ಸ್ವಾತಂತ್ರ್ಯವೀರ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮದಿನ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬದುಕಿರುವಷ್ಟು ದಿವಸ ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ ಸ್ವಾತಂತ್ರವೀರ ಸೇನಾನಿ. ರಾಯಣ್ಣ ಹುಟ್ಟಿದರೆ ಸ್ವಾತಂತ್ರ, ಮಡಿದರೆ ಗಣರಾಜ್ಯೋತ್ಸವ.
sangolli rayanna jayanti

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬದುಕಿರುವಷ್ಟು ದಿವಸ ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ ಸ್ವಾತಂತ್ರವೀರ ಸೇನಾನಿ. ರಾಯಣ್ಣ ಹುಟ್ಟಿದರೆ ಸ್ವಾತಂತ್ರ, ಮಡಿದರೆ ಗಣರಾಜ್ಯೋತ್ಸವ. ಇಂತಹ ಹುಟ್ಟು ಮರಣ ಹಿಂದೆ ಇತಿಹಾಸದಲ್ಲೂ ನೋಡಿಲ್ಲ ಮುಂದಿನ ದಿನಗಳಲ್ಲಿ ನೋಡುವ ಭರವಸೆಯೂ ಇಲ್ಲ.  

ಸಂಗೊಳ್ಳಿ ರಾಯಣ್ಣ (1796 ಆಗಸ್ಟ್ 15 – 1831 ಜನವರಿ 26) ಕರ್ನಾಟಕದ ಬೆಳಗಾವಿ ಜಿಲ್ಲೆಯ ಸಂಗೊಳ್ಳಿ ಗ್ರಾಮದಲ್ಲಿ ಭರಮಪ್ಪ ಮತ್ತು ಕೆಂಚವ್ವ ದಂಪತಿಗಳ ಪುತ್ರನಾಗಿ ಜನಿಸಿದರು. ಇವರ ಜನ್ಮ ಭಾರತದ ಸ್ವಾತಂತ್ರ್ಯ ದಿನವಾದ ಆಗಸ್ಟ್ 15ಕ್ಕೆ ಮತ್ತು ಬಲಿದಾನ ಗಣರಾಜ್ಯ ದಿನವಾದ ಜನವರಿ 26. ಕಿತ್ತೂರು ರಾಣಿ ಚೆನ್ನಮ್ಮಳ ಬಲಗೈ ಬಂಟನಾಗಿ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ರಾಯಣ್ಣ ನಡೆಸಿದ ಗೆರಿಲ್ಲಾ ಯುದ್ಧ ತಂತ್ರಗಳು ಬ್ರಿಟಿಷರಿಗೆ ಸಿಂಹಸ್ವಪ್ನವಾದವು. 

ಸಂಗೊಳ್ಳಿ ರಾಯಣ್ಣ ಎಂಬ ಹೆಸರು ಕೇಳಿದರೆ ಸಾಕು ಆಗ ಬ್ರಿಟಿಷರ ಎದೆ ನಡುಗುತಿತ್ತು, ಯಾವಾಗ ಹೇಗೆ ಎಲ್ಲಿಂದ ಬಂದು ದಾಳಿ ಮಾಡುತ್ತಾನೋ ಎನ್ನುವ ಭಯ. ಕಿತ್ತೂರಿನ ರಾಣಿ ಚೆನ್ನಮ್ಮರನ್ನು ಬಂಧಿಸಿದರು ಕೂಡಾ ರಾಯಣ್ಣನ ಬಂಧನ ಆಗೊವರೆಗೆ ಬ್ರಿಟಿಷರಿಗೆ ನಿದ್ದೆ ಬರುತ್ತಿರಲಿಲ್ಲ ಹಾಗಿತ್ತು ರಾಯಣ್ಣನ ಅಬ್ಬರ. ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ತನ್ನ ಸರ್ವಸ್ವವನ್ನು ಅರ್ಪಿಸಿದ ರಾಯಣ್ಣ, ತನ್ನ 35 ವರ್ಷಗಳ ಜೀವನದಲ್ಲಿ ದೇಶಭಕ್ತಿಯ ಮಾದರಿಯಾದರು. ರಾಯಣ್ಣ ಕಿತ್ತೂರಿನ ಸೈನ್ಯಸೇರಿದ ನಂತರ ಚೆನ್ನಮ್ಮಳ ನೆಚ್ಚಿನ ಬಂಟನಾದ, ಕಿತ್ತೂರಿನಲ್ಲಿ ರಾಯಣ್ಣನ ಹಾಗೆ ಅನೇಕ ವೀರ ಕಲಿಗಳಿದ್ದರೂ ಕೂಡಾ ಕಿತ್ತೂರಿನಲ್ಲಿ ಕೆಲವೇ ಕೆಲವು ವಿದ್ರೋಹಿಗಳಿಂದಾಗಿ ಸೈನ್ಯ ಬ್ರಿಟಿಷರ ವಿರುದ್ಧ 1824 ರಲ್ಲಿ ನಡೆದ ಎರಡನೇ ಯುದ್ಧದಲ್ಲಿ ಸೊಲೊಪ್ಪಿಕೊಳ್ಳ ಬೇಕಾಯಿತು.

1824ರಲ್ಲಿ ರಾಣಿ ಚೆನ್ನಮ್ಮನಿಗೆ ಬ್ರಿಟಿಷರು ಕಪ್ಪಕಾಣಿಕೆಯನ್ನು ನೀಡಲು ಒತ್ತಡ ಹೇರಿದಾಗ, ರಾಯಣ್ಣ ಅವರೊಂದಿಗೆ ಒಗ್ಗಟ್ಟಿನಿಂದ ಹೋರಾಡಿದರು. ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ಧವನ್ನು ಮುಂದುವರೆಸಿದ ರಾಯಣ್ಣ, ಕಿತ್ತೂರಿನ ಸ್ವಾತಂತ್ರ್ಯವನ್ನು ಕಾಪಾಡಲು ಶತಪ್ರಯತ್ನ ಮಾಡಿದರು. ಬ್ರಿಟಿಷರು ಎಷ್ಟೇ ಪ್ರಯತ್ನ ಮಾಡಿದರೂ ಅವರ ಕೈಗೆ ಸಿಗದಿದ್ದ ರಾಯಣ್ಣ, ಅವನ್ನು ಮುಂದಿನಿಂದ ಭೇಟೆಯಾಡುವದು ಆಗುವದಿಲ್ಲ ಎಂದು ಅರಿತ ಬ್ರಿಟಿಷರು ಕುತಂತ್ರದಿಂದ ಅವನನ್ನು ಹಿಡಿಯಲು ಮುಂದಾಗುತ್ತಾರೆ.

ರಾಯಣ್ಣನ ಬಂಧನ

ರಾಯಣ್ಣನ ದೂರದ ಸಂಬಂಧಿಕರಾದ ಲಿಂಗನಗೌಡ, ವೆಂಕನ ಗೌಡ ಮತ್ತು ಲಕ್ಕಪ್ಪನನ್ನು ಕರೆದು ಹಣದ ಆಸೆಯನ್ನು ತೋರಿಸುತ್ತಾ ಆಗ ಅವರು ರಾಯಣ್ಣನ ಗೆರಿಲ್ಲಾ ಯುದ್ಧಗಳಲ್ಲಿ ಅವನ ಸಂಗಡಿಗರಂತೆ ನಟಿಸಿ ರಾಯಣ್ಣನ ವಿಶ್ವಾಸಗಳಿಸಿಕೊಳ್ಳುತ್ತಾರೆ,  1831ರ ಜನವರಿಯಲ್ಲಿ, ಬ್ರಿಟಿಷರ ವಿರುದ್ಧ ಗೆರಿಲ್ಲಾ ಯುದ್ಧ ನಡೆಸುತ್ತಿದ್ದ ರಾಯಣ್ಣ, ಧಾರವಾಡದ ದೊರಿ ಬೆನಾಚಿಯ ಸಮೀಪದ ಡೋರಿ ಹಳ್ಳದಲ್ಲಿ ಸ್ನಾನ ಮಾಡುವಾಗ ನಿರಾಯುಧನಾಗಿದ್ದ ಸಂದರ್ಭದಲ್ಲಿ ಬಂಧಿತನಾಗುತ್ತಾನೆ.  

ಲಕ್ಕಪ್ಪನು ಬ್ರಿಟಿಷರಿಗೆ ರಾಯಣ್ಣನ ಸ್ಥಳದ ಬಗ್ಗೆ ಮಾಹಿತಿ ನೀಡಿದ್ದನು, ರಾಯಣ್ಣನು ತನ್ನ ಕತ್ತಿಯನ್ನು ತನ್ನ ಚಿಕ್ಕಪ್ಪ ಲಕ್ಷ್ಮಣನಿಗೆ ಒಪ್ಪಿಸಿ ಸ್ನಾನಕ್ಕೆ ತೆರಳಿದ್ದಾಗ, ಲಕ್ಷ್ಮಣನು ಕತ್ತಿಯನ್ನು ಬ್ರಿಟಿಷ್ ಸೈನಿಕರಿಗೆ ನೀಡಿದನು. ಇದರಿಂದ ರಾಯಣ್ಣನನ್ನು ಸುಲಭವಾಗಿ ಬಂಧಿಸಲಾಯಿತು.  ಈ ದ್ರೋಹವು ಬ್ರಿಟಿಷರಿಗೆ ರಾಯಣ್ಣನನ್ನು ಸೆರೆಹಿಡಿಯಲು ಅವಕಾಶ ಕಲ್ಪಿಸಿತು, ರಾಯಣ್ಣನ ಸೆರೆ ಮತ್ತು ಗಲ್ಲಿಗೇರಿಸುವಿಕೆ ಕಿತ್ತೂರಿನ ಸ್ವಾತಂತ್ರ್ಯ ಹೋರಾಟಕ್ಕೆ ದೊಡ್ಡ ಹಿನ್ನಡೆಯಾಯಿತು. ಆದರೆ, ಅವನ ಶೌರ್ಯ ಮತ್ತು ತ್ಯಾಗವು ಕರ್ನಾಟಕದ ಯುವ ಜನರಿಗೆ ಸ್ಫೂರ್ತಿಯಾಗಿದೆ. ರಾಯಣ್ಣನನ್ನು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡದಲ್ಲಿ ಗಲ್ಲಿಗೇರಿಸಲಾಯಿತು. ಆತನ ಜೊತೆಗೆ ಏಳು ಜನ ಅನುಯಾಯಿಗಳಿಗೆ ಮರಣದಂಡನೆಯಾದರೆ, ಆರು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಗಡಿಪಾರು ಮಾಡಲಾಯಿತು.

ರಾಯಣ್ಣನ ಬಲಿದಾನದ ನಂತರ, ಅವರ ಗೆಳೆಯ ಚನ್ನಬಸವಣ್ಣ ಮಾರುವೇಷದಲ್ಲಿ ಅಂತಿಮ ಸಂಸ್ಕಾರವನ್ನು ನೆರವೇರಿಸಿ, ಸಂಗೊಳ್ಳಿಯಲ್ಲಿ ಆಲದ ಮರವನ್ನು ನೆಟ್ಟರು. ಈ ಮರ ಇಂದಿಗೂ ರಾಷ್ಟ್ರೀಯ ವೃಕ್ಷವಾಗಿ ದೇಶಭಕ್ತರಿಗೆ ಸ್ಪೂರ್ತಿಯ ಸಂಕೇತವಾಗಿದೆ. ರಾಯಣ್ಣನ ಹೋರಾಟವು ಯುವಜನರಿಗೆ ಸ್ಫೂರ್ತಿಯಾಗಿದ್ದರೂ, ಇತಿಹಾಸದಲ್ಲಿ ಅವರಿಗೆ ಸರಿಯಾದ ಸ್ಥಾನಮಾನ ದೊರೆತಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ. ಭಾರತದಲ್ಲಿ ಸ್ವಾತಂತ್ರ್ಯವೀರರನ್ನು ಜಾತಿಯ ಆಧಾರದಲ್ಲಿ ಗುರುತಿಸುವುದು ದುರದೃಷ್ಟಕರವಾಗಿದೆ.

ಬೆಂಗಳೂರಿನ ರೈಲು ನಿಲ್ದಾಣಕ್ಕೆ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಎಂದು ಹೆಸರಿಡಲಾಗಿದೆ. 1967 ಮತ್ತು 2012ರಲ್ಲಿ ರಾಯಣ್ಣನ ಜೀವನಾಧಾರಿತ ಚಲನಚಿತ್ರಗಳು ಬಿಡುಗಡೆಯಾಗಿ, ಅವರ ಕೀರ್ತಿಯನ್ನು ಜನರಿಗೆ ತಲುಪಿಸಿವೆ. ರಾಯಣ್ಣನ ಒಗ್ಗಟ್ಟಿನ ಚೈತನ್ಯವು ಇಂದಿಗೂ ದೇಶದ ಯುವಕರಿಗೆ ದಾರಿದೀಪವಾಗಿದೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »