ಬೆಂಗಳೂರು ಮೆಟ್ರೊ ಹಳದಿ ಮಾರ್ಗ: ಸುರಕ್ಷತಾ ಪ್ರಮಾಣಪತ್ರ ವಿಳಂಬ, ಜುಲೈಗೆ ಮುಂದಕ್ಕೆ

ಬೆಂಗಳೂರಿನ ಮೆಟ್ರೊ ಹಳದಿ ಮಾರ್ಗದ ಸಂಚಾರ ಆರಂಭವು ಸ್ವತಂತ್ರ ಸುರಕ್ಷತಾ ಮೌಲ್ಯಮಾಪನಾ ಪ್ರಮಾಣಪತ್ರ ಇನ್ನೂ ಸಿಗದಿರುವುದರಿಂದ ಮತ್ತೆ ಮುಂದಕ್ಕೆ ಹೋಗಿದೆ. ಜೂನ್‌ನಲ್ಲಿ ಆರಂಭವಾಗಬೇಕಿದ್ದ ಈ ಮಾರ್ಗವು ಈಗ ಜುಲೈ 2025ರಲ್ಲಿ ಸಂಚಾರ ಪ್ರಾರಂಭಿಸುವ ಗುರಿಯನ್ನು BMRCL ಇಟ್ಟುಕೊಂಡಿದೆ.

ಬೆಂಗಳೂರಿನ ಮೆಟ್ರೊ ಹಳದಿ ಮಾರ್ಗದ ಸಂಚಾರ ಆರಂಭವು ಸ್ವತಂತ್ರ ಸುರಕ್ಷತಾ ಮೌಲ್ಯಮಾಪನಾ ಪ್ರಮಾಣಪತ್ರ (ISA) ಇನ್ನೂ ಸಿಗದಿರುವುದರಿಂದ ಮತ್ತೆ ಮುಂದಕ್ಕೆ ಹೋಗಿದೆ. ಜೂನ್‌ನಲ್ಲಿ ಆರಂಭವಾಗಬೇಕಿದ್ದ ಈ ಮಾರ್ಗವು ಈಗ ಜುಲೈ 2025ರಲ್ಲಿ ಸಂಚಾರ ಪ್ರಾರಂಭಿಸುವ ಗುರಿಯನ್ನು ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಶನ್ ಲಿಮಿಟೆಡ್ (BMRCL) ಇಟ್ಟುಕೊಂಡಿದೆ. ಬೊಮ್ಮಸಂದ್ರದಿಂದ ಆರ್.ವಿ. ರಸ್ತೆಯವರೆಗಿನ 18.8 ಕಿಮೀ ಉದ್ದದ ಈ ಮಾರ್ಗವು ದಕ್ಷಿಣ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯನ್ನು ನಗರದ ಕೇಂದ್ರಕ್ಕೆ ಸಂಪರ್ಕಿಸುತ್ತದೆ. ಆದರೆ, ಸುರಕ್ಷತಾ ಪರೀಕ್ಷೆಗಳ ವಿಳಂಬದಿಂದ ಈ ಯೋಜನೆಯ ಸಂಚಾರ ತಡವಾಗುತ್ತಿದೆ.

ಈ ಮಾರ್ಗದ ಹಳಿ ಅಳವಡಿಕೆ, ನಿಲ್ದಾಣ ನಿರ್ಮಾಣ ಕಾಮಗಾರಿಗಳು 2024ರಲ್ಲಿ ಪೂರ್ಣಗೊಂಡಿದ್ದವು. ಚಾಲಕ ರಹಿತ ಎಂಜಿನ್ ಹೊಂದಿರುವ ಮೊದಲ ಪ್ರೊಟೊಟೈಪ್ ರೈಲು ಏಪ್ರಿಲ್ 2024ರಲ್ಲಿ ಬಂದಿತ್ತು. ಈ ರೈಲನ್ನು ಬಳಸಿಕೊಂಡು ತಂತ್ರಜ್ಞರು ಮೂರು ತಿಂಗಳ ಕಾಲ ಟ್ರ್ಯಾಕ್ಷನ್, ಬ್ರೇಕಿಂಗ್ ಮತ್ತು ಇತರ ತಾಂತ್ರಿಕ ಪರೀಕ್ಷೆಗಳನ್ನು ನಡೆಸಿದ್ದರು. ಸೆಪ್ಟೆಂಬರ್ 2024ರಲ್ಲಿ ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (RDSO) ಪ್ರಾಯೋಗಿಕ ಸಂಚಾರದ ಮೂಲಕ ಹೆಚ್ಚಿನ ಪರೀಕ್ಷೆಗಳನ್ನು ನಡೆಸಿತು. ರೋಲಿಂಗ್ ಸ್ಟಾಕ್ ತಜ್ಞರು, ಹಳಿ ತಂತ್ರಜ್ಞರು, ಬ್ರೇಕ್ ತಂತ್ರಜ್ಞರು ಸೇರಿದಂತೆ ತಾಂತ್ರಿಕ ಪರಿಣಿತರ ತಂಡ ಈ ಪರೀಕ್ಷೆಗಳಲ್ಲಿ ಭಾಗವಹಿಸಿತು. ಆದರೆ, ರೈಲುಗಳ ಪೂರೈಕೆಯಾಗದಿರುವುದರಿಂದ ಯೋಜನೆಯ ಪ್ರಗತಿಯು ಸ್ಥಗಿತಗೊಂಡಿತು.

2025ರ ಜನವರಿಯಲ್ಲಿ ಎರಡನೇ ಪ್ರೊಟೊಟೈಪ್ ರೈಲು, ಮೇ ತಿಂಗಳಲ್ಲಿ ಮೂರನೇ ರೈಲು ಬಂದಿತು. ಮೂರು ರೈಲುಗಳೊಂದಿಗೆ ಅರ್ಧಗಂಟೆಗೊಮ್ಮೆ ಸಂಚಾರ ಸಾಧ್ಯ ಎಂದು BMRCL ತಿಳಿಸಿತ್ತು. ಆದರೆ, ಸ್ವತಂತ್ರ ಸುರಕ್ಷತಾ ಮೌಲ್ಯಮಾಪಕ (ISA) ಎಲ್ಲಾ ದಾಖಲೆಗಳು ಮತ್ತು ಅಂಕಿಅಂಶಗಳನ್ನು ಪರಿಶೀಲಿಸಿ ಪ್ರಮಾಣಪತ್ರ ನೀಡುವವರೆಗೆ ಸಂಚಾರ ಆರಂಭವಾಗದು. ಈ ಪ್ರಮಾಣಪತ್ರವನ್ನು ಮೆಟ್ರೊ ರೈಲು ಸುರಕ್ಷತಾ ಆಯೋಗಕ್ಕೆ (CMRS) ಸಲ್ಲಿಸಿದ ಬಳಿಕ, ಆಯುಕ್ತರು ಅಂತಿಮ ಪರಿಶೀಲನೆ ನಡೆಸಿ ಸಂಚಾರಕ್ಕೆ ಅನುಮತಿ ನೀಡುತ್ತಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿಗದಿಪಡಿಸಿದ ದಿನದಂದು ಸಂಚಾರ ಆರಂಭವಾಗಲಿದೆ. BMRCL ಅಧಿಕಾರಿಗಳ ಪ್ರಕಾರ, ಜುಲೈ 2025ರ ವೇಳೆಗೆ ಇನ್ನೊಂದು ರೈಲು ಬಂದು ಸೇರಲಿದೆ.

ಹಳದಿ ಮಾರ್ಗವು ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರು ರಸ್ತೆ, ಇನ್ಫೋಸಿಸ್ ಫೌಂಡೇಶನ್, ಎಲೆಕ್ಟ್ರಾನಿಕ್ ಸಿಟಿ, ಬೆರಟೇನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲು ಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ , ರಾಗಿಗುಡ್ಡ ಮತ್ತು ಆರ್.ವಿ. ರಸ್ತೆಯ 16 ನಿಲ್ದಾಣಗಳನ್ನು ಒಳಗೊಂಡಿದೆ. ಈ ಮಾರ್ಗವು ಎಲೆಕ್ಟ್ರಾನಿಕ್ ಸಿಟಿಯ ಐಟಿ ಕಾರಿಡಾರ್‌ನಿಂದ ನಗರದ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಮೂಲಕ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ.

ಆದರೆ, ಪದೇ ಪದೇ ವಿಳಂಬದಿಂದ ಪ್ರಯಾಣಿಕರು ನಿರಾಸೆಗೊಂಡಿದ್ದಾರೆ. “ಯಲ್ಲೊ ಮೆಟ್ರೊ ಎಲ್ಲೊ ಎಂದು ಕೇಳುವಂತಾಗಿದೆ. ಕಾಮಗಾರಿಗಳು ಮುಗಿದು ವರ್ಷಗಟ್ಟಲೆ ಕಾಯುವುದು BMRCLಗೆ ಕೋಟ್ಯಂತರ ರೂಪಾಯಿ ನಷ್ಟವನ್ನು ಉಂಟುಮಾಡಿದೆ. ಶೀಘ್ರ ಸಂಚಾರ ಆರಂಭಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗುವುದಲ್ಲದೆ, BMRCLಗೆ ಆದಾಯವೂ ದೊರೆಯುತ್ತದೆ,” ಎಂದು ಮೆಟ್ರೊ ಪ್ರಯಾಣಿಕ ಎಚ್. ರಮೇಶ್ ಅಭಿಪ್ರಾಯಪಟ್ಟಿದ್ದಾರೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »