ಐಕನ್ನಡ | 8 ವರ್ಷದ ಸುದೀರ್ಘ ಪಯಣ: ಹರೀಶ್ ಬಿಜೂರ್ ಸಂದರ್ಶನ

ಬ್ರ್ಯಾಂಡ್ ಗುರು ಮತ್ತು ಹರೀಶ್ ಬಿಜೂರ್ ಕನ್ಸಲ್ಟ್ಸ್ ಇಂಕ್ ಸಂಸ್ಥಾಪಕ ಹರೀಶ್ ಬಿಜೂರ್ ಅವರು ತಮ್ಮ ಟ್ವಿಟರ್ (ಈಗಿನ ಎಕ್ಸ್) ಖಾತೆಯಲ್ಲಿ ಹಾಕುವ ‘ಐಕನ್ನಡ’(Ikannada)ದ 8 ವರ್ಷ ಸುದೀರ್ಘ ಪಯಣದ ಕುರಿತು ಸಮಾಚಾರ್.ಕಾಮ್‌ನೊಂದಿಗೆ ಹಂಚಿಕೊಂಡಿದ್ದಾರೆ.
I kannada
Harish Bijoor

ನಗರದ ಬದಲಾವಣೆಯೊಂದಿಗೆ ಭಾಷೆಯೂ ಬದಲಾಗುತ್ತಿದೆ ಎಂಬ ಆತಂಕದಿಂದ ಹುಟ್ಟಿದ ಒಂದು ಸಣ್ಣ ಆಲೋಚನೆ, ಇಂದು 8 ವರ್ಷ ಪೂರೈಸಿದ್ದು 2,921 ಕನ್ನಡ ಪದಗಳನ್ನು ಜಗತ್ತಿಗೆ ಪರಿಚಯಿಸುವ ಮಹಾಯಾತ್ರೆಯಾಗಿ ಬೆಳೆದಿದೆ. ಬ್ರ್ಯಾಂಡ್ ಗುರು ಹಾಗೂ ಹರೀಶ್ ಬಿಜೂರ್ ಕನ್ಸಲ್ಟ್ಸ್ ಇಂಕ್ ಸಂಸ್ಥಾಪಕ ಹರೀಶ್ ಬಿಜೂರ್ ಅವರ ಟ್ವಿಟರ್ (ಈಗಿನ ಎಕ್ಸ್) ಖಾತೆಯಲ್ಲಿ ಹಾಕುವ ‘ಐಕನ್ನಡ’(Ikannada) ಇದಕ್ಕೆ ಸಾಕ್ಷಿ. ಸಮಾಚಾರ್.ಕಾಮ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತಂತೆ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಬದಲಾವಣೆಯೇ ಪ್ರೇರಣೆ

“ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವ. ಇಲ್ಲಿನ ಜನಸಂಖ್ಯೆಯ ಸ್ವರೂಪ ಬದಲಾಗುತ್ತಿದೆ. ಹೊರ ರಾಜ್ಯಗಳಿಂದ ಬಂದವರು ಇಲ್ಲಿ ನೆಲೆಸುತ್ತಿದ್ದಾರೆ, ಜೊತೆಗೆ ತಮ್ಮ ಭಾಷೆಗಳನ್ನು ತರುತ್ತಿದ್ದಾರೆ. ಕನ್ನಡಿಗರಾದ ನಾವು ತೆರೆದ ಮನಸ್ಸಿನವರು. ಬೇರೆಯವರ ಉಡುಗೆ-ತೊಡುಗೆ, ಆಹಾರ-ಪದ್ಧತಿಗಳನ್ನು ಸಂತೋಷದಿಂದ ಸ್ವೀಕರಿಸುತ್ತೇವೆ. ಜೊತೆಗೆ ಭಾಷೆಯನ್ನು ಸಹ. ಆದರೆ ಕನ್ನಡವನ್ನು ಮಾತ್ರ ಮರೆಯಬಾರದು ಎಂಬ ಉದ್ದೇಶದಿಂದ ಈ ಪ್ರಯತ್ನ ಶುರುವಾಯಿತು,” ಎಂದು ಹರೀಶ್ ಬಿಜೂರ್ ಹೇಳುತ್ತಾರೆ.

ಹೊರಗಿನವರಿಗೆ ಕನ್ನಡ ಕಲಿಸುವ ಸಣ್ಣ ಪ್ರಯತ್ನವಾಗಿ ಆರಂಭವಾದ ‘ಐಕನ್ನಡ’ (ನಾನು + ಕನ್ನಡ) ಇಂದು ದಿನನಿತ್ಯದ ಒಂದು ಪದವನ್ನು ಪೋಸ್ಟ್ ಮಾಡುವ ಹವ್ಯಾಸವಾಗಿ ಮಾರ್ಪಟ್ಟಿದೆ. “ಬೆಳಿಗ್ಗೆ ಎದ್ದ ತಕ್ಷಣ ತಲೆಯಲ್ಲಿ ಮೊದಲು ಬರುವುದು ಇದೇ. ಪ್ರವಾಸದಲ್ಲಿದ್ದರೂ, ವಿದೇಶದಲ್ಲಿದ್ದರೂ ಭಾರತದ ಸಮಯಕ್ಕೆ ತಕ್ಕಂತೆ 7-8 ಪದಗಳನ್ನು ಮುಂಚಿತವಾಗಿ ತಯಾರಿಸಿಡುತ್ತೇನೆ,” ಎಂದು ಅವರು ತಿಳಿಸುತ್ತಾರೆ.

100 ಪದಗಳ ಗುರಿ, 2,920 ಪದಗಳ ಸಾಧನೆ

ಆರಂಭದಲ್ಲಿ ಕೇವಲ 100-101 ಪದಗಳನ್ನು ಪೋಸ್ಟ್ ಮಾಡುವ ಯೋಜನೆಯಿತ್ತು. ಆದರೆ “ ನನ್ನಿಂದ ನಿಲ್ಲಿಸಲು ಸಾಧ್ಯವಾಗಲಿಲ್ಲ. ಇದು ಹವ್ಯಾಸವಾಗಿ ಬಿಟ್ಟಿತು,” ಎನ್ನುತ್ತಾರೆ ಬಿಜೂರ್. ಪ್ರತಿ ಪೋಸ್ಟ್‌ನಲ್ಲಿ ಒಂದು ಪದ, ಅದರ ಅರ್ಥ, ಉಚ್ಚಾರಣೆ ಹಾಕುತ್ತಾರೆ. ಜೊತೆಗೆ ಕೆಲವೊಮ್ಮೆ ಹಾಸ್ಯಾತ್ಮಕ ಸಂದರ್ಭವನ್ನೂ ಸೇರಿಸುತ್ತಾರೆ. ಇದು ಹಾಸ್ಯದ ಜೊತೆಗೆ ಪದದ ಬಗ್ಗೆ ಆಳವಾಗಿ ತಿಳಿಯಲು ಸಹಾಯವಾಗುತ್ತದೆ. ಉದಾಹರಣೆಗೆ: ಗುಂಡುಸೂಜಿ – ಪಿನ್. #GuNDuSoojiDropSilence #PinDropSilence.

I kannada

ಸ್ಥಳೀಯರಿಗೂ, ಹೊರಗಿನವರಿಗೂ ಸಂತೋಷ

ಈ ಪ್ರಯತ್ನದಿಂದ ಹೊರಗಿನವರು ಕನಿಷ್ಠ 10-20 ಪದಗಳಾದರೂ ಕಲಿಯುತ್ತಾರೆ. “ಆಟೋ ಚಾಲಕರೊಂದಿಗೆ ಮಾತನಾಡುವಷ್ಟು ಕನ್ನಡ ಬರುತ್ತದೆ ಎಂದು ಕೆಲವರು ನನಗೆ ಹೇಳುತ್ತಾರೆ.
ತಪ್ಪಾದರೂ ಕನ್ನಡದಲ್ಲಿ ಮಾತನಾಡಿದರೆ ಸ್ಥಳೀಯರಿಗೆ ಖುಷಿಯಾಗುತ್ತದೆ. ಕೆಲವೊಮ್ಮೆ ಆಟೋ ಚಾರ್ಜ್ ಕಡಿಮೆ ಮಾಡುವ ಉದಾಹರಣೆಗಳೂ ಸಹ ಇವೆ,” ಎಂದು ಬಿಜೂರ್ ನೆನಪಿಸಿಕೊಳ್ಳುತ್ತಾರೆ.
ಬೆಂಗಳೂರುನಲ್ಲಿರುವ ಪಂಜಾಬಿ, ಉತ್ತರ ಭಾರತೀಯರು ಕೆಲವರು ಬರೆಯಲೂ ಕಲಿಯುತ್ತಿದ್ದಾರೆ. “ಆದರೆ ನನ್ನ ಗಮನ ಮಾತನಾಡಲು ಮತ್ತು ಸರಿಯಾಗಿ ಸಂವಹನ ಮಾಡಲು ಮಾತ್ರ,” ಎನ್ನುತ್ತಾರೆ.

ಮಗುವಿನ ಮೊದಲ ಹೆಜ್ಜೆ


“ಈ ಐ ಕನ್ನಡ ಎನ್ನುವುದು ಪುಟ್ಟ ಮಗುವಿನ ಮೊದಲ ಹೆಜ್ಜೆಯಿದ್ದ ಹಾಗೆ. ಇಂದಿಗೆ 2,920 ಪುಟ್ಟ ಹೆಜ್ಜೆಗಳು ಆಗಿದೆ. ಒಂದು ದಿನವೂ ತಪ್ಪಿಸದೆ ಮುಂದುವರೆಸಿದ್ದೇನೆ,” ಎಂದು ಹರೀಶ್ ಬಿಜೂರ್ ಹೇಳುತ್ತಾರೆ. ಇದೇ ಮಾದರಿಯಲ್ಲಿ ಒಬ್ಬರು ತಮಿಳಿನಲ್ಲಿ ‘ಐ ತಮಿಳ್’, ಇನ್ನೊಬ್ಬರು ‘ಐ ತೆಲುಗು’ ಆರಂಭ ಮಾಡಿದ್ದರು, ಆದರೆ ಒಬ್ಬರು 500-600 ಪದಗಳಿಗೆ ನಿಲ್ಲಿಸಿದರು. “ಆದರೆ ಎಲ್ಲಾ ನಗರಗಳಲ್ಲಿ, ಎಲ್ಲಾ ಭಾಷೆಗಳಲ್ಲಿ ಇಂಥ ಪ್ರಯತ್ನಕ್ಕೆ ಅವಕಾಶವಿದೆ. ಮುಂಬೈಯಲ್ಲಿರುವ ಕನ್ನಡಗರಿಗೆ ಮರಾಠಿ ಬರುವುದಿಲ್ಲ, ಹೀಗೆ ಇತರೆಡೆ ಇತರ ಭಾಷೆಗಳು; ಹೀಗೆ ಇದು ಎಲ್ಲರ ಬದುಕಿಗೆ ಸಹಾಯಕವಾಗುತ್ತದೆ,” ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ | ದೇಶದ ಈ ಪ್ರತಿಷ್ಟಿತ ಬ್ಯ್ರಾಂಡ್‌ಗಳು ಕ್ಷಮೆ ಕೇಳಿದ್ಯಾಕೆ?!

ಸದ್ಯದಲ್ಲಿಯೇ 2,921 ಪದಗಳೇ ಒಂದು ಚಿಕ್ಕ ಕನ್ನಡ ಶಬ್ದಕೋಶವಾಗಿ ಪ್ರಕಟಿಸುವ ಯೋಜನೆಯಿದೆ,” ಎಂದು ಬಿಜೂರ್ ತಿಳಿಸಿದ್ದಾರೆ.
ಈ ಒಂದು ಸಣ್ಣ ಟ್ವೀಟ್‌ನಿಂದ ಆರಂಭವಾದ ಪಯಣ, ಕನ್ನಡವನ್ನು ಜಾಗತಿಕ ಮಟ್ಟದಲ್ಲಿ ಪ್ರೀತಿಯ ಭಾಷೆಯಾಗಿ ಬೆಳೆಸುತ್ತಿದೆ. ‘ಐಕನ್ನಡ’ ಕೇವಲ ಒಂದು ಖಾತೆಯಲ್ಲ, ಕನ್ನಡ ಪ್ರೇಮಿಗಳ ಹೃದಯದಲ್ಲಿ ನೆಲೆಸಿದೆ.

Share:

ಮತ್ತಷ್ಟು ಸುದ್ದಿ

ಪಾಂಡವಪುರದ ಕ್ಯಾತನಹಳ್ಳಿಯಲ್ಲಿ ರಾಜ್ಯಮಟ್ಟದ ‘ಅಧಿಕ ಹಾಲು ಕರೆಯುವ ಸ್ಪರ್ಧೆ’

ಶಾಸಕ ದರ್ಶನ್ ಪುಟ್ಟಣ್ಣಯ್ಯ ಹುಟ್ಟುಹಬ್ಬ ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಜನ್ಮದಿನದ ಪ್ರಯುಕ್ತ ಮಂಡ್ಯ

ಸಾವಯವ ಉತ್ಪನ್ನಗಳ ಗ್ರಾಹಕರೇ ಬೆಂಗಳೂರಿನ ಲಾಲ್‌ ಬಾಗ್‌ ಗೆ ಬನ್ನಿ

ಜೈವಿಕ ಕೃಷಿಕ ಸೊಸೈಟಿ (ರಿ)ಯಿಂದ ಕೃಷಿ ಉತ್ಪನ್ನಗಳ ನೇರ ಮಾರುಕಟ್ಟೆ  ಬೆಂಗಳೂರು: ಜೈವಿಕ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಜೈವಿಕ

ಮುಂದೆ ಓದಿ »

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಆರ್.ಪಾಟೀಲ್‌ ರಾಜೀನಾಮೆ

ಬೆಂಗಳೂರು: ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ನಾನು ದಿನಾಂಕ 05.06.2026ರಂದು ರಾಜೀನಾಮೆ ಸಲ್ಲಿಸಿದ್ದೇನೆ ಎಂದು

ಮುಂದೆ ಓದಿ »

ರೈತರ ತೆಂಗಿನ ತೋಟಗಳಿಗೆ ಆಸರೆಯಾದ ಪುಟ್ಟಣ್ಣಯ್ಯ ಫೌಂಡೇಶನ್

ಬನ್ನಂಗಾಡಿ ಗ್ರಾ.ಪಂನಲ್ಲಿ ಕೀಟ ನಿರ್ವಹಣೆ ಜಾಗೃತಿ ಮತ್ತು ಪ್ರಾತ್ಯಕ್ಷಿಕೆ! ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ

ಮುಂದೆ ಓದಿ »