ಆಪರೇಷನ್ ಬ್ಲ್ಯಾಕ್ ಫಾರೆಸ್ಟ್: ನಂಬಾಲ ಕೇಶವ್ ಸೇರಿ 27 ಮಂದಿ ಸಾವು

ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ ನಾಯಕ ನಂಬಾಲ ಕೇಶವ್ ರಾವ್,ಮತ್ತು 27 ಶಂಕಿತ ಮಾವೋಯಿಸ್ಟಗಳು ಛತ್ತೀಸ್‌ಗಢದ ನಾರಾಯಣಪುರದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹತರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

ಭಾರತ ಸರ್ಕಾರವು, ನಿಷೇಧಿತ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋಯಿಸ್ಟ್) ನಾಯಕ ನಂಬಾಲ ಕೇಶವ್ ರಾವ್,ಮತ್ತು 27 ಶಂಕಿತ ಮಾವೋಯಿಸ್ಟಗಳು ಛತ್ತೀಸ್‌ಗಢದ ನಾರಾಯಣಪುರದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹತರಾಗಿದ್ದಾರೆ ಎಂದು ಘೋಷಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಬಸವರಾಜು ಎಂದೂ ಕರೆಯಲಾಗುವ ರಾವ್ ಅವರನ್ನು “ನಕ್ಸಲ್ ಚಳವಳಿಯ ಬೆನ್ನೆಲುಬು” ಎಂದು ವಿವರಿಸಿದ್ದಾರೆ. ಅವರ ಹತ್ಯೆಯು “ನಕ್ಸಲಿಸಂ ನಿರ್ಮೂಲನೆಯ ಸಮರದಲ್ಲಿ ಒಂದು ಐತಿಹಾಸಿಕ ಸಾಧನೆ” ಎಂದು ಶಾ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

“ಕಳೆದ ಮೂರು ದಶಕಗಳಲ್ಲಿ ಭಾರತದ ನಕ್ಸಲ್ ವಿರುದ್ಧದ ಹೋರಾಟದಲ್ಲಿ ಮೊದಲ ಬಾರಿಗೆ ಪ್ರಧಾನ ಕಾರ್ಯದರ್ಶಿ ಹಂತದ ನಾಯಕನನ್ನು ನಮ್ಮ ಪಡೆಗಳು ನಿಷ್ಕ್ರಿಯಗೊಳಿಸಿವೆ” ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ಇದರ ಜೊತೆಗೆ, ಕೇಂದ್ರ ಸರ್ಕಾರವು ಆಪರೇಷನ್ ಬ್ಲ್ಯಾಕ್ ಫಾರೆಸ್ಟ್ ಕಾರ್ಯಾಚರಣೆಯು ಮುಕ್ತಾಯಗೊಂಡಿದೆ ಎಂದು ಘೋಷಿಸಿದೆ. ಈ ಕಾರ್ಯಾಚರಣೆಯಲ್ಲಿ ಛತ್ತೀಸ್‌ಗಢ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ 54 ಶಂಕಿತ ಮಾವೋಯಿಸ್ಟರನ್ನು ಬಂಧಿಸಲಾಗಿದ್ದು, 84 ಮಂದಿ ಶರಣಾಗತರಾಗಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಛತ್ತೀಸ್‌ಗಢ ಪೊಲೀಸರು ಬುಧವಾರ, ರಾಜ್ಯದ ಅಬುಜ್‌ಮಾಡ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 27 ಶಂಕಿತ ಮಾವೋಯಿಸ್ಟರು ಹತರಾಗಿದ್ದಾರೆ ಎಂದು ಘೋಷಿಸಿದ್ದರು. ಈ ಘಟನೆ ಅಬುಜ್‌ಮಾಡ್ ಪ್ರದೇಶದ ಬೊಟೇರ್ ಗ್ರಾಮದ ಸಮೀಪದಲ್ಲಿ ನಡೆದಿದ್ದು, ಈ ಪ್ರದೇಶವು ನಾರಾಯಣಪುರ, ಬೀಜಾಪುರ ಮತ್ತು ದಂತೇವಾಡ ಜಿಲ್ಲೆಗಳನ್ನು ಒಳಗೊಂಡ ಗುಡ್ಡಗಾಡು ಕಾಡಿನ ಪ್ರದೇಶವಾಗಿದೆ. ಈ ಚಕಮಕಿಯಲ್ಲಿ ಜಿಲ್ಲಾ ರಕ್ಷಣಾ ಗಾರ್ಡ್ ತಂಡದ ಒಬ್ಬ ಸದಸ್ಯ ಸಹ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಈ ಗುಂಡಿನ ಚಕಮಕಿಯಲ್ಲಿ ಹಲವಾರು ಹಿರಿಯ ಮಟ್ಟದ ಮಾವೋಯಿಸ್ಟ್ ಕಾರ್ಯಕರ್ತರು ಸಾವನ್ನಪ್ಪಿರಬಹುದು ಅಥವಾ ಗಂಭೀರವಾಗಿ ಗಾಯಗೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಈ ವರ್ಷ ಇದುವರೆಗೆ ಭದ್ರತಾ ಸಿಬ್ಬಂದಿಯೊಂದಿಗಿನ ಚಕಮಕಿಗಳಲ್ಲಿ185ಕ್ಕೂ ಹೆಚ್ಚು ಶಂಕಿತ ಮಾವೋಯಿಸ್ಟರು ಹತರಾಗಿದ್ದಾರೆ. 2024ರಲ್ಲಿ ಭದ್ರತಾ ಪಡೆಗಳಿಂದ 217 ಶಂಕಿತ ಮಾವೋಯಿಸ್ಟರು ಕೊಲ್ಲಲ್ಪಟ್ಟಿದ್ದರು.

ಕೇಂದ್ರ ಸರ್ಕಾರವು 2026ರ ಮಾರ್ಚ್ 31ರ ವೇಳೆಗೆ ನಕ್ಸಲಿಸಂ ದೇಶದಲ್ಲಿ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ ಎಂದು ಪದೇ ಪದೇ ಘೋಷಿಸುತ್ತಿದೆ. ಆದರೆ, ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಬುಧವಾರ ಈ ಕೊಲೆಗಳನ್ನು ಖಂಡಿಸಿದ್ದು, ಛತ್ತೀಸ್‌ಗಢದಲ್ಲಿ “ಹಿರಿಯ ಮಾವೋಯಿಸ್ಟ್ ನಾಯಕ ಮತ್ತು ಹಲವಾರು ಆದಿವಾಸಿಗಳ ಕ್ರೂರ ಕೊಲೆಗೆ ಸ್ವತಂತ್ರ ನ್ಯಾಯಾಂಗ ತನಿಖೆಯನ್ನು ಒತ್ತಾಯಿಸಿದೆ.

“ಇದು ಉಗ್ರವಾದ-ನಿಗ್ರಹ ಕಾರ್ಯಾಚರಣೆಗಳ ಹೆಸರಿನಲ್ಲಿ ನಡೆದ ಮತ್ತೊಂದು ಕಾಐವಾಗಿದೆ” ಎಂದು ಸಿಪಿಐ ಹೇಳಿದೆ. “ಕಾನೂನುಬದ್ಧ ಬಂಧನದ ಬದಲು ಪದೇ ಪದೇ ಮಾರಕ ಬಲಪ್ರಯೋಗವನ್ನು ಬಳಸುವುದು ಸರ್ಕಾರದ ಪ್ರಜಾಪ್ರಭುತ್ವದ ಮಾನದಂಡಗಳು ಮತ್ತು ಕಾನೂನು ಆಡಳಿತದ ಬದ್ಧತೆಯ ಬಗ್ಗೆ ಆತಂಕವನ್ನು ಹುಟ್ಟಿಸುತ್ತದೆ. ಸಂವಿಧಾನದಲ್ಲಿ ಖಾತರಿಪಡಿಸಲಾದ ಕಾನೂನು ಪ್ರಕ್ರಿಯೆಯನ್ನು ಏಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ನಿರ್ಲಕ್ಷಿಸಲಾಯಿತು?” ಎಂದು ಪಕ್ಷ ಪ್ರಶ್ನಿಸಿದೆ.

Share:

ಮತ್ತಷ್ಟು ಸುದ್ದಿ

ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮ

ಅಲೆದಾಟ ಮುಕ್ತ ಆಡಳಿತದತ್ತ ಮೇಲುಕೋಟೆ ಮನೆ ಬಾಗಿಲಿಗೇ ಬಂದ ‘ಸರ್ಕಾರಿ ಸೇವೆ’ ಕಾರ್ಯಕ್ರಮ  ತಂತ್ರಜ್ಞಾನದ ಅರಿವನ್ನು ಆಡಳಿತ ಯಂತ್ರಕ್ಕೆ ವರ್ಗಾಯಿಸಿದ

ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಲು ಮನವಿ

ಕಾಂಗ್ರೆಸ್‌ ಹೈಕಮಾಂಡ್‌ಗೆ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ಒತ್ತಾಯ ಮೈಸೂರು: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ

ಮುಂದೆ ಓದಿ »

ಬೆಂಗಳೂರಿನಲ್ಲಿ ಮೇ 25 ರಂದು 3ನೇ ಕರ್ನಾಟಕ ಸಂಘಟಕರ ಸಮಾವೇಶ

ಸಾಂಸ್ಕೃತಿಕ ನೀತಿ ಜಾರಿ ಮತ್ತು ಅಕಾಡೆಮಿಗಳ ಬಲವರ್ಧನೆಗೆ ಆಗ್ರಹಿಸಿ ರಂಗಕರ್ಮಿಗಳು ಹಾಗೂ ಸಾಂಸ್ಕೃತಿಕ ಸಂಘಟಕರ ಬೃಹತ್‌ ಸಮಾಲೋಚನೆ ಬೆಂಗಳೂರು: ಕರ್ನಾಟಕ

ಮುಂದೆ ಓದಿ »

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »