ಈ 17 ಔಷಧಿಗಳನ್ನು ಕಸಕ್ಕೆ ಎಸೆಯದೆ ಫ್ಲಷ್ ಮಾಡಿ: ಸಿಡಿಎಸ್‌ಸಿಒ ಎಚ್ಚರಿಕೆ

ಕೇಂದ್ರ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆಯೂ ಔಷಧಿಯ ಅವಧಿ ಮುಗಿದಿದ್ದರೆ ಕಸದ ಬುಟ್ಟಿಗೆ ಎಸೆಯುವ ಬದಲು ಶೌಚಾಲಯದಲ್ಲಿ ಫ್ಲಷ್ ಮಾಡಬೇಕು ಎಂದು ಹೇಳಿದೆ.
CDSCO Alert: Flush These 17 Expired Drugs Don’t Trash Them

ಅವಧಿ ಮೀರಿದ ಔಷಧಿಗಳನ್ನು ನೀವು ಹೇಗೆ ವಿಲೇವಾರಿ ಮಾಡುತ್ತೀರಿ? ನೀವು ಅವುಗಳನ್ನು ಕಸದ ಬುಟ್ಟಿಗೆ ಎಸೆಯುತ್ತೀರಾ? ಹಾಗಿದ್ದಲ್ಲಿ, ಭಾರತದ ಉನ್ನತ ಔಷಧಿ ನಿಯಂತ್ರಣ ಸಂಸ್ಥೆಯು ಒಂದು ಎಚ್ಚರಿಕೆಯನ್ನು ನೀಡಿದೆ.

ಕೇಂದ್ರ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್ಸಿಒ) ಔಷಧಿಯ ಅವಧಿ ಮುಗಿದಿದ್ದರೆ ಅಥವಾ ಬಳಸದಿದ್ದರೆ ಕಸದ ಬುಟ್ಟಿಗೆ ಎಸೆಯುವ ಬದಲು ಶೌಚಾಲಯಕ್ಕೆ ಎಸೆಯಬೇಕು ಅಥವಾ ಫ್ಲಷ್ ಮಾಡಬೇಕು ಎಂದು ಹೇಳಿದ್ದು. ಅಂತಹ 17 ಔಷಧಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಂತಹ ಔಷಧಿಗಳನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ, ಇವುಗಳು ಜನರು ಮತ್ತು ಪರಿಸರಕ್ಕೆ ಹಾನಿಕಾರಕವಾಗಬಹುದು ಎಂದು ಸಂಸ್ಥೆ ಎಚ್ಚರಿಸಿದೆ.

ಸಿಡಿಎಸ್ಸಿಒ ಪ್ರಕಾರ, ಈ 17ಔಷಧಿಗಳನ್ನು ಶಿಫಾರಸು ಮಾಡಿದ ವ್ಯಕ್ತಿಯನ್ನು ಹೊರತುಪಡಿಸಿ ಬೇರೆ ಯಾರಾದರೂ ತೆಗೆದುಕೊಂಡರೆ, ಕೇವಲ ಒಂದು ಡೋಸ್ನಲ್ಲಿಯೇ ಈ 17ಔಷಧಿಗಳು ಹಾನಿಕಾರಕ ಮತ್ತು ಮಾರಕವಾಗಬಹುದು.

ಪರಿಸರ ಮತ್ತು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಲು ಅವಧಿ ಮೀರಿದ ಅಥವಾ ಬಳಕೆಯಾಗದ ಔಷಧಿಗಳ ವಿಲೇವಾರಿ ಕುರಿತಾದ ತನ್ನ ಮಾರ್ಗದರ್ಶನ ದಾಖಲೆಯಲ್ಲಿ, ಅವಧಿ ಮೀರಿದ ಅಥವಾ ಬಳಸದ ಔಷಧಿಗಳ ಸುರಕ್ಷಿತ ಮತ್ತು ಸರಿಯಾದ ವಿಲೇವಾರಿ ಅಗತ್ಯವಿದೆ ಎಂದು ಹೇಳಿದೆ.

ಯಾವ ಔಷಧಿಗಳನ್ನು ಫ್ಲಷ್ ಮಾಡಬೇಕು?

ಸಿಡಿಎಸ್ಸಿಒ ಪಟ್ಟಿಮಾಡಿರುವ 17ಔಷಧಿಗಳಲ್ಲಿ ಹೆಚ್ಚಿನವು ಮಾದಕ ಔಷಧಿಗಳು. ಇವುಗಳನ್ನು ಚರಂಡಿಗೆ ಎಸೆಯಬೇಕು. ಇವುಗಳನ್ನು ಕಸದ ಬುಟ್ಟಿಗೆ ಎಸೆಯಬಾರದು.

ಪ್ರಬಲ ಒಪಿಯಾರ್ಡಗಳು, ಸೈಕೋ ಟ್ರೋಫಿಕ್ ರಾಸಾಯನಿಕಗಳಿರುವ ಫೆಂಟನಿಲ್, ಟ್ರಾಮಾಡಾಲ್, ಮಾರ್ಫಿನ್ ಸಲ್ಪೇಟ್, ಬುಪ್ರೆನಾರ್ಫಿನ್, ಮೀಥೈಲ್ಪಿನಿಡೇಟ್, ಟ್ಯಾಪೆಂಟಾಡಾಲ್, ಆಕ್ಸಿಕೊಡೋನ್ ಮತ್ತು ಡಯಾಜೆಪಮ್ ಸೇರಿ 17 ಔಷಧಗಳಿಗೆ ಇದು ಅನ್ವಯ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »