ವಚನ ಸಂಚಯ
ವಚನ ಸಂಚಯವು ಸಾವಿರಾರು ವಚನಗಳನ್ನು ತಂತ್ರಜ್ಞಾನದ ಮೂಲಕ ಸಂಗ್ರಹಿಸಿ, ಇಂದಿನ ಪೀಳಿಗೆಗೆ ತಲುಪಿಸುತ್ತಿರುವ ಒಂದು ಅನನ್ಯ ಯೋಜನೆ. 2012ರಿಂದ ಆರಂಭವಾಗಿ, ಹೊಂದಾಣಿಕೆ ಶೋಧ, ಟಿಪ್ಪಣಿ ವ್ಯವಸ್ಥೆ, ಗ್ರಾಫ್ಗಳು, ಪದಕೋಶ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದರಲ್ಲಿ 249 ವಚನಕಾರರ 20,000ಕ್ಕೂ ಅಧಿಕ ವಚನಗಳಿವೆ.
ವಚನ ಸಾಹಿತ್ಯ
ವಚನ ಸಾಹಿತ್ಯವು ಕೇವಲ ಧಾರ್ಮಿಕ ಅಥವಾ ನೈತಿಕ ಸಾರವಲ್ಲ, ಅದು ಕಾಲದ ಸಮಾಜದಲ್ಲಿನ ಅಸಮತೋಲನೆಯ ವಿರುದ್ಧದ ಒಂದು ಶಕ್ತಿಶಾಲಿ ಆಂದೋಲನವೂ ಆಗಿತ್ತು. ಸುಮಾರು 250ಕ್ಕೂ ಹೆಚ್ಚು ವಚನಕಾರರು ಬರೆಯಲಾದ 25000 ಕ್ಕೂ ಹೆಚ್ಚು ವಚನಗಳು ಕನ್ನಡ ಭಾಷೆಯ ದೈತ್ಯ ಸಂಪತ್ತಾಗಿದೆ. ವಚನ ಸಾಹಿತ್ಯವು ಕನ್ನಡದ ಚಿಂತನೆಗಳ ಮತ್ತು ಸಮಾಜ ಪರಿವರ್ತನೆಯ ಧ್ವನಿ. ೧೧-೧೨ನೇ ಶತಮಾನದಲ್ಲಿ ಜನಸಾಮಾನ್ಯರ ಆಂದೋಲನದ ಭಾಗವಾಗಿ ಹುಟ್ಟಿಕೊಂಡ ಈ ಸಾಹಿತ್ಯವು, ನುಡಿ ಮತ್ತು ನಡತೆ ನಡುವೆ ಏಕತೆ ಸಾಧಿಸುವ ಪ್ರಯತ್ನವಾಗಿತ್ತು. ಇಂದಿನ ದಿನಗಳಲ್ಲಿ ಈ ಸಾಹಿತ್ಯವು ಸಾಮಾಜಿಕ ಸಮಾನತೆ, ಲಿಂಗ ಸಮಾನತೆ ಮತ್ತು ಸಮಾಜದಲ್ಲಿ ಎದುರಾಗುವ ಪ್ರತಿ ಪ್ರಶ್ನೆಗಳಿಗೂ ಅಂದೇ ಉತ್ತರಿಸಿದೆ. ವಚನ ಸಂಚಯದಂತಹ ಯೋಜನೆಗಳು ಈ ಬರಹಗಳನ್ನು ಡಿಜಿಟಲ್ ಜಗತ್ತಿಗೆ ತರುತ್ತಿವೆ, ಓದುಗರಿಗೆ ಸುಲಭವಾಗಿ ಸಾಹಿತ್ಯ ದೊರಕುವಂತೆ ಮಾಡುತ್ತಿವೆ.
ರಾಜ್ಯ ಸರ್ಕಾರವು ಈ ವಚನಗಳನ್ನು ‘ಸಮಗ್ರ ವಚನ ಸಂಪುಟ’ ಎಂಬ ವೆಬ್ಸೈಟ್ನಲ್ಲಿ ಪ್ರಕಟಿಸಿದರೂ, ಅದು ಉಪಯೋಗಿಸುವುದಕ್ಕೆ ಅನುಕೂಲಕರವಲ್ಲ. ಹುಡುಕಾಟದ ಸೌಲಭ್ಯವಿಲ್ಲದ ಕಾರಣ ಇದು ಜನರಿಗೆ ದೂರವಾಯಿತು.
ವಚನ ಸಾಹಿತ್ಯಕೊಂದು ವಚನ ಸಂಚಯ
ಇದನ್ನು ಗಮನಿಸಿದ ವಿಕಿಪೀಡಿಯನ್ಗಳು ಪವಿತ್ರಾ ಹಂಚಗೈಯ್ಯ ಮತ್ತು ಓಂ ಶಿವಪ್ರಕಾಶ್ ಎಚ್ಐ, ಭಾಷಾಶಾಸ್ತ್ರಜ್ಞರು ಒ.ಎಲ್. ನಾಗಭೂಷಣಸ್ವಾಮಿ ಮತ್ತು ವಸುದೇಂಧ್ರ ಅವರ ಮಾರ್ಗದರ್ಶನದಲ್ಲಿ, ವಚನ ಸಾಹಿತ್ಯವನ್ನು ಯೂನಿಕೋಡ್ ಸ್ವರೂಪಕ್ಕೆ ಪರಿವರ್ತಿಸಿ ವಚನ ಸಂಚಯ ಎಂಬ ವೆಬ್ಪ್ಲಾಟ್ಫಾರ್ಮ್ ಅನ್ನು ಅಭಿವೃದ್ಧಿಪಡಿಸಿದರು.
ಏಕೆ ಬಳಸಬೇಕು?
● ಭಾಷಾ ಅಭಿಮಾನಿಗಳಿಗೆ ಕನ್ನಡದ ಶುದ್ಧ ಪದಪ್ರಯೋಗ ಪರಿಚಯವಾಗುತ್ತದೆ.
● ಸಂಶೋಧಕರಿಗೆ ಅಂಕಿಅಂಶ ಮತ್ತು ಪದ ಶೋಧದಲ್ಲಿ ಸಹಾಯ.
● ವಿದ್ಯಾರ್ಥಿಗಳಿಗೆ ಸುಲಭವಾಗಿ ಉಪಯೋಗಿಸಬಹುದಾದ ಸಾಧನ.
● ವಚನಗಳಲ್ಲಿ ಪದ ಬಳಕೆಯ ಆಳವಾದ ವಿಶ್ಲೇಷಣೆ ಸಾಧ್ಯವಾಗುತ್ತದೆ.
● ತಂತ್ರಜ್ಞಾನವನ್ನು ಉಪಯೋಗಿಸಿ ಸಾಹಿತ್ಯದ ವಿಶ್ಲೇಷಣೆಗೆ ದಾರಿ.
ವಿಶಿಷ್ಟತೆಗಳು
● ಹೊಂದಾಣಿಕೆ ಶೋಧ (ಪದಗಳ ಬಳಕೆಯ ಸಾಲು ಹುಡುಕು)
● ಡಿಜಿಟಲ್ ಪದಕೋಶ
● ಗ್ರಾಫ್ ಉಪಕರಣಗಳು
● ಸಮಗ್ರ ಸಂಪುಟಗಳ ಡೇಟಾಬೇಸ್
● ವಚನಕಾರರ ಪ್ರತ್ಯೇಕ ಪೇಜು, ಜೀವನ ಚರಿತ್ರೆ
● ಟಿಪ್ಪಣಿಗಳು ಮತ್ತು ಸಮುದಾಯ ಸಹಭಾಗಿತ್ವ
ಎಲ್ಲರಿಗೂ ಉಚಿತ!
ಮುಕ್ತಜ್ಞಾನದ ಉದ್ದೇಶದಿಂದ ಮಾಡಿದ ವಚನ ಸಂಚಯ ಯೋಜನೆ ಸಂಪೂರ್ಣ ಉಚಿತವಾಗಿ ಲಭ್ಯವಿದ್ದು, ಯಾವುದೇ ತಾಂತ್ರಿಕ ಪರಿಣತಿಯಿಲ್ಲದವರೂ ಉಪಯೋಗಿಸುವಂತೆ ವಿನ್ಯಾಸಗೊಂಡಿದೆ. ಮೊಬೈಲ್/ಡೆಸ್ಕ್ಟಾಪ್ ಎಲ್ಲೆಡೆಯಿಂದ ಪ್ರವೇಶ ಸಾಧ್ಯ. ಸಾರ್ವಜನಿಕ ವೆಬ್ ತಾಣ: https://vachana.sanchaya.net
ವಚನ ಸಂಚಯ ಯೋಜನೆ ವಚನ ಸಾಹಿತ್ಯವನ್ನು ಅರ್ಥಮಾಡಿಕೊಳ್ಳಲು, ಓದಲು, ಸಂಶೋಧನೆ ಮಾಡಲು ಮತ್ತು ಶೋಧಿಸಲು ಒಂದು ಶ್ರೇಷ್ಠ ಸಾಧನವಾಗಿದೆ. ಇದು ಕನ್ನಡಿಗನ ಭಾಷೆಯಮೇಲಿನ ಹಿಡಿತವನ್ನು ಪ್ರಬಲಗೊಳಿಸುವಲ್ಲಿ ಸಹಾಯಮಾಡುತ್ತದೆ.
ಇದನ್ನೂ ಓದಿ | ಕನ್ನಡಕ್ಕೆ ಕನ್ನಡದ್ದೇ ‘ಕಚೇರಿ’! ಎಂ.ಎಸ್ ವರ್ಡ್ ಮಾದರಿಯ ಉಚಿತ ಕನ್ನಡ ತಂತ್ರಾಂಶ







