ಐಟಿ ಕ್ಷೇತ್ರದ ಆಘಾತ: ಬೆಂಗಳೂರಿನ ಪಿಜಿಗಳು ಮುಚ್ಚುವ ಭೀತಿ

ಬೆಂಗಳೂರು ನಗರದಲ್ಲಿ ವಸತಿ ಕ್ಷೇತ್ರದ ಹೃದಯಬಡಿತವಾಗಿದ್ದ ಪೇಯಿಂಗ್ ಗೆಸ್ಟ್‌ಗಳು, ಇದೀಗ ಸಂಕಷ್ಟದಲ್ಲಿವೆ. ಐಟಿ ಕ್ಷೇತ್ರದಲ್ಲಿ ಉದ್ಯೋಗ ಕಡಿತ, ಬಿಬಿಎಂಪಿ ಕಠಿಣ ನಿಯಮಗಳು ಮತ್ತು ಗಗನಕ್ಕೇರುತ್ತಿರುವ ವಿದ್ಯುತ್ ಹಾಗೂ ನೀರಿನ ವೆಚ್ಚಗಳಿಂದಾಗಿ ನಗರದಾದ್ಯಂತ ಪಿಜಿಗಳು ಮುಚ್ಚಲ್ಪಡುತ್ತಿವೆ.

ಬೆಂಗಳೂರು ನಗರದಲ್ಲಿ ವಸತಿ ಕ್ಷೇತ್ರದ ಹೃದಯಬಡಿತವಾಗಿದ್ದ ಪೇಯಿಂಗ್ ಗೆಸ್ಟ್‌ಗಳು(ಪಿಜಿ), ಇದೀಗ ಸಂಕಷ್ಟದಲ್ಲಿವೆ. ಐಟಿ ಕ್ಷೇತ್ರದಲ್ಲಿ ಉದ್ಯೋಗ ಕಡಿತ, ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಕಠಿಣ ನಿಯಮಗಳು ಮತ್ತು ಗಗನಕ್ಕೇರುತ್ತಿರುವ ವಿದ್ಯುತ್ ಹಾಗೂ ನೀರಿನ ವೆಚ್ಚಗಳಿಂದಾಗಿ, ನಗರದಾದ್ಯಂತ ಪಿಜಿಗಳು ಮುಚ್ಚಲ್ಪಡುತ್ತಿವೆ, ಇದರಿಂದ ಮಾಲೀಕರು ತೀವ್ರ ನಿರಾಸೆಗೆ ಒಳಗಾಗಿದ್ದಾರೆ. 

ಕೋವಿಡ್-19 ಸಾಂಕ್ರಾಮಿಕದಲ್ಲಾದ ಆರ್ಥಿಕ ನಸ್ಟದಿಂದ ಚೇತರಿಸಿಕೊಳ್ಳುವ ಭರವಸೆಯಲ್ಲಿದ್ದ ಪಿಜಿ ಮಾಲೀಕರಿಗೆ ಈಗ ಐಟಿ ಕ್ಷೇತ್ರದ ಉದ್ಯೋಗ ಕಡಿತ ಮತ್ತು ಬಿಬಿಎಂಪಿಯ ಹೊಸ ಕಠಿಣ ನಿಯಮಗಳಿಂದ ಭಾರೀ ಆಘಾತವಾಗಿದೆ. ವರದಿಯ ಪ್ರಕಾರ, ಸರಾಸರಿ 25% ಆದಾಯ ನಷ್ಟವಾಗಿದ್ದು, ಅನೇಕ ಪಿಜಿಗಳು ಶಾಶ್ವತವಾಗಿ ಮುಚ್ಚಲ್ಪಟ್ಟಿವೆ. ಮಾರತಹಳ್ಳಿ, ಸರ್ಜಾಪುರ ಮತ್ತು ಮಹದೇವಪುರದಂತಹ ಐಟಿ ಕೇಂದ್ರಿತ ಪ್ರದೇಶಗಳಲ್ಲಿ ಗಿಜಿಗುಡುತ್ತಿದ್ದ ಪಿಜಿ ಕಾರಿಡಾರ್‌ಗಳು ಈಗ ಶಾಂತವಾಗಿವೆ.

ಐಟಿ ಆಧಾರಿತ ಪ್ರದೇಶಗಳಲ್ಲಿ ಪಿಜಿಗಳ ಸಂಖ್ಯೆ  ಕುಸಿಯುತ್ತಿದೆ. “ಬಹು ಶಾಖೆಗಳನ್ನು ಹೊಂದಿರುವವರು ಮಾತ್ರ ಬದುಕುಳಿಯುತ್ತಿದ್ದಾರೆ. ಉಳಿದವರು ಮುಚ್ಚುತ್ತಿದ್ದಾರೆ.” ವರ್ಷಗಳ ಹಿಂದೆ ತೆರೆದಿದ್ದ ಅನೇಕ ಪಿಜಿಗಳು ಈಗ ಖಾಲಿಯಾದ ಕಟ್ಟಡಗಳಾಗಿ, ಬೀಗ ಹಾಕಿದ ಬಾಗಿಲುಗಳು ಮತ್ತು ಧೂಳಿನಿಂದ ಕೂಡಿದ ನಾಮಫಲಕಗಳೊಂದಿಗೆ ನಿಂತಿವೆ. ಪ್ರತಿ ಪ್ರದೇಶದಲ್ಲಿ ಕನಿಷ್ಠ ಎರಡು ಪಿಜಿಗಳು ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿವೆ, ವಿಶೇಷವಾಗಿ ಐಟಿ ವೃತ್ತಿಪರರನ್ನು ಆಕರ್ಷಿಸುತ್ತಿದ್ದ ಪ್ರದೇಶಗಳಾದ ಮಾರತಹಳ್ಳಿ, ಸರ್ಜಾಪುರ ಮತ್ತು ಮಹದೇವಪುರದಲ್ಲಿ ಎಂದು ಪಿಜಿ ಒನರ್ಸ್ ವೆಲ್ಫೇರ್ ಅಸೋಸಿಯೇಶನ್‌ನ ಅಧ್ಯಕ್ಷ ಅರುಣ ಕುಮಾರ್ ಡಿ.ಟಿ ಹೇಳಿದ್ದಾರೆ.

2024ರ ಆಗಸ್ಟ್‌ನಲ್ಲಿ ಕೋರಮಂಗಲದ ಒಂದು ಪಿಜಿಯಲ್ಲಿ ನಡೆದ ಕೊಲೆ ಘಟನೆಯು ನಗರಾದ್ಯಂತ ಕಠಿಣ ಕ್ರಮಕ್ಕೆ ಕಾರಣವಾಯಿತು. ಬಿಬಿಎಂಪಿ ಮತ್ತು ಪೊಲೀಸ್ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ, ಮಹದೇವಪುರದಲ್ಲಿ ಮಾತ್ರ ಸುಮಾರು 100 ಪಿಜಿಗಳನ್ನು ಸೀಲ್ ಮಾಡಿದರು. ಹೆಚ್ಚಿನ ಪಿಜಿಗಳು ಮಾನ್ಯವಾದ ವ್ಯಾಪಾರ ಪರವಾನಗಿಗಳನ್ನು ಒದಗಿಸಲು ವಿಫಲವಾದವು ಅಥವಾ ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳನ್ನು ಪೂರೈಸಲಿಲ್ಲ. ಸುರಕ್ಷತೆಯನ್ನು ಸುಧಾರಿಸಲು ಜಾರಿಗೆ ತಂದ ಈ ಕ್ರಮಗಳು, ಅನಿರೀಕ್ಷಿತವಾಗಿ, ವಸತಿ ಕ್ಷೇತ್ರದ ಒಂದು ಪ್ರಮುಖ ಭಾಗವನ್ನೇ ಮುಚ್ಚಿಬಿಟ್ಟಿದೆ.

ಒಂದು ಕಠಿಣ ನಿಯಮವೆಂದರೆ, 40 ಅಡಿ ಅಗಲದ ರಸ್ತೆಗಳಿಗಿಂತ ಕಿರಿದಾದ ರಸ್ತೆಗಳಲ್ಲಿ ಪಿಜಿಗಳನ್ನು ನಡೆಸಲು ಅನುಮತಿಯಿಲ್ಲ. ಇದು ಬೆಂಗಳೂರಿನ ಕಿರಿದಾದ ರಸ್ತೆಗಳಲ್ಲಿ ನಿರ್ಮಿಸಲಾದ ಅಸಂಖ್ಯಾತ ಪಿಜಿಗಳಿಗೆ ಮುಳುವಾಗಿದೆ.ವಿದ್ಯುತ್ ಮತ್ತು ನೀರಿನ ದರಗಳ ಭಾರೀ ಏರಿಕೆಯಿಂದ ಸ್ಥಿತಿ ಇನ್ನಷ್ಟು ಉಲ್ಬಣಗೊಂಡಿದೆ. ಕಡಿಮೆಯಾಗುತ್ತಿರುವ ಪೇಯಿಂಗ್ ಗೆಸ್ಟ್‌ಗಳಿಂದ ಈಗಾಗಲೇ ತೊಂದರೆಗೊಳಗಾಗಿರುವ ಪಿಜಿ ಮಾಲೀಕರು, ಬೆಲೆ ಏರಿಕೆಯ ವೆಚ್ಚಗಳನ್ನು ಸಮತೋಲನಗೊಳಿಸಲು ಸಾಧ್ಯವಾಗದೆ, ಬಾಡಿಗೆಯನ್ನು ಹೆಚ್ಚಿಸುತ್ತಿದ್ದಾರೆ. ಆದರೂ, ಹೆಚ್ಚಿನವರು ತಮ್ಮ ಪ್ರಮುಖ ಪೇಯಿಂಗ್ ಗೆಸ್ಟ್‌ಗಳಾದ ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರ ಮೇಲೆ ಈ ಹೊರೆಯನ್ನು ವರ್ಗಾಯಿಸಲು ಒದ್ದಾಡುತ್ತಿದ್ದಾರೆ.

“ನಾವು ನಮ್ಮ ಅತಿಥಿಗಳಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ಬಾಡಿಗೆಯನ್ನು ಕೈಗೆಟಕುವಂತೆ ಇಡಲು ಬಯಸುತ್ತೇವೆ,” ಎಂದು ಸುಖಿ ಸಿಯೋ ಹೇಳಿದ್ದಾರೆ. “ಆದರೆ ಬೆಲೆ ಏರಿಕೆ ಮತ್ತು ನಿಯಮಾನುಸರಣೆಯ ಖರ್ಚುಗಳು ನಮ್ಮನ್ನು ಪರದಾಡುವಂತೆ ಮಾಡುತ್ತಿವೆ.”

ಪಿಜಿ ಉದ್ಯಮ ಮಾಲೀಕರ ಸಂಘಗಳಿಂದ ಒತ್ತಡವನ್ನು ಗುರುತಿಸಿ, ಬಿಬಿಎಂಪಿ ಕೆಲವು ಕಠಿಣ ನಿಯಮಗಳನ್ನು ಸಡಿಲಗೊಳಿಸುವ ಬಗ್ಗೆ ಚಿಂತಿಸುತ್ತಿದೆ. ಚರ್ಚೆಯಲ್ಲಿರುವ 40-ಅಡಿ ರಸ್ತೆ ಅಗಲದ ಮಾನದಂಡವೂ ಒಂದಾಗಿದೆ, ಇದು ಒಂದು ವೇಳೆ ಜಾರಿಗೆ ಬಂದರೆ ಮತ್ತೆ ಪಿಜಿಗೆ ಜೀವ ತುಂಬಬಹುದು. ನೋಂದಣಿಯನ್ನು ಕಡ್ಡಾಯಗೊಳಿಸಿದ್ದರೂ, ಬಿಬಿಎಂಪಿಯಲ್ಲಿ ಕೇವಲ 2,500 ಪಿಜಿಗಳನ್ನು ಮಾತ್ರ ಅಧಿಕೃತವಾಗಿ ನೋಂದಾಯಿಸಿದೆ, ಬಹುಶಃ ಅನೇಕರು ಈಗಿನ ಕಠಿಣ ನಿಯಮಗಳನ್ನು ಪೂರೈಸಲು ಸಾಧ್ಯವಾಗಿಲ್ಲ ಇರಬೇಕು

ಬೆಂಗಳೂರಿನ ಪಿಜಿಗಳು ಭಾರತದ ಸಿಲಿಕಾನ್ ವ್ಯಾಲಿಯಲ್ಲಿ ಹೊಸ ಅವಕಾಶಗಳನ್ನು ಶುರು ಮಾಡುವ ಯುವ ಕನಸುಗಾರರಿಗೆ, ಪದವೀಧರರಿಗೆ, ಸ್ಟಾರ್ಟಪ್ ಉದ್ಯೋಗಿಗಳು ಮತ್ತು ಐಟಿ ವೃತ್ತಿಪರರಿಗೆ  ಉಳಿಯಲು ಒಂದು ಉತ್ತಮ ಅವಕಾಶವಾಗಿತ್ತು.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »