ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರವರು ಸಂವಿಧಾನ (130ನೇ ತಿದ್ದುಪಡಿ) ಮಸೂದೆಯ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಟೀಕಿಸಿದ್ದಾರೆ. ಈ ಮಸೂದೆಯು ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿಯನ್ನು 30 ದಿನಗಳಿಗಿಂತ ಹೆಚ್ಚು ಜೈಲಿನಲ್ಲಿದ್ದರೆ ಹುದ್ದೆಯಿಂದ ತೆಗೆಯುವ ಗುರಿಯನ್ನು ಹೊಂದಿದೆ. ಕೇಜ್ರಿವಾಲ್ ಬಿಜೆಪಿಯನ್ನು ಗುರಿಯಾಗಿಸಿ, ಬಿಜೆಪಿ ಹಗರಣದ ಆರೋಪಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ ಎಂದರು. ನಂತರ ಅವರನ್ನು ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿಯಾಗಿ ಮಾಡುತ್ತಾರೆ ಎಂದು ಆರೋಪಿಸಿದರು. “ಇಂತಹ ಆರೋಪಿಗಳನ್ನು ಸೇರಿಸಿಕೊಂಡವರಿಗೆ ಎಷ್ಟು ವರ್ಷ ಜೈಲು ಶಿಕ್ಷೆ?” ಎಂದು ಕೇಜ್ರಿವಾಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕೇಜ್ರಿವಾಲ್ ತಮ್ಮ 160 ದಿನಗಳ ಜೈಲು ವಾಸವನ್ನು ಉಲ್ಲೇಖಿಸಿ. ಕೇಂದ್ರ ಸರ್ಕಾರ ತಪ್ಪು ಕೇಸ್ ಹಾಕಿತ್ತು ಎಂದರು. ಆದರೆ ಜೈಲಿನಿಂದ ಆಡಳಿತ ನಡೆಸಿದೆ, ಆಗ ವಿದ್ಯುತ್ ಕಡಿತ, ನೀರಿನ ಸಮಸ್ಯೆ ಇರಲಿಲ್ಲ. ಆಸ್ಪತ್ರೆಗಳಲ್ಲಿ ಉಚಿತ ಔಷಧಿಗಳು ಲಭ್ಯವಿದ್ದವು. ಬಿಜೆಪಿಯು “ವಾಷಿಂಗ್ ಮಷಿನ್” ಇದ್ದಹಾಗೆ ಆರೋಪಿಗಳ ಕೇಸ್‌ಗಳನ್ನು ರದ್ದುಗೊಳಿಸುತ್ತಾರೆ ಎಂದು ಟೀಕಿಸಿದರು.
ಇದನ್ನೂ ಓದಿ | ಸಂಸತ್ತ್‌ನಲ್ಲಿ 130ನೇ ತಿದ್ದುಪಡಿ ಮಸೂದೆ ಮಂಡನೆ: ಅಮಿತ್ ಶಾ
ಅಮಿತ್ ಶಾ ಮಸೂದೆಯನ್ನು ಬೆಂಬಲಿಸಿ ಕೇಜ್ರಿವಾಲ್ 2024ರಲ್ಲಿ ಜೈಲಿನಿಂದ ಸರ್ಕಾರ ನಡೆಸಿದ್ದನ್ನು ಉಲ್ಲೇಖಿಸಿದರು. “ಜನರು ಜೈಲಿನಿಂದ ಆಡಳಿತ ನಡೆಸುವ ನಾಯಕರನ್ನು ಬಯಸುತ್ತಾರೆಯೇ?” ಎಂದು ಕೇಳಿದರು. ವಿರೋಧ ಪಕ್ಷಗಳು ಮಸೂದೆಯನ್ನು “ಪ್ರಜಾಪ್ರಭುತ್ವ ವಿರೋಧಿ” ಎಂದು ಕರೆದವು. ಇದನ್ನು ಬಿಜೆಪಿಯೇತರ ಸರ್ಕಾರಗಳನ್ನು ಅಸ್ಥಿರಗೊಳಿಸಲು ಬಳಸಲಾಗುತ್ತದೆ ಎಂದು ಆರೋಪಿಸಿದವು.







