅವರ ಅಧಿಕಾರ ಸ್ವೀಕಾರದ ಸಮಯದಲ್ಲಿ ದೇಶದ ವಾಹನ ಉದ್ಯಮದ ಮೌಲ್ಯ 14 ಲಕ್ಷ ಕೋಟಿ ರೂಪಾಯಿಗಳಿತ್ತು. ಇಂದು ಅದು 22 ಲಕ್ಷ ಕೋಟಿಗೆ ಬೆಳೆದಿದೆ.  

Share:

ಮತ್ತಷ್ಟು ಸುದ್ದಿ

ಪಾಂಡವಪುರದ ಕ್ಯಾತನಹಳ್ಳಿಯಲ್ಲಿ ರಾಜ್ಯಮಟ್ಟದ ‘ಅಧಿಕ ಹಾಲು ಕರೆಯುವ ಸ್ಪರ್ಧೆ’

ಶಾಸಕ ದರ್ಶನ್ ಪುಟ್ಟಣ್ಣಯ್ಯ ಹುಟ್ಟುಹಬ್ಬ ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಜನ್ಮದಿನದ ಪ್ರಯುಕ್ತ ಮಂಡ್ಯ

ಸಾವಯವ ಉತ್ಪನ್ನಗಳ ಗ್ರಾಹಕರೇ ಬೆಂಗಳೂರಿನ ಲಾಲ್‌ ಬಾಗ್‌ ಗೆ ಬನ್ನಿ

ಜೈವಿಕ ಕೃಷಿಕ ಸೊಸೈಟಿ (ರಿ)ಯಿಂದ ಕೃಷಿ ಉತ್ಪನ್ನಗಳ ನೇರ ಮಾರುಕಟ್ಟೆ  ಬೆಂಗಳೂರು: ಜೈವಿಕ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಜೈವಿಕ

ಮುಂದೆ ಓದಿ »

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಆರ್.ಪಾಟೀಲ್‌ ರಾಜೀನಾಮೆ

ಬೆಂಗಳೂರು: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನಾನು ದಿನಾಂಕ 05.06.2026ರಂದು ರಾಜೀನಾಮೆ ಸಲ್ಲಿಸಿದ್ದೇನೆ ಎಂದು

ಮುಂದೆ ಓದಿ »

ರೈತರ ತೆಂಗಿನ ತೋಟಗಳಿಗೆ ಆಸರೆಯಾದ ಪುಟ್ಟಣ್ಣಯ್ಯ ಫೌಂಡೇಶನ್

ಬನ್ನಂಗಾಡಿ ಗ್ರಾ.ಪಂನಲ್ಲಿ ಕೀಟ ನಿರ್ವಹಣೆ ಜಾಗೃತಿ ಮತ್ತು ಪ್ರಾತ್ಯಕ್ಷಿಕೆ! ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ

ಮುಂದೆ ಓದಿ »