ಕನ್ನಡಿಗರ ಮನಗೆದ್ದ ಸೋಷಿಯಲ್ ಮೀಡಿಯಾ ತಾರೆಯರು

ಕನ್ನಡದ ಸೋಷಿಯಲ್ ಮೀಡಿಯಾ ಇನ್ಫ್ಲ್ಯೂಎನ್ಸರ್‌ಗಳು ಯೂಟ್ಯೂಬ್, ಇನ್‌ಸ್ಟಾಗ್ರಾಮ್, ಮತ್ತು ರೀಲ್ಸ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರವಾಸ, ಅಡುಗೆ, ತಂತ್ರಜ್ಞಾನ, ಮತ್ತು ಹಾಸ್ಯದ ಕಂಟೆಂಟ್‌ನೊಂದಿಗೆ ಲಕ್ಷಾಂತರ ಹಿಂಬಾಲಕರನ್ನು ಗಳಿಸಿದ್ದಾರೆ. ಡಾ. ಬ್ರೋ, ರೇಖಾ ಅಡುಗೆ, ಮತ್ತು ಮಸ್ತ್ ಮಗಾ ಸೇರಿದಂತೆ ಟಾಪ್ 10 ತಾರೆಯರು ಕನ್ನಡ ಸಂಸ್ಕೃತಿಯನ್ನು ಡಿಜಿಟಲ್ ಜಗತ್ತಿನಲ್ಲಿ ಪ್ರತಿನಿಧಿಸುತ್ತಿದ್ದಾರೆ. ಈ ಇನ್ಫ್ಲ್ಯೂಎನ್ಸರ್‌ಗಳ ಜನಪ್ರಿಯತೆ ಸಿನಿಮಾ ತಾರೆಯರನ್ನು ಮೀರಿಸುವಷ್ಟು ಬೆಳೆದಿದೆ ಎಂದು ಅಶ್ವಿನಿ ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ.

ಸದ್ಯನಾವಿರೋದು ಸೋಷಿಯಲ್ ಮೀಡಿಯಾ ಯುಗದಲ್ಲಿ. ಈ ಸೋಷಿಯಲ್ ಮೀಡಿಯಾ ಯುವಜನರಲ್ಲಿ ಕ್ರೇಜ್ ಸೃಷ್ಟಿಸಿ ಬಿಟ್ಟಿದೆ. ಫೇಸ್ಬುಕ್, ವಾಟ್ಸ್ಅಪ್, ಯೂಟ್ಯೂಬ್, ಇನ್ಸ್ಟಾಗ್ರಾಮ್, ಟಿಕ್ಟಾಕ್, ವ್ಹಿಚಾಟ್, ಟೆಲಿಗ್ರಾಮ್, ಮೆಸೆಂಜರ್, ಸ್ನ್ಯಾಪ್ ಚಾಟ್ ಹೀಗೆ ಈ ಸೋಷಿಯಲ್ ಮೀಡಿಯಾ ಆಪ್‌ಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ಇಲ್ಲಿ ಮನರಂಜನೆ, ಶಿಕ್ಷಣ, ಆಹಾರ, ಆರೋಗ್ಯ, ಅಡುಗೆ, ಫ್ಯಾಷನ್, ಮೇಕಪ್, ಮೇಕ್ ಓವರ್, ಹಾಡು, ಕತೆ, ನೃತ್ಯ, ಹಾಸ್ಯ, ಪ್ರವಾಸ ಹೀಗೆ ಎಲ್ಲ ಕ್ಷೇತ್ರಗಳ ಮಾಹಿತಿ, ಮನರಂಜನೆಯನ್ನು ಪಡೆಯಬಹುದು. 

ಸೋಷಿಯಲ್ ಮೀಡಿಯಾ ಪ್ಲಾಟ್‌ ಫಾರ್ಮ್‌ಗಳಲ್ಲಿ ನಿಮಗಿಷ್ಟದ ಕ್ಷೇತ್ರದ ವಿಡಿಯೋಗಳು ನಿಮಗೆ ಸರಾಗವಾಗಿ ಸಿಗುತ್ತವೆ. ವೀಕ್ಷಕರಿಗಾಗಿ ಪ್ರತೀದಿನ ಹೊಸ ಹೊಸ ವಿಡಿಯೋಗಳನ್ನು ಸೃಷ್ಟಿಸುವ ಸೋಷಿಯಲ್ ಮೀಡಿಯಾ ಸ್ಟಾರ್‌ಗಳಿದ್ದಾರೆ. ಇವರಲ್ಲಿ ನಮ್ಮ ಸಿನಿಮಾ ನಟ, ನಟಿಯರಿಗಿಂತಲೂ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಸೋಷಿಯಲ್ ಮೀಡಿಯಾ ಇನ್ಫ್ಲ್ಯೂಎನ್ಸರ್ಗಳಿದ್ದಾರೆ.

ಯೂಟ್ಯೂಬ್, ಇನ್ಟಾಗ್ರಾಮ್, ಸ್ನ್ಯಾಪ್ ಚಾಟ್ ಇತರ ಸೋಷಿಯಲ್ ಮೀಡಿಯಾ ಪ್ಲಾಟ್‌ ಫಾರ್ಮ್‌ಗಳಲ್ಲಿ ತಮ್ಮದೇ ಆದ ಬಹುಸಂಖ್ಯೆಯ ಹಿಂಬಾಲಕರನ್ನು ಹೊಂದಿರುವ ಸ್ಟಾರ್ಗಳಿದ್ದಾರೆ. ಈ ಸ್ಟಾರ್‌ಗಳ ಪಟ್ಟಿ ಆಗಿಂದಾಗ್ಗೆ ಜನರ ಅಭಿರುಚಿಗೆತಕ್ಕಂತೆ ಬದಲಾಗುತ್ತಿರುತ್ತದೆ.

ಇಂತಹವರಲ್ಲಿ ನಮ್ಮ ರಾಜ್ಯದ ಇನ್ಫ್ಲ್ಯೂಎನ್ಸರ್ಗಳು ಕನ್ನಡದಲ್ಲಿ ಕಂಟೆಂಟ್ಗಳನ್ನು ನೀಡುವುದರ ಜೊತೆ ಜೊತೆಗೆ ಇಂಗ್ಲಿಷ್, ಹಿಂದಿಯಲ್ಲಿ ಸಹ ವಿಡಿಯೋಗಳನ್ನು ಮಾಡಿ ಹಂಚಿಕೊಳ್ಳುತಿದ್ದಾರೆ. 

ಡಾ.ಬ್ರೋ , ಡ್ಯಾನಿಶ್ ಸೇಟ್, ನಾನು ನಂದಿನಿ ಖ್ಯಾತಿಯ ವಿಕಿಪಿಡಿಯಾ, ವೈನ್‌ಸ್ಟೋರ್ ರಘು ಗೌಡರಂತವರು ಜನರಿಗೆ ತಿಳಿಸಬೇಕಿರುವ ಗಂಭೀರ ವಿಷಯಗಳನ್ನು ತಮ್ಮದೇ ಹಾಸ್ಯಾದ ಮೂಲಕ ತಿಳಿಹೇಳುವ ಪ್ರಯತ್ನ ಮಾಡುತ್ತಾರೆ. ಈ ಸೋಷಿಯಲ್ ಮೀಡಿಯಾ ಸ್ಟಾರ್ಗಳನ್ನು ಜನ ಯೂಟ್ಯೂಬ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ತಮ್ಮೆಲ್ಲಾ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರಂಗಳಲ್ಲಿ ಫಾಲೋ ಮಾಡುತ್ತಾರೆ. .

ಡಾ. ಬ್ರೋ (ಗಗನ್ ಶ್ರೀನಿವಾಸ್)

2018ರಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ ಡಾ. ಬ್ರೋನ ಎಂದೇ ಖ್ಯಾತರಾಗಿರುವ ಗಗನ್ ಶ್ರೀನಿವಾಸ್ ಕನ್ನಡದ ಪ್ರಮುಖ ಟ್ರಾವೆಲ್ ವ್ಲಾಗರ್ ಆಗಿದ್ದಾರೆ. ಇವರ ಪ್ರತಿ ವಿಡಿಯೋ “ನಮಸ್ಕಾರ ದೇವ್ರು” ಎಂಬುದರೊಂದಿಗೆ ಶುರು ಮಾಡಿ ಭಾರತದ ವಿವಿಧ ರಾಜ್ಯಗಳ ಸಂಸ್ಕೃತಿ, ಆಹಾರ, ಮತ್ತು ಸ್ಥಳಗಳನ್ನು ಪರಿಚಯಿಸುತ್ತಾರೆ. ಈಗ ವಿದೇಶಗಳ ಪ್ರವಾಸದ ವಿಡಿಯೋಗಳನ್ನು ಕನ್ನಡದಲ್ಲಿ ಒದಗಿಸುತ್ತಿದ್ದಾರೆ. ಇವರ ಚಾನೆಲ್‌ಗೆ ಸುಮಾರು 25 ಲಕ್ಷ ಚಂದಾದಾರರಿದ್ದಾರೆ, ಮತ್ತು ಅವರ ವಿಡಿಯೋಗಳಿಗಾಗಿ ಜನ ಕಾತುರದಿಂದ ಕಾಯುತ್ತಾರೆ.

ಮೀಡಿಯಾ ಮಾಸ್ಟರ್ (ಎಂ.ಎಸ್. ರಾಘವೇಂದ್ರ)

ಎಂ.ಎಸ್. ರಾಘವೇಂದ್ರ ಅವರ ಮೀಡಿಯಾ ಮಾಸ್ಟರ್ ಚಾನೆಲ್‌ನಲ್ಲಿ ಇತಿಹಾಸ, ವಿಜ್ಞಾನ, ಆರ್ಥಿಕತೆ, ಮತ್ತು ವಿಶ್ವದ ರೋಮಾಂಚಕ ಘಟನೆಗಳ ಬಗ್ಗೆ ವಿಶ್ಲೇಷಣಾತ್ಮಕ ವಿಡಿಯೋಗಳನ್ನು ನೀಡುತ್ತಾರೆ.   ಈ ಚಾನೆಲ್‌ಗೆ ಸುಮಾರು 26 ಲಕ್ಷ ಚಂದಾದಾರರಿದ್ದಾರೆ. ಯುವ ಜನರಿಗೆ ಬೌದ್ಧಿಕ ಜ್ಞಾನವನ್ನು ಸರಳ ಭಾಷೆಯಲ್ಲಿ ತಲುಪಿಸುವ ಮೂಲಕ ಈ ಚಾನೆಲ್ ಜನಪ್ರಿಯವಾಗಿದೆ.

ಕೆಕೆ ಟಿವಿ (ವೇಣು)

ತಂತ್ರಜ್ಞಾನ ಪ್ರಿಯರಿಗೆ ಕೆಕೆ ಟಿವಿ ಒಂದು ಖಜಾನೆಯಾಗಿದೆ. ವೇಣು ನಡೆಸುವ ಈ ಚಾನೆಲ್‌ಗೆ 21 ಲಕ್ಷ ಚಂದಾದಾರರಿದ್ದು, ಗ್ಯಾಜೆಟ್‌ಗಳು, ಸಾಫ್ಟ್‌ವೇರ್, ಗೇಮಿಂಗ್, ಮತ್ತು ಆಂಡ್ರಾಯ್ಡ್ ಟಿಪ್ಸ್‌ಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಇದು ಯುವಕರಿಗೆ ತಂತ್ರಜ್ಞಾನದ ಜಗತ್ತನ್ನು ಸಮೀಪಿಸಲು ಸಹಾಯಕವಾಗಿದೆ.

ರೇಖಾ ಅಡುಗೆ

ಕನ್ನಡದ ಅತ್ಯಂತ ಜನಪ್ರಿಯ ಅಡುಗೆ ಚಾನೆಲ್‌ಗಳಲ್ಲಿ ಒಂದಾದ ರೇಖಾ ಅಡುಗೆ, 28 ಲಕ್ಷ ಚಂದಾದಾರರನ್ನು ಹೊಂದಿದೆ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯಗಳ ರೆಸಿಪಿಗಳನ್ನು ಸರಳವಾಗಿ ವಿವರಿಸುವ ಈ ಚಾನೆಲ್, ಗೃಹಿಣಿಯರಿಗೆ ಮತ್ತು ಆಹಾರ ಪ್ರಿಯರಿಗೆ ವರದಾನವಾಗಿದೆ.

ಮಾಯಾಲೋಕ (ಶುಭಾ ಶರೋನ್)

ಶುಭಾ ಶರೋನ್‌ ಅವರ ಮಾಯಾಲೋಕ ಚಾನೆಲ್ ಲೈಫ್‌ಸ್ಟೈಲ್, ಫಿಟ್‌ನೆಸ್, ಪ್ರವಾಸ, ಮತ್ತು ಸೌಂದರ್ಯ ಸಲಹೆಗಳನ್ನು ಒದಗಿಸುತ್ತದೆ. 25 ಲಕ್ಷ ಚಂದಾದಾರರೊಂದಿಗೆ, ಈ ಚಾನೆಲ್ ಯುವತಿಯರಿಗೆ ಸ್ಫೂರ್ತಿದಾಯಕವಾಗಿದೆ. ದೈನಂದಿನ ಜೀವನದ ವಿಷಯಗಳು, ಆರೋಗ್ಯ, ಮತ್ತು ವ್ಯಾಪಾರ ಕಲ್ಪನೆಗಳನ್ನು ಇವರು ರೀಲ್ಸ್ ಮೂಲಕ ಹಂಚಿಕೊಳ್ಳುತ್ತಾರೆ.

ಮಲ್ಲು ಜಮಖಂಡಿ

ಉತ್ತರ ಕರ್ನಾಟಕದ ಮಲ್ಲು ಜಮಖಂಡಿ ತಮ್ಮ ಹಾಸ್ಯದ ಮೂಲಕ ಕರ್ನಾಟಕದ ಮನೆಮಾತಾಗಿದ್ದಾರೆ. 2017ರಿಂದ ಸಕ್ರಿಯರಾಗಿರುವ ಇವರ ಚಾನೆಲ್‌ಗೆ 26 ಲಕ್ಷ ಚಂದಾದಾರರಿದ್ದಾರೆ. ಗಂಭೀರ ವಿಷಯಗಳನ್ನು ಹಾಸ್ಯದ ಮೂಲಕ ತಿಳಿಹೇಳುವ ಇವರ ಶೈಲಿ ಜನಪ್ರಿಯವಾಗಿದೆ.

ಸ್ವಾತಿ ಕುಲಕರ್ಣಿ

ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯರಾಗಿರುವ ಸ್ವಾತಿ ಕುಲಕರ್ಣಿ, ಮಾರ್ಕೆಟಿಂಗ್ ಮತ್ತು ಹಣಕಾಸು ವಿಷಯಗಳಿಗೆ ಸಂಬಂಧಿಸಿದ ಕಂಟೆಂಟ್ ರಚಿಸುತ್ತಾರೆ. ಗ್ರಾಹಕರಿಗೆ ಮಾರ್ಕೆಟಿಂಗ್ ತಂತ್ರಗಳ ಬಗ್ಗೆ ಎಚ್ಚರಿಕೆ ನೀಡುವ ಇವರ ವಿಡಿಯೋಗಳು ಜನಪ್ರಿಯವಾಗಿವೆ.

ವಿಕಿಪೀಡಿಯಾ

ನಾನು ನಂದಿನಿ ಹಾಡಿನಿಂದ ಖ್ಯಾತಿಗೊಂಡ ವಿಕಿಪೀಡಿಯಾ ಟೀಮ್, ಕಡಿಮೆ ಸಮಯದಲ್ಲಿ ಬೇಗ ಜನರನ್ನು ತಲುಪಿದೆ. ಹಾಸ್ಯದ ಮೂಲಕ ಜನರನ್ನು ರಂಜಿಸುವ ಮತ್ತು ಎಚ್ಚರಿಸುವ ಈ ಚಾನೆಲ್‌ಗೆ 5 ಲಕ್ಷ ಚಂದಾದಾರರಿದ್ದಾರೆ. ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲೂ ಇವರ ವಿಡಿಯೋಗಳು ಲಕ್ಷಾಂತರ ವೀಕ್ಷಣೆಗಳನ್ನು ಪಡೆಯುತ್ತವೆ.

ಮಸ್ತ್ ಮಗಾ (ಅಮರ್ ಪ್ರಸಾದ್ ವಿ)

ಮಾಧ್ಯಮ ವೃತ್ತಿಪರ ಅಮರ್ ಪ್ರಸಾದ್ ವಿ ನಡೆಸುವ ಮಸ್ತ್ ಮಗಾ ಚಾನೆಲ್, ರಾಜ್ಯ, ರಾಷ್ಟ್ರ, ಮತ್ತು ವಿಶ್ವದ ಪ್ರಮುಖ ಘಟನೆಗಳನ್ನು ಸರಳ ಕನ್ನಡ ಭಾಷೆಯಲ್ಲಿ ವಿವರಿಸುತ್ತದೆ. ಈ ಚಾನೆಲ್‌ಗೆ 26 ಲಕ್ಷ ಚಂದಾದಾರರಿದ್ದಾರೆ, ಮತ್ತು ಇವರು ಸುದ್ದಿಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಇವರಷ್ಟೇ ಅಲ್ಲದೇ ಕನ್ನಡದಲ್ಲಿ ಸುಮಾರಷ್ಟು ಮಂದಿ  ಸೋಷಿಯಲ್ ಮೀಡಿಯಾ ಇನ್ಫ್ಲ್ಯೂಎನ್ಸರ್‌ಗಳು ಇದ್ದು,ಇವರೆಲ್ಲರೂ  ತಮ್ಮ ವಿಶಿಷ್ಟ ಕಂಟೆಂಟ್‌ನ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ ಮತ್ತು ಗೆಲ್ಲುತ್ತಿದ್ದಾರೆ. ಈ ತಾರೆಯರು ಕರ್ನಾಟಕದ ಸಂಸ್ಕೃತಿ, ಭಾಷೆ, ಮತ್ತು ಮನರಂಜನೆಯನ್ನು ಡಿಜಿಟಲ್ ಜಗತ್ತಿನಲ್ಲಿ ಯಶಸ್ವಿಯಾಗಿ ಪ್ರತಿನಿಧಿಸುತ್ತಿದ್ದಾರೆ. ಇವರ ಕಂಟೆಂಟ್ ಕನ್ನಡಿಗರಿಗೆ ಮಾತ್ರವಲ್ಲ, ವಿಶ್ವದಾದ್ಯಂತ ಕನ್ನಡ ಪ್ರೇಮಿಗಳಿಗೂ ಸ್ಫೂರ್ತಿಯಾಗಿದೆ

Share:

ಮತ್ತಷ್ಟು ಸುದ್ದಿ

ಉಳಿಗೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೋಲಾರ್ ವಿದ್ಯುತ್ ಘಟಕ ಉದ್ಘಾಟನೆ

ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಫೌಂಡೇಶನ್‌ ಮಹತ್ವದ ಕೊಡುಗೆ ಸೆಲ್ಕೋ ಮತ್ತು ಪುಟ್ಟಣ್ಣಯ್ಯ ಫೌಂಡೇಶನ್‌ನ ಶ್ಲಾಘನೀಯ ಕಾರ್ಯ ಮಂಡ್ಯ:

ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮ

ಅಲೆದಾಟ ಮುಕ್ತ ಆಡಳಿತದತ್ತ ಮೇಲುಕೋಟೆ ಮನೆ ಬಾಗಿಲಿಗೇ ಬಂದ ‘ಸರ್ಕಾರಿ ಸೇವೆ’ ಕಾರ್ಯಕ್ರಮ  ತಂತ್ರಜ್ಞಾನದ ಅರಿವನ್ನು ಆಡಳಿತ ಯಂತ್ರಕ್ಕೆ ವರ್ಗಾಯಿಸಿದ

ಮುಂದೆ ಓದಿ »

ಮೋದಿಯವರ 3.0 ಸರ್ಕಾರದ 2 ವರ್ಷಗಳ 10 ಪ್ರಮುಖ ಸಾಧನೆಗಳು ಮತ್ತು ವೈಫಲ್ಯಗಳೇನು?

ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಿ 12 ವರ್ಷಗಳನ್ನು ಪೂರೈಸಿದ್ದಾರೆ. ಸತತ 3ನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ 2 ವರ್ಷಗಳನ್ನು

ಮುಂದೆ ಓದಿ »

ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಲು ಮನವಿ

ಕಾಂಗ್ರೆಸ್‌ ಹೈಕಮಾಂಡ್‌ಗೆ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ಒತ್ತಾಯ ಮೈಸೂರು: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ

ಮುಂದೆ ಓದಿ »