ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಗಸ್ಟ್ 8, 2025ರಂದು ಲೋಕಸಭೆಯಲ್ಲಿ ಆದಾಯ ತೆರಿಗೆ ಮಸೂದೆ 2025 ಅನ್ನು ಹಿಂತೆಗೆದುಕೊಂಡಿದ್ದಾರೆ. ಆಯ್ಕೆ ಸಮಿತಿಯ ಶಿಫಾರಸುಗಳನ್ನು ಒಳಗೊಂಡ ನವೀಕರಿಸಿದ ಆವೃತ್ತಿಯನ್ನು ಆಗಸ್ಟ್ 11ರಂದು ಮಂಡಿಸಲಾಗುವುದು ಎಂದು ಘೋಷಿಸಿದ್ದಾರೆ.
ಈ ಮಸೂದೆಯು 1961ರ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸುವ ಗುರಿಯನ್ನು ಹೊಂದಿದ್ದು, ತೆರಿಗೆ ಕಾನೂನುಗಳನ್ನು ಸರಳಗೊಳಿಸುವ, ವಿವಾದಗಳನ್ನು ಕಡಿಮೆ ಮಾಡುವ ಮತ್ತು ತೆರಿಗೆದಾರರಿಗೆ ಸ್ನೇಹಿಯಾಗಿರುವ ಗುರಿಯನ್ನು ಹೊಂದಿದೆ.
ಫೆಬ್ರವರಿ 13, 2025ರಂದು ಮೊದಲ ಬಾರಿಗೆ ಲೋಕಸಭೆಯಲ್ಲಿ ಮಂಡಿಸಲಾದ ಈ ಮಸೂದೆಯನ್ನು, ಬಿಜೆಪಿ ಸಂಸದ ಬೈಜಯಂತ್ ಪಾಂಡಾ ನೇತೃತ್ವದ 31 ಸದಸ್ಯರ ಆಯ್ಕೆ ಸಮಿತಿಗೆ ಪರಿಶೀಲನೆಗಾಗಿ ಕಳುಹಿಸಲಾಗಿತ್ತು. ಸಮಿತಿಯು 285 ಶಿಫಾರಸುಗಳನ್ನು ಒಳಗೊಂಡ 4,500 ಪುಟಗಳ ವರದಿಯನ್ನು ಜುಲೈ 21, 2025ರಂದು ಸಲ್ಲಿಸಿತು.
ಇದನ್ನೂ ಓದಿ | ಮತಕಳ್ಳತನದ ಆರೋಪ: ಮೋದಿ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ
ಈ ಶಿಫಾರಸುಗಳಲ್ಲಿ ಧಾರ್ಮಿಕ ಟ್ರಸ್ಟ್‌ಗಳಿಗೆ ಅನಾಮಧೇಯ ದೇಣಿಗೆಗಳಿಗೆ ತೆರಿಗೆ ವಿನಾಯಿತಿ ಮುಂದುವರಿಕೆ, ಟಿಡಿಎಸ್ ರಿಫಂಡ್‌ಗಾಗಿ ಐಟಿಆರ್ ಫೈಲಿಂಗ್ ಗಡುವಿನ ನಂತರವೂ ದಂಡವಿಲ್ಲದೆ ಕ್ಲೈಮ್ ಮಾಡುವ ಅವಕಾಶ, ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಆರ್ಆ್ಯಂಡ್ ಡಿ ತೆರಿಗೆ(ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್) ಸೌಲಭ್ಯಗಳಂತಹ ಸುಧಾರಣೆಗಳಿವೆ.







