“ಸಾಹಿತ್ಯ ಸಮ್ಮೇಳನ ಭ್ರಷ್ಟಾಚಾರದ ಕೂಪವಾಗಿಸಿದ್ದಾರೆ”: ನಾಗಣ್ಣಗೌಡ

"ಕನ್ನಡ ಪರಂಪರೆಯ ಭಾಗವಾಗಿ ನಾಡು ನುಡಿಯ ಸಲುವಾಗಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಧಿಕಾರಿಗಳು, ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷರು ಹಾಗೂ ಎಂಸಿಎ ಇವರು ಭ್ರಷ್ಟಾಚಾರದ ಕೂಪವನ್ನಾಗಿಸಿದ್ದಾರೆʼ ಎಂದು ಎಂ.ಬಿ. ನಾಗಣ್ಣಗೌಡರ ಆರೋಪ. 
kannada sahitya parishath

“ಕನ್ನಡ ಪರಂಪರೆಯ ಭಾಗವಾಗಿ ನಾಡು ನುಡಿಯ ಸಲುವಾಗಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಧಿಕಾರಿಗಳು, ಸಾಹಿತ್ಯ ಪರಿಷತ್ ರಾಜ್ಯ ಅಧ್ಯಕ್ಷರು ಹಾಗೂ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವೈಟೈಸ್ ಲಿ (ಎಂಸಿಎ) ಇವರುಗಳು ಭ್ರಷ್ಟಾಚಾರದ ಕೂಪವನ್ನಾಗಿಸಿದ್ದಾರೆʼ ಎಂದು ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ. ನಾಗಣ್ಣಗೌಡರು ಗಂಭೀರ ಆರೋಪ ಮಾಡಿದ್ದಾರೆ. 

2024ರ ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಮತ್ತು ನಿರ್ವಹಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಆರೋಪಗಳು ಕೇಳಿಬಂದಿವೆ. ಇದನ್ನು ಸಂಪೂರ್ಣವಾಗಿ ತನಿಖೆ ಮಾಡಲು ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಲೋಕಾಯುಕ್ತರಿಗೆ ನೀಡಲು ನಿರ್ಧರಿಸಿದೆ. 

ಈ ಕುರಿತಂತೆ ಸಮಾಚಾರ.ಕಾಮ್‌ನೊಂದಿಗೆ ಮಾತನಾಡಿ ಮಾಹಿತಿ ಹಂಚಿಕೊಂಡ ಎಂ.ಬಿ. ನಾಗಣ್ಣಗೌಡರು “ ರಾಜ್ಯ ಸರಕಾರದ ಅಡಿಯಲ್ಲಿ ಸ್ಥಾಪಿತವಾಗಿರುವ ಎಂಸಿಎ ಸೂಕ್ತ ದರದಲ್ಲಿ ಗುಣಮಟ್ಟದ ಸೇವೆಗಳನ್ನು ಸರಕಾರಕ್ಕೆ ಒದಗಿಸುವ ಗುರಿಯೊಂದಿಗೆ ಸ್ಥಾಪಿತವಾಗಿದೆ. ಆದರೆ ಇಲ್ಲಿ ಬೇಲಿಯೇ ಎದ್ದು ಹೊಲ ಮೇದ ಪ್ರಕರಣವಾಗಿದೆ” ಆರೋಪಿಸಿದ್ದಾರೆ.

ವೇದಿಕೆ ನಿರ್ಮಾಣದಲ್ಲಿ ಅಕ್ರಮ: 

ಸಮ್ಮೇಳನದ ವೇದಿಕೆಗಳಿಗಾಗಿ 1,77,600 ಚದರ ಅಡಿ ಜಾಗಕ್ಕೆ ಜರ್ಮನ್ ಹ್ಯಾಂಗರ್ ಪೆಂಡಾಲು ನಿರ್ಮಿಸಲಾಗಿದೆ. ಮಾರುಕಟ್ಟೆಯಲ್ಲಿ ಒಂದು ಚದರ ಅಡಿಗೆ ರೂ. 30 ರಿಂದ 35 ರೂಗಳಿಗೆ ಲಭ್ಯವಿರುವ ಈ ಪೆಂಡಾಲುಗಳನ್ನು ಎಂಸಿಎ ಚದರ ಅಡಿಗೆ ರೂ. 69ಕ್ಕೆ ಪೂರೈಸಿದೆ. ಇದರಿಂದಾಗಿ ವೇದಿಕೆ ನಿರ್ಮಾಣದ ಹೆಸರಿನಲ್ಲಿ ರೂ. 8.92 ಕೋಟಿ ಹಣವನ್ನು ಎಂಸಿಎ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ಅತೀಕುಲ್ಲಾ ಶರೀಫ್ ಅವರ ಹತ್ತಿರದ ಸಂಬಂಧಿ ಎನ್ನಲಾದ ಮೈಸೂರಿನ ಶರೀಫ್ ಫರ್ನಿಚರ್‌ಗೆ ಬಿಡುಗಡೆ ಮಾಡಲಾಗಿದೆ.

ವೇದಿಕೆ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಜ್ಯೋತಿ (ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ) ಮತ್ತು ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಅಧ್ಯಕ್ಷರಾಗಿದ್ದರು. ನಾಗಣ್ಣಗೌಡ ಅವರು ತಿಳಿಸುವಂತೆ, “ಇದೇ ಎಂಸಿಎ 2025ರ ಫೆಬ್ರುವರಿಯಲ್ಲಿ ಮಂಡ್ಯದಲ್ಲಿ ನಡೆದ ಖಾದಿ ಮತ್ತು ಗ್ರಾಮೋದ್ಯೋಗ ಪ್ರದರ್ಶನದಲ್ಲಿ ಚದರ ಅಡಿಗೆ ರೂ. 55ಕ್ಕೆ ಪೆಂಡಾಲುಗಳನ್ನು ಅಳವಡಿಸಿತ್ತು. ಆದರೆ ಸಮ್ಮೇಳನಕ್ಕೆ ದುಪ್ಪಟ್ಟು ದರ ವಿಧಿಸಿ ಕೋಟಿಗಟ್ಟಲೆ ಹಣ ಲೂಟಿ ಮಾಡಲಾಗಿದೆ. ಸಮಿತಿಯ ಸದಸ್ಯರು ಮಾರುಕಟ್ಟೆ ದರಗಳನ್ನು ಪರಿಶೀಲಿಸದೆ ಒಪ್ಪಿಕೊಂಡಿದ್ದು ಭ್ರಷ್ಟಾಚಾರಕ್ಕೆ ಸಾಕ್ಷ್ಯ.”

ಆಹಾರ ಸಮಿತಿಯಲ್ಲಿ ಹಗರಣ: 

ಆಹಾರ ಸಮಿತಿಯ ಸದಸ್ಯ ಕಾರ್ಯದರ್ಶಿ ಕೃಷ್ಣಕುಮಾರ್ (ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು) ಮತ್ತು ಅಧ್ಯಕ್ಷ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ. ಸಮ್ಮೇಳನದಲ್ಲಿ ಸುಮಾರು 4.5 ಲಕ್ಷ ಮಂದಿಗೆ ಆಹಾರ ಒದಗಿಸಿರುವುದಾಗಿ ಹೇಳಲಾಗಿದ್ದರೂ, ದಾಖಲೆಗಳ ಪ್ರಕಾರ 8,10,649 ಮಂದಿಗೆ ಆಹಾರ ಸರಬರಾಜು ಮಾಡಿ ಸ್ಕೈ ಬ್ಲೂ ಕಂಪನಿಗೆ ರೂ. 6.74 ಕೋಟಿ ಪಾವತಿಸಲಾಗಿದೆ. ಇದಲ್ಲದೆ ಮಂಡ್ಯದ ಅಪೂರ್ವ ವೆಜ್ ಕ್ಯಾಟರಿಂಗ್ ಸಹ ಆಹಾರ ಪೂರೈಸಿರುವುದಾಗಿ ಹೇಳಿಕೊಂಡಿದೆ, ಆದರೆ ಅದು ಎಂಸಿಎಯ ಅಧಿಕೃತ ವೆಂಡರ್ ಅಲ್ಲ.

“ಮೊದಲ ದಿನವೇ ಪೊಲೀಸ್ ಮತ್ತು ಕೆಎಸ್‌ಆರ್‌ಟಿಸಿ ಸಿಬ್ಬಂದಿ 18,480 ಮಂದಿ ತಿಂಡಿ ಸೇವಿಸಿದ್ದಾರೆಂದು ದಾಖಲಿಸಲಾಗಿದೆ. ಆದರೆ ಅಷ್ಟು ಸಂಖ್ಯೆಯ ಸಿಬ್ಬಂದಿ ನಿಯೋಜನೆಯಾಗಿರಲಿಲ್ಲ. ನೋಂದಾಯಿತ ಪ್ರತಿನಿಧಿಗಳ ಸಂಖ್ಯೆ 4 ಸಾವಿರಕ್ಕೂ ಕಡಿಮೆಯಿದ್ದರೂ, 23 ಸಾವಿರಕ್ಕೂ ಹೆಚ್ಚು ಎಂದು ತೋರಿಸಲಾಗಿದೆ. ಇದು ಸಂಪೂರ್ಣ ಅಜಗಜಾಂತರ,” ಎಂದು ನಾಗಣ್ಣಗೌಡ ಆರೋಪಿಸಿದರು.

ಸ್ವಚ್ಛತೆ ಮತ್ತು ನೈರ್ಮಲ್ಯ ಸಮಿತಿಯಲ್ಲಿ ಅಕ್ರಮ:

“ಸಮಿತಿಯ ಸದಸ್ಯ ಕಾರ್ಯದರ್ಶಿ ಮಾಯಣ್ಣಗೌಡ (ನಗರ ಯೋಜನಾ ನಿರ್ದೇಶಕರು) ಮತ್ತು ಹಿಂದಿನ ನಿರ್ದೇಶಕಿ ತುಷಾರಮಣಿ ನಿರ್ವಹಿಸಿದರು. 1,050 ಪೌರಕಾರ್ಮಿಕರನ್ನು ನೇಮಿಸಿ ದಿನಕ್ಕೆ ರೂ. 637 ವೇತನ ನೀಡಿ ರೂ. 33.33 ಲಕ್ಷ ಪಾವತಿಸಲಾಗಿದೆಯೆಂದು ಸ್ಕೈ ಬ್ಲೂಗೆ ಹಣ ಬಿಡುಗಡೆ ಮಾಡಲಾಗಿದೆ. ಆದರೆ ವಾಸ್ತವದಲ್ಲಿ ಸಂಸ್ಥೆಯು ಅಷ್ಟು ಕಾರ್ಮಿಕರನ್ನು ನಿಯೋಜಿಸಿರಲಿಲ್ಲ. ಬದಲಿಗೆ ಮಂಡ್ಯ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರನ್ನು ಬಳಸಲಾಗಿದೆ” ಎಂದು ಎಂ.ಬಿ. ನಾಗಣ್ಣಗೌಡರು ಹೇಳಿದರು.

ವಸತಿ ಸಮಿತಿಯಲ್ಲಿ ದುಬಾರಿ ವೆಚ್ಚ:

“ಸಮಿತಿಯ ಸದಸ್ಯ ಕಾರ್ಯದರ್ಶಿ ಎಂ. ಶಿವಮೂರ್ತಿ (ಮಂಡ್ಯ ಉಪವಿಭಾಗಾಧಿಕಾರಿ). ವಸತಿಗಾಗಿ ರೂ. 1.97 ಕೋಟಿ ಹಣವನ್ನು ಸ್ಕೈ ಬ್ಲೂ ಇವೆಂಟ್ ಮ್ಯಾನೇಜ್‌ಮೆಂಟ್‌ಗೆ ನೀಡಲಾಗಿದೆ. ಹೋಟೆಲ್‌ಗಳಲ್ಲಿ ದುಬಾರಿ ದರಗಳನ್ನು ಪಾವತಿಸಲಾಗಿದೆಯೆಂದು ದಾಖಲಿಸಲಾಗಿದ್ದರೂ, ಯಾರು ಉಳಿದಿದ್ದರು ಎಂಬ ದಾಖಲೆಗಳಿಲ್ಲ. ಉದಾಹರಣೆಗೆ, ಅಮರಾವತಿ ಹೋಟೆಲ್‌ನ ಸೂಟ್ ರೂಂಗೆ ರೂ. 8,454 ಬಾಡಿಗೆ, ಸೋಫಾ ಡ್ಯಾಮೇಜ್‌ಗೆ ರೂ. 4,449 ಮತ್ತು ಊಟಕ್ಕೆ ರೂ. 75,956 ಪಾವತಿಸಲಾಗಿದೆ. ಮೈಸೂರಿನಲ್ಲಿ ದಿನಕ್ಕೆ ರೂ. 58 ಸಾವಿರ ಬಾಡಿಗೆಯ ಹೋಟೆಲ್‌ಗಳಲ್ಲಿ ಯಾರು ಉಳಿದಿದ್ದರು ಎಂಬುದು ಬಹಿರಂಗವಾಗಬೇಕು” ಎಂದು ನಾಗಣ್ಣಗೌಡ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ | ಮಂಡ್ಯ ಸಾಹಿತ್ಯ ಸಮ್ಮೇಳನ: ಖರ್ಚುವೆಚ್ಚವನ್ನು ಲೋಕಾ ತನಿಖೆಗೆ ನೀಡಲು ಕಸಾಪ ನಿರ್ಧಾರ

ಇದಲ್ಲದೆ, ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಷಿ ಅವರು ಕೇಂದ್ರ ಸಮಿತಿಗಾಗಿ 2.5 ಕೋಟಿ ಪಡೆದು ಲೆಕ್ಕ ಸಲ್ಲಿಸದೆ ಹಗರಣಕ್ಕೆ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ನಾಗಣ್ಣಗೌಡ ಅವರು, “ಎಂಸಿಎ ವ್ಯವಸ್ಥಾಪಕ ಅತೀಕುಲ್ಲಾ ಶರೀಫ್, ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ ಮತ್ತು ಸಮಿತಿ ಸದಸ್ಯರು ಸೇರಿ ಸ್ಕೈ ಬ್ಲೂ ನಂತಹ ಬೇನಾಮಿ ಸಂಸ್ಥೆಗಳ ಮೂಲಕ ಕೋಟಿಗಟ್ಟಲೆ ಹಣ ಲೂಟಿ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ದೂರು ನೀಡುತ್ತಿದ್ದೇನೆ,” ಎಂದು ಹೇಳಿದರು.

ಕಸಾಪ ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ ಲೋಕಾಯುಕ್ತ ತನಿಖೆಗೆ ಒಪ್ಪಿಸಿದೆ. ಹೆಚ್ಚಿನ ಮಾಹಿತಿಗಾಗಿ ತನಿಖೆಯ ಫಲಿತಾಂಶಕ್ಕಾಗಿ ಕಾಯಬೇಕಿದೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »