ವಕ್ಫ್ ನೋಂದಣಿಗೆ ಇಂದು ಕೊನೆ ದಿನ, ವಿಸ್ತರಣೆ ಇಲ್ಲ : ಕಿರಣ್ ರಿಜಿಜು

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಕೇಂದ್ರೀಯ ಪೋರ್ಟಲ್‌ನಲ್ಲಿ ವಕ್ಫ್ ಆಸ್ತಿಗಳ ಕಡ್ಡಾಯ ನೋಂದಣಿಗೆ ನೀಡಿದ್ದ ಆರು ತಿಂಗಳ ಗಡುವು ಇಂದು ಮುಕ್ತಾಯಗೊಳ್ಳುತ್ತಿದೆ.
 Waqf Amendment Act  

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಉಮೀದ್ (UMEED – Unified Waqf Management, Empowerment, Efficiency and Development) ಕೇಂದ್ರೀಯ ಪೋರ್ಟಲ್‌ನಲ್ಲಿ ವಕ್ಫ್ ಆಸ್ತಿಗಳ ಕಡ್ಡಾಯ ನೋಂದಣಿಗೆ ನೀಡಿದ್ದ ಆರು ತಿಂಗಳ ಗಡುವು ಇಂದು ಮುಕ್ತಾಯಗೊಳ್ಳುತ್ತಿದೆ. ವಕ್ಫ್ (ತಿದ್ದುಪಡಿ) ಕಾಯ್ದೆ-2025ರಡಿ ಜೂನ್ 6ರಿಂದ ಆರಂಭವಾದ ಈ ಪ್ರಕ್ರಿಯೆಯಲ್ಲಿ ಈವರೆಗೆ ಸುಮಾರು 4.6 ಲಕ್ಷ ವಕ್ಫ್ ಆಸ್ತಿಗಳ ವಿವರಗಳನ್ನು ಅಪ್‌ಲೋಡ್ ಮಾಡಲಾಗಿದೆ ಎಂದು ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

“ಕಾಯ್ದೆಯ ನಿಬಂಧನೆಗಳು ಮತ್ತು ಸುಪ್ರೀಂ ಕೋರ್ಟ್‌ನ ಸ್ಪಷ್ಟ ನಿರ್ದೇಶನದ ಕಾರಣದಿಂದ ಗಡುವನ್ನು ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ” ಎಂದು ಸಚಿವ ರಿಜಿಜು ದೃಢವಾಗಿ ಹೇಳಿದ್ದಾರೆ. ಗಡುವಿನೊಳಗೆ ನೋಂದಣಿ ಮಾಡಲು ಸಾಧ್ಯವಾಗದವರು  ವಕ್ಫ್ ನ್ಯಾಯಮಂಡಳಿಯನ್ನು ಸಂಪರ್ಕಿಸಿ ತಮ್ಮ ಕಾರಣಗಳನ್ನು ತಿಳಿಸಬೇಕು. ತೃಪ್ತಿದಾಯಕ ಕಾರಣಗಳಿದ್ದಲ್ಲಿ ನ್ಯಾಯಮಂಡಳಿ ಆರು ತಿಂಗಳವರೆಗೆ ವಿಸ್ತರಣೆ ನೀಡಬಹುದು ಎಂಬ ಅವಕಾಶ ಕಾಯ್ದೆಯಲ್ಲಿ ಇದೆ.

ಆದರೆ ತಾಂತ್ರಿಕ ತೊಂದರೆಗಳು, ಪುರಾತನ ದಾಖಲೆಗಳ ಕೊರತೆ, ಪೋರ್ಟಲ್‌ನ ನಿಧಾನಗತಿ ಸಮಸ್ಯೆಗಳನ್ನು ಗಮನಿಸಿ ಸಚಿವಾಲಯ ಮಾನವೀಯ ದೃಷ್ಟಿಕೋನದಿಂದ ಮುಂದಿನ ಮೂರು ತಿಂಗಳವರೆಗೆ ಯಾವುದೇ ದಂಡ ವಿಧಿಸುವುದಿಲ್ಲ ಅಥವಾ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಿಲ್ಲ ಎಂಬ ಭರವಸೆ ನೀಡಿದೆ. “ಗಡುವು ಮುಗಿದರೂ ಮುಂದಿನ ಮೂರು ತಿಂಗಳು ದಂಡ ಅಥವಾ ಕ್ರಮ ಇರುವುದಿಲ್ಲ. ಆದರೆ ನೋಂದಣಿ ಪ್ರಯತ್ನಿಸದವರು ನ್ಯಾಯಮಂಡಳಿಗೆ ಹೋಗಬೇಕು” ಎಂದು ರಿಜಿಜು ಸ್ಪಷ್ಟಪಡಿಸಿದ್ದಾರೆ.

 ಉಮೀದ್ ಪೋರ್ಟಲ್ ಎಂದರೇನು?

ಉಮೀದ್ ಪೋರ್ಟಲ್ ವಕ್ಫ್ ಆಸ್ತಿಗಳ ಡಿಜಿಟಲ್ ದಾಖಲೆ, ಜಿಯೋ-ಟ್ಯಾಗಿಂಗ್ ಮತ್ತು ಪಾರದರ್ಶಕ ನಿರ್ವಹಣೆಗಾಗಿ ರಚಿತವಾದ ಒಂದು ಕೇಂದ್ರೀಯ ವೇದಿಕೆಯಾಗಿದೆ. ಇದರಿಂದ ವಕ್ಫ್ ಆಸ್ತಿಗಳ ದುರುಪಯೋಗ ತಡೆಗಟ್ಟಿ, ಬಡ ಮುಸ್ಲಿಂ ಸಮುದಾಯದ ಕಲ್ಯಾಣಕ್ಕೆ ಬಳಕೆ ಮಾಡುವ ಉದ್ದೇಶವಿದೆ ಎಂದು ಸರಕಾರ ಹೇಳಿಕೊಂಡಿದೆ. ಕರ್ನಾಟಕ, ಪಂಜಾಬ್ ಮತ್ತು ಜಮ್ಮು-ಕಾಶ್ಮೀರದಂತಹ ಕೆಲವು ರಾಜ್ಯಗಳಲ್ಲಿ ಉತ್ತಮ ಪ್ರಗತಿ ಕಂಡರೆ, ಉತ್ತರ ಪ್ರದೇಶ, ಬಂಗಾಳ ಸೇರಿದಂತೆ ಇತರೆಡೆ ನಿಧಾನಗತಿ ಕಂಡುಬಂದಿದೆ.

ಇದನ್ನೂ ಓದಿ | ಹಾರದ ವಿಮಾನ : 5ನೇ ದಿನವೂ ‘ಇಂಡಿಗೋ’ ಪ್ರಯಾಣಿಕರ ಗೋಳು!

ಸುಪ್ರೀಂ ಕೋರ್ಟ್ ಕೂಡ ಗಡುವು ವಿಸ್ತರಣೆಗೆ ನಿರಾಕರಿಸಿ, ನ್ಯಾಯಮಂಡಳಿ ಮಾರ್ಗವನ್ನೇ ಸೂಚಿಸಿದೆ. ವಿರೋಧ ಪಕ್ಷಗಳು ಮತ್ತು ಮುಸ್ಲಿಂ ಸಂಘಟನೆಗಳು ಪೋರ್ಟಲ್ ದೋಷಗಳು ಮತ್ತು ಸಮಯ ಕಡಿಮೆಯನ್ನು ಆಧಾರವಾಗಿಟ್ಟು ವಿಸ್ತರಣೆ ಕೋರಿದ್ದವು. ಆದರೆ ಸರಕಾರ ಕಾನೂನಿನ ಚೌಕಟ್ಟಿನೊಳಗೆ ಗರಿಷ್ಠ ಸೌಲಭ್ಯ ನೀಡುತ್ತಿದೆ ಎಂದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ ನೋಂದಣಿ ಮಾಡಲು ಸಾಧ್ಯವಾಗದವರು  ತಕ್ಷಣ ನ್ಯಾಯಮಂಡಳಿಯನ್ನು ಸಂಪರ್ಕಿಸಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಚಿವಾಲಯ ಕರೆ ನೀಡಿದೆ.  

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »