ಸಾಮಾಜಿಕ ಜಾಲತಾಣದಲ್ಲಿ ತಾರಕ್ಕೇರಿದ ಸಿಎಂ- ಡಿಸಿಎಂ ಕುರ್ಚಿ ಕದನ?

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಸಿಎಂ ಕುರ್ಚಿ ಕದನ ಈಗ ಸಾಮಾಜಿಕ ಜಾಲತಾಣದಲ್ಲಿ ತಾರಕಕ್ಕೇರಿದೆ.
Karnataka CM Battle
ಚಿತ್ರ ಕೃಪೆ : ND TV

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿ ಕದನ ಈಗ ಸಾಮಾಜಿಕ ಜಾಲತಾಣದಲ್ಲಿ ತಾರಕಕ್ಕೇರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ‘ಕೊಟ್ಟ ಮಾತು’ ಸಮರ ನವೆಂಬರ್ 27ರ ಬುಧವಾರ ಸಂಜೆಯಿಂದ ಆರಂಭವಾಯಿತು. ಒಂದೇ ದಿನದಲ್ಲಿ ಇಬ್ಬರೂ ತಮ್ಮ ಎಕ್ಸ್‌ ಖಾತೆಯಲ್ಲಿ ಪರಸ್ಪರ ಟಾಂಗ್‌ ಕೊಡುವ ಪೋಸ್ಟ್‌ಗಳನ್ನು ಹಾಕಿ ರಾಜ್ಯ ರಾಜಕಾರಣವನ್ನೇ ಬಿಸಿಮಾಡಿದ್ದಾರೆ.

ಮೊದಲು ಡಿ.ಕೆ. ಶಿವಕುಮಾರ್  ಅವರು ತಮ್ಮ ಎಕ್ಸ್‌ (ಟ್ವಿಟರ್‌) ಸಾಮಾಜಿಕ ಜಾಲತಾಣದಲ್ಲಿ “ಕೊಟ್ಟ ಮಾತು ಉಳಿಸಿಕೊಳ್ಳುವುದೇ ಜಗತ್ತಿನ ಅತ್ಯಂತ ದೊಡ್ಡ ಶಕ್ತಿ. ನ್ಯಾಯಾಧೀಶರಾಗಲೀ, ರಾಷ್ಟ್ರಪತಿಗಳಾಗಲೀ, ನಾನಾಗಲೀ – ಎಲ್ಲರೂ ಕೊಟ್ಟ ಮಾತಿಗೆ ಬದ್ಧರಾಗಿರಬೇಕು.” ಎಂದು ಬರೆದಿದ್ದರು.

ಈ ಒಂದು ವಾಕ್ಯವೇ ಸಾಕಾಯಿತು – 2023ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಮಾಡಿಕೊಂಡ ‘ಎರಡೂವರೆ + ಎರಡೂವರೆ ವರ್ಷ’ ಒಪ್ಪಂದದ ಕಡೆಯ ಆರು ತಿಂಗಳು ಬಾಕಿ ಇರುವಾಗಲೇ ಡಿ.ಕೆ.ಶಿ ಬೆಂಬಲಿಗರಲ್ಲಿ ಜೋಷ ತುಂಬಿತು.

ಇದಕ್ಕೆ ತಕ್ಷಣವೇ ಸಿದ್ದರಾಮಯ್ಯ ಪ್ರತಿಕ್ರಿಯೆ ಎನ್ನುವಂತೆ ಅವರ ಎಕ್ಸ್‌ ಖಾತೆಯಲ್ಲಿ “ರಾಜ್ಯದ ಜನತೆಗೆ ನಾವು ಕೊಟ್ಟ ಮಾತು ಕೇವಲ ಘೋಷಣೆ ಅಲ್ಲ, ಅದು ನಮಗೆ ಜಗತ್ತು. ಮಾತು ಎಂದರೆ ಶಕ್ತಿ ಅಲ್ಲ, ಜನರ ಹಿತಕ್ಕಾಗಿ ಲೋಕವನ್ನು ಉತ್ತಮಗೊಳಿಸಿದಾಗ ಮಾತ್ರ ಅದು ಶಕ್ತಿಯಾಗುತ್ತದೆ.”

ಜೊತೆಗೆ ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ಎಣಿಸಿದರು – “ಶಕ್ತಿ ಯೋಜನೆಯಡಿ ಮಹಿಳೆಯರಿಗೆ 600 ಕೋಟಿಗೂ ಹೆಚ್ಚು ಉಚಿತ ಪ್ರಯಾಣ, ಮೊದಲ ತಿಂಗಳಿನಿಂದಲೇ ಭರವಸೆಗಳನ್ನು ಕಾರ್ಯರೂಪಕ್ಕೆ ತಂದಿದ್ದೇವೆ. ಮಾತಿನಲ್ಲಿ ಅಲ್ಲ, ಕೆಲಸದಲ್ಲಿ.”

ಸಿದ್ದರಾಮಯ್ಯ ಇನ್ನಷ್ಟು ಮುಂದೆ ಹೋಗಿ ಅಂಕಿಅಂಶಗಳನ್ನೂ ನೀಡಿದರು:

  • 2013-18ರ ಅವಧಿಯಲ್ಲಿ 165 ಭರವಸೆಗಳಲ್ಲಿ 157 ಈಡೇರಿಕೆ
  • ಪ್ರಸಕ್ತ ಅವಧಿಯಲ್ಲಿ 593 ಭರವಸೆಗಳಲ್ಲಿ ಈಗಾಗಲೇ 243ಕ್ಕೂ ಹೆಚ್ಚು ಈಡೇರಿಕೆ “ಉಳಿದ ಎಲ್ಲವನ್ನೂ ಬದ್ಧತೆಯಿಂದ ಈಡೇರಿಸುತ್ತೇವೆ. ಕರ್ನಾಟಕದ ಜನರು ನೀಡಿದ ಜನಾದೇಶ 5 ವರ್ಷಗಳದ್ದು, ಒಂದು ಕ್ಷಣದ್ದಲ್ಲ” ಎಂದು ಡಿ.ಕೆ.ಶಿ ಬಳಸಿದ ‘ಜಗತ್ತು’ ಪದವನ್ನೇ ತಿರುಗಿಸಿ ಉಪಯೋಗಿಸಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಯಿತು.

ಈ ಪೋಸ್ಟ್‌ ತರ್ಕ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಬೆಂಬಲಿಗರು “2.5 ವರ್ಷದ ಒಪ್ಪಂದ ಮುಗಿಯುತ್ತಿದೆ, ಮಾತು ಉಳಿಸಬೇಕು” ಎಂದು ಒತ್ತಡ ಹೇರತೊಡಗಿದ್ದಾರೆ. ಆದರೆ ಸಿದ್ದರಾಮಯ್ಯ ಬಣ “ಗ್ಯಾರಂಟಿ ಯೋಜನೆಗಳ ಯಶಸ್ಸಿನ ಮಧ್ಯೆ ಸರ್ಕಾರ ಬದಲಿಸುವುದು ಜನವಿರೋಧಿ” ಎಂದು ಪ್ರತಿಯಾಗಿ ವಾದಿಸುತ್ತಿದೆ.

ಇದನ್ನೂ ಓದಿ | ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಡಿಕೆಶಿ

ದೆಹಲಿಯ ಹೈಕಮಾಂಡ್‌ ಈಗಾಗಲೇ ಡಿ.ಕೆ. ಶಿವಕುಮಾರ್‌ಗೆ “ಸ್ಥಿರತೆ ಕಾಯ್ದುಕೊಳ್ಳಿ, ಸಮಯ ಬಂದಾಗ ಚರ್ಚಿಸೋಣ” ಎಂಬ ಸಂದೇಶ ಕಳುಹಿಸಿದೆ ಎನ್ನಲಾಗಿದೆ. ಆದರೆ ಈ  ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ನ ಒಳಗಿನ ಒಡಕು ಸಾರ್ವಜನಿಕವಾಗಿ ಬಯಲಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ಸಾರ್ವಜನಿಕ ವ;ಯದಲ್ಲಿ ಚರ್ಚೆಯಾಗುತ್ತಿದೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »