ಮಹಾ ಸಿಎಂ ಫಡ್ನವೀಸ್‌ ನೇತೃತ್ವದಲ್ಲಿ 61 ನಕ್ಸಲರ ಶರಣಾಗತಿ!

ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಅಕ್ಟೋಬರ್ 15ರಂದು ಸಿಪಿಐ(ಮಾವೋಯಿಸ್ಟ್) ಪೊಲಿಟ್‌ಬ್ಯೂರೋ ಸದಸ್ಯ ಭೂಪತಿ ಎಂದು ಕರೆಯಲ್ಪಡುವ ಮಲ್ಲೋಜುಲಾ ವೇಣುಗೋಪಾಲ್‌ ರಾವ್‌ ಸೇರಿ 61ಜನ ನಕ್ಸಲರು ಶರಣಾಗಿದ್ದಾರೆ. 
maoist bhupati surrender gadchiroli
ಚಿತ್ರ ಕೃಪೆ : ಉದಯವಾಣಿ

ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಅಕ್ಟೋಬರ್ 15ರಂದು ಸಿಪಿಐ(ಮಾವೋಯಿಸ್ಟ್) ಪೊಲಿಟ್‌ಬ್ಯೂರೋ ಸದಸ್ಯ ಭೂಪತಿ ಎಂದು ಕರೆಯಲ್ಪಡುವ ಮಲ್ಲೋಜುಲಾ ವೇಣುಗೋಪಾಲ್‌ ರಾವ್‌ ಸೇರಿ 61ಜನ ನಕ್ಸಲರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ರ ಸಮ್ಮುಖದಲ್ಲಿ ಶರಣಾಗಿದ್ದಾರೆ.

6 ಕೋಟಿ ರೂ. ಇನಾಮು ಹೊತ್ತಿದ್ದ ಭೂಪತಿ ಮಾವೋಯಿಸ್ಟ್ ಸಂಘಟನೆಯ ಪ್ರಮುಖ ರಣತಂತ್ರಜ್ಞರಾಗಿದ್ದರು. ಗಡ್ಚಿರೋಲಿ ಪೊಲೀಸ್ ಮುಖ್ಯ ಕಚೇರಿಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಎದುರು ಈ ಶರಣಾಗತಿ ಯಾಗಿದ್ದಾರೆ. ಇದು ಮಹಾರಾಷ್ಟ್ರದ ಇತಿಹಾಸದಲ್ಲೇ ಅತಿದೊಡ್ಡ ನಕ್ಸಲ್ ಶರಣಾಗತಿ ಎಂದು ಪರಿಗಣಿಸಲಾಗಿದೆ.

ಶರಣಾಗಿದ್ದವರೊಂದಿಗೆ 54 ಶಸ್ತ್ರಾಸ್ತ್ರಗಳು ಸಿಕ್ಕಿವೆ. ಅದರಲ್ಲಿ 7 ಎಕೆ-47 ರೈಫಲ್‌ಗಳು, 9 ಇನ್‌ಸಾಸ್ ರೈಫಲ್‌ಗಳು, ಎಸ್‌ಎಲ್‌ಆರ್, ಕಾರ್ಬೈನ್ ಮತ್ತು ಪಿಸ್ತೂಲುಗಳು ಸೇರಿವೆ. ಭೂಪತಿ 50 ವರ್ಷಗಳಿಂದ ಮಾವೋಯಿಸ್ಟ್ ಚಳವಳಿಯಲ್ಲಿ ಇದ್ದರು. ಅವರು ಪೊಲಿಟ್‌ಬ್ಯೂರೋ ಸದಸ್ಯರಾಗಿ ಮಹಾರಾಷ್ಟ್ರ-ಛತ್ತೀಸ್‌ಗಢ ಗಡಿ ಪ್ರದೇಶದಲ್ಲಿ ಕಾರ್ಯಾಚರಣೆಗಳನ್ನು ಮುನ್ನಡೆಸುತ್ತಿದ್ದರು. ಭೂಪತಿ ಮತ್ತು ಕ್ಯಾಡರ್‌ಗಳು ಪೊಲೀಸರಿಗೆ ಶರಣಾಗಿ, ಮಾವೋಯಿಸ್ಟ್ ಸಂಘಟನೆಯ ಆಂತರಿಕ ಗೊಂದಲಗಳನ್ನು ಬಹಿರಂಗಪಡಿಸಿದ್ದಾರೆ.

“ಮಾವೋಯಿಸ್ಟ್ ತತ್ವಜ್ಞಾನದಲ್ಲಿ ವೈಫಲ್ಯಗಳಿವೆ. ನೀಡಿದ ಭರವಸೆಗಳು ನೆರವೇರಲಿಲ್ಲ ಆಂತರಿಕ ಕಲಹಗಳು ಹೆಚ್ಚಿದವು ಪೊಲೀಸರ ನಿರಂತರ ಒತ್ತಡದಿಂದ ಶರಣಾಗಿದ್ದೇವೆ. ಕಳೆದ ಒಂದು ತಿಂಗಳಿಂದ ಪೊಲೀಸರು ಮಾತುಕತೆ ನಡೆಸಿದರು. ಶರಣಾಗತಿಗೆ ಅವಕಾಶ ನೀಡಿದರು. ಇದರಿಂದ ಮಾವೋಯಿಸ್ಟ್ ಚಳವಳಿಯು ಕುಸಿಯುತ್ತಿದೆ” ಎಂದು ಭೂಪತಿ ಹೇಳಿದ್ದಾರೆ.

ಇದನ್ನೂ ಓದಿ | ಮಹಾರಾಷ್ಟ್ರ ಸರ್ಕಾರದಿಂದ ‘ನಗರ ನಕ್ಸಲಿಸಂ’ ವಿರುದ್ಧ ಹೊಸ ಕಾನೂನು

ಸಿಎಂ ಫಡ್ನವಿಸ್ ಸಭೆಯಲ್ಲಿ ಮಾತನಾಡಿ. “ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ 2014ರಿಂದ ಮಾವೋಯಿಸ್ಟ್ ವಿರುದ್ಧ ಅಭಿಯಾನ ಆರಂಭವಾಯಿತು. ಮಹಾರಾಷ್ಟ್ರದಲ್ಲಿ ನಕ್ಸಲ್ ಚಳವಳಿಯನ್ನು ನಿಯಂತ್ರಿಸಿದ್ದೇವೆ. ಭೂಪತಿ ಶರಣಾಗತಿ ಮಾವೋಯಿಸ್ಟ್ ಬೆನ್ನುಮೂಳೆ ಮುರಿದಂತೆ. ಇದು ಮಹಾರಾಷ್ಟ್ರದಲ್ಲಿ ನಕ್ಸಲ್ ಮುಕ್ತತೆಯ ಆರಂಭ. ಗಡ್ಚಿರೋಲಿ ಪೊಲೀಸರಿಗೆ ರೂ. 1 ಕೋಟಿ ಬಹುಮಾನ ನೀಡುತ್ತೇವೆ. ಛತ್ತೀಸ್‌ಗಢದ ನಕ್ಸಲರು ಕೂಡ ಶರಣಾಗಬಹುದು” ಎಂದರು.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »