ರಾಹುಲ್ ಮತಗಳ್ಳತನ ಆರೋಪ: ಹುಚ್ಚುತನ ಎಂದ ಮಾಡೆಲ್‌ ಲಾರಿಸ್ಸಾ

ರಾಹುಲ್ ಗಾಂಧಿ ಅವರ ಮತಗಳ್ಳತನ ಆರೋಪಕ್ಕೆ ಪ್ರತಿಕ್ರಿಯಿಸಿದ, ಬ್ರೆಜಿಲಿಯನ್ ಮಾಡೆಲ್ ಲಾರಿಸ್ಸಾ ಬೊನೆಸಿ ತನ್ನ ಹಳೆಯ ಸ್ಟಾಕ್ ಫೋಟೋವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
Rahul Gandhi Larissa Bonesi
ಚಿತ್ರ ಕೃಪೆ : Free Press Journal

ರಾಹುಲ್ ಗಾಂಧಿ ಅವರ ‘ಹೆಚ್ ಫೈಲ್ಸ್’ ಪತ್ರಿಕಾಗೋಷ್ಠಿಯಲ್ಲಿ ಹರಿಯಾಣ ಚುನಾವಣೆಯಲ್ಲಿ ಭಾರೀ ಮತಗಳ ಕಳ್ಳತನ ನಡೆದಿದೆ ಎಂದು ಆರೋಪಿಸಿ, ಬ್ರೆಜಿಲಿಯನ್ ಮಾಡೆಲ್ ಲಾರಿಸ್ಸಾ ಬೊನೆಸಿ ಅವರ ಫೋಟೋವನ್ನು 22 ಬಾರಿ ಬಳಸಿ ನಕಲಿ ಮತದಾರರನ್ನಾಗಿ ಮಾಡಲಾಗಿದೆ ಎಂದು ಹೇಳಿದ್ದರು. ಈ ಆರೋಪಕ್ಕೆ ಲಾರಿಸ್ಸಾ ತೀವ್ರ ಆಘಾತ ವ್ಯಕ್ತಪಡಿಸಿ, ತನ್ನ ಹಳೆಯ ಸ್ಟಾಕ್ ಫೋಟೋವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ವಿಷಯ ಇಡೀ ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ನವೆಂಬರ್ 5, 2025ರಂದು ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ‘ಹೆಚ್ ಫೈಲ್ಸ್’ ಎಂಬ ಹೆಸರಿನಲ್ಲಿ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಚುನಾವಣಾ ಆಯೋಗ ಸಹಕಾರದಿಂದ 25 ಲಕ್ಷ ನಕಲಿ ಮತಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಿದರು.

ಹರಿಯಾಣದಲ್ಲಿ ಒಟ್ಟು 2 ಕೋಟಿ ಮತದಾರರಿದ್ದು, ಅದರಲ್ಲಿ 25 ಲಕ್ಷ (ಸುಮಾರು 12%) ನಕಲಿ ಎಂದು ಹೇಳಿದರು. ಇದರಲ್ಲಿ 5,21,619 ಡೂಪ್ಲಿಕೇಟ್ ಮತದಾರರು, 93,174 ಅಮಾನ್ಯ ವಿಳಾಸಗಳು, 19,26,351 ಬಲ್ಕ್ ಮತದಾರರು ಸೇರಿದ್ದಾರೆ ಎಂದು ದಾಖಲೆಗಳೊಂದಿಗೆ ತೋರಿಸಿದರು.

ವಿಶೇಷವಾಗಿ ರಾಯ್ ಕ್ಷೇತ್ರದಲ್ಲಿ ಬ್ರೆಜಿಲಿಯನ್ ಮಹಿಳೆಯ ಫೋಟೋವನ್ನು ಸೀಮಾ, ಸ್ವೀಟಿ, ಸರಸ್ವತಿ ಎಂಬ ಹೆಸರುಗಳಲ್ಲಿ 10 ಬೂತ್‌ಗಳಲ್ಲಿ 22 ಬಾರಿ ಬಳಸಲಾಗಿದೆ ಎಂದು ಉದಾಹರಣೆ ನೀಡಿದರು. ಇದರಿಂದ ಕಾಂಗ್ರೆಸ್ 8 ಸೀಟುಗಳಲ್ಲಿ 22,779 ಮತಗಳ ಅಂತರದಿಂದ ಸೋತಿದೆ ಎಂದರು. ‘ಆಪರೇಷನ್ ಸರ್ಕಾರ್ ಚೋರಿ’ ಎಂಬ ಯೋಜಿತ ಕಾರ್ಯಾಚರಣೆ ನಡೆಸಿ ಕಾಂಗ್ರೆಸ್‌ನ ಭರ್ಜರಿ ಗೆಲುವನ್ನು ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿದರು.

ಬ್ರೆಜಿಲಿಯನ್ ಮಾಡೆಲ್ ಲಾರಿಸ್ಸಾ ಬೊನೆಸಿ ಪ್ರತಿಕ್ರಿಯೆ:

ಈ ಆರೋಪದ ನಂತರ ಬ್ರೆಜಿಲಿಯನ್ ಮಾಡೆಲ್ ಲಾರಿಸ್ಸಾ ಬೊನೆಸಿ ಅವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಸ್ಪಷ್ಟನೆ ನೀಡಿದ್ದಾರೆ. “ನಮಸ್ಕಾರ ಭಾರತ, ನನ್ನ ಹೆಸರು ಲಾರಿಸ್ಸಾ. ನನಗೆ ಭಾರತೀಯ ರಾಜಕಾರಣದೊಂದಿಗೆ ಯಾವುದೇ ಸಂಬಂಧವಿಲ್ಲ. ನಾನು ಎಂದೂ ಭಾರತಕ್ಕೆ ಬಂದಿಲ್ಲ. ನಾನು ಬ್ರೆಜಿಲಿಯನ್ ಡಿಜಿಟಲ್ ಇನ್‌ಫ್ಲುಯೆನ್ಸರ್ ಮತ್ತು ಹೇರ್‌ಡ್ರೆಸ್ಸರ್. ನನ್ನ ಹಳೆಯ ಸ್ಟಾಕ್ ಫೋಟೋವನ್ನು ಖರೀದಿಸಿ ದುರ್ಬಳಕೆ ಮಾಡಲಾಗಿದೆ. ಭಾರತದ ಜನರನ್ನು ವಂಚಿಸಲು ನನ್ನನ್ನು ಭಾರತೀಯಳೆಂದು ತೋರಿಸುತ್ತಿದ್ದಾರೆ, ಇದು ಎಂತಹ ಹುಚ್ಚುತನ? ನಾವು ಯಾವ ಜಗತ್ತಿನಲ್ಲಿ ಬದುಕುತ್ತಿದ್ದೇವೆ?” ಎಂದು ಪ್ರಶ್ನಿಸಿದ್ದಾರೆ. ತನ್ನ ಫೋಟೋ 18-20 ವರ್ಷದಲ್ಲಿರುವಾಗ ತೆಗೆದಿದ್ದು ಎಂದು ಹೇಳಿದ್ದಾರೆ. ಭಾರತೀಯ ಪತ್ರಕರ್ತರು ತನ್ನನ್ನು ಸಂಪರ್ಕಿಸಿ ಸಂದರ್ಶನಕ್ಕೆ ಕರೆದಿದ್ದಾರೆ ಎಂದೂ ತಿಳಿಸಿದ್ದಾರೆ. “ನಾನು ಭಾರತೀಯರನ್ನು ಪ್ರೀತಿಸುತ್ತೇನೆ, ನಮಸ್ತೆ” ಎಂದು ಹೇಳಿ ವಿಡಿಯೋ ಮುಗಿಸಿದ್ದಾರೆ.

ವಿಡಿಯೋ ವೈರಲ್ ಆದ ನಂತರ ಲಾರಿಸ್ಸಾ ಅವರ ಇನ್‌ಸ್ಟಾಗ್ರಾಮ್‌ನಲ್ಲಿ ಸಾವಿರಾರು ಭಾರತೀಯರು ಕಾಮೆಂಟ್ ಮಾಡಿ ಟ್ರೋಲ್ ಮಾಡಿದ್ದಾರೆ. ಕೆಲವರು ಅವರನ್ನು ಶಾರುಖಾನ್ ಮಗ ಅರ್ಯನ್ ಖಾನ್ ಗೆಳತಿ ಎಂದು  ಕಾಮೆಂಟ್ ಮಾಡಿದ್ದಾರೆ. ಆದರೆ ಲಾರಿಸ್ಸಾ ಅವರು ತಮಾಷೆಯಿಂದ “ನಾನು ಭಾರತದಲ್ಲಿ ಫೇಮಸ್ ಆಗಿದ್ದೇನೆ, ಕೆಲವು ಭಾರತೀಯ ಪದಗಳನ್ನು ಕಲಿಯಬೇಕು” ಎಂದಿದ್ದಾರೆ.

ಇದನ್ನೂ ಓದಿ | ಹರಿಯಾಣ : 25 ಲಕ್ಷ ಮತಗಳ್ಳತನ ಬಾಂಬ್‌ ಸಿಡಿಸಿದ ರಾಹುಲ್‌ ಗಾಂಧಿ

ಚುನಾವಣಾ ಆಯೋಗ ಕೂಡ ಈ ಆರೋಪಗಳನ್ನು ತಳ್ಳಿ ಹಾಕಿದ್ದು, ಮತದಾರರ ಪಟ್ಟಿಯಲ್ಲಿ ಯಾವುದೇ ದೂರು ಬಂದಿಲ್ಲ, ಕೇವಲ 22 ಚುನಾವಣಾ ಅರ್ಜಿಗಳು ಮಾತ್ರ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿವೆ ಎಂದಿದೆ. ಕೆಲವು ಮತದಾರರು (ಉದಾ: ಪಿಂಕಿ ಜುಗಿಂದರ್ ಕೌಶಿಕ್) ತಮ್ಮ ವೋಟರ್ ಐಡಿಯಲ್ಲಿ ತಪ್ಪು ಫೋಟೋ ಪ್ರಿಂಟ್ ಆಗಿದೆ ಎಂದು ಹೇಳಿದ್ದಾರೆ, ಇದು ದೀರ್ಘಕಾಲದ ಪ್ರಿಂಟಿಂಗ್ ದೋಷ ಎಂದಿದ್ದಾರೆ.

ಬಿಹಾರ ಚುನಾವಣೆಯ ಮೊದಲು ನಡೆದ ಈ ಘಟನೆ, ರಾಹುಲ್ ಅವರು ಯುವಜನತೆಗೆ ಎಚ್ಚರಿಕೆ ನೀಡಿ, ದೇಶದ ಪ್ರಜಾಪ್ರಭುತ್ವವನ್ನು ಉಳಿಸಬೇಕು ಎಂದು ಕರೆ ನೀಡಿದ್ದಾರೆ. ಆದರೆ ಬಿಜೆಪಿ ಇದನ್ನು ರಾಹುಲ್ ಅವರ ಸುಳ್ಳು ಆರೋಪ ಎಂದು ಕರೆದಿದೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »