ಇಸ್ರೇಲ್‌-ಇರಾನ್‌ ಸಂಘರ್ಷ| ಅತ್ತ ಟ್ರಂಪ್‌ ಯುದ್ಧ ವಿರಾಮ ಘೋಷಣೆ, ಇತ್ತ ಇರಾನ್‌ನಿಂದ ಇಸ್ರೇಲ್‌ ಮೇಲೆ ದಾಳಿ!

Isreal-Iran conflict missile attack
Isreal-Iran conflict missile attack

ಸೋಮವಾರ ಇಸ್ರೇಲ್‌ ಮತ್ತು ಇರಾನ್‌ ನಡುವೆ ಯುದ್ಧ ವಿರಾಮ ಘೋಷಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆನ್ನಲ್ಲೇ ಇರಾನ್‌ ಇಸ್ರೇಲ್‌ ಮೇಲೆ ದಾಳಿ ಮಾಡಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಇಸ್ರೇಲ್‌ನ ಅಧಿಕೃತ ಹೇಳಿಕೆ ಈ ಮಾಹಿತಿ ಹೊರಹಾಕಿದ್ದು, ನ್ಯೂಸ್‌ನೆಟ್‌ವರ್ಕ್‌ ಈ ಕುರಿತು ವರದಿ ಮಾಡಿದೆ.

ರಾಷ್ಟ್ರೀಯ ತುರ್ತು ವೈದ್ಯಕೀಯ ಸೇವೆ ಮಗೇನ್‌ ಡೇವಿಡ್‌ ಅಡಾಮ್‌, ಇರಾನ್‌ ದಾಳಿಯಲ್ಲಿ ಮೂವರು ಮೃತಪಟ್ಟಿರುವುದಾಗಿ ತಿಳಿಸಿದೆ ಎಂದು ವರದಿ ಹೇಳುತ್ತಿದೆ.

ಈ ದಾಳಿಗೂ ಕೆಲವೇ ಗಂಟೆಗಳ ಮುನ್ನ ಡೊನಾಲ್ಡ್‌ ಟ್ರಂಪ್‌ ಇಸ್ರೇಲ್ ಮತ್ತು ಇರಾನ್‌ ನಡುವೆ ಸಂಪೂರ್ಣ ಯುದ್ಧವಿರಾಮ ಘೋಷಿಸಲಾಗಿದೆ ಎಂದೂ, ಎರಡೂ ರಾಷ್ಟ್ರಗಳ ಒಪ್ಪಿವೆ ಎಂದು ಹೇಳಿಕೆ ನೀಡಿದ್ದರು.

ಬೆನ್ನಲ್ಲೇ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಅಮೆರಿಕದ ಅಧ್ಯಕ್ಷರ ಹೇಳಿಕೆಯನ್ನು ಒಪ್ಪಿರುವುದಾಗಿ ಹೇಳಿದ್ದರು. ಇರಾನ್‌ ಈ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿರಲಿಲ್ಲ.

ಇಸ್ರೇಲ್ ಮತ್ತು ಇರಾನ್‌ ನಡುವೆ ಆರಂಭವಾದ 12 ದಿನಗಳ ಯುದ್ಧದಲ್ಲಿ ಇರಾನ್‌ನಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದರು, ಅಪಾರ ಹಾನಿಉಂಟಾಗಿತ್ತು. ಇತ್ತ ಇಸ್ರೇಲ್‌ನಲ್ಲೂ ಹತ್ತಾರು ಜನರು ಜೀವ ಕಳೆದುಕೊಂಡಿದ್ದರು. ಅಪಾರ ಆಸ್ತಿಗೆ ಹಾನಿ ಉಂಟಾಗಿತ್ತು.

ಕಳೆದ ವಾರ ಇರಾನಿನ ಮೂರು ಪರಮಾಣು ಸ್ಥಾವರಗಳ ಮೇಲೆ ಅಮೆರಿಕದ ದಾಳಿ ನಡೆಸಿತ್ತು. ಈಗ ಎರಡೂ ರಾಷ್ಟ್ರಗಳು ಯುದ್ಧವಿರಾಮ ಘೋಷಿಸಲು ಒಪ್ಪಿವೆ ಎಂಬ ಹೇಳಿಕೆ ನೀಡಿದ್ದರು.

ಟ್ರಂಪ್‌ ಶಾಂತಿ ಘೋಷಣೆ; ಇರಾನ್‌ ನಿರಾಕರಣೆ

ಭಾರತ- ಪಾಕಿಸ್ತಾನ ಯುದ್ಧ ಸಂದರ್ಭದಲ್ಲಿ ಸ್ವಯಂ ಪ್ರೇರಿತವಾಗಿ ಮಧ್ಯಸ್ಥಿಕೆ ವಹಿಸಿ ಶಾಂತಿ ಘೋಷಿಸಿದ್ದು ಈಗ ಇರಾನ್‌ ಯಾವುದೇ ಶಾಂತಿ ಒಪ್ಪಂದವಾಗಿಲ್ಲ ಎಂದು ಹೇಳಿಕೆ ನೀಡಿದೆ.

ಇರಾನಿನ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್‌ ಅರಾಘಾಚಿ, ಇರಾನ್‌ ಸತತವಾಗಿ ಸ್ಪಷ್ಟಪಡಿಸಿದೆ, ಇಶ್ರೇಲ್‌ ಯುದ್ಧ ಘೋಷಿಸಿತೆ ವಿನಾಃ ಇರಾನ್‌ ಅಲ್ಲ.ಲ ಇಲ್ಲಿಯವರೆಗೆ ಯುದ್ಧವಿರಾಮ ಅಥವಾ ಸೇನಾ ಕಾರ್ಯಾಚರಣೆ ನಿಲ್ಲಿಸಲು ಯಾವುದೇ ಒಪ್ಪಂದವಾಗಿಲ್ಲ.” ಎಂದು ತಮ್ಮ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಭಾರತ-ಪಾಕಿಸ್ತಾನ ಸಂಘರ್ಷ ಸಂದರ್ಭದಲ್ಲಿ ಟ್ರಂಪ್‌ ಸ್ವತಃ ಎರಡೂ ರಾಷ್ಟ್ರಗಳೊಂದಿಗೆ ಮಾತನಾಡಿ, ಯುದ್ಧವಿರಾಮಕ್ಕೆ ಒಪ್ಪಿಸಿದ್ದಾಗಿ ಟ್ರಂಪ್‌ ಹೇಳಿಕೆ ನೀಡಿದ್ದರು. ಈಗ ಇಸ್ರೇಲ್-ಇರಾನ್‌ ಸಂಘರ್ಷದ ಸಂದರ್ಭದಲ್ಲೂ ಹೇಳಿಕೆ ನೀಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Share:

ಮತ್ತಷ್ಟು ಸುದ್ದಿ

ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮ

ಅಲೆದಾಟ ಮುಕ್ತ ಆಡಳಿತದತ್ತ ಮೇಲುಕೋಟೆ ಮನೆ ಬಾಗಿಲಿಗೇ ಬಂದ ‘ಸರ್ಕಾರಿ ಸೇವೆ’ ಕಾರ್ಯಕ್ರಮ  ತಂತ್ರಜ್ಞಾನದ ಅರಿವನ್ನು ಆಡಳಿತ ಯಂತ್ರಕ್ಕೆ ವರ್ಗಾಯಿಸಿದ

ಬೆಂಗಳೂರಿನಲ್ಲಿ ಮೇ 25 ರಂದು 3ನೇ ಕರ್ನಾಟಕ ಸಂಘಟಕರ ಸಮಾವೇಶ

ಸಾಂಸ್ಕೃತಿಕ ನೀತಿ ಜಾರಿ ಮತ್ತು ಅಕಾಡೆಮಿಗಳ ಬಲವರ್ಧನೆಗೆ ಆಗ್ರಹಿಸಿ ರಂಗಕರ್ಮಿಗಳು ಹಾಗೂ ಸಾಂಸ್ಕೃತಿಕ ಸಂಘಟಕರ ಬೃಹತ್‌ ಸಮಾಲೋಚನೆ ಬೆಂಗಳೂರು: ಕರ್ನಾಟಕ

ಮುಂದೆ ಓದಿ »

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »