“ಸರ್ಕಾರಿ ಸೇವೆ ಮನೆ ಬಾಗಿಲಿಗೆ- ರಾಜ್ಯದಲ್ಲೇ ವಿಶೇಷ ಕಾರ್ಯಕ್ರಮ”

20 ದಿನಗಳಲ್ಲಿ 1500ಕ್ಕೂ ಹೆಚ್ಚು ಸಮಸ್ಯೆಗಳಿಗೆ ಪರಿಹಾರ, ಫಲಾನುಭವಿಗಳಿಗೆ ಸೌಲಭ್ಯ, ಸಲಕರಣೆ ವಿತರಣೆ ಮಾಡಿದ ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ.
Darshan Puttannaiah

 ಶಾಸಕರಾದ ದರ್ಶನ್‌ ಪುಟ್ಟಣ್ಣಯ್ಯ ಅವರ ಪರಿಕಲ್ಪನೆಯಾದ ‘ಸರ್ಕಾರಿ ಸೇವೆ ಮನೆ ಬಾಗಿಲಿಗೆ‘ ರಾಜ್ಯದಲ್ಲೇ ಒಂದು ವಿಶೇಷವಾದ ಕಾರ್ಯಕ್ರಮ. ಇದು ಸರ್ಕಾರದ ಸೇವೆ-ಸೌಲಭ್ಯಗಳನ್ನು ಜನರಿಗೆ ತಲುಪಿಸಲು ನೆರವಾಗುತ್ತಿದೆ’ ಎಂದು ಮಂಡ್ಯ ತಾಲೂಕು ತಹಸೀಲ್ದಾರರಾದ ವಿಶ್ವನಾಥ್‌ ಅಭಿಪ್ರಾಯಪಟ್ಟರು.

ಬುಧವಾರ ದುದ್ದ ಗ್ರಾಮದಲ್ಲಿ ನಡೆದ, ‘ಸರ್ಕಾರಿ ಸೇವೆ ಮನೆ ಬಾಗಿಲಿಗೆ’ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರಿ ಸೇವೆಯಲ್ಲಿ ವಿವಿಧ ಕಾರಣಗಳಿಗೆ ಅಂಕುಡೊಂಕುಗಳಿವೆ. ಆದರೆ ಈ ವಿನೂತನ  ಕಾರ್ಯಕ್ರಮ ನಮ್ಮ ಕೆಲಸಗಳನ್ನು ಸರಳಗೊಳಿಸಿ, ಸೇವೆ-ಸೌಕರ್ಯಗಳನ್ನು ಜನರಿಗೆ ತಲುಪಿಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

“ಕಳೆದ 20 ದಿನಗಳಲ್ಲಿ ಕಂದಾಯ ಇಲಾಖೆಗೆ, ಈ ಕಾರ್ಯಕ್ರಮದ ಮೂಲಕ 666 ಅರ್ಜಿಗಳು ಬಂದಿದ್ದವು. ಈ ಪೈಕಿ 621 ಅರ್ಜಿಗಳನ್ನು ಪುರಸ್ಕರಿಸಲಾಗಿದೆ. ಉಳಿದ ಅರ್ಜಿಗಳು ಲೋಪಗಳ ಕಾರಣಕ್ಕೆ ತಿರಸ್ಕೃತವಾಗಿವೆ. ಕಂದಾಯ ಇಲಾಖೆಗಳ ಸೇವೆಗಳನ್ನು ಅರ್ಜಿ ಸಲ್ಲಿಸಿ ಪಡೆಯುವ ಪದ್ಧತಿಯ ಬದಲು ನೇರ ಜನರ ಬಳಿಗೆ ಹೋಗಿ ಅವರಿಗೆ ಸೇವೆ ತಲುಪಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ. ಈ ಕಾರ್ಯಕ್ರಮ ಉಳಿದ ಪಂಚಾಯಿತಿಗಳಲ್ಲೂ ನಡೆಯಬೇಕು. ಉಳಿದ ತಾಲೂಕುಗಳಿಗೂ ವಿಸ್ತರಣೆಯಾಗಲಿ ಎಂದು ಆಶಿಸಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್ ಮೂರ್ತಿಯವರು ಮಾತನಾಡಿ, ‘ ಸರ್ಕಾರಿ ಸೇವೆ ಮನೆ ಬಾಗಿಲಿಗೆ’ ಒಂದು ವಿನೂತನವಾದ ಕಾರ್ಯಕ್ರಮ. ಈ ಕ್ಷೇತ್ರದಲ್ಲಿ 6ನೇ ಗ್ರಾಮ ಪಂಚಾಯಿತಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಯಾರೂ ಸರ್ಕಾರಿ ಕಚೇರಿಗೆ ಅಲೆಯುವಂತಾಗಬಾರದು, ಅರ್ಹರಿಗೆ ಸರ್ಕಾರದ ಸೇವೆ ಮತ್ತು ಸೌಲಭ್ಯಗಳನ್ನು ತಲುಪಿಸಬೇಕು ಎಂಬುದು ಇದರ ಉದ್ದೇಶ. ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರು ತಂತ್ರಜ್ಞಾನವನ್ನು ಬಳಸಿ, ಜನರಿಂದ ಮಾಹಿತಿ ಸಂಗ್ರಹಿಸಿ, ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಕೆಲಸಗಳನ್ನು ಕಾರ್ಯರೂಪಕ್ಕೆ ತರಲು ನೆರವಾಗಿದ್ದಾರೆ ಎಂದು ಹೇಳಿದರು.

“ಸಾಮಾನ್ಯವಾಗಿ ಇ ಸ್ವತ್ತು ವಿತರಣೆಗೆ 40 ದಿನಗಳು ಬೇಕಾಗುತ್ತದೆ. ಆದರೆ 20 ದಿನಗಳ ಈ ಕಾರ್ಯಕ್ರಮದ ಭಾಗವಾಗಿ ದುದ್ದ ಗ್ರಾಮ ಪಂಚಾಯಿತಿಯಲ್ಲಿ 103 ಆಸ್ತಿದಾರರು ಇ-ಸ್ವತ್ತಿಗೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 76 ಇ-ಸ್ವತ್ತು ವಿತರಣೆ ಮಾಡಲಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಇ-ಸ್ವತ್ತು ವಿತರಣೆಯಾಗಿದ್ದು ನಿಜಕ್ಕೂ ಅಪರೂಪ.ಬಂದ ಅರ್ಜಿಗಳ ಪೈಕಿ ಶೇ70ರಷ್ಟು ಅರ್ಜಿಗಳನ್ನು ಸ್ಥಳದಲ್ಲೆ ಇತ್ಯರ್ಥ ಮಾಡಲಾಗಿದೆ. ಉಳಿದ 30% ಅರ್ಜಿಗಳಿಗೆ ಅಗತ್ಯ ಪ್ರಕ್ರಿಯೆ ಮೂಲಕ ಬಗೆಹರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

“ಇದೇ ಮೊದಲ ಬಾರಿಗೆ ಕ್ಷೇತ್ರದ ದುದ್ದ ಗ್ರಾಮ ಪಂಚಾಯಿತಿಯಲ್ಲಿ ಮೊಬೈಲ್ ಅಪ್ಲಿಕೇಷನ್ ಮೂಲಕ ಸರ್ವೆ ಮಾಡಿದ್ದು , ಈ ಮೊಬೈಲ್ ಅಪ್ಲಿಕೇಷನ್‌ ಅನ್ನು ಶಾಸಕ ದರ್ಶನ್‌ ಪುಟ್ಟಣ್ಣಯ್ಯನವರ ವೈಯಕ್ತಿಕ ಆಸಕ್ತಿಯಿಂದ ಅಭಿವೃದ್ಧಿ ಪಡಿಸಲಾಗಿದೆ. ಈ ಮೊಬೈಲ್‌ ಅಪ್ಲಿಕೇಷನ್‌ ಮೊದಲ ಬಾರಿಗೆ ಸಾಮಾನ್ಯ ಜನರಿಗೂ ಬಳಸಲು ಯೋಗ್ಯವಾಗಿರುವಂತೆ ಅಭಿವೃದ್ಧಿಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಈಕ್ಷೇತ್ರದಲ್ಲಿ ಮಹತ್ವದ ಬದಲಾವಣಗೆ ಕಾರಣವಾಗಲಿದೆ ಎಂದು ಮೊಬೈಲ್ ಅಪ್ಲಿಕೇಷನ್ ಅನ್ನು ಅಭಿವೃದ್ಧಿಪಡಿಸಿ, ತರಬೇತಿ ಹಾಗೂ ಮಾರ್ಗದರ್ಶನ ನೀಡಿದ ಪುಟ್ಟಣ್ಣಯ್ಯ ಫೌಂಡೇಶನ್‌ನ ರಣಜಿತ್ ನಾಗರಾಜೇಗೌಡ ಅಭಿಪ್ರಾಯಪಟ್ಟರು.

ಶಾಸಕ ದರ್ಶನ್‌ ಪುಟ್ಟಣ್ಣಯ್ಯಯವರ ಮಾತು:

ಅಧ್ಯಕ್ಷತೆ ವಹಿಸಿ ಮಾತನಾಡಿದ, ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ” ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮೇಲುಕೋಟೆ ಕ್ಷೇತ್ರದ 6ನೇ ಗ್ರಾಮ ಪಂಚಾಯಿತಿಯಲ್ಲಿ ಸಮಾರೋಪಗೊಳ್ಳುತ್ತಿದೆ. ತಾಲೂಕುಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಶ್ರಮ, ಗ್ರಾಮ ಪಂಚಾಯಿತಿ ಪದಾಧಿಕಾರಿಗಳು, ವಿವಿಧ ಕಾರ್ಯಕರ್ತರು, ರೈತ ಸಂಘದ ಮುಖಂಡರು ಹಾಗೂ ಸ್ಥಳೀಯ ಮುಖಂಡರ ನೆರವಿನಿಂದ ದುದ್ದದಲ್ಲಿ 20 ದಿನಗಳ ಅವಧಿಯಲ್ಲಿ 1500ಕ್ಕೂ ಸಮಸ್ಯೆಗಳನ್ನು ಆಲಿಸಿ ತಕ್ಷಣವೇ ಪರಿಹಾರ ಒದಗಿಸಲು ಅಧಿಕಾರಿಗಳು ಅಗತ್ಯ ಕ್ರಮಕೈಗೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದಕ್ಕಾಗಿ  ದುದ್ದ ಗ್ರಾಮ ಪಂಚಾಯಿತಿ. ಈ ಸರ್ವೆಯಿಂದ ಗ್ರಾಮ ಪಂಚಾಯಿತಿ ಬಗ್ಗೆ ಹಲವು ಮಹತ್ವದ ಸಂಗತಿಗಳು ಗಮನಕ್ಕೆ ಬಂದಿವೆ. 40% ಕ್ಕೂಹೆಚ್ಚು ಜನರಿಗೆ ಡಯಾಬಿಟೀಸ್ ಇದೆ. ಇದರ ಆಧಾರದ ಮೇಲೆ ಜೀವನ ಶೈಲಿ ಏನು ಬದಲಾವಣೆಯಾಗಬೇಕು. ಆರೋಗ್ಯ ಸುಧಾರಣೆ ಹೇಗೆ ಆಗಬೇಕು ಎಂಬ ಬಗ್ಗೆ ಗಮನಹರಿಸಲು ಸೂಕ್ತ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ. ಈ ಸರ್ವೆಯಿಂದ ಪಂಚಾಯಿತಿಯ ಎಲ್ಲ ಗ್ರಾಮಗಳ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲು ಸಾಧ್ಯವಾಯಿತು ಎಂದು ಹೇಳಿದರು.

“ದಿನನಿತ್ಯ ಕಚೇರಿಗೆ ಕ್ಷೇತ್ರದ ಜನ ಸಮಸ್ಯೆಗಳೊಂದಿಗೆ ಕಚೇರಿಗೆ ಆಗಮಿಸುತ್ತಿದ್ದರು. ಗದ್ದೆಗೆ ಜಾಗ ಇಲ್ಲ, ಆರ್‍ಟಿಸಿ ಸಿಗುತ್ತಿಲ್ಲ. ಪಿಂಚಣಿ ಮಾಡಿಸಿಕೊಡಿ.. ಹೀಗೆ ಅಹವಾಲುಗಳು ಬರುತ್ತಿದ್ದವು. ಐದು ವರ್ಷದ ಅವಧಿಯಲ್ಲಿ ಹೀಗೆ ಸಮಸ್ಯೆಯೊಂದಿಗೆ ಬರುವವರಲ್ಲಿ ಎಷ್ಟು ಜನರಿಗೆ ಸೇವೆ-ಸೌಲಭ್ಯಗಳನ್ನು ತಲುಪಿಸಬಹುದು? ಎಂಬ ಪ್ರಶ್ನೆ ಕಾಡುತ್ತಿತ್ತು. ಈ ರೀತಿಯಾಗಿ ಗರಿಷ್ಠ 5000 ಜನರಿಗೆ ಸರ್ಕಾರಿ ಸೌಲಭ್ಯಗಳನ್ನು ತಲುಪಿಸಬಹುದಿತ್ತು. ಆದರೆ ಕ್ಷೇತ್ರದಲ್ಲಿರುವ ಮೂರು ಲಕ್ಷ ಜನರಿಗೆ ಸರ್ಕಾರದ ಸೇವೆ ತಲುಪಿಸಬಹುದು ಹೇಗೆ? ಎಂಬ ಪ್ರಶ್ನೆಗೆ ಕಂಡುಕೊಂಡ ಉತ್ತರ, ‘ಸರ್ಕಾರಿ ಸೇವೆ ಮನೆ ಬಾಗಿಲಿಗೆ’ ಕಾರ್ಯಕ್ರಮ” ಎಂದು ಶಾಸಕರು ರ್ಯಕ್ರಮದ ಹಿನ್ನೆಲೆಯನ್ನು ವಿವರಿಸಿದರು.

“ಈ ಕಾರ್ಯಕ್ರಮಕ್ಕೆ ಎಲ್ಲ ಸರ್ಕಾರಿ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸಿ, ನೆರವಾಗಿದ್ದಾರೆ.  ಸರ್ಕಾರಿ ಕಚೇರಿಗಳು ಎಂದು ಖಾಲಿ ಇರುತ್ತವೊ ಅಂದು  ಸರ್ಕಾರಿ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಈ ನಿಟ್ಟಿನಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು ಭಾಗಿಯಾಗಿ ಜನರ ಅರ್ಜಿ ಸ್ವೀಕರಿಸಿ, ಸ್ಪಂದಿಸಿ, ಸೂಕ್ತ ಕ್ರಮಕ್ಕೆ ಕೈ ಜೋಡಿಸಿದ್ದು ನಿಜಕ್ಕೂ ಶ್ಲಾಘನೀಯ. ಹಲವು ಕಡೆಗಳಲ್ಲಿ ಆಸ್ತಿ ತೆರವು ಮಾಡಿಸಿದ್ದು ಜನರಿಗೆ ಬೇಸರ ಉಂಟುಮಾಡಿರಬಹುದು. ಗ್ರಾಮಕ್ಕೆ ಅನನುಕೂಲವಾಗುತ್ತಿದ್ದರಿಂದ ತೆರವು ಮಾಡಿಸಿ, ಸಾರ್ವಜನಿರಿಗೆ ಅನುಕೂಲವಾಗುವ ವ್ಯವಸ್ಥೆ ಮಾಡಲಾಗಿದೆ. ರಸ್ತೆ, ಸ್ಮಶಾನ ಸೇರಿದಂತೆ ವಿವಿಧ ಸೌಲಭ್ಯಗಳು ಈ ತೆರವು ಕಾರ್ಯಗಳಿಂದ ಸಾಧ್ಯವಾಗಿದೆ. ದುದ್ದ ಗ್ರಾಮದಲ್ಲಿ ಬಸ್‌ ನಿಲ್ದಾಣ ನಿರ್ಮಾಣ ಪ್ರಗತಿಯಲ್ಲಿದೆ. ಸಾರ್ವಜನಿಕ ಸಂತೆಗೆ ಜಾಗ ಗುರುತಿಸಲಾಗಿದ್ದು, ಶೀಘ್ರದಲ್ಲೇ ಸಂತೆಗೆ ಅಗತ್ಯವಾದ ವ್ಯವಸ್ಥೆಗಳನ್ನು ಮಾಡಿಕೊಡಲಾಗುತ್ತದೆ. ದುದ್ದದಲ್ಲಿ ನಡೆದ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮ ಯಶಸ್ಸಿನ ಹಿಂದೆ ಹಲವರ ಶ್ರಮವಿದೆ. ಗ್ರಾಮ ಪಂಚಾಯಿತಿ ಪದಾಧಿಕಾರಿಗಳು,ಪಿಡಿಒಗಳು, ಸ್ಥಳೀಯರು ಪಕ್ಷಬೇಧಗಳನ್ನು ಮರೆತು ಕೈ ಜೋಡಿಸಿದ್ದರಿಂದ ಯಶಸ್ವಿಯಾಗಿ ಸಾಕಾರಗೊಂಡಿದೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸಬಯಸುತ್ತೇನೆ ಎಂದು ಹೇಳಿದರು.

Darshan Puttannaiah

ಇದನ್ನೂ ಓದಿ | ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ಹೆಜ್ಜೆ ಇಡಿ: ದರ್ಶನ್‌ ಪುಟ್ಟಣ್ಣಯ್ಯ

ಗೌರವ ಉಪಸ್ಥಿತಿ:

ಉಪ ತಹಸೀಲ್ದಾರ್ ಯೋಗಾನಂದ, ಸಿಡಿಪಿಒ ಕುಮಾರಸ್ವಾಮಿ, ಚೆಸ್ಕಾಂ ಎಡಬ್ಲ್ಯೂ ಆನಂದ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಸುನೀತಾ, ಕಂದಾಯ ಪರಿವೀಕ್ಷಕರಾದ ನಾಗರಾಜ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿಜಯೇಂದ್ರ, ತಾಲೂಕು ಆರೋಗ್ಯಾಧಿಕಾರಿ ಜವರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಂ, ಸರ್ಕಾರಿ ಪಿಯು ಕಾಲೇಜ್‌ ಪ್ರಾಂಶುಪಾಲರಾದ ವೀಣಾ, ಪೊಲೀಸ್‌ ವೃತ್ತ ನಿರೀಕ್ಷಕರಾದ ಮಹೇಶ್, ದುದ್ದ ಗ್ರಾಮ ಪಂಚಾಯಿತಿ ಪದಾಧಿಕಾರಿಗಳು, ರೈತ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಫಲಾನುಭವಿಗಳಿಗೆ ಕನ್ನಡಕ, ತ್ರಿಚಕ್ರ ವಾಹನ, ತ್ರಿಚಕ್ರ ಸೈಕಲ್, ಮೇವು ಕತ್ತರಿಸುವ ಯಂತ್ರ, ಬಿತ್ತನೆ ಬೀಜ, ಸಸಿಗಳ ವಿತರಣೆ ಮಾಡಲಾಯಿತು. ಪುಟ್ಟಣ್ಣಯ್ಯಫೌಂಡೇಶನ್ ಮತ್ತು ಸೆಲ್ಕೊ ಫೌಂಡೇಶನ್ ವತಿಯಿಂದ ಸೌರಚಾಲಿತ ಹಾಲು ಕರೆಯುವ ಯಂತ್ರ, ಕೋಳಿ ಸಾಕಾಣಿಕೆ ಗೂಡು ವಿತರಿಸಲಾಯಿತು.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »