ಇಂದಿನ ದಿನದಲ್ಲಿ ಮೊಬೈಲ್ ಬಹುಪಾಲು ಸಮಯವನ್ನು ಹಾಳುಮಾಡುತ್ತದೆ ಎಂದು ನಮಗೆ ತಿಳಿದಿದೆ. ಇದನ್ನು ತಡೆಯಲು ಕಡಿಮೆ ಮಾಡಲು ನಾವು ಪ್ರಯತ್ನ ಮಾಡುತ್ತೇವೆ ಆದರೆ ಕೆಲವೊಮ್ಮೆ ಮತ್ತೆ ಹಳೆಯ ರೂಢಿ ನಮ್ಮನ್ನು ಬಿಡುವುದಿಲ್ಲ. ನಾವು ಸಮಯ ವ್ಯರ್ಥ ಮಾಡುತ್ತಿರುವುದರ ಕುರಿತು ವಿಷಾದ ಪಡುವ ಬದಲು ಒಂದು ವಿಷಯ ತಿಳಿಯಬೇಕು. ಮೊಬೈಲ್ ನಮ್ಮನ್ನು ಗಾಳಕ್ಕೆ ಸಿಕ್ಕಿಸಿಕೊಂಡೇಯಿರಲು ವೈಜ್ಞಾನಿಕವಾಗಿ ತಯಾರಿಸಲಾಗುತ್ತದೆ. ನಾವು ಸದಾ ಮೊಬೈಲ್‌ನಲ್ಲಿ ವ್ಯಸ್ಥವಾಗಿರಲು (hook) ಮನೋವಿಜ್ಞಾನವನ್ನು ಬಳಸಲಾಗುತ್ತದೆ.
ಇಂದು ಮೊಬೈಲ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ, ವಿದ್ಯಾರ್ಥಿ ಇಂದ ವೃತ್ತಿಪರರವರೆಗೆ ಎಲ್ಲರಿಗೂ ಮೊಬೈಲ್ ಅನಿವಾರ್ಯ. ನಮ್ಮ ಈ ಅಮೂಲ್ಯ ಸಮಯವನ್ನು ಅನಾವಶ್ಯಕವಾಗಿ ಹಾಳುಮಾಡದೆ ಮೊಬೈಲ್ಅನ್ನು ಹೇಗೆ ಬಳಸಬೇಕೆಂದು ತಿಳಿಯೋಣ.
ಉಪಾಯಗಳು
1. ಅನಾವಶ್ಯಕ ನೋಟಿಫಿಕೇಶನ್‌ಗಳನ್ನು ಮ್ಯೂಟ್ ಮಾಡಿ.
ನೋಟಿಫಿಕೇಶನ್‌ಗಳು ಮೊಬೈಲ್ ಅನ್ನು ಎತ್ತಿಕೊಳ್ಳುವಂತೆ ಮಾಡುತ್ತವೆ. ಮತ್ತು ನಮ್ಮನ್ನು ಬೇರೆಬೇರೆ ಆ್ಯಪ್ ಬಳಸುವಂತೆ ಮಾಡುತ್ತವೆ. ಕೊನೆಗೆ ನಾವು ಯಾವ ಉದ್ದೇಶಕ್ಕೆ ಮೊಬೈಲ್ ತೆಗೆದಿದ್ದು ಎಂದು ತಿಳಿಯುವುದಿಲ್ಲ. ಹಾಗಾಗಿ ನಮಗೆ ಎಲ್ಲ ಆ್ಯಪ್ ಗಳ ನೋಟಿಫಿಕೇಶನ್ ಬೇಕಾಗಿಲ್ಲ. ಅವಶ್ಯವಿರುವ ಆ್ಯಪ್ ಗಳನ್ನು ಬಿಟ್ಟು ಉಳಿದ ಫೇಸ್‌ಬುಕ್, ಶಾಪಿಂಗ್ ಮತ್ತು ಗೇಮ್‌ಗಳ ನೋಟಿಫಿಕೇಶನ್‌ಗಳನ್ನು ನಿಷ್ಕ್ರಿಯಗೊಳಿಸಿ. ಅನಾವಶ್ಯಕ ಮೊಬೈಲ್ ಎತ್ತಿಕೊಳ್ಳುವುದರಿಂದ ತಪ್ಪಿಸಿಕೊಳ್ಳಿ.
“Settings > Notifications> app> turn off”
2. ಡಿಜಿಟಲ್ ವೆಲ್‌ಬೀಯಿಂಗ್ ಆ್ಯಪ್ ಬಳಸಿರಿ
ನಾವು ಏನನ್ನಾದರೂ ಹಿಡಿತದಲ್ಲಿ ಇಡಬೇಕಾದರೂ ಅದನ್ನು ಮೊದಲು ಅದರ ಲೆಕ್ಕ ಇಡಬೇಕು. ಹಾಗಾಗಿ ನಾವು ಮೊಬೈಲ್ ಬಳಕೆಯನ್ನು ಹಿಡಿತದಲ್ಲಿ ಇಡಬೇಕಾದರೆ ಅದನ್ನು ಟ್ರ್ಯಾಕ್ ಮಾಡಬೇಕು. ಅದಕ್ಕೆ ನಮ್ಮ ಫೋನ್ ಸೆಟ್ಟಿಂಗ್‌ನಲ್ಲೇ ಡಿಜಿಟಲ್ ವೆಲ್ ಬೀಯಿಂಗ್ ಎಂದು ಒಂದು ಆ್ಯಪ್ ಇದೆ. Google Digital Wellbeing ನಮಗೆ ಅಪ್ಲಿಕೇಶನ್‌ಗಳು ಬಳಕೆಯ ಡೇಟಾ ತೋರಿಸುತ್ತದೆ.
ಪ್ರತಿದಿನ ಎಷ್ಟು ಸಮಯ ನೀವು ಯಾವ ಆ್ಯಪ್‌ನಲ್ಲಿ ಕಳೆದೀರಿ ಎಂಬ ಅರಿವು ಮೂಡುತ್ತದೆ. ಇದರಲಿ ಪ್ರತಿ ಆ್ಯಪ್ ಗೆ ಸಮಯ ನಿಗದಿ ಪಡಿಸಬಹುದು. ಟೈಮರ್ ಸಿದ್ಧಪಡಿಸಿ.
ಉದಾ: ಇನ್ಸ್ಟಾಗ್ರಾಮ್ – 30 mins/day, ಯೂಟ್ಯೂಬ್ – 45 mins/day.
3. ಸೋಷಿಯಲ್ ಮೀಡಿಯಾವನ್ನು ಬ್ರೌಸರ್‌ನಲ್ಲಿ ಬಳಸಿ (ಇನ್ಸ್ಟಾಗ್ರಾಮ್)
Instagram, Twitter, Facebook ಮುಂತಾದವುಗಳ ವೆಬ್‌ಬ್ರೌಸರ್ ಆವೃತ್ತಿ ಬಳಕೆ ಕಡಿಮೆ ಆಕರ್ಷಕವಾಗಿದೆ.
ಆ್ಯಪ್ ಇನ್ಸ್ಟಾಲ್ ಮಾಡಿ → ಬ್ರೌಸರ್‌ನ ಮೂಲಕ ಬಳಸುವುದರಿಂದ → ಸಮಯ ಕಡಿಮೆ ಆಗುತ್ತದೆ ಮತ್ತು ಬ್ರೌಸರ್ ನಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್ ಬರುವುದಿಲ್ಲ.
4. ವೃತ್ತಿಪರ ಇಮೇಲ್‌ಗಳನ್ನು ಮೊಬೈಲ್‌ನಲ್ಲಿ ಬಳಸಬೇಡಿ.
ಕೆಲಸದ Gmail, Outlook, Slack ಮುಂತಾದ ಸೇವೆಗಳನ್ನು ಡೆಸ್ಕ್‌ಟಾಪ್ ಅಥವಾ ಲ್ಯಾಪ್ಟಾಪ್‌ನಲ್ಲಿ ಮಾತ್ರ ಬಳಸಿ. ಫೋನ್‌ನಲ್ಲಿ ಇಮೇಲ್ ಬಂದಾಗ ತಕ್ಷಣ ಓದಬೇಕೆಂಬ ಒತ್ತಡ ಕಡಿಮೆಯಾಗುತ್ತದೆ.
5. ಆಸಕ್ತಿ ಹುಟ್ಟಿಸುವ ಆ್ಯಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ
ಮತ್ತೆ ಮತ್ತೆ ತೆರೆಯ ಬೇಕೆನಿಸುವ ನಮ್ಮ ಜೀವನಕ್ಕೆ ಯಾವ ಮೌಲ್ಯವನ್ನು ಕೊಡಲಾರದ ಅನಾವಶ್ಯಕ ಆ್ಯಪ್ ಗಳನ್ನು ಇನ್ಸ್ಟಾಲ್ ಮಾಡಿ.
ಅಂತಿಮ ಸಲಹೆಗಳು
- ಫೋನ್‌ನ್ನು ಬೇಡವಾದ ಸಂದರ್ಭಗಳಲ್ಲಿ “Do Not Disturb” ಇಡುವ ಅಭ್ಯಾಸ.
- ಮಲಗುವ ವೇಳೆ ಫೋನ್ ಹತ್ತಿರ ಇಡಬೇಡಿ — ಅವಶ್ಯಕ ಇಲ್ಲದ ನೋಟಿಫಿಕೇಶನ್‌ಗಳು ನಿದ್ರೆ ಹಾಳುಮಾಡುತ್ತವೆ.
ನಿಮ್ಮ ಸಮಯಕ್ಕೆ ನೀವು ಮಾಲೀಕರಾಗಿರಬೇಕು, ಫೋನ್ ಅಲ್ಲ. “ನಾವು ಮತ್ತೆ ಮತ್ತೆ ಮಾಡುವ ಕೆಲಸ ಒಳ್ಳೆಯದಿದ್ದರೆ ಅಭ್ಯಾಸ ಮತ್ತು ಕೆಟ್ಟದಿದ್ದರೆ ಚಟ.”
ಲೇಖಕ : ಅರುಣ್ ಸಿ ಕಲ್ಲಪ್ಪನವರ್ , ಅಕ್ಷರ ವಿನ್ಯಾಸಕರು.







