ರಾಷ್ಟ್ರೀಯ ಏಕತಾ ದಿನ: ಭಾರತದ ಉಕ್ಕಿನ ಮನುಷ್ಯನ ಜನ್ಮದಿನದ ಸ್ಮರಣೆ

ಭಾರತದ ಉಕ್ಕಿನ ಮನುಷ್ಯ ಎಂದೇ ಪ್ರಸಿದ್ಧಿಯಾಗಿರುವ ಸರ್ದಾರ್‌ ವಲ್ಲಭಾಯಿ ಪಟೇಲ್‌ ಅವರು ಭಾರತಕ್ಕೆ ನೀಡಿರುವ ಕೊಡುಗೆಗೆ ಸಾಟಿಯೇ ಇಲ್ಲ. ಇವರ ಹುಟ್ಟು ಹಬ್ಬವನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸುತ್ತಾರೆ.
sardar patel national unity
ಚಿತ್ರ ಕೃಪೆ: TV9 kannada

ಭಾರತದ ಉಕ್ಕಿನ ಮನುಷ್ಯ ಎಂದೇ ಪ್ರಸಿದ್ಧಿಯಾಗಿರುವ ಸರ್ದಾರ್‌ ವಲ್ಲಭಾಯಿ ಪಟೇಲ್‌ ಅವರು ಭಾರತಕ್ಕೆ ನೀಡಿರುವ ಕೊಡುಗೆಗೆ ಸಾಟಿಯೇ ಇಲ್ಲ. ಇವರು ದಿಟ್ಟ ನಿರ್ಧಾರಗಳಿಂದಲೇ ಹೆಸರುವಾಸಿಯಾಗಿದ್ದಾರೆ. ಇವರ ಹುಟ್ಟು ಹಬ್ಬವನ್ನು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸುತ್ತಾರೆ.

ಇಂದು ಅಕ್ಟೋಬರ್ 31, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ. ಗುಜರಾತ್‌ನ ನಡಿಯಾಡ್‌ನಲ್ಲಿ ಸಾಮಾನ್ಯ ರೈತ ಕುಟುಂಬದಲ್ಲಿ 1875ರಲ್ಲಿ ಜನಿಸಿದ ವಲ್ಲಭಭಾಯಿ ಝವೇರ್‌ಭಾಯಿ ಪಟೇಲ್, ಭಾರತಕ್ಕೆ ‘ಸರ್ದಾರ್’ ಎಂಬ ಹೆಸರಿನಿಂದ ಪ್ರಸಿದ್ಧರಾದರು.

ಕರ್ನಾಟಕದ ದೃಷ್ಟಿಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ನೋಡಬೇಕಾದರೆ, ಪಟೇಲ್ ಅವರು ಇಲ್ಲದಿದ್ದರೆ ಕರ್ನಾಟಕದ ಚಿತ್ರಣವೇ ಬಿಡಿ, ಇಡೀ ಭಾರತದ ಚಿತ್ರಣವೇ ಬದಲಾಗುತ್ತಿತ್ತು. ಏಕೆಂದರೆ, ಈಗ ಕಲ್ಯಾಣ ಕರ್ನಾಟಕ ಎಂದು ಕರೆಯಲ್ಪಡುವ ಕರ್ನಾಟಕದ ಭಾಗವು ಅಂದು ಹೈದರಾಬಾದ್ ಕರ್ನಾಟಕವಾಗಿತ್ತು. ಅಲ್ಲಿ ರಜಾಕಾರನಾದ ಖಾಸಿಂ ರಿಜ್ವಿ ಎನ್ನುವವನ ನಿಜಾಮನ ಆಳ್ವಿಕೆ 1947ರಲ್ಲಿ ಭಾರತದೊಂದಿಗೆ ವಿಲೀನವಾಗಲು ನಿರಾಕರಿಸಿದ್ದನು. ಅದಕ್ಕಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ‘ಆಪರೇಷನ್ ಪೋಲೋ’ ಎನ್ನುವ ಕಾರ್ಯಾಚರಣೆಯ ಮೂಲಕ ಹೈದರಾಬಾದ್ ಪ್ರಾಂತ್ಯವನ್ನು 1948ರ ಸೆಪ್ಟೆಂಬರ್ 17ರಂದು ಭಾರತದಲ್ಲಿ ವಿಲೀನಗೊಳಿಸಿದರು. 

ಈ ಕಾರ್ಯಾಚರಣೆಯಿಂದ ಈಗ ಕಲ್ಯಾಣ ಕರ್ನಾಟಕವು ಭಾರತದೊಂದಿಗೆ ಇದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಇಲ್ಲದೆ ಹೋಗಿದ್ದರೆ ಈಗಿನ ಕಲ್ಯಾಣ ಕರ್ನಾಟಕವೂ ಕೂಡ ಬಾಂಗ್ಲಾದೇಶ, ಪಾಕಿಸ್ತಾನದಂತೆ ಭಾರತದ ಭೂಪಟದಲ್ಲಿ ಇರುತ್ತಿರಲಿಲ್ಲ. ಇದು ಪಟೇಲ್ ಅವರು ಕರ್ನಾಟಕಕ್ಕೆ ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದೆ.

2014ರಿಂದ ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನ ಎಂದು ಆಚರಿಸಲಾಗುತ್ತಿದೆ. ಇದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿಲ್ಲ, ಇದು ಭಾರತದ ಏಕತೆಯ ಸಂಕೇತವಾಗಿದೆ. ಗುಜರಾತ್‌ನ ಕೇವಡಿಯಾದಲ್ಲಿ ನಿಂತಿರುವ ಸ್ಟ್ಯಾಚ್ಯೂ ಆಫ್ ಯೂನಿಟಿ  ವಿಶ್ವದ ಅತಿ ಎತ್ತರದ (182 ಮೀಟರ್) ಪ್ರತಿಮೆ – ಅವರ ಸ್ಮರಣಾರ್ಥವಾಗಿ ನಿರ್ಮಿಸಲಾಗಿದ್ದು. ಇಂದು ಅವರ ಜೀವನ, ಸಾಧನೆಗಳು ಮತ್ತು ಭಾರತಕ್ಕೆ ನೀಡಿದ ಕೊಡುಗೆಗಳನ್ನು ನೆನಪಿಸಿಕೊಳ್ಳುವ ಸುದಿನವಾಗಿದೆ.

ಬಾಲ್ಯದಿಂದ ವಕೀಲತನದವರೆಗೆ: 

ವಲ್ಲಭಭಾಯಿ ಪಟೇಲ್ 1875ರ ಅಕ್ಟೋಬರ್ 31ರಂದು ಗುಜರಾತ್‌ನ ನಡಿಯಾಡ್‌ನಲ್ಲಿ ಝವೇರ್‌ಭಾಯಿ ಪಟೇಲ್ ಮತ್ತು ಲಾಡ್‌ಬಾ ದಂಪತಿಗಳ ಆರು ಮಕ್ಕಳಲ್ಲಿ ಒಬ್ಬರಾಗಿ ಜನಿಸಿದರು. ಲೇವಾ ಪಟೀದಾರ್ ಸಮುದಾಯದಿಂದ ಬಂದ ಅವರು ಬಾಲ್ಯದಲ್ಲಿ ರೈತ ಕೆಲಸಗಳಲ್ಲಿ ಸಹಾಯ ಮಾಡುತ್ತಾ ಬೆಳೆದರು. ನಡಿಯಾಡ್ ಹೈಸ್ಕೂಲ್‌ನಲ್ಲಿ ಶಿಕ್ಷಣ ಪೂರೈಸಿ, ಸ್ವಯಂಪ್ರಯತ್ನದಿಂದ ಇಂಗ್ಲೆಂಡ್‌ನ ಮಿಡಲ್ ಟೆಂಪಲ್‌ನಲ್ಲಿ ವಕೀಲ ವಿದ್ಯಾಭ್ಯಾಸ ಮಾಡಿದರು. 1913ರಲ್ಲಿ ಬ್ಯಾರಿಸ್ಟರ್ ಆಗಿ ಭಾರತಕ್ಕೆ ಮರಳಿ, ಅಹಮದಾಬಾದ್‌ನಲ್ಲಿ ಯಶಸ್ವೀ ವಕೀಲರಾದರು. ಆದರೆ ಅವರ ಮನಸ್ಸು ನ್ಯಾಯಾಲಯಕ್ಕೆ ಸೀಮಿತವಾಗಿರಲಿಲ್ಲ ಇದು ಸಮಾಜ ಸೇವೆಯತ್ತ ತಿರುಗಿತು.

1917ರಲ್ಲಿ ಮಹಾತ್ಮ ಗಾಂಧೀಜಿಯವರ ಪ್ರಭಾವಕ್ಕೊಳಗಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದರು.

ಸ್ವಾತಂತ್ರ್ಯ ಚಳವಳಿಯಲ್ಲಿ ಲೋಹದ ಮನಸ್ಸು

ಸರ್ದಾರ್ ಪಟೇಲ್ ಗಾಂಧೀಜಿಯವರ ಬಲಗೈಯಂತಿದ್ದರು. 1918ರ ಖೇಡಾ ಸತ್ಯಾಗ್ರಹದಲ್ಲಿ ರೈತರಿಗೆ ಭೂಮಿ ತೆರಿಗೆ ತೆರವುಗೊಳಿಸಿ ಬ್ರಿಟಿಷ್ ಸರ್ಕಾರದ ತೆರಿಗೆ ಹೆಚ್ಚಳವನ್ನು ತಡೆದರು. 1928ರ ಬಾರ್ಡೋಲಿ ಸತ್ಯಾಗ್ರಹ ಅವರ ಐತಿಹಾಸಿಕ ಗೆಲುವು. ಸರ್ದಾರ್ ಅವರ ನಾಯಕತ್ವದಲ್ಲಿ 80,000 ರೈತರು ತೆರಿಗೆ ಹೆಚ್ಚಳದ ವಿರುದ್ಧ ಅಹಿಂಸಾ ಪ್ರತಿಭಟನೆ ನಡೆಸಿದರು. ಬ್ರಿಟಿಷ್ ಸರ್ಕಾರ ಇದಕ್ಕೆ ಮಣಿದು ಒಪ್ಪಂದ ಮಾಡಿಕೊಂಡಿತು. ಇದೇ ಸಂದರ್ಭದಲ್ಲಿ ಅವರಿಗೆ ‘ಸರ್ದಾರ್’ ಎಂಬ ಹೆಸರು ಬಂತು.

ಸೈಮನ್ ಕಮಿಷನ್ ಬಹಿಷ್ಕಾರ (1928), ಉಪ್ಪುನ ಸತ್ಯಾಗ್ರಹ (1930 – ಮೊದಲ ಬಾರಿಗೆ ಬಂಧನ), ಭಾರತ ಬಿಟ್ಟು ತೊಲಗಿ ಚಳವಳಿ (1942) – ಇವೆಲ್ಲದರಲ್ಲೂ ಜೈಲುವಾಸ ಅನುಭವಿಸಿದರು. 1931ರ ಕಾಂಗ್ರೆಸ್ ಅಧಿವೇಶನದಲ್ಲಿ ಮೂಲಭೂತ ಹಕ್ಕುಗಳ ಬಗ್ಗೆ ರೆಸಲ್ಯೂಷನ್ ಮಂಡಿಸಿದರು. ಅವರ ಈ ದೃಢ ನಿಲುವಿನಿಂದ ‘ಭಾರತದ ಐರನ್‌ ಮ್ಯಾನ್‌’ ಎಂಬ ಖ್ಯಾತಿಯನ್ನು ಬಂದಿತು.

ಸ್ವತಂತ್ರ ಭಾರತದ ನಿರ್ಮಾತೃ: ರಾಜ್ಯಗಳ ಏಕೀಕರಣ

1947ರಲ್ಲಿ ಭಾರತ ಸ್ವತಂತ್ರ ಆದಾಗ 565 ಸಂಸ್ಥಾನಗಳು ಪ್ರತ್ಯೇಕತೆಯ ಆಂಧಕಾರದಲ್ಲಿದ್ದವು. ಸರ್ದಾರ್ ಪಟೇಲ್ ಮೊದಲ ಉಪಪ್ರಧಾನಿ ಮತ್ತು ಗೃಹ ಸಚಿವರಾಗಿ ವಿ.ಪಿ. ಮೆನನ್ ಅವರೊಂದಿಗೆ ರಾಜ್ಯಗಳ ಏಕೀಕರಣಕ್ಕೆ ಮುಂದಾದರು. ಹೈದರಾಬಾದ್, ಜುನಾಗಢ, ಕಾಶ್ಮೀರ – ಇಂತಹ ಕಷ್ಟಕರ ಸಂಸ್ಥಾನಗಳನ್ನು ಭಾರತಕ್ಕೆ ಸೇರಿಸಿದರು.

ವಲ್ಲಭಭಾಯಿ ಪಟೇಲ್‌ರವರು ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಸ್ಥಾಪನೆಗೆ ಮೂಲಾಧಾರ ಹಾಕಿದರು. 1947ರ ಭಾರತ-ಪಾಕ್ ಯುದ್ಧದಲ್ಲಿ ದೇಶದ ಭದ್ರತೆಯನ್ನು ಬಲಪಡಿಸಿದರು. ಅವರ ದೂರದೃಷ್ಟಿ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಿತು.

ಇದನ್ನೂ ಓದಿ | ಸ್ವಾತಂತ್ರ್ಯವೀರ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮದಿನ

1950ರ ಡಿಸೆಂಬರ್ 15ರಂದು ಮುಂಬೈಯ ಬಿರ್ಲಾ ಮಂದಿರದಲ್ಲಿ ಹೃದಯಾಘಾತದಿಂದ 75 ವರ್ಷ ವಯಸ್ಸಿನಲ್ಲಿ ಸರ್ದಾರ್ ನಿಧನರಾದರು. 1991ರಲ್ಲಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಲಾಯಿತು. ಇಂದು ಸರ್ದಾರ್ ಪಟೇಲ್ ವಿಶ್ವವಿದ್ಯಾಲಯ, ರಾಷ್ಟ್ರೀಯ ಪೊಲೀಸ್ ಅಕಾಡೆಮಿ, ತಾಂತ್ರಿಕ ಸಂಸ್ಥೆಗಳು ಅವರ ಹೆಸರನ್ನು ಹೊತ್ತಿವೆ. ರಾಷ್ಟ್ರೀಯ ಏಕತಾ ದಿನದಂದು ದೇಶಾದ್ಯಂತ ಏಕತಾ ಪ್ರತಿಜ್ಞೆ ಹೇಳಲಾಗುತ್ತದೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »