ಏರ್ ಇಂಡಿಯಾ ದುರಂತ: ಪತ್ತೆಯಾಯ್ತು ಎರಡನೇ ಬ್ಲ್ಯಾಕ್ ಬಾಕ್ಸ್

ಅಹಮದಾಬಾದ್‌ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಮಾನದ ಎಫ್‌ಡಿಆರ್ ವಿಮಾನದ ಅವಶೇಷಗಳ ಮಧ್ಯೆ, ಕಟ್ಟಡದ ಮಾಳಿಗೆಯ ಮೇಲೆ ಪತ್ತೆಯಾಗಿತ್ತು. ಇದೀಗ ಸಿವಿಆರ್ ಭಾನುವಾರ ಪತ್ತೆಯಾಗಿದ್ದು, ತನಿಖೆಗೆ ಮಹತ್ವದ ಹೆಜ್ಜೆಯಾಗಿದೆ.

ಅಹಮದಾಬಾದ್‌: ಗುಜರಾತ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ (AI171), ಗುರುವಾರ ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ಬಿ.ಜೆ. ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಪತನಗೊಂಡಿತ್ತು. ಈ ದುರಂತದಲ್ಲಿ 270ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ವಿಮಾನದ ತನಿಖೆಗೆ ನಿರ್ಣಾಯಕವಾದ ಎರಡನೇ ಬ್ಲ್ಯಾಕ್ ಬಾಕ್ಸ್ ಭಾನುವಾರ ಪತ್ತೆಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹಿರಿಯ ಸಹಾಯಕ ಪಿ.ಕೆ. ಮಿಶ್ರಾ ತಿಳಿಸಿದ್ದಾರೆ.

ವಿಮಾನದಲ್ಲಿ ಎರಡು ಬ್ಲ್ಯಾಕ್ ಬಾಕ್ಸ್‌ಗಳಿವೆ: ಫೈಟ್ ಡೇಟಾ ರೆಕಾರ್ಡರ್ (ಎಫ್‌ಡಿಆರ್) ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (ಸಿವಿಆರ್). ಎಫ್‌ಡಿಆರ್ ಶುಕ್ರವಾರ ವಿಮಾನದ ಅವಶೇಷಗಳ ಮಧ್ಯೆ, ಕಟ್ಟಡದ ಮಾಳಿಗೆಯ ಮೇಲೆ ಪತ್ತೆಯಾಗಿತ್ತು. ಇದೀಗ ಸಿವಿಆರ್ ಭಾನುವಾರ ಪತ್ತೆಯಾಗಿದ್ದು, ತನಿಖೆಗೆ ಮಹತ್ವದ ಹೆಜ್ಜೆಯಾಗಿದೆ. ಈ ಎರಡೂ ರೆಕಾರ್ಡರ್‌ಗಳು ದುರಂತದ ಕಾರಣವನ್ನು ತಿಳಿಯಲು ನಿರ್ಣಾಯಕ ಸಾಕ್ಷ್ಯ ಒದಗಿಸಲಿವೆ.

ಎಫ್‌ಡಿಆರ್ ವಿಮಾನದ ಗತಿವಿಧಿ, ಎಂಜಿನ್ ಕಾರ್ಯಕ್ಷಮತೆ, ಫ್ಲಾಪ್‌ಗಳ ಸ್ಥಿತಿ ಮತ್ತು ಇತರ ತಾಂತ್ರಿಕ ವಿವರಗಳನ್ನು ದಾಖಲಿಸುತ್ತದೆ. ಸಿವಿಆರ್ ಫೈಲಟ್‌ಗಳ ಸಂಭಾಷಣೆ, ಎಚ್ಚರಿಕೆ ಶಬ್ದಗಳು ಮತ್ತು ಕಾಕ್‌ಪಿಟ್‌ನಲ್ಲಿನ ಇತರ ಆಡಿಯೊ ಡೇಟಾವನ್ನು ದಾಖಲಿಸುತ್ತದೆ. ಈ ಡೇಟಾ ತನಿಖಾಧಿಕಾರಿಗಳಿಗೆ ವಿಮಾನದ ಕೊನೆಯ ಕ್ಷಣಗಳನ್ನು ಮರುನಿರ್ಮಾಣ ಮಾಡಲು ಸಹಾಯ ಮಾಡಲಿದೆ.

ತನಿಖೆಯನ್ನು ಭಾರತದ ಡಿಜಿಎಸಿಎ (ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ಮುನ್ನಡೆಸುತ್ತಿದ್ದು, ಅಮೆರಿಕ ಮತ್ತು ಯುಕೆಯ ತಜ್ಞರ ಸಹಕಾರವನ್ನು ಪಡೆಯಲಾಗಿದೆ. ವಿಮಾನದ ಎಂಜಿನ್, ಫ್ಲಾಪ್‌ಗಳು, ಲ್ಯಾಂಡಿಂಗ್ ಗೇರ್ ಮತ್ತು ವಿದ್ಯುತ್ ವ್ಯವಸ್ಥೆಯ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಕೆಲವು ವರದಿಗಳ ಪ್ರಕಾರ, ವಿಮಾನ ಟೇಕ್-ಆಫ್ ಸಮಯದಲ್ಲಿ ಗೇರ್ ಡೌನ್ ಆಗಿರುವುದು ಮತ್ತು ಎಂಜಿನ್ ವೈಫಲ್ಯದ ಸಾಧ್ಯತೆಯೂ ಚರ್ಚೆಯಲ್ಲಿದೆ.

‌ಸಿವಿಲ್ ಏವಿಯೇಷನ್ ಸಚಿವ ರಾಮ್ ಮೋಹನ್ ನಾಯ್ಡು, ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು, ಮೂರು ತಿಂಗಳ ಒಳಗೆ ವರದಿ ಸಲ್ಲಿಸಲು ಸೂಚಿಸಿದ್ದಾರೆ.

Share:

ಮತ್ತಷ್ಟು ಸುದ್ದಿ

ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮ

ಅಲೆದಾಟ ಮುಕ್ತ ಆಡಳಿತದತ್ತ ಮೇಲುಕೋಟೆ ಮನೆ ಬಾಗಿಲಿಗೇ ಬಂದ ‘ಸರ್ಕಾರಿ ಸೇವೆ’ ಕಾರ್ಯಕ್ರಮ  ತಂತ್ರಜ್ಞಾನದ ಅರಿವನ್ನು ಆಡಳಿತ ಯಂತ್ರಕ್ಕೆ ವರ್ಗಾಯಿಸಿದ

ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಲು ಮನವಿ

ಕಾಂಗ್ರೆಸ್‌ ಹೈಕಮಾಂಡ್‌ಗೆ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ಒತ್ತಾಯ ಮೈಸೂರು: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ

ಮುಂದೆ ಓದಿ »

ಬೆಂಗಳೂರಿನಲ್ಲಿ ಮೇ 25 ರಂದು 3ನೇ ಕರ್ನಾಟಕ ಸಂಘಟಕರ ಸಮಾವೇಶ

ಸಾಂಸ್ಕೃತಿಕ ನೀತಿ ಜಾರಿ ಮತ್ತು ಅಕಾಡೆಮಿಗಳ ಬಲವರ್ಧನೆಗೆ ಆಗ್ರಹಿಸಿ ರಂಗಕರ್ಮಿಗಳು ಹಾಗೂ ಸಾಂಸ್ಕೃತಿಕ ಸಂಘಟಕರ ಬೃಹತ್‌ ಸಮಾಲೋಚನೆ ಬೆಂಗಳೂರು: ಕರ್ನಾಟಕ

ಮುಂದೆ ಓದಿ »

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »