“ಕಮ್ಯೂನಿಸ್ಟ್ ಹುಚ್ಚ” ಎಂದಿದ್ದ ಟ್ರಂಪ್‌ನಿಂದಲೇ ಮಮ್ದಾನಿಗೆ ಶ್ಲಾಘನೆ

ನವೆಂಬರ್ 21ರಂದು ವೈಟ್ ಹೌಸ್‌ನ ಓವಲ್ ಆಫೀಸ್‌ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮಮ್ದಾನಿ ಭೇಟಿಯು ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದೆ.
 Zohran Mamdani Trump Meeting 
 Zohran Mamdani & Donald Trump

ನ್ಯೂಯಾರ್ಕ್ ನಗರದ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತೀಯ ಮೂಲದ, ಜೊಹ್ರಾನ್  ಮಮ್ದಾನಿ ಅವರು ನವೆಂಬರ್ 4, 2025ರ ಚುನಾವಣೆಯಲ್ಲಿ ಮೇಯರ್ ಆಗಿ ಆಯ್ಕೆಯಾದರು. 1969ರ ನಂತರದ ಅತಿ ಹೆಚ್ಚು ಮತದಾನ (2 ಮಿಲಿಯನ್‌ಗಿಂತ ಹೆಚ್ಚು) ಮತ್ತು ಯುವ ಮೇಯರ್ ಎಂಬ ದಾಖಲೆಯನ್ನು ಸೃಷ್ಟಿಸಿದ ಈ ಗೆಲುವು ಅಮೆರಿಕದ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.

ಚುನಾವಣಾ ಪ್ರಚಾರದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಮ್ದಾನಿಯನ್ನು “100% ಕಮ್ಯೂನಿಸ್ಟ್ ಲುನ್ಯಾಟಿಕ್”, “ಎಡಪಂಥೀ ಜಿಹಾದಿ”, “ಯಹೂದಿ ವಿರೋಧಿ” ಎಂದು ತೀವ್ರವಾಗಿ ಟೀಕಿಸಿದ್ದರು. ಮಮ್ದಾನಿ ನಗರವನ್ನು “ಸೋವಿಯತ್ ಶೈಲಿಯ ಕಮ್ಯೂನಿಸ್ಟ್ ರಾಷ್ಟ್ರ” ಮಾಡುತ್ತಾರೆ, ಆಸ್ತಿ ತೆರಿಗೆ ಶೇ.70ರಷ್ಟು ಹೆಚ್ಚಿಸುತ್ತಾರೆ, ಎಲ್ಲರೂ ಪಲಾಯನ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಗೆಲುವಿನ ನಂತರ ಕೇವಲ 17 ದಿನಗಳ ಅಂತರದಲ್ಲಿ, ನವೆಂಬರ್ 21, 2025ರಂದು ವೈಟ್ ಹೌಸ್‌ನ ಓವಲ್ ಆಫೀಸ್‌ನಲ್ಲಿ ನಡೆದ ಭೇಟಿಯು ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದೆ.

  Zohran Mamdani Trump Meeting 

ಇವರ ಭೇಟಿಯು ಸಂಪೂರ್ಣವಾಗಿ ಸ್ನೇಹಪರವಾಗಿತ್ತು. ಟ್ರಂಪ್ ಅವರು ಮಮ್ದಾನಿಯನ್ನು “ ಭರ್ಜರಿ ಗೆಲುವು” ಸಾಧಿಸಿದ್ದಕ್ಕಾಗಿ ಅಭಿನಂದಿಸಿ, “ನೀವು ಉತ್ತಮ ಕೆಲಸ ಮಾಡುತ್ತೀರಿ ಎಂಬ ನಂಬಿಕೆ ನನಗಿದೆ. ನೀವು ರಿಪಬ್ಲಿಕನ್‌ಗಳನ್ನೂ ಆಶ್ಚರ್ಯಗೊಳಿಸುತ್ತೀರಿ!” ಎಂದು ಹೃತ್ಪೂರ್ವಕವಾಗಿ ಪ್ರಶಂಸೆ ಮಾಡಿದರು. ಮಮ್ದಾನಿಯ ಯುವ ಅಭಿಯಾನ, ಟಿಕ್‌ಟಾಕ್-ಇನ್‌ಸ್ಟಾಗ್ರಾಮ್ ಬಳಕೆ ಮತ್ತು ಯುವ ಮತದಾರರ ಸಮರ್ಥನೆಯನ್ನು ಟ್ರಂಪ್ ಶ್ಲಾಘಿಸಿದರು.

ಟ್ರಂಪ್ ಟ್ರುತ್ ಸೋಷಿಯಲ್‌ನಲ್ಲಿ “ನ್ಯೂಯಾರ್ಕ್‌ನ ಹೊಸ ಮೇಯರ್ ಜೊಹ್ರಾನ್ ಮಮ್ದಾನಿಯನ್ನು ಭೇಟಿಯಾಗಿ ನನಗೆ ತುಂಬಾ ಸಂತೋಷವಾಯಿತು. ನಾವು ಬಹಳಷ್ಟು ವಿಷಯಗಳಲ್ಲಿ ಒಪ್ಪಿಕೊಂಡೆವು. ಅವರು ಉತ್ತಮ ಕೆಲಸ ಮಾಡಲಿದ್ದಾರೆ!” ಎಂದು ಬರೆದಿದ್ದಾರೆ.

ಮಮ್ದಾನಿ ಕೂಡ ಸೌಮ್ಯವಾಗಿ ಪ್ರತಿಕ್ರಿಯಿಸಿದ್ದು“ಅಧ್ಯಕ್ಷರೊಂದಿಗೆ ನ್ಯೂಯಾರ್ಕ್ ನಿವಾಸಿಗಳ ಜೀವನ ವೆಚ್ಚವನ್ನು ಕಡಿಮೆ ಮಾಡುವ ಬಗ್ಗೆ ಒಪ್ಪಿಕೊಂಡಿದ್ದೇವೆ. ನಗರದ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ.”

ಈ ಭೇಟಿಯಲ್ಲಿ ಇಮಿಗ್ರೇಶನ್, ಇಸ್ರೇಲ್-ಪ್ಯಾಲೆಸ್ಟೈನ್, ಅಪರಾಧ ದರ ಮತ್ತು ಆರ್ಥಿಕ ಅಸಮಾನತೆಯಂತಹ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಎರಡೂ ನಾಯಕರು ಆ ವಿಷಯಗಳನ್ನು ತಾತ್ಕಾಲಿಕವಾಗಿ ಪಕ್ಕಕ್ಕಿಟ್ಟು ನಗರದ ತತ್ಕಾಲೀನ ಸಮಸ್ಯೆಗಳ ಮೇಲೆ ಗಮನ ಹರಿಸಿದರು. ಟ್ರಂಪ್ ಅವರು ಮಾಧ್ಯಮಗಳ ಮುಂದೆ “ನಾನು ಈಗ ಅವರನ್ನು 100% ಬೆಂಬಲಿಸುತ್ತೇನೆ” ಎಂದು ಸ್ಪಷ್ಟವಾಗಿ ಹೇಳಿದ್ದು ದೊಡ್ಡ ಸುದ್ದಿಯಾಯಿತು.

ಇದನ್ನೂ ಓದಿ | ಟ್ರಂಪ್‌ ಟೀಕಾಕಾರ ಮಮ್ದಾನಿಗೆ ನ್ಯೂಯಾರ್ಕ್‌ ಮೇಯರ್ ಪಟ್ಟ!

ಅಮೆರಿಕದ ರಾಜಕೀಯದಲ್ಲಿ ಹೊಸ ಆಯಾಮವನ್ನು ತೋರಿಸುತ್ತದೆ. ಕಟು ಶತ್ರುತ್ವದಿಂದ ಸಹಕಾರದ ಕಡೆಗೆ ಬಂದ ಟ್ರಂಪ್ ಮತ್ತು ಮಮ್ದಾನಿ ಅವರ ಸಂಬಂಧವು ಜನವರಿ 1, 2026ರಿಂದ ಮಮ್ದಾನಿ ಅಧಿಕಾರ ಸ್ವೀಕಾರದ ನಂತರ ಹೇಗೆ ಮುಂದುವರಿಯಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.    

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »