ಫಸ್ಟ್‌ ಶೋ | ಇದು ಪ್ರತಿ ಊರುಗಳ ಸಹಜ – ಸರಳ ಕತೆ!

ನಿರ್ಮಾಪಕ ರಾಜ್‌ ಬಿ ಶೆಟ್ಟಿ ತಮ್ಮ ಸಿನಿಮಾ ಅನುಭವವನ್ನು ಸೊಗಸಾಗಿ ದುಡಿಸಿಕೊಂಡಿದ್ದಾರೆ. ರಂಗಭೂಮಿಯ ಪ್ರತಿಭಾವಂತರ ತಂಡ ಕತೆಯ ಆಶಯವನ್ನು ಅರಿತು ಸಿನಿಮಾ ಮಾಡಿದೆ. ಕರಾವಳಿ ನೇಟಿವಿಟಿ, ಅಲ್ಲಿನ slang ಅನ್ನು ಪರಿಣಾಮಕಾರಿಯಾಗಿ ದುಡಿಸಿಕೊಂಡ ಮತ್ತೊಂದು ಚಿತ್ರವಾಗಿ 'ಸು ಫ್ರಂ ಸೋ' ದಾಖಲಾಗುತ್ತದೆ ಎನ್ನುತ್ತಾರೆ ಅಮೋಘವರ್ಷ.
Su From So

ರಾಜ್‌ ಬಿ ಶೆಟ್ಟಿ ಭಿನ್ನ ಆಲೋಚನೆಗಳೊಂದಿಗೆ ಸಿನಿಮಾ ಮಾಡುವ ನಟ – ನಿರ್ದೇಶಕ. ‘ಸು ಫ್ರಂ ಸೋ’, ಅವರ ನಿರ್ಮಾಣದ ಸಿನಿಮಾ ಎಂದೇ  ಸುದ್ದಿಯಾಗಿತ್ತು. ಈ ಬಾರಿ ಮತ್ತೊಂದು ವಿಶಿಷ್ಟ ಸಿನಿಮಾದೊಂದಿಗೆ ಅವರು ಥಿಯೇಟರ್‌ಗೆ ಬಂದಿದ್ದಾರೆ. ತಾವು ಹಿಂದೆ ನಿಂತು ಪ್ರತಿಭಾವಂತ ಕಲಾವಿದರು ಹಾಗೂ ತಂತ್ರಜ್ಞರಿಗೆ ಸಲಹೆ – ಸೂಚನೆಗಳೊಂದಿಗೆ ನೆರವಾಗಿದ್ದಾರೆ. ಮೂಲತಃ ತುಳು ರಂಗಭೂಮಿಯ ನಟ – ನಿರ್ದೇಶಕರಾದ ಜೆ ಪಿ ತೂಮಿನಾಡು ಚೊಚ್ಚಲ ನಿರ್ದೇಶನದ ಚಿತ್ರವಿದು. ಈ ಹಿಂದೆ ಕೆಲವು ಸಿನಿಮಾಗಳ ಚಿಕ್ಕ ಪಾತ್ರಗಳಲ್ಲಿ ಅವರು ನಟಿಸಿದ್ದರು. ಈ ಬಾರಿ ಪೂರ್ಣಪ್ರಮಾಣದ ಪಾತ್ರ ಪೋಷಿಸಿದ್ದು, ನಟನೆ ಮಾತ್ರವಲ್ಲದೆ ನಿರ್ದೇಶನದಲ್ಲೂ ಗಮನ ಸೆಳೆಯುತ್ತಾರೆ.

ಈ ಚಿತ್ರದಲ್ಲಿ ಯಾರನ್ನೂ ನಾಯಕನಟ, ನಾಯಕನಟಿ ಎಂದು ಕರೆಯುವ ಹಾಗಿಲ್ಲ. ಇಲ್ಲಿ ಎಲ್ಲಾ ಪಾತ್ರಗಳಿಗೂ space ಇದೆ. ಅವರು ನಮ್ಮ, ನಿಮ್ಮೂರಿನ ಜನರಂತೆಯೇ ಕಾಣಿಸುತ್ತಾರೆ. ಈ ಪಾತ್ರಗಳನ್ನು ಪೋಷಿಸಿರುವ ಕಲಾವಿದರು ರಂಗಭೂಮಿ ಹಿನ್ನೆಲೆಯವರೇ ಆಗಿದ್ದು, ಅತ್ಯಂತ ಸಹಜವಾಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಪಾತ್ರಗಳು ಪ್ರೇಕ್ಷಕರಿಗೆ ಆಪ್ತವಾಗಿ connect ಆಗುತ್ತೆ. ನಿರ್ದೇಶಕ ಜೆಪಿ ತೂಮಿನಾಡು ಅವರೂ ಸನ್ನಿವೇಶಗಳನ್ನು ಅತ್ಯಂತ ಸಹಜವಾಗಿ ಕಟ್ಟುತ್ತಾ ಹೋಗುತ್ತಾರೆ. ಪಾತ್ರಗಳ ಆಗು-ಹೋಗುಗಳಲ್ಲೇ ಹಾಸ್ಯ ಹಾಸುಹೊಕ್ಕಾಗಿದ್ದು, ಕಾಮಿಡಿ ಇಲ್ಲಿ ‘Staged’ ಎಂದು ಎಲ್ಲೂ ಅನಿಸುವುದಿಲ್ಲ.

ಚಿತ್ರವಿಡೀ ಕಾಣಿಸುವುದು ಮುಗ್ಧತೆ. ಜನರ ಈ ಮುಗ್ಧತೆ ಹೇಗೆ ಮನೆಗಳಲ್ಲಿ, ಹಳ್ಳಿಯಲ್ಲಿ ಸಂಚಲನ ಮೂಡಿಸುತ್ತದೆ ಎನ್ನುವುದು ಕತೆ. ಸೋಜಿಗವೆಂದರೆ ಸಮಸ್ಯೆಯೊಂದನ್ನು ಪರಿಹರಿಸಲು ಬರುವ ಸ್ವಾಮೀಜಿಯಲ್ಲಿಯೂ ಒಂದು ಮುಗ್ಧತೆಯಿದೆ! ಕೆಲವರಿಗೆ ಕಂಟಕವಾಗುವ ಈ ಮುಗ್ಧತೆ ಮತ್ತೆ ಕೆಲವರಿಗೆ ಒಳಿತು ಮಾಡುತ್ತದೆ. ಚಿತ್ರದಲ್ಲಿ ಹಾಸ್ಯದ ಜೊತೆ ಪ್ರೇಮಕತೆಯೂ ಇದೆ. ಚೆಂದದ ಗೀತಸಾಹಿತ್ಯವಿರುವ ಹಾಡುಗಳಿವೆ. ಸಿನಿಮಾ ಬಿಡುಗಡೆಗೂ ಮುಂಚೆ ಸದ್ದು ಮಾಡಿದ್ದ ‘Danks Anthem’ ದೊಡ್ಡ ಪರದೆ ಮೇಲೆ ಮತ್ತಷ್ಟು ಇಷ್ಟವಾಗುತ್ತದೆ.

ಎಲ್ಲರ ಊರು, ಕುಟುಂಬಗಳಲ್ಲಿ ನಡೆಯುವ ಕತೆಯನ್ನೇ ಹೇಳಿದ್ದಾರೆ ನಿರ್ದೇಶಕರು. ಹಾಸ್ಯದ ಎಳೆಯ ಮಧ್ಯೆ ಸಂಬಂಧಗಳ ಬಗ್ಗೆ ಸೂಚ್ಯವಾಗಿ, ಸೂಕ್ಷ್ಮವಾಗಿ ಹೇಳುವುದೂ ಜವಾಬ್ದಾರಿಯಾಗಬೇಕು. ಪ್ರಭಾವಶಾಲಿ ಮಾಧ್ಯಮ ಸಿನಿಮಾ. ಇಲ್ಲಿ ಚಿಕ್ಕಪ್ಪನಿಂದಾಗುವ ಲೈಂಗಿಕ ಶೋಷಣೆಯನ್ನು ಸೂಚ್ಯವಾಗಿ ಹೇಳಿದ್ದರೆ ಸಾಕಿತ್ತು. ಸನ್ನಿವೇಶವೊಂದು ಪ್ರೇಕ್ಷಕನಲ್ಲಿನ ಒಳಿತನ್ನು ಪ್ರೇರೇಪಿಸುವಂತೆ ಇರಬೇಕೇ ವಿನಹಃ, ಪ್ರಚೋದನೆಗೆ ದಾರಿಯಾಗಕೂಡದು. ಯಾವುದೇ ಸೃಜನಶೀಲ ನಿರ್ದೇಶಕರಿಗೆ ಇದು ಖಂಡಿತ ಕಷ್ಟವಾಗಲಾರದು. ಚಿತ್ರದಲ್ಲಿ ಚಿಕ್ಕಪ್ಪನ ಪಾತ್ರವನ್ನು ಅಷ್ಟೊಂದು ವಾಚ್ಯ ಮಾಡುವ ಅಗತ್ಯ ಇರಲಿಲ್ಲ.

ಇದನ್ನೂ ಓದಿ | ಫಸ್ಟ್‌ ಶೋ| ‘ಎಕ್ಕ’ : ಭೂಗತ ಜಗತ್ತಿನ ಸುಳಿಯಲ್ಲಿ ಹುಟ್ಟೂರಿನ ಕನವರಿಕೆ

ನಿರ್ಮಾಪಕ ರಾಜ್‌ ಬಿ ಶೆಟ್ಟಿ ತಮ್ಮ ಸಿನಿಮಾ ಅನುಭವವನ್ನು ಸೊಗಸಾಗಿ ದುಡಿಸಿಕೊಂಡಿದ್ದಾರೆ. ರಂಗಭೂಮಿಯ ಪ್ರತಿಭಾವಂತರ ತಂಡ ಕತೆಯ ಆಶಯವನ್ನು ಅರಿತು ಸಿನಿಮಾ ಮಾಡಿದೆ. ಕರಾವಳಿ ನೇಟಿವಿಟಿ, ಅಲ್ಲಿನ slang ಅನ್ನು ಪರಿಣಾಮಕಾರಿಯಾಗಿ ದುಡಿಸಿಕೊಂಡ ಮತ್ತೊಂದು ಚಿತ್ರವಾಗಿ ‘ಸು ಫ್ರಂ ಸೋ’ ದಾಖಲಾಗುತ್ತದೆ. ಚಿತ್ರದ ಕಲಾವಿದರಾಗಿ ಶನೀಲ್‌ ಗೌತಮ್‌, ಜೆಪಿ ತೂಮಿನಾಡು, ಸಂಧ್ಯಾ ಅರಕೆರೆ, ಪ್ರಕಾಶ್‌ ಕೆ ತೂಮಿನಾಡು, ದೀಪಕ್‌ ರೈ ಪಾಣಾಜೆ, ಮೈಮ್‌ ರಾಮ್‌ದಾಸ್‌ ಸೇರಿದಂತೆ ಚಿತ್ರದ ಪ್ರತಿಯೊಬ್ಬ ಕಲಾವಿದರ ಪಾತ್ರಗಳೂ ನೆನಪಿನಲ್ಲಿಳಿಯುತ್ತವೆ. ಸುಮೇದ್‌ ಹಿನ್ನೆಲೆ ಸಂಗೀತ, ವಿನಾಯಕ್‌ ಆಚಾರ್ಯ ಛಾಯಾಗ್ರಹಣಕ್ಕೂ ಚಪ್ಪಾಳೆ ಸಲ್ಲಬೇಕು. ಒಂದೊಳ್ಳೆಯ ಅನುಭವಕ್ಕಾಗಿ ‘ಸು ಫ್ರಂ ಸೋ’ ವೀಕ್ಷಿಸಿ!

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »