ಬಿಕ್ಲು ಶಿವ ಕೊಲೆಗೆ ಮಾಜಿ ಸಚಿವ ಭೈರತಿ ಬಸವರಾಜ್‌ಗೆ ಎಫ್‌ಐಆರ್

ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಭೈರತಿ ಬಸವರಾಜ್ ಸೇರಿದಂತೆ ಐವರ ವಿರುದ್ಧ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Bengaluru rowdy sheeter murder

ಐಟಿ-ಬಿಟಿಗಳ ರಾಜಧಾನಿಯಾಗಿ ಖ್ಯಾತವಾಗಿರುವ ಬೆಂಗಳೂರು, ಇತ್ತೀಚಿನ ದಿನಗಳಲ್ಲಿ ರೌಡಿಗಳ ನಗರವಾಗಿ ಮಾರ್ಪಟ್ಟಿದೆ. ಅತ್ಯಚಾರ, ಕೊಲೆಗಳಂತಹ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆಲ್ಲ ಯಾವುದೇ ರೀತಿಯಿಂದ ಸರಿಯಾದ ಕ್ರಮ ಕೈಗೊಂಡಿಲ್ಲ. ಇದಕ್ಕೆ ಸಾಕ್ಷಿ ಎನ್ನುವುದಕ್ಕೆ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ (40) ಕೊಲೆ ಪ್ರಕರಣ. ಕಾರಣವಿಷ್ಟೆ, ಪೋಲಿಸ್ ಕಮಿಷನರ್‌ನವರಿಗೆ ನನಗೆ ಜೀವ ಭಯ ಇದೆ ಎಂದು ದೂರು ಕೊಟ್ಟರು ಸಹ ಯಾವುದೇ ಕ್ರಮ ತೆಗೆದುಕೊಳ್ಳದೆ ಇದ್ದಿದ್ದರಿಂದ ಈ ಒಂದು ಕೊಲೆ ನಡೆದಿದೆ ಎನ್ನಬಹುದು. 

ಬಿಕ್ಲು ಶಿವನ ಕೊಲೆಯು ಬೆಂಗಳೂರಿನಲ್ಲಿ ರೌಡಿಯಿಸಂನ ಭೀಕರ ಸ್ವರೂಪವನ್ನು ತೋರಿಸುತ್ತದೆ.ಅಲ್ಲದೇ  ಈ ಘಟನೆಯು ಕಾನೂನಿನ ದೌರ್ಬಲ್ಯವನ್ನು ಎತ್ತಿ ತೋರಿಸಿದೆ. ಹೀಗಾದಲ್ಲಿ ಮುಂದೊಂದು ದಿನ ಬೆಂಗಳೂರು ಮಹಾನಗರ ಸಂಪೂರ್ಣವಾಗಿ ರೌಡಿಗಳ ಅಡ್ಡ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. 

ಸದ್ಯ ಇದೀಗ, ಬಿಕ್ಲು ಶಿವ (40) ಕೊಲೆ ಪ್ರಕರಣದಲ್ಲಿ ಕೆ.ಆರ್. ಪುರಂ ಕ್ಷೇತ್ರದ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಭೈರತಿ ಬಸವರಾಜ್ ಸೇರಿದಂತೆ ಐವರ ವಿರುದ್ಧ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬಿಕ್ಲು ಶಿವನ ತಾಯಿ ವಿಜಯಲಕ್ಷ್ಮೀ ದೂರಿನ ಆಧಾರದ ಮೇಲೆ ಈ ಎಫ್‌ಐಆರ್ ದಾಖಲಿಸಲಾಗಿದ್ದು, ಶಾಸಕ ಭೈರತಿ ಬಸವರಾಜ್ ಕೊಲೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯ ಹಿಂದೆ ಜಂಗೀ ಜಮೀನು ವಿವಾದವಿದ್ದು, ಶಿವಪ್ರಕಾಶ್ ತನ್ನ ಜೀವಕ್ಕೆ ಭಯವಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರೂ, ಯಾವುದೇ ಕ್ರಮ ಕೈಗೊಳ್ಳದಿರುವುದು ಈ ಕೊಲೆಗೆ ಕಾರಣವಾಯಿತು ಎಂದು ಆರೋಪಗಳು ಕೇಳಿಬಂದಿವೆ.

ಈ ಕೊಲೆಗೆ ಮುಖ್ಯ ಕಾರಣ ಕಿತಗನೂರಿನ ಜಮೀನು ವಿವಾದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಶಿವಪ್ರಕಾಶ್ 2023ರಲ್ಲಿ ಸಿಂಗರೆಡ್ಡಿಗೆ ಸೇರಿದ ಸರ್ವೆ ನಂ. 212ರ ಜಮೀನಿಗೆ ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ಪಡೆದಿದ್ದ. ಈ ಜಮೀನಿನ ಮೇಲೆ ಶಾಸಕ ಭೈರತಿ ಬಸವರಾಜ್‌ರ ಸಹಾಯಕ ಜಗದೀಶ್ (ಜಗ್ಗ) ಮತ್ತು ಸಂಬಂಧಿಕ ಕಿರಣ್ ಒತ್ತಡ ಹೇರಿದ್ದರು. ಫೆಬ್ರವರಿ 11, 2025ರಂದು ಜಗದೀಶ್ ಮತ್ತು ಕಿರಣ್ ಈ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿ, ಶಿವಪ್ರಕಾಶ್‌ನ ಭದ್ರತಾ ಸಿಬ್ಬಂದಿಯನ್ನು ಹೊರಗಟ್ಟಿದ್ದರು. ಶಿವಪ್ರಕಾಶ್ ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಜಗದೀಶ್, ಕಿರಣ್, ವಿಮಲ್, ಅನಿಲ್, ಮತ್ತು ಭೈರತಿ ಬಸವರಾಜ್‌ರಿಂದ ಜೀವ ಭಯವಿದೆ ಎಂದು ತಿಳಿಸಿದ್ದ. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಇದನ್ನೂ ಓದಿ | ರೇಣುಕಾಸ್ವಾಮಿ ಶೈಲಿಯ ಕೊಲೆ ಪ್ರಕರಣ ಕಲಬುರಗಿಯಲ್ಲಿ: ರಾಘವೇಂದ್ರನ ಶವ ಕೃಷ್ಣಾ ನದಿಗೆ

ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103 (ಕೊಲೆ) ಮತ್ತು 190 (ಗುಂಪುಗೂಡಿ ಅಪರಾಧ) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜಗದೀಶ್ (34), ಕಿರಣ್ (33), ವಿಮಲ್ (36), ಅನಿಲ್ (34), ಮತ್ತು ಭೈರತಿ ಬಸವರಾಜ್ ಆರೋಪಿಗಳಾಗಿದ್ದಾರೆ. ಶಿವಪ್ರಕಾಶ್‌ಗೆ 2006ರಿಂದ ರೌಡಿ ಶೀಟ್ ತೆರೆಯಲಾಗಿತ್ತು ಮತ್ತು ಆತನ ವಿರುದ್ಧ 11 ಕ್ರಿಮಿನಲ್ ಪ್ರಕರಣಗಳಿವೆ ಎಂದು ಜಂಟಿ ಪೊಲೀಸ್ ಆಯುಕ್ತ ರಮೇಶ್ ಬನೋತ್ ತಿಳಿಸಿದ್ದಾರೆ. ತನಿಖೆಯು ಜಗದೀಶ್‌ನ ಹಿಂದಿನ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಆತನ ವಿರುದ್ಧ ಹೆಣ್ಣೂರು, ಇಂದಿರಾನಗರ, ಮತ್ತು ಭಾರತಿನಗರದಲ್ಲಿ ಪ್ರಕರಣಗಳಿವೆ. ಆಯುಕ್ತರು ಈ ದೂರಿನ ಮೇಲೆ ಕ್ರಮಕ್ಕೆ ವಿಳಂಬವಾದ ಬಗ್ಗೆ ಆಂತರಿಕ ತನಿಖೆಗೆ ಆದೇಶಿಸಿದ್ದಾರೆ.

ಭೈರತಿ ಬಸವರಾಜ್‌ರ ಪ್ರತಿಕ್ರಿಯೆ

ಭೈರತಿ ಬಸವರಾಜ್ ಈ ಆರೋಪಗಳನ್ನು ತಳ್ಳಿಹಾಕಿದ್ದು, “ನನಗೆ ಶಿವಪ್ರಕಾಶ್ ಯಾರೆಂದು ಗೊತ್ತಿಲ್ಲ, ಕೊಲೆಗಡುಕರ ಬಗ್ಗೆಯೂ ತಿಳಿದಿಲ್ಲ. ಈ ಎಫ್‌ಐಆರ್ ರಾಜಕೀಯ ದುರುದ್ದೇಶದಿಂದ ದಾಖಲಾಗಿದೆ,” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. “ದೂರುದಾರರ ಬಗ್ಗೆಯೂ ನನಗೆ ಗೊತ್ತಿಲ್ಲ. ದೂರು ಕೊಟ್ಟ ತಕ್ಷಣ ಎಫ್‌ಐಆರ್ ದಾಖಲಿಸಬಹುದೇ? ನನ್ನಿಂದ ಯಾವುದೇ ಮಾಹಿತಿ ಕೇಳಿಲ್ಲ,” ಎಂದು ಆಕ್ಷೇಪಿಸಿದ್ದಾರೆ. ತಮ್ಮ ಹೆಸರನ್ನು ಎಫ್‌ಐಆರ್‌ನಿಂದ ತೆಗೆದುಹಾಕಲು ಕಾನೂನು ಹೋರಾಟ ನಡೆಸುವುದಾಗಿ ಮತ್ತು ಗೃಹ ಸಚಿವ ಜಿ. ಪರಮೇಶ್ವರರ ಜೊತೆ ಮಾತನಾಡುವುದಾಗಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ತಮ್ಮನ್ನು ಉದ್ದೇಶಪೂರ್ವಕವಾಗಿ ಸಿಕ್ಕಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಮಂಗಳವಾರ (ಜುಲೈ 15, 2025) ರಾತ್ರಿ 8:10ರ ಸುಮಾರಿಗೆ, ಶಿವಪ್ರಕಾಶ್ ತನ್ನ ಭಾರತಿನಗರದ ಮನೆಯ ಹೊರಗೆ ರಸ್ತೆಯಲ್ಲಿ ಚರ್ಚೆಯಲ್ಲಿ ತೊಡಗಿದ್ದಾಗ, 8-9 ಜನರ ಗುಂಪೊಂದು ಸ್ಕಾರ್ಪಿಯೋ ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಬಂದು ಆತನ ಮೇಲೆ ಕಬ್ಬಿಣದ ರಾಡ್‌ಗಳು ಮತ್ತು ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ಶಿವಪ್ರಕಾಶ್‌ನ ಚಾಲಕ ಇಮ್ರಾನ್ ಖಾನ್ ತಡೆಯಲು ಯತ್ನಿಸಿದಾಗ ಆತನ ಮೇಲೂ ದಾಳಿ ನಡೆದಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಶಿವಪ್ರಕಾಶ್‌ನ ಜೊತೆಗಿದ್ದ ಲೋಕೇಶ್ ಈ ಘಟನೆಯನ್ನು ರೆಕಾರ್ಡ್ ಮಾಡಿದ್ದಾನೆ ಎಂದು ಹೇಳಲಾಗಿದೆ. ದಾಳಿಕೋರರು ಘಟನೆಯ ನಂತರ ಓಡಿಹೋಗಿದ್ದಾರೆ. ಶಿವಪ್ರಕಾಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಶಿವಪ್ರಕಾಶ್‌ನ ದೂರಿಗೆ ಪೊಲೀಸರು ಕ್ರಮ ಕೈಗೊಳ್ಳದಿರುವುದು, ಬೆಂಗಳೂರಿನಲ್ಲಿ ರೌಡಿಯಿಸಂನ ಏರಿಕೆ, ಮತ್ತು ಕಾನೂನು-ಸುವ್ಯವಸ್ಥೆಯ ಕುರಿತು ಸದ್ಯ ಇದೀಗ ಗಂಭೀರ ಪ್ರಶ್ನೆಗಳನ್ನು ಎದ್ದಿದೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »