‘ಅಪಾಯಕಾರಿ’ ಲೇಬಲ್‌ನೊಂದಿಗೆ ಇನ್ಮುಂದೆ ಜಿಲೇಬಿ, ಸಮೋಸಾ

ತಿನಿಸು ಪ್ರಿಯರನ್ನು ಕೈಬೀಸಿ ಕರೆಯುವ ಜಿಲೇಬಿ, ಸಮೋಸಾ, ಬಿಸ್ಕೆಟ್ ಹಾಗೂ ಚಹಾ ಇನ್ನುಮುಂದೆ ಸಿಗರೇಟ್ನಂತೆ ʼಅಪಾಯಕಾರಿʼ ಎಂಬ ಲೇಬಲ್‌ನೊಂದಿಗೆ ಸಿಗಲಿವೆ.
Harmful Warning

ಸಂಜೆಯಾಗುತ್ತಿದ್ದಂತೆ ತಿನಿಸು ಪ್ರಿಯರನ್ನು ಕೈಬೀಸಿ ಕರೆಯುವ ಜಿಲೇಬಿ, ಸಮೋಸಾ, ಬಿಸ್ಕೆಟ್ ಹಾಗೂ ಚಹಾ ಇನ್ನುಮುಂದೆ ಸಿಗರೇಟ್ನಂತೆ ʼಅಪಾಯಕಾರಿʼ ಎಂಬ ಲೇಬಲ್‌ನೊಂದಿಗೆ ಸಿಗಲಿವೆ.

ಆರೋಗ್ಯ ಸಚಿವಾಲಯವು, ನಾಗ್ಪುರ್ ಎಐಐಎಂಎಸ್ ಸೇರಿದಂತೆ ಎಲ್ಲ ಕೇಂದ್ರೀಯ ಸಂಸ್ಥೆಗಳಿಗೆ, ಜನಸಾಮಾನ್ಯರು ತಿನ್ನುವ ತಿಂಡಿ, ತಿನಿಸುಗಳು ಎಷ್ಟು ಎಣ್ಣೆಯ ಅಂಶ ಮತ್ತು ಸಕ್ಕರೆಯ ಅಂಶಹೊಂದಿದೆ ಎಂಬ ಫಲಕವನ್ನು ಎದ್ದುಕಾಣುವಹಾಗೆ ಅಳವಡಿಸುವಂತೆ ಸೂಚನೆ ನೀಡಿದೆ. ಸಿಗರೇಟಿನಂತೆಯೇ ಈ ಜಂಕ್ ಫುಡ್ಗಳು ಸಹ ಹಾನಿಕಾರಕ ಎಂದು ಜಾಗೃತಿ ಮೂಡಿಸಲು ಈ ಪ್ರಯತ್ನ ಮೊದಲ ಹೆಜ್ಜೆ ಎನ್ನಲಾಗಿದೆ.

ಸಾಂಪ್ರದಾಯಿಕ ಆಹಾರವೆಂದು ಸೇವಿಸಲಾಗುವ ಈ ಆಹಾರಗಳು ಎಷ್ಟು ಜಿಡ್ಡಿನ ಅಂಶ ಮತ್ತು ಸಕ್ಕರೆಯನ್ನು ಹೊಂದಿವೆ ಎನ್ನುವುದು ಜನಸಾಮಾನ್ಯರ ಗಮನಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಸಂಸ್ಥೆಗಳು ಶಾಂತವಾದ ಆದರೆ, ತೀಕ್ಷಣವಾದ ಜ್ಞಾಪನೆಗಳನ್ನು ಎಚ್ಚರಿಕೆಯಾಗಿ ಬಳಸುವ ಗುರಿಹೊಂದಿವೆ. ಈ ಎಚ್ಚರಿಕೆ ಫಲಕಗಳನ್ನು ಕೆಫೆಟೇರಿಯಾ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗುವುದು. ಜಿಲೇಬಿ, ಸಮೋಸಾ ಹಾಗೂ ಚಾಯ್ ಮಾತ್ರವಲ್ಲ, ಲಡ್ಡೂ, ವಡಾಪಾವ್, ಪಕೋಡಾಗಳನ್ನೂ ಸಹ ಪರಿಶಿಲಿಸಲಾಗುತ್ತಿದೆ ಎಂದು ನಾಗ್ಪರ್ ಎಐಐಎಂಎಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಸರ್ಕಾರದ ಆಂತರಿಕ ಟಿಪ್ಪಣಿಯೊಂದು ದೇಶದಲ್ಲಿ ಬಿಕ್ಕಟ್ಟಾಗಿ ಪರಿಣಮಿಸುತ್ತಿರುವದರ ಬಗ್ಗೆ ಬೆಳಕು ಚೆಲ್ಲಿದ್ದು, 2050ರ ವೇಳೆಗೆ ಭಾರತದ 44.9 ಕೋಟಿಗೂ ಹೆಚ್ಚು ಜನ ಅಧಿಕ ತೂಕ ಮತ್ತು ಬೊಜ್ಜು ಹೊಂದಿರುತ್ತಾರೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಪ್ರತೀ ಐದು ಜನ ವಯಸ್ಕರಲ್ಲಿ ಒಬ್ಬರು ಅಧಿಕ ತೂಕ ಹೊಂದಿದವರಾಗಿದ್ದಾರೆ. ಕಳಪೆ ಆಹಾರ ಮತ್ತು ವ್ಯಾಯಾಮದ ಕೊರತೆ ಈ ಕಳವಳವನ್ನು ಇನ್ನಷ್ಟು ಹೆಚ್ಚು ಮಾಡಿದೆ.

ಇದನ್ನೂ ಓದಿ | ಆಹಾರ ಸುರಕ್ಷತೆ ತಪಾಸಣೆ: 406 ಬೀದಿಬದಿ ಮಾರಾಟಗಾರರಿಗೆ ನೋಟಿಸ್

ಇದು ಆಹಾರವನ್ನು ನಿಷೇಧಿಸುವ ವಿಚಾರವಲ್ಲ. ಬದಲಿಗೆ, ಒಂದು ಗುಲಾಬ್ ಜಾಮೂನಿನಲ್ಲಿ ಐದು ಟೀ ಚಮಚ ಸಕ್ಕರೆ ಇರಬಹುದು ಎಂದು ಜನ ತಿಳಿದಾಗ, ಅವರು ಅದನ್ನು ತಿನ್ನುವ ಮೊದಲು ಎರಡುಬಾರಿ ಯೋಚಿಸಬಹುದು. ಒಟ್ಟಿನಲ್ಲಿ ʼತಿಳಿದು ತಿನ್ನಿʼ ಎನ್ನುತ್ತಿದ್ದಾರೆ ತಜ್ಞರು.

Share:

ಮತ್ತಷ್ಟು ಸುದ್ದಿ

ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮ

ಅಲೆದಾಟ ಮುಕ್ತ ಆಡಳಿತದತ್ತ ಮೇಲುಕೋಟೆ ಮನೆ ಬಾಗಿಲಿಗೇ ಬಂದ ‘ಸರ್ಕಾರಿ ಸೇವೆ’ ಕಾರ್ಯಕ್ರಮ  ತಂತ್ರಜ್ಞಾನದ ಅರಿವನ್ನು ಆಡಳಿತ ಯಂತ್ರಕ್ಕೆ ವರ್ಗಾಯಿಸಿದ

ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಲು ಮನವಿ

ಕಾಂಗ್ರೆಸ್‌ ಹೈಕಮಾಂಡ್‌ಗೆ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ಒತ್ತಾಯ ಮೈಸೂರು: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ

ಮುಂದೆ ಓದಿ »

ಬೆಂಗಳೂರಿನಲ್ಲಿ ಮೇ 25 ರಂದು 3ನೇ ಕರ್ನಾಟಕ ಸಂಘಟಕರ ಸಮಾವೇಶ

ಸಾಂಸ್ಕೃತಿಕ ನೀತಿ ಜಾರಿ ಮತ್ತು ಅಕಾಡೆಮಿಗಳ ಬಲವರ್ಧನೆಗೆ ಆಗ್ರಹಿಸಿ ರಂಗಕರ್ಮಿಗಳು ಹಾಗೂ ಸಾಂಸ್ಕೃತಿಕ ಸಂಘಟಕರ ಬೃಹತ್‌ ಸಮಾಲೋಚನೆ ಬೆಂಗಳೂರು: ಕರ್ನಾಟಕ

ಮುಂದೆ ಓದಿ »

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »