ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮ

ಅಲೆದಾಟ ಮುಕ್ತ ಆಡಳಿತದತ್ತ ಮೇಲುಕೋಟೆ

ಮನೆ ಬಾಗಿಲಿಗೇ ಬಂದ ಸರ್ಕಾರಿ ಸೇವೆಕಾರ್ಯಕ್ರಮ 

ತಂತ್ರಜ್ಞಾನದ ಅರಿವನ್ನು ಆಡಳಿತ ಯಂತ್ರಕ್ಕೆ ವರ್ಗಾಯಿಸಿದ ದರ್ಶನ್‌ ಪುಟ್ಟಣ್ಣಯ್ಯ

ಮಂಡ್ಯ: ಸರ್ಕಾರಿ ಕಚೇರಿಗಳ ಕತ್ತಲ ಕೋಣೆಗಳಲ್ಲಿ ಫೈಲುಗಳ ಬೆನ್ನಟ್ಟಿ ಸಾರ್ವಜನಿಕರು ಅಲೆಯುವ ಕಾಲ ಈಗ ಮುಗಿದಿದೆ. ಶಾಸಕರೊಬ್ಬರು ಮನಸ್ಸು ಮಾಡಿದರೆ ಇಡೀ ಆಡಳಿತ ಯಂತ್ರವನ್ನೇ ಜನರ ಹೊಸ್ತಿಲಿಗೆ ತಂದು ನಿಲ್ಲಿಸಬಹುದು ಎಂಬುದನ್ನು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಶ್ರೀ ದರ್ಶನ್ ಪುಟ್ಟಣ್ಣಯ್ಯ ಅವರು ಪ್ರತ್ಯಕ್ಷವಾಗಿ ಸಾಬೀತುಪಡಿಸಿದ್ದಾರೆ. ಅವರ ದೂರದರ್ಶಿತ್ವದ ಮಾರ್ಗದರ್ಶನದಲ್ಲಿ ಮೂಡಿಬಂದಿರುವ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಎಂಬ ಮಹತ್ವಾಕಾಂಕ್ಷಿ ಅಭಿಯಾನ ಈಗ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ.

ಮಾಣಿಕ್ಯನಹಳ್ಳಿಯ ಯಶಸ್ಸಿನ ಬೆನ್ನಲ್ಲೇ, ಇದೀಗ ಜೂನ್ 15, 2026 ರಿಂದ ಜುಲೈ 04, 2026 ರವರೆಗೆ ಕಟ್ಟೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಬೃಹತ್ ಜನಸೇವಾ ಸಪ್ತಾಹ ಅತ್ಯಂತ ಯಶಸ್ವಿಯಾಗಿ ಆಯೋಜನೆಗೊಂಡಿದೆ.

ಕಚೇರಿಗೆ ನೀವ್ಯಾಕೆ ಬರ್ತೀರಿ? ಕಚೇರಿಯೇ ನಿಮ್ಮ ಮನೆಗೆ ಬರಲಿದೆ!: ಈ ಹಿಂದೆ ಸಾರ್ವಜನಿಕರು ಸಣ್ಣಪುಟ್ಟ ಕೆಲಸಗಳಿಗೂ ದಿನದ ಕೂಲಿ ಬಿಟ್ಟು, ತಾಲೂಕು ಕೇಂದ್ರಗಳಿಗೆ ಅಲೆಯಬೇಕಿತ್ತು. ಅಲ್ಲಿ ಮಧ್ಯವರ್ತಿಗಳ ಕಾಟ, ಭ್ರಷ್ಟಾಚಾರ ಮತ್ತು ವಿಳಂಬ ನೀತಿಯಿಂದಾಗಿ ಜನ ಸಾಮಾನ್ಯರು ಕಸರತ್ತು ನಡೆಸಬೇಕಿತ್ತು. ಆದರೆ ದರ್ಶನ್ ಪುಟ್ಟಣ್ಣಯ್ಯ ಅವರ ಕ್ರಾಂತಿಕಾರಿ ಚಿಂತನೆಯ ಫಲವಾಗಿ, ಸರ್ಕಾರಿ ಕಛೇರಿಗೆ ನೀವು ಬರಬೇಡಿ, ಕಛೇರಿಯೇ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಎಂಬ ಘೋಷವಾಕ್ಯದೊಂದಿಗೆ ಇಡೀ ತಾಲೂಕು ಮಟ್ಟದ ಅಧಿಕಾರಿಗಳ ದಂಡೇ ಹಳ್ಳಿಗಳಲ್ಲಿ ಬಿಡಾರ ಹೂಡಿದೆ.

ವಿಳಂಬ ರಹಿತ, ಪಾರದರ್ಶಕ ಆಡಳಿತಕ್ಕೆ ಮುನ್ನುಡಿ: ಈ ಕಾರ್ಯಕ್ರಮದ ಮುಖ್ಯ ವೈಶಿಷ್ಟ್ಯವೆಂದರೆ ಪಾರದರ್ಶಕತೆ. ಇಲ್ಲಿ ಮಧ್ಯವರ್ತಿಗಳಿಗೆ ಜಾಗವಿಲ್ಲ, ಲಂಚದ ನೆರಳೂ ಇಲ್ಲ. ಅಧಿಕಾರಿಗಳೇ ನೇರವಾಗಿ ಹಳ್ಳಿಗಳ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಹಾಗೂ ಅಗತ್ಯ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಕಂದಾಯ, ಪಡಿತರ, ಸಾಮಾಜಿಕ ಭದ್ರತೆ ಸೇರಿದಂತೆ 8 ಪ್ರಮುಖ ಇಲಾಖೆಗಳ ಸೇವೆಗಳನ್ನು ಒಂದೇ ಸೂರಿನಡಿ ಕ್ಷಿಪ್ರವಾಗಿ ವಿಲೇವಾರಿ ಮಾಡಲಾಗುತ್ತಿದೆ.

ಒಂದೇ ಸೂರಿನಡಿ ಸಿಗುತ್ತಿರುವ 8 ಪ್ರಮುಖ ಸೌಲಭ್ಯಗಳು:

  1. ಪಿಂಚಣಿ ಸೌಲಭ್ಯಗಳು: ವೃದ್ಧರು, ವಿಕಲಚೇತನರು ಹಾಗೂ ವಿಧವೆಯರ ಮಾಶಾಸನ ಸ್ಥಳದಲ್ಲೇ ಮಂಜೂರಾತಿ.
  2. ಪೌತಿ ಖಾತೆ ಆಂದೋಲನ: ರೈತರ ಜಮೀನಿನ ವಾರಸುದಾರರ ಖಾತೆ ಬದಲಾವಣೆ ಪ್ರಕ್ರಿಯೆ ಸರಳೀಕರಣ.
  3. ಕಂದಾಯ ಅದಾಲತ್: ಭೂಮಿಗೆ ಸಂಬಂಧಿಸಿದ ತಕರಾರುಗಳ ಶೀಘ್ರ ವಿಲೇವಾರಿ.
  4. ಪಡಿತರ ಚೀಟಿಗೆ ಆಧಾರ್ ಜೋಡಣೆ: ಅನ್ನಭಾಗ್ಯ ಯೋಜನೆಯ ಸೌಲಭ್ಯ ತಲುಪಿಸಲು ತಿದ್ದುಪಡಿ.
  5. ಕಾರ್ಮಿಕ ಕಾರ್ಡ್: ಶ್ರಮಿಕ ವರ್ಗಕ್ಕೆ ಸರ್ಕಾರದ ಸೌಲಭ್ಯಗಳ ವಿತರಣೆ.
  6. ಸ್ವತ್ತು: ಗ್ರಾಮೀಣ ಭಾಗದ ಆಸ್ತಿ ದಾಖಲೆಗಳ ಡಿಜಿಟಲೀಕರಣ ಮತ್ತು ವಿತರಣೆ.
  7. ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ: ವಿವಿಧ ಯೋಜನೆಗಳ ನಗದು ನೇರವಾಗಿ ರೈತರ ಖಾತೆಗೆ ಜಮೆ (DBT).
  8. ಗ್ಯಾರಂಟಿ ಯೋಜನೆಗಳು: ಸರ್ಕಾರದ ಎಲ್ಲಾ ಜನಪ್ರಿಯ ಗ್ಯಾರಂಟಿಗಳ ತಡೆರಹಿತ ನೋಂದಣಿ.

ಇದು ಸೇವೆಯಲ್ಲ ನಮ್ಮ ಕರ್ತವ್ಯ: ಜನರು ತಮ್ಮ ಹಕ್ಕುಗಳಿಗಾಗಿ ಕಚೇರಿಗಳ ಮುಂದೆ ಸಾಲು ನಿಲ್ಲಬಾರದು. ಸಾರ್ವಜನಿಕರ ಸಮಯ ಮತ್ತು ಶ್ರಮವನ್ನು ಉಳಿಸಿ, ಗೌರವಯುತವಾಗಿ ಸೌಲಭ್ಯಗಳನ್ನು ತಲುಪಿಸುವುದು ನಮ್ಮ ಜವಾಬ್ದಾರಿ ಎನ್ನುತ್ತಾರೆ ಶಾಸಕ ದರ್ಶನ್ ಪುಟ್ಟಣ್ಣಯ್ಯ.

ಅವರ ಈ ಜನಪರ ಕಾಳಜಿಗೆ ಇಡೀ ಕ್ಷೇತ್ರದಾದ್ಯಂತ ರೈತರು, ಮಹಿಳೆಯರು ಮತ್ತು ಹಿರಿಯ ನಾಗರಿಕರಿಂದ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಸಮಸ್ತ ಜನಪ್ರತಿನಿಧಿಗಳು, ದಕ್ಷ ಅಧಿಕಾರಿಗಳ ವರ್ಗ ಹಾಗೂ ಮುಖಂಡರು ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಮೇಲುಕೋಟೆ ಕ್ಷೇತ್ರವು ಈಗ ಕೇವಲ ಭೌಗೋಳಿಕವಾಗಿ ಅಷ್ಟೇ ಅಲ್ಲ, ಆಡಳಿತಾತ್ಮಕವಾಗಿಯೂ ಮಾದರಿ ಕ್ಷೇತ್ರವಾಗಿ ಹೊರಹೊಮ್ಮುತ್ತಿದೆ. ದರ್ಶನ್ ಪುಟ್ಟಣ್ಣಯ್ಯ ಅವರ ಈ ‘ಮನೆ ಬಾಗಿಲಿಗೆ ಆಡಳಿತ’ದ ಪರಿಕಲ್ಪನೆ ಭ್ರಷ್ಟಾಚಾರ ಮುಕ್ತ ಮತ್ತು ಅಲೆದಾಟ ಮುಕ್ತ ಕರ್ನಾಟಕದ ನಿರ್ಮಾಣಕ್ಕೆ ದಿಕ್ಸೂಚಿಯಾಗಿದೆ.

Share:

ಮತ್ತಷ್ಟು ಸುದ್ದಿ

ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮ

ಅಲೆದಾಟ ಮುಕ್ತ ಆಡಳಿತದತ್ತ ಮೇಲುಕೋಟೆ ಮನೆ ಬಾಗಿಲಿಗೇ ಬಂದ ‘ಸರ್ಕಾರಿ ಸೇವೆ’ ಕಾರ್ಯಕ್ರಮ  ತಂತ್ರಜ್ಞಾನದ ಅರಿವನ್ನು ಆಡಳಿತ ಯಂತ್ರಕ್ಕೆ ವರ್ಗಾಯಿಸಿದ

ಮುಂದೆ ಓದಿ »

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »