ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಸಂದರ್ಶನ | ‘ವನ್ಯ ಜೀವಿ ಸಂಘರ್ಷ ತಗ್ಗಿಸಲು ನೀತಿ ರೂಪಿಸುವದಷ್ಟೇ ಅಲ್ಲ, ಪಾಲಿಸುವುದು ಮುಖ್ಯ’

ಕರ್ನಾಟಕದ ಪ್ರಮುಖ ವನ್ಯಜೀವ ಸಂರಕ್ಷಕರಾದ ಸಂಜಯ್ ಗುಬ್ಬಿ, ವನ್ಯಜೀವಿಗಳು ಮತ್ತು ಮಾನವನ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಹತ್ವದ ಕೆಲಸಗಳನ್ನು ಮಾಡಿರುವವರು.
Sanjay Gubbi Interview

ಕರ್ನಾಟಕದ ಪ್ರಮುಖ ವನ್ಯಜೀವಿ ಸಂರಕ್ಷಕರಾದ ಸಂಜಯ್ ಗುಬ್ಬಿ, ವನ್ಯಜೀವಿಗಳು ಮತ್ತು ಮಾನವನ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಹತ್ವದ ಕೆಲಸಗಳನ್ನು ಮಾಡಿರುವವರು. ಇತ್ತೀಚೆಗೆ ಕರ್ನಾಟಕದ ಎರಡು ಭಾಗಗಳಲ್ಲಿ ಸಾಮಾನ್ಯ ಜನರ ಮೇಲೆ ನಡೆದ ಪ್ರಾಣಿ ದಾಳಿ ಆತಂಕ ಹುಟ್ಟಿಸಿತು. ಈ ಘಟನೆಗಳನ್ನು ಕುರಿತು ಸಂಜಯ್‌ ಗುಬ್ಬಿ ಅವರು ಸಮಾಚಾರ.ಕಾಮ್‌ನೊಂದಿಗೆ ತಮ್ಮ ಒಳನೋಟಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಶೃಂಗೇರಿ ಪ್ರದೇಶದಲ್ಲಿ ಆನೆಯ ದಾಳಿ ಹಾಗೂ ಸರಗೂರಿನಲ್ಲಿ ನಡೆದ ಹುಲಿ ದಾಳಿಯಿಂದ ಮುಗ್ದ ರೈತರು ಜೀವ ಕಳೆದುಕೊಂಡರು. ನೀವು ಈ ಘಟನೆಗಳನ್ನು ಹೇಗೆ ನೋಡುತ್ತೀರಿ? ಇವು ಪ್ರತ್ಯೇಕ ಘಟನೆಗಳೆ, ಅಥವಾ ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಒಂದು ಮಾದರಿಯ ಭಾಗವೇ?

ಕರ್ನಾಟಕದಲ್ಲಿ ಮಾನವ-ವನ್ಯಜೀವಿ ಸಂಘರ್ಷ ದಿನೇ ದಿನೇ ಏರುತ್ತಿದೆ. ಇದಕ್ಕೆ ಕಾರಣಗಳು ಹಲವಾರು. ಆದರೆ ಇದರಿಂದ ಜನ ಮತ್ತು ವನ್ಯಜೀವಿಗಳಿಗೆ ಸಾಕಷ್ಟು ನಷ್ಟವಾಗುತ್ತಿದೆ. ನಾವು ಈ ಸಂಘರ್ಷವನ್ನು ತಾಳಿಕೆಯ ಮಟ್ಟಕ್ಕೆ ತರದಿದ್ದರೆ ವನ್ಯಜೀವಿ ಸಂರಕ್ಷಣೆಗೆ ಸಮಾಜದಲ್ಲಿ ಇದ್ದ ಸಣ್ಣ ಪ್ರಮಾಣದ ಬೆಂಬಲವನ್ನು ಕಳೆದುಕೊಳ್ಳತ್ತೇವೆ.  

ಕಳೆದ ಒಂದು ದಶಕದಲ್ಲಿ ವನ್ಯಜೀವಿ – ಮಾನವ ಸಂಘರ್ಷದ ಪ್ರಮಾಣ ಏರಿಕೆಯಾದಂತೆ ಕಾಣುತ್ತಿದೆ. ಆನೆ, ಚಿರತೆ, ಹುಲಿ ಇತ್ಯಾದಿ ಪ್ರಾಣಿಗಳೊಂದಿಗೆ ಉಂಟಾಗುವ ಸಂಘರ್ಷದ ಬಗ್ಗೆ ಯಾವುದಾದರೂ ಅಂಕಿಅಂಶಗಳು ಅಥವಾ ಪ್ರವೃತ್ತಿ ವಿಶ್ಲೇಷಣೆಗಳಿವೆಯೆ? ಇದರ ಪ್ರಮುಖ ಪರಿಸರ ಅಥವಾ ಆಡಳಿತಾತ್ಮಕ ಕಾರಣಗಳೇನು?

ಅಂಕಿ ಅಂಶಗಳು ನಿಮಗೆ ಅರಣ್ಯ ಇಲಾಖೆಯಲ್ಲಿ ದೊರಕುತ್ತವೆ. ಪ್ರತಿ ವನ್ಯಜೀವಿ ಪ್ರಬೇಧದ ಸಂಘರ್ಷಕ್ಕೆ ಕಾರಣಗಳು ಮತ್ತು ಪರಿಹಾರ ಮಾರ್ಗಗಳು ಬೇರೆಯಾಗುತ್ತವೆ. ಪರಿಹಾರಗಳು ಕೆಲವೊಮ್ಮೆ ಆಯಾ ಪ್ರದೇಶಕ್ಕೆ ಅನುಗುಣವಾಗಿರುತ್ತವೆ.

ಆನೆ ಮತ್ತು ಹುಲಿ ಸಂಘರ್ಷ- 

ಇವುಗಳ ಸಂಖ್ಯೆ ಏರಲು ಪ್ರಮುಖವಾದ ಕಾರಣ ನಾವು ಅವುಗಳ ನೈಸರ್ಗಿಕ ಆವಾಸಸ್ಥಾನಗಳನ್ನು ನಿರ್ವಹಿಸುತ್ತಿರುವ ಬಗೆ. ನಾವು ಸಂಘರ್ಷವನ್ನು ಪೂರ್ವಯೋಜಿತವಾಗಿ ಕಡಿಮೆಗೊಳಿಸಲು ಯೋಜನಾ ಕಾರ್ಯಕ್ರಮಗಳನ್ನು ನಿಯೋಜಿಸುವ ಬದಲು ಪ್ರತಿಕ್ರಿಯಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನ್ಯಾಯಾಲಯದ ಆದೇಶ, ತಜ್ಞರ ಸಲಹೆಗಳು, ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ ಸಂಘರ್ಷದ ಯೋಜನೆಗಳನ್ನು ರೂಪಿಸಿ ಅಳವಡಿಸಿಕೊಳ್ಳುತ್ತಿದ್ದೇವೆ ಹಾಗಾಗಿ ನಮ್ಮ ಕ್ರಮಗಳು ಬೇಕಾದ ಫಲಿತಾಂಶಗಳನ್ನು ನೀಡುತ್ತಿಲ್ಲ.   

ಚಿರತೆ ಸಂಘರ್ಷ-

ಇದು ಎಲ್ಲ ಆವಾಸಸ್ಥಾನಗಳಲ್ಲೂ ಬದುಕಬಲ್ಲ ಪ್ರಾಣಿ, ಹಾಗಾಗಿ ಜನವಸತಿ ಪ್ರದೇಶಗಳಲ್ಲೂ ಕಾಣಿಸಿಕೊಳ್ಳುತ್ತದೆ. ಇಂತಹ ಪ್ರದೇಶಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಬೇಕು. 

ಜಾನುವಾರುಗಳನ್ನು ರಕ್ಷಿಸುವಲ್ಲಿ ಹೆಚ್ಚಿನ ಒತ್ತು ನೀಡಬೇಕು. ಚಿರತೆಗಳ ನೈಸರ್ಗಿಕ ಆಹಾರದ ಬೇಟೆ ಅತಿಯಾಗಿ ನಡೆಯುತ್ತಿದೆ, ಅದನ್ನು ನಿಲ್ಲಿಸಬೇಕು. 

ಅರಣ್ಯ ನಾಶ, ಅಕ್ರಮ ಅರಣ್ಯ ಚಟುವಟಿಕೆಗಳು, ಮತ್ತು ಅರಣ್ಯ ಪ್ರದೇಶಗಳಲ್ಲಿ ನಡೆಯುವ ಮೂಲಸೌಕರ್ಯ ಯೋಜನೆಗಳು ಪ್ರಾಣಿಗಳ ಚಲನವಲನ ಮತ್ತು ವರ್ತನೆಗೆ ಪರಿಣಾಮ ಬೀರುತ್ತಿವೆಯೇ?

ಖಂಡಿತ. ಅವುಗಳ ಆವಾಸಸ್ಥಾನವನ್ನು ನಾಶಪಡಿಸಿದರೆ ಸಂಘರ್ಷ ಖಂಡಿತ ಹೆಚ್ಚುತ್ತದೆ. ನಮ್ಮ ದೊಡ್ಡ ಅಭಿವೃದ್ಧಿ ಯೋಜನೆಗಳನ್ನು (ಶರಾವತಿ ಪಂಪ್ಡ್ ಸ್ಟೋರೇಜ್, ಹೊಸ ಹೆದ್ದಾರಿಗಳು, ಇನ್ನಿತರ) ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನ, ಹುಲಿ ಸಂರಕ್ಷಣಾ ಪ್ರದೇಶಗಳಿಂದ ಹೊರಗಿಡಬೇಕು.

ಸಾಮಾನ್ಯವಾಗಿ ಆನೆಗಳು, ಹುಲಿಗಳು ಮನುಷ್ಯರ ವಾಸ ಪ್ರದೇಶಗಳತ್ತ ಸುಳಿಯುವುದಿಲ್ಲ. ಈಗ ಅವುಗಳು ಹಳ್ಳಿಗಳತ್ತ ಬರುತ್ತಿರುವುದನ್ನುನೋಡಿದರೆ ಯಾವುದೋ ಬದಲಾವಣೆ ಇದರ ಹಿಂದೆ ಕೆಲಸ ಮಾಡಿದೆ ಅನ್ನಿಸುತ್ತದೆ. ಹೌದೆ? 

ರಾಜ್ಯದ ಎರಡು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಮಾತ್ರ ನಿರಂತರವಾಗಿ ಹುಲಿಗಳ ಹೆಚ್ಚಾಗುತ್ತಿದೆ, ಆದರೆ ಹುಲಿಗಳ ನೈಸರ್ಗಿಕ ಆವಾಸಸ್ಥಾನ ಅದಕ್ಕೆ ಅನುಗುಣವಾಗಿ ಹೆಚ್ಚುತ್ತಿಲ್ಲ. ಹಾಗಾಗಿ ಹೆಚ್ಚಿನ ಸಂಖ್ಯೆಯ ಹುಲಿಗಳು ಕೃಷಿಭೂಮಿ, ಹಳ್ಳಗಳ ಪೊದೆಗಳಲ್ಲಿ ಆವಾಸಸ್ಥಾನ ಕಂಡುಕೊಳ್ಳುತ್ತಿವೆ. ಅಲ್ಲಿ ಕಾಡು ಹಂದಿ, ಜಾನುವಾರುಗಳ ಸಿಕ್ಕುವುದರಿಂದ ಹುಲಿಗಳಿಗೆ ಅಲ್ಲಿ ವಾಸಿಸಲು ಸಹಕಾರಿಯಾಗುತ್ತಿದೆ. ಈ ಹಿನ್ನಲೆಯಲ್ಲಿ ಹುಲಿ ಯೋಜನಾ ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆ ಅನೈಸರ್ಗಿಕವಾಗಿ ಹೆಚ್ಚಲು ಕಾರಣವಾದ ಆವಾಸಸ್ಥಾನದ ಮಾರ್ಪಾಡನ್ನು ನಿಲ್ಲಿಸಬೇಕು. 

ಸರ್ಕಾರದ ಮಟ್ಟದಲ್ಲಿ ಹಲವು ವನ್ಯಜೀವಿ ಸಂರಕ್ಷಣಾ ಹಾಗೂ ಸಂಘರ್ಷ ನಿವಾರಣಾ ನೀತಿಗಳು ಅಸ್ತಿತ್ವದಲ್ಲಿವೆ. ಪರಿಸರ ಸೂಕ್ಷ್ಮ ವಲಯಗಳು, ಪರಿಹಾರ ಯೋಜನೆಗಳು, ಮುನ್ಸೂಚನಾ ವ್ಯವಸ್ಥೆಗಳು ಇತ್ಯಾದಿ. ಇವು ಅರಣ್ಯ ಮಟ್ಟದ ಕಾರ್ಯಚರಣೆಯಲ್ಲಿ ಎಷ್ಟು ಪರಿಣಾಮಕಾರಿಯಾಗಿವೆ? 

ವನ್ಯಜೀವಿ ಕಾಯ್ದೆ, ನೀತಿ ನಿಯಮಗಳಲ್ಲಿ ನಮ್ಮ ದೇಶ ತುಂಬಾ ಮುಂದಿದೆ. ಆದರೆ ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಾವು ನಿಷ್ಪಲವಾಗಿದ್ದೇವೆ. 

ನಮ್ಮ ವನ್ಯಜೀವಿ ನಿರ್ವಹಣಾ ವ್ಯವಸ್ಥೆಯಲ್ಲಿ ವೈಫಲ್ಯ ಎಲ್ಲಿ ಕಾಣಿಸುತ್ತದೆ — ನೀತಿ ರೂಪಿಸುವಿಕೆಯಲ್ಲೋ, ಅವುಗಳನ್ನು ಜಾರಿಗೆ ತರುವುದರಲ್ಲೋ, ಅಥವಾ ಸ್ಥಳೀಯ ಸಮುದಾಯದ ಸಂಪರ್ಕದ ಕೊರತೆಯಲ್ಲೋ?

ಜಾರಿಗೊಳಿಸುವಲ್ಲಿ ಮತ್ತು ಸ್ಥಳೀಯ ಸಮುದಾಯದವರೊಡನೆ ಉತ್ತಮ ಸಂಪರ್ಕವಿಟ್ಟುಕೊಳ್ಳುವಲ್ಲಿ ವಿಫಲವಾಗಿದ್ದೇವೆ. 

ಸ್ಥಳೀಯ ಸಮುದಾಯಗಳು ಸಂಘರ್ಷ ನಿವಾರಣೆಯಲ್ಲಿ ಅಥವಾ ನಿರ್ವಹಣೆಯಲ್ಲಿ ಯಾವ ರೀತಿಯ ಪಾತ್ರವಹಿಸಬಹುದು? ಕರ್ನಾಟಕದಲ್ಲಿ ಅಥವಾ ಇತರ ರಾಜ್ಯಗಳಲ್ಲಿ ಯಶಸ್ವಿಯಾದ ಮಾದರಿಗಳು ಯಾವುದಿವೆ?

ತುರ್ತು ಪರಿಸ್ಥಿತಿಗಳಲ್ಲಿ ಜನ ಗುಂಪುಗೂಡಬಾರದು ಆನೆ ಕಂದಕ, ಸೋಲಾರ್ ತಂತಿ ಬೇಲಿಗಳ ನಿರ್ವಹಣೆಯ ಜವಾಬ್ದಾರಿಯನ್ನು ಸ್ಥಳೀಯ ಜನರಿಗೆ ಗ್ರಾಮ ಪಂಚಾಯತಿಗಳ ಮೂಲಕ ಕೊಡಬಹುದು.

ಇದನ್ನೂ ಓದಿ | ಐಕನ್ನಡ | 8 ವರ್ಷದ ಸುದೀರ್ಘ ಪಯಣ: ಹರೀಶ್ ಬಿಜೂರ್ ಸಂದರ್ಶನ

ಕೊನೆಯದಾಗಿ, ಇಂತಹ ದುರಂತ ಘಟನೆಗಳನ್ನು ಕಡಿಮೆಮಾಡಲು ಮತ್ತು ವನ್ಯಜೀವಿ ಸಂರಕ್ಷಣೆ–ಗ್ರಾಮೀಣ ಸುರಕ್ಷತೆ ಎರಡನ್ನೂ ಕಾಯ್ದುಕೊಳ್ಳಲು, ಶಾಸನ ರೂಪಿಸುವವರಿಗೆ ನೀವು ಯಾವ ರೀತಿಯ ತಕ್ಷಣದ ಹಾಗೂ ದೀರ್ಘಕಾಲದ ಪರಿಹಾರಗಳಿಗೆ ಸಲಹೆ ನೀಡಲು  ಬಯಸುತ್ತೀರಿ?

ಶಾಸನ, ನೀತಿ ನಿಯಮಾವಳಿಗಳನ್ನು ರೂಪಿಸುವುದು ಎಷ್ಟು ಮುಖ್ಯವೋ ಅವುಗಳನ್ನು ನಿಯಮಿತವಾಗಿ, ಚಾಚೂತಪ್ಪದೆ ಅಳವಡಿಸುವುದು ಅಷ್ಟೇ ಮುಖ್ಯ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಮುಂದೆ ಓದಿ »

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಮುಂದೆ ಓದಿ »

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಮುಂದೆ ಓದಿ »