`ಕುಂದಾಪ್ರ’: ಕರಾವಳಿಯು ಚೆಂದದ ಸಂಸ್ಕೃತಿಯ ತವರೂರು

ಒಂದ್‌ ಕಾಲದಲ್ಲ್‌  ಕುಂದಾಪ್ರ ಅಂದ್ರೆ ಕುಂದಾಪ್ರದರಿಗ್‌ ಬಿಟ್ಟ ಹೊರ್‌ಗಿನರಿಗೆ ಗೊತ್ತ್‌ ಆತ್ತಿಲ್ಲ ಇದ್ದಿತ್ತ್‌. ಈಗ ಖಾಲಿ ಊರ್‌ ಮಾತ್ರ ಬೆಳಿಲಿಲ್ಲ. ಜೊತಿಗೆ ಕುಂದಾಪ್ರ ಭಾಷಿಯೂ ಬೆಳಿತಿತ್ತ್‌ "
Kundapura: Where Coastal Charm Meets Cultural Pride

 ಒಂದ್‌ ಕಾಲದಲ್ಲ್‌  ಕುಂದಾಪ್ರ ಅಂದ್ರೆ ಕುಂದಾಪ್ರದರಿಗ್‌ ಬಿಟ್ಟ ಹೊರ್‌ಗಿನರಿಗೆ ಗೊತ್ತ್‌ ಆತ್ತಿಲ್ಲ ಇದ್ದಿತ್ತ್‌. ಈಗ ಖಾಲಿ ಊರ್‌ ಮಾತ್ರ ಬೆಳಿಲಿಲ್ಲ. ಜೊತಿಗೆ ಕುಂದಾಪ್ರ ಭಾಷಿಯೂ ಬೆಳಿತಿತ್ತ್‌ ” 

ʻಕುಂದಾಪ್ರʼ – ಈಗ ಯಾರಿಗ್‌ ಗೊತ್ತಿಪ್ಪುದ್ದಿಲ್ಲ ಹೇಳಿ. ಗೊತ್ತಿಲ್ದೇ ಇಪ್ಪುಕೇ ಕುಂದಾಪ್ರ ಯಾವ್ದಕ್‌ ಕಮ್ಮಿ ಇತ್ತ್‌ ಹೇಳಿ ಕಾಂಬಾ. ಹಾಡ್ವರ್‌, ಕುಣುವರ್‌, ಬರುವರ್‌, ಯಾವ ಕ್ಷೇತ್ರದಲ್ಲ ಕುಂದಾಪ್ರ್‌ದರ್‌ ಇಲ್ಲ ಹೇಳಿ. ಕನ್ನಡ ಚಿತ್ರರಂಗದಲ್ಲಂತೂ ನಮ್ಮ ಕುಂದಾಪ್ರದ ಎಂತೆಂತ ಪ್ರತಿಭೆಗಳಿದ್ರ. ಸುಮ್ನೆ ಹಿಂಗೆ ನೆನಪ್‌ ಮಾಡಕಂಬ ಅಂದ್ರು ಡಜನ್‌ಗಟ್ಲಿ ಹೆಸರ್‌ ಕಣ್ಣ್‌ ಮುಂದ ಬಂತ್‌. ಕಾಶಿನಾಥ್‌, ಉಪೇಂದ್ರ, ರಿಷಬ್‌ ಶೆಟ್ಟಿ, ರವಿ ಬಸ್ರೂರು,ಯಬ್ಬಾ ಹಿಂಗೆ ಹೇಳ್ತಾ ಹ್ವಾರೆ ಹೆಸ್ರ ಚೀಟಿ ಉದ್ದಾ ಆತಾ ಹ್ವಾತ್‌. ಇತ್ಲೈ ಅಂತೂ  ಕರಾವಳಿಯವ್ರ ಯಾವ್ದಕ್ಕೂ ಕಮ್ಮಿ ಇಲ್ಲ ಅಂತ ಪ್ರೂವ್‌ ಮಾಡ್ವರ್‌ ಸಂಖಿ ಹೆಚ್ಚಾತಾ ಹೊತ್ತಿತ್‌ ಬಿಟ್ರೆ ಕಮ್ಮಿ ಅಂತ ಆಯಿಲಿಲ್ಲಾ . ಆತೂ ಇಲ್ಲಾ.

“ಕುಂದಾಪ್ರ ಭಾಷಿ ಚೆಂದ, ಕುಂದಾಪ್ರ ಬದ್ಕ್ ಚೆಂದ, ಕುಂದಾಪ್ರದ್ ಜನ ಇನ್ನೂ ಚೆಂದ. ಹೌದ್… ಹೆತ್ ಅಬ್ಬಿ, ಹುಟ್ಟಿದ್ ಊರ್ ಬಿಟ್ ಪರ ಊರಿಗೆ ಬಂದ್ ಹೊಟ್ಟಿ ಹೊರಕಂಬು ಮಕ್ಕಳಿಗೆ ಕುಂದಾಪ್ರ ಭಾಷಿ ಕೆಮಿ ತುದಿಗೆ ಬಿದ್ರೆ ಸಾಕ್, ಕೆಮಿ ಚುಳ್ ಅಂಬುದ್ ಸುಳ್ಳಲ್ಲ” ಎಂದ ಮನು ಹಂದಾಡಿ ಅವ್ರ ಹೇಳ್ದದ್‌ ಎಲ್ಲೋ ಕೇಡದ್‌ ನೆನಪ್‌. ಇದ್‌ ಎಷ್ಟ್‌ ಸತ್ಯ ಅಲ್ದಾ. ಒಂದ್‌ ಮಾತ್‌ ಸಾಕ್‌ ಅಲ್ಲೇ ಕಂಡ ಹಿಡಿತ್‌ ಇವ್ರ ಕುಂದಾಪ್ರದರ್‌ ಅನಕಾ. 

ಇನ್ನ್ ನಮ್ಮೂರಲ್‌ ಕಾಂಬುಕ್‌ ಎಂತಲ್ಲಾ ಇತ್ತ ಅಂದ ಹೇಳ್ರೆ‌, ಪಿಚ್ಚರ್‌ ಅಲ್‌ ತೋರ್ಸೋ ಮರವಂತೆ ಬೀಚ್‌, ಕೋಡಿ ಬೀಚ್‌ ಹೀಂಗೆ ಚಂದ ಚಂದದ್ದ್‌ ಸಮುದ್ರ ಕಾಣಲಕ್ಕ್.‌ ಮತ್ತೆ ಎಲ್ಲಾ ಘಟಾನುಘಟಿ ದೇವ್ರು ಕುಂದಾಪ್ರದಲ್ಲೇ ಇಪ್ಪುದ್‌ ಅಂದ್ರು ತಪ್ಪಿಲ್ಲಾ ಕಾಣಿ. ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ, ಕೊಲ್ಲೂರು ಮೂಕಾಂಬಿಕೆ, ಅಣೆಗುಡ್ಡೆ ಗಣಪತಿ ಹಿಂಗೆ ಸಾಲ್‌ ಸಾಲ್‌ ದೇವಸ್ಥಾನ. 

ನಮ್ಮೂರಿನ ಯಕ್ಷಗಾನ, ಹುಲಿವೇಷ, ಕೋಲಾ (ಭೂತರಾಧನೆ) ಇಂತ ಸಾಂಸ್ಕೃತಿ ಮತ್ತು ಧಾರ್ಮಿಕ ಆಚರಣೆಗಳನ್ನ ಕಾಂಬುಕೆ ಎರಡ್‌ ಕಣ್ಣ್‌ ಸಾಕಾತಿಲ್ಲ.

ಇದನ್ನೆಲ್ಲಾ ಬಿಟ್ಟ್‌ ಉಂಬುಕ್‌ ಎಂತಾ ಬೇಕ್‌ ಹೇಳಿ. ಆಹಾ.. ಏಣಸ್ಕಂಡ್ರೇ ಬಾಯೆಗ್‌ ನೀರ್‌ ಬಪ್ಪುಕ್‌ ಶುರು ಆತ್ತ್‌. ಅದ್ರಲ್ಲೂ ಈ ಮಳ್‌ಗಾಲ್ದಲ್‌ ಬಿಸಿ ಬಿಸಿ ಕೊಚ್ಚಕ್ಕಿ ಅನ್ನದ್ದ ಜೊತಿಗೆ ಬೈಯ್ಗಿ ಮೀನ್‌ ಸಾರ್‌ ಇದ್ರಂತೂ ಸ್ವರ್ಗುವೇ. ವರ್ಷದ್‌ 365 ದಿನವೂ ಮೀನಿಗ್‌ ಮಾತ್ರ ಬರ ಇಲ್ಲಾ ಕಾಣಿ. 

ಎಷ್ಟಾರೂ ಎಲ್ಲಾರಿಗೂ ಅವ್ರ ಅವ್ರ ಊರ್‌ ಚೆಂದ. ಹಂಗೆ ನಮ್ಗೂ.  ಹಾಗಂತ ನಮ್ಗೆ ನಮ್ಮ ಊರ್‌, ಭಾಷಿ ಮೇಲ್‌ ಇಪ್ಪುದ್‌ ವ್ಯಾಮೋಹ ಅಲ್ಲಾ. ನಮ್ಮೂರ್‌, ನಮ್ಮ ಭಾಷಿ ಮೇಲ್‌ ಇಪ್ಪುದ್‌ ಪ್ರೀತಿ ಮತ್ತೆ ಅಭಿಮಾನ ಅಷ್ಟೇ ಕಾಣಿ.  

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »