ಟ್ರಂಪ್‌ ಟೀಕಾಕಾರ ಮಮ್ದಾನಿಗೆ ನ್ಯೂಯಾರ್ಕ್‌ ಮೇಯರ್ ಪಟ್ಟ!

ನ್ಯೂಯಾರ್ಕ್ ಇತಿಹಾಸದಲ್ಲೇ ಇದೆ ಮೊದಲ ಬಾರಿಗೆ ಭಾರತೀಯ ಮೂಲದ ಮುಸ್ಲಿಮ್‌ ಮೇಯರ್ ಒಬ್ಬರು ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಯಾಗಿದೆ.
zohran mamdani new york

ನ್ಯೂಯಾರ್ಕ್ ಇತಿಹಾಸದಲ್ಲೇ ಇದೆ ಮೊದಲ ಬಾರಿಗೆ ಮುಸ್ಲಿಮ್‌ ಮೇಯರ್ ಒಬ್ಬರು ಆಯ್ಕೆಯಾಗುವ ಮೂಲಕ ಇತಿಹಾಸ ಸೃಷ್ಟಿಯಾಗಿದೆ. ಭಾರತೀಯ ಮೂಲದ ಡೆಮಾಕ್ರಟ್ ಅಭ್ಯರ್ಥಿ ಜೋಹ್ರಾನ್ ಕ್ವಾಮೆ ಮಮ್ದಾನಿ 2025ರ ನವೆಂಬರ್ 4ರಂದು ನಡೆದ ಚುನಾವಣೆಯಲ್ಲಿ ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಕರ್ಟಿಸ್ ಸ್ಲಿವಾ ಅವರನ್ನು ಸೋಲಿಸಿ, ಅವರು ನಗರದ 110ನೇ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. 

34 ವರ್ಷ ವಯಸ್ಸಿನ ಈ ಯುವ ರಾಜಕಾರಣಿ, ನ್ಯೂಯಾರ್ಕ್ ನಗರದ ಅತ್ಯಂತ ಕಿರಿಯ ಮತ್ತು ಮೊದಲ ಮುಸ್ಲಿಂ ಮೇಯರ್ ಆಗಿ ಇತಿಹಾಸ ಸೃಷ್ಟಿಸಿದ್ದಾರೆ. ಇದು ಅಮೆರಿಕದ ಅತಿದೊಡ್ಡ ನಗರದಲ್ಲಿ ವೈವಿಧ್ಯತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ತೋರಿಸುತ್ತದೆ.

ಸೆಪ್ಟೆಂಬರ್‌ನಲ್ಲಿ ತಮ್ಮ ಮರುಚುನಾವಣಾ ಪ್ರಚಾರದಿಂದ ಹಿಂದೆ ಸರಿದ ಪ್ರಸ್ತುತ ಮೇಯರ್ ಎರಿಕ್ ಆಡಮ್ಸ್ ಅವರ ನಂತರ ಉತ್ತರಾಧಿಕಾರಿಯಾಗಲಿದ್ದಾರೆ ಮಮ್ದಾನಿ. ಆಡಮ್ಸ್ ಅವರ ವಿರುದ್ಧದ ಆರೋಪಗಳು ಮತ್ತು ನಗರದ ಸಾಮಾನ್ಯ ಅಸಮಾಧಾನಗಳು ಈ ಚುನಾವಣೆಯಲ್ಲಿ ಬದಲಾವಣೆಯ ತಂಗಾಳಿಯನ್ನು ಉಂಟುಮಾಡಿದವು. ಮಮ್ದಾನಿಯ ಚುನಾವಣಾ ಪ್ರಚಾರವು ವಸತಿ ಸುಧಾರಣೆ, ಪೊಲೀಸ್ ಸುಧಾರಣೆ, ಆರ್ಥಿಕ ನ್ಯಾಯ ಮತ್ತು ಹವಾಮಾನ ಬದಲಾವಣೆಯಂತಹ ವಿಷಯಗಳನ್ನು ಕೇಂದ್ರೀಕರಿಸಿತ್ತು. ಡೆಮಾಕ್ರಟಿಕ್ ಸಮಾಜವಾದಿ (ಡಿಎಸ್‌ಎ) ಸಂಘಟನೆಯ ಬೆಂಬಲದೊಂದಿಗೆ ನಡೆದ ಈ ಪ್ರಚಾರ, ನಗರದ ಯುವ ಮತ್ತು ಬಹುಸಾಂಸ್ಕೃತಿಕ ಸಮುದಾಯಗಳಲ್ಲಿ ಭಾರೀ ಬೆಂಬಲ ಪಡೆಯಿತು.

ಯಾರು ಈ ಜೊಹ್ರಾನ್ ಮಮ್ದಾನಿಯ ?

ಜೊಹ್ರಾನ್ ಕ್ವಾಮೆ ಮಮ್ದಾನಿ ಅವರು 1991ರ ಜುಲೈ 18ರಂದು ಉಗಾಂಡದ ಕಂಪಾಲಾ ನಗರದಲ್ಲಿ ಜನಿಸಿದರು. ಅವರ ತಂದೆ ಮಹ್ಮೂದ್ ಮಮ್ದಾನಿ ಅವರು ಪ್ರಸಿದ್ಧ ರಾಜಕೀಯ ವಿಜ್ಞಾನಿ ಮತ್ತು ಆಫ್ರಿಕನ್ ಸಂಶೋಧಕರಾಗಿದ್ದು, ಗುಜರಾತಿ ಮುಸ್ಲಿಂ ಕುಟುಂಬದಿಂದ ಬಂದವರು. ತಾಯಿ ಮೀರಾ ನಾಯರ್ ಅವರು ಭಾರತೀಯ ಮೂಲದ ಪಂಜಾಬಿ ಹಿಂದೂ ಕುಟುಂಬದಿಂದ ಬಂದ ಪ್ರಸಿದ್ಧ ಚಲನಚಿತ್ರ ನಿರ್ದೇಶಕರಾಗಿದ್ದಾರೆ (ಸಲಾಮ್ ಬಾಂಬೆ, ಮಾನ್ಸೂನ್ ವೆಡಿಂಗ್ ಚಿತ್ರಗಳಿಗೆ ಖ್ಯಾತರಾದವರು). ಈ ದಂಪತಿಗಳ ಪುತ್ರರಾದ ಮಮ್ದಾನಿ ಮುಸ್ಲಿಂ ಧರ್ಮವನ್ನು ಅನುಸರಿಸುತ್ತಾರೆ ಮತ್ತು ತಮ್ಮ ‘ಆಫ್ರಿಕನ್-ಅಮೆರಿಕನ್ ಮುಸ್ಲಿಂ’ ಎಂದೇ ಗುರುತಿಸಿಕೊಳ್ಳುತ್ತಾರೆ. 

ಉಗಾಂಡದಲ್ಲಿ ಜನಿಸಿದ ಇವರು, 7ನೇ ವಯಸ್ಸಿನಲ್ಲಿ ಕುಟುಂಬದೊಂದಿಗೆ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ಗೆ ಸ್ಥಳಾಂತರಗೊಂಡರು. ಅಲ್ಲಿ ತಂದೆಯು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು. 1998ರಲ್ಲಿ ಅಮೆರಿಕಕ್ಕೆ ಬಂದು ನ್ಯೂಯಾರ್ಕ್‌ನಲ್ಲಿ ನೆಲೆಸಿದರು. ಇಲ್ಲಿ ಅವರು ಲಿಂಕನ್ ಸೆಂಟರ್ ಇನ್‌ಸ್ಟಿಟ್ಯೂಟ್ ಮತ್ತು ಬ್ರಾರ್ಡ್‌ಲೆಯ್ ಸ್ಕೂಲ್‌ನಂತಹ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆದು. ನಂತರ, ಬೊವ್‌ಡಾಯ್ನ್ ಕಾಲೇಜ್‌ನಲ್ಲಿ ಆಫ್ರಿಕನಾ ಸ್ಟಡೀಸ್‌ನಲ್ಲಿ ಬ್ಯಾಚುಲರ್ ಡಿಗ್ರಿ ಪಡೆದರು.

ವಿದ್ಯಾಭ್ಯಾಸದ ನಂತರ, ಮಮ್ದಾನಿ ಅವರು ನ್ಯೂಯಾರ್ಕ್‌ನಲ್ಲಿ ‘ವಸತಿ ಸಮಾಲೋಚಕ’ ಆಗಿ ಕೆಲಸ ಮಾಡಿದರು. ಅಲ್ಲಿ ಅವರು ಬಡವರು-ಬಡವರಿಗೆ ಮನೆ ಬಾಡಿಗೆ, ಮನೆ ಕಳೆದುಕೊಳ್ಳುವ ಭಯ, ಹಣಕಾಸಿನ ತೊಂದರೆ ಇತ್ಯಾದಿ ಸಮಸ್ಯೆಗಳನ್ನು ನೇರವಾಗಿ ನೋಡಿ, ಜನರಿಗೆ ಸಹಾಯ ಮಾಡುತ್ತಿದ್ದರು.

ಇದಲ್ಲದೆ, ಅವರು ರ‍್ಯಾಪರ್ ಆಗಿ ಕೂಡ ಸೃಜನಶೀಲತೆ ತೋರಿದರು – ‘ಮಿಸ್ಟರ್ ಕಾರ್ಡಮಮ್’ ಎಂಬ ಕಲಾನಾಮದಲ್ಲಿ ಆಲ್ಬಮ್‌ಗಳನ್ನು ಬಿಡುಗಡೆ ಮಾಡಿ, ಸಾಮಾಜಿಕ ಸಮಸ್ಯೆಗಳನ್ನು ಗೀತೆಗಳ ಮೂಲಕ ಎತ್ತಿ ತೋರಿದರು. ಈ ಅನುಭವಗಳು ಅವರ ರಾಜಕೀಯ ದೃಷ್ಟಿಕೋನಕ್ಕೆ ಆಧಾರವಾಯಿತು, ವಿಶೇಷವಾಗಿ ವಸತಿ ಮತ್ತು ಜನಾಂಗೀಯ ನ್ಯಾಯದಲ್ಲಿ.

ಉಗ್ರ ಸಮಾಜವಾದಿ

ಮಮ್ದಾನಿಯ ರಾಜಕೀಯ ಪಯಣವು 2018ರಲ್ಲಿ ಡೆಮಾಕ್ರಟಿಕ್ ಸಾಮಾಜವಾದಿ ಸಂಘಟನೆ (ಡಿಎಸ್‌ಎ) ಸೇರಿಕೊಂಡ ನಂತರ ಆರಂಭವಾಯಿತು. ಇದು ಅಮೆರಿಕದಲ್ಲಿ ಬೆರ್ನಿ ಸ್ಯಾಂಡರ್ಸ್ ಮತ್ತು ಅಲೆಕ್ಸಾಂಡ್ರಿಯಾ ಒಕಾಸಿಯೊ-ಕಾರ್ಟೆಜ್ ಅವರಂತಹ ಪ್ರಗತಿಪರ ನಾಯಕರೊಂದಿಗೆ ಸಂಬಂಧ ಹೊಂದಿದೆ. 2020ರಲ್ಲಿ, ನ್ಯೂಯಾರ್ಕ್ ರಾಜ್ಯ ವಿಧಾನಸಭೆಯ 36ನೇ ಜಿಲ್ಲೆಯಿಂದ (ಕ್ವೀನ್ಸ್‌ನಲ್ಲಿ) ಚುನಾವಣೆಗೆ ಸ್ಪರ್ಧಿಸಿ, ಮೂರು ಅವಧಿಯ ಡೆಮಾಕ್ರಾಟ್ ಸದಸ್ಯ ರಾಬರ್ಟ್ ಕಲ್ವರ್ ಅವರನ್ನು ಸೋಲಿಸಿ ಗೆದ್ದರು. ಇದು ಡಿಎಸ್‌ಎಗೆ ಒಂದು ದೊಡ್ಡ ಗೆಲುವಾಗಿತ್ತು, ಮತ್ತು ಮಮ್ದಾನಿ ನಗರದ ಅತ್ಯಂತ ಪ್ರಗತಿಪರ ಧೋರಣೆಗಳಿಗೆ ಹೋರಾಡಿದರು.

2021ರಲ್ಲಿ, ಅವರು ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದಲ್ಲಿ ಪ್ಯಾಲೆಸ್ಟೈನ್ ಬೆಂಬಲಕ್ಕಾಗಿ ಧ್ವನಿ ಎತ್ತಿದ್ದು, ಇದರಿಂದ ಜೈಲಿಗೂ ಹೋಗಿ ಬಂದಿದ್ದಾರೆ. ಇದಲ್ಲದೆ, ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕಪ್ಪು ಮತ್ತು ಲ್ಯಾಟಿನೋ ಸಮುದಾಯಗಳಿಗೆ ಸಹಾಯಕ್ಕಾಗಿ ಕೆಲಸ ಮಾಡಿದರು.

ಇದನ್ನೂ ಓದಿ | ನ್ಯೂಯಾರ್ಕ್ ಮೇಯ‌ರ್ ಚುನಾವಣೆ: ಭಾರತೀಯ ಮೂಲದ ಮಮ್ದಾನಿ ಗೆಲುವು

2025ರ ಮೇಯರ್ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರವು ಅವರ ರಾಜಕೀಯ ಆಕಾಂಕ್ಷೆಯನ್ನು ತೋರಿಸಿತು. ಪ್ರಚಾರದಲ್ಲಿ, “ನ್ಯೂಯಾರ್ಕ್ ಅನ್ನು ಎಲ್ಲರಿಗೂ ಸೇರಿದ ನಗರವನ್ನಾಗಿ ಮಾಡೋಣ” ಎಂಬ ಘೋಷಣೆಯೊಂದಿಗೆ, ಅವರು ನಗರದ 50%ಕ್ಕಿಂತ ಹೆಚ್ಚು ಮತಗಳನ್ನು ಪಡೆದರು ಎಂದು ಮೂಲಗಳು ತಿಳಿಸಿವೆ. ಈ ಗೆಲುವು, ಅಮೆರಿಕದ ರಾಜಕೀಯದಲ್ಲಿ ಯುವ ಮತ್ತು ಬಹುತ್ವದ ನಾಯಕರ ಬೆಳವಣಿಗೆಯನ್ನು ಸೂಚಿಸುತ್ತದೆ. ಭಾರತೀಯ ಮೂಲದವರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.

ಭಾರತದ ಮಾಜಿ ಪ್ರಧಾನಿ ಜವಾಹರ್‌ಲಾಲ್‌ ನೆಹರುರವರನ್ನು ನೆನೆದು. “ಇಂದು ನಿಮ್ಮ ಮುಂದೆ ನಿಂತು, ಜವಾಹರಲಾಲ್ ನೆಹರು ಅವರ ಮಾತುಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ, ಒಂದು ಕ್ಷಣ ಬರುತ್ತದೆ, ಆದರೆ ಇತಿಹಾಸದಲ್ಲಿ ಅಪರೂಪಕ್ಕೆ, ನಾವು ಹಳೆಯದರಿಂದ ಹೊಸದಕ್ಕೆ ಹೆಜ್ಜೆ ಹಾಕಿದಾಗ, ಒಂದು ಯುಗ ಕೊನೆಗೊಂಡು ದೀರ್ಘಕಾಲ ನಿಗ್ರಹಿಸಲ್ಪಟ್ಟ ರಾಷ್ಟ್ರದ ಆತ್ಮವು ಧ್ವನಿಯನ್ನು ಕಂಡುಕೊಳ್ಳುತ್ತದೆ. ಇಂದು ರಾತ್ರಿ, ನಾವು ಹಳೆಯದರಿಂದ ಹೊಸದಕ್ಕೆ ಹೆಜ್ಜೆ ಹಾಕಿದ್ದೇವೆ” ಎಂದರು.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »