ಹಸಿರಿನ ಮಹತ್ವ ನಮ್ಮ ಎದೆಯಲ್ಲಿ ಬಿತ್ತಿ ಹೋದ ತಿಮ್ಮಕ್ಕ

ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಇಂದು ವಿಧಿವಶರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದು ಇಂದು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
Salumarada Timmakka
ಸಾಲುಮರದ ತಿಮ್ಮಕ್ಕ

ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ (114) ಇಂದು ವಿಧಿವಶರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದ ಅವರು ಬೆಂಗಳೂರಿನ ಜಯನಗರದ ಅಪೋಲೋ ಸ್ಪೆಷಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಚಿಕಿತ್ಸೆ ಫಲಿಸದೆ ತಮ್ಮ ಕೊನೆಯುಸಿರೇಳೆದಿದ್ದಾರೆ.

ಇದನ್ನೂ ಓದಿ | ‘ಗಡ್ಡಪ್ಪ’ ಖ್ಯಾತಿಯ ನಟ ಚನ್ನೇಗೌಡ ಇನ್ನಿಲ್ಲ

ಸಾಲುಮರದ ತಿಮ್ಮಕ್ಕ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹುಲಿಕಲ್ ಗ್ರಾಮದಲ್ಲಿ 1911ರ ಜೂನ್ 30ರಂದು ಜನಿಸಿದ್ದರು. ತಿಮ್ಮಕ್ಕ ದಂಪತಿಗಳು ಮಕ್ಕಳಿಲ್ಲದ ದುಃಖವನ್ನು ಮರೆಯಲು ತನ್ನ ಪತಿ ಚಿಕ್ಕಯ್ಯನೊಂದಿಗೆ ರಾಮನಗರ ಜಿಲ್ಲೆಯ ಹುಲಿಕಲ್-ಕುದೂರು ಹೆದ್ದಾರಿ ಬದಿಯಲ್ಲಿ (4.5 ಕಿ.ಮೀ. ಉದ್ದ) 385 ಆಲದ ಮರಗಳನ್ನು ನೆಟ್ಟು, ಅವುಗಳನ್ನೇ ‘ಮಕ್ಕಳು’ ಎಂದು ಪೋಷಿಸಿದರು. ಇಂದು ಆ ಮರಗಳು ಗಟ್ಟಿಯಾಗಿ ಬೆಳೆದು ನಿಂತು ಪರಿಸರಕ್ಕೆ ನೆರಳು ಒದಗಿಸುತ್ತಿವೆ. ಈ ಅಪೂರ್ವ ಕಾರ್ಯಕ್ಕಾಗಿ ‘ಸಾಲುಮರದ ತಿಮ್ಮಕ್ಕ’ ಎಂದು ಖ್ಯಾತರಾದರು.

Share:

ಮತ್ತಷ್ಟು ಸುದ್ದಿ

ಪಾಂಡವಪುರದ ಕ್ಯಾತನಹಳ್ಳಿಯಲ್ಲಿ ರಾಜ್ಯಮಟ್ಟದ ‘ಅಧಿಕ ಹಾಲು ಕರೆಯುವ ಸ್ಪರ್ಧೆ’

ಶಾಸಕ ದರ್ಶನ್ ಪುಟ್ಟಣ್ಣಯ್ಯ ಹುಟ್ಟುಹಬ್ಬ ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಜನ್ಮದಿನದ ಪ್ರಯುಕ್ತ ಮಂಡ್ಯ

ಸಾವಯವ ಉತ್ಪನ್ನಗಳ ಗ್ರಾಹಕರೇ ಬೆಂಗಳೂರಿನ ಲಾಲ್‌ ಬಾಗ್‌ ಗೆ ಬನ್ನಿ

ಜೈವಿಕ ಕೃಷಿಕ ಸೊಸೈಟಿ (ರಿ)ಯಿಂದ ಕೃಷಿ ಉತ್ಪನ್ನಗಳ ನೇರ ಮಾರುಕಟ್ಟೆ  ಬೆಂಗಳೂರು: ಜೈವಿಕ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಜೈವಿಕ

ಮುಂದೆ ಓದಿ »

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಆರ್.ಪಾಟೀಲ್‌ ರಾಜೀನಾಮೆ

ಬೆಂಗಳೂರು: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನಾನು ದಿನಾಂಕ 05.06.2026ರಂದು ರಾಜೀನಾಮೆ ಸಲ್ಲಿಸಿದ್ದೇನೆ ಎಂದು

ಮುಂದೆ ಓದಿ »

ರೈತರ ತೆಂಗಿನ ತೋಟಗಳಿಗೆ ಆಸರೆಯಾದ ಪುಟ್ಟಣ್ಣಯ್ಯ ಫೌಂಡೇಶನ್

ಬನ್ನಂಗಾಡಿ ಗ್ರಾ.ಪಂನಲ್ಲಿ ಕೀಟ ನಿರ್ವಹಣೆ ಜಾಗೃತಿ ಮತ್ತು ಪ್ರಾತ್ಯಕ್ಷಿಕೆ! ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ

ಮುಂದೆ ಓದಿ »