ಕಂಪ್ಯೂಟರ್ನಲ್ಲಿ ಮೈಕ್ರೋಸಾಫ್ಟ್ ವರ್ಡ್ ನಮ್ಮೆಲರಿಗೂ ಪರಿಚಿತ. ಅದೇ ತರಹ ಕನ್ನಡದಲ್ಲಿ ಕೆಲಸಮಾಡಲು ಒಂದು ವರ್ಡ್ ಡಾಕ್ಯುಮೆಂಟ್ ಎಡಿಟರ್ ತಂತ್ರಾಂಶವನ್ನು ಕನ್ನಡ ಗಣಕ ಪರಿಷತ್ತು ಅಭಿವೃದ್ಧಿಪಡಿಸಿದ್ದು ಸದ್ಯದಲ್ಲೇ ಕನ್ನಡಿಗರಿಗೆ ಬಳಕೆಗೆ ಲಭ್ಯವಾಗಲಿದೆ.
ಕನ್ನಡಗಣಕ ಪರಿಷತ್ತು ಮುಕ್ತ ತಂತ್ರಾಂಶವಾದ ಓಪನ್ ಆಫೀಸ್ ಆಧರಿಸಿ ಅಭಿವೃದ್ಧಿ ಪಡಿಸಿದ್ದು, ಈ ತಂತ್ರಾಂಶದ ಹೆಸರು ‘ನುಡಿ ಬರವಣಿಗೆ 1.0’. ಈಕುರಿತು ‘ತಾಯ್ನಾಡು.ನ್ಯೂಸ್’ ನೊಂದಿಗೆ ಕನ್ನಡಗಣಕ ಪರಿಷತ್ತಿನ ಕಾರ್ಯದರ್ಶಿ ಜಿ.ಎನ್. ನರಸಿಂಹಮೂರ್ತಿ ಅವರು ಮಾಹಿತಿ ಹಂಚಿಕೊಂಡರು.
“ಕನ್ನಡಗಣಕ ಪರಿಷತ್ತು ಈಗ ಕನ್ನಡ ಗಣಕ ಪ್ರತಿಷ್ಠಾನ ಎಂಬ ಟರ್ಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದು ನುಡಿ ಬರವಣಿಗೆ ಮೊದಲ ಯೋಜನೆ ಯಾಗಿ ಹೊರಬರುತ್ತಿದೆ ಮತ್ತು ಮುಂದಿನದಿನದಲ್ಲಿ ನುಡಿ ಬರವಣಿಗೆ, ನುಡಿ ಲೆಕ್ಕ , ನುಡಿ ಪ್ರಸ್ತುತಿ ಮತ್ತು ನುಡಿ ದತ್ತ ಎಂಬ ಹೆಸರಿನಲ್ಲಿ ಅಭಿವೃದ್ಧಿ ಆಗುತ್ತಿದ್ದು “ನುಡಿ ಕಚೇರಿ” ಎಂಬ ಮಾತೃ ತಂತ್ರಾಂಶದ ಅಡಿ ಬಳಸಬಹುದು.

ಮೈಕ್ರೋಸಾಫ್ಟ್ ಆಫೀಸ್ ನಲ್ಲಿರುವಂತೆ ಈ ತಂತ್ರಾಂಶದಲ್ಲೂ ವರ್ಡ್, ಎಕ್ಸೆಲ್, ಪಿ ಪಿ ಟಿ ಮತ್ತು ಡೇಟಾಬೇಸ್ ಗಳು ನುಡಿಕಚೇರಿಯಲ್ಲಿ ಲಭ್ಯವಾಗಲಿವೆ. ಕೆಳಗೆ ಕೊಟ್ಟಿರುವ ಟೇಬಲ್ ನಲ್ಲಿ ಮೈಕ್ರೋಸಾಫ್ಟ್ ಆಫೀಸ್ ಮತ್ತು ನುಡಿ ತಂತ್ರಾಂಶಗಾಳ ಹೋಲಿಕೆ ನೀಡಲಾಗಿದೆ.
| ಮೈಕ್ರೋಸಾಫ್ಟ್ ತಂತ್ರಾಂಶ | ನುಡಿ ತಂತ್ರಾಂಶ |
| ಮೈಕ್ರೋಸಾಫ್ಟ್ ಆಫೀಸ್ | ನುಡಿ ಕಚೇರಿ |
| ಎಂ ಏಸ್ ವರ್ಡ್ | ನುಡಿ ಬರವಣಿಗೆ |
| ಎಂ ಏಸ್ ಎಕ್ಸ್ಏಲ್ | ನುಡಿ ಲೆಕ್ಕ |
| ಪವರ್ ಪಾಯಿಂಟ್ | ನುಡಿ ಪ್ರಸ್ತುತಿ |
| ಡೇಟಾಬೇಸ್ | ನುಡಿ ದತ್ತ |
| ಟೆಕ್ಸ್ಟ್ ಟು ಟೆಕ್ಸ್ಟ್ | ವಾಗ್ ಅಕ್ಷರ |
| ಆಫೀಸ್ ಆಂಡ್ರಾಯ್ಡ್ ಆ್ಯಪ್ | ನುಡಿ ಆಂಡ್ರಾಯ್ಡ್ ಆ್ಯಪ್ |
ಮುಂದುವೆರೆದು ಮಾತನಾಡುತ್ತ ಜಿ.ಎನ್. ನರಸಿಂಹಮೂರ್ತಿ ಅವರು, “ನುಡಿ ತಂತ್ರಾಂಶಗಳ ಡೆವಲಪ್ಮೆಂಟ್ ಆಗುತ್ತಾ ಇರುತ್ತೆ, ಹೊಸ ಹೊಸ ಫೀಚರ್ ಗಳನ್ನೂ ಸೇರಿಸಲಾಗುತ್ತದೆ, ನಿರಂತರ ಅಭಿವೃದ್ದಿಯಮೂಲಕ ಬಳಕೆದಾರರಿಗೂ ಒಂದು ಒಳ್ಳೆಯ ಅನುಭವ ದೊರೆಯುತ್ತದೆ. ಸಂಪೂರ್ಣ ಕನ್ನಡದಲ್ಲೇ ಲಭ್ಯವಿರುವ ಈ ತಂತ್ರಾಂಶದಮೂಲಕ ಕಂಪ್ಯೂಟರ್ ನಲ್ಲಿ ಕನ್ನಡ ಬಳಸುವುದು ಸುಗಮವಾಗಲಿದೆ” ಎಂದು ತಿಳಿಸಿದ್ದಾರೆ.
ನುಡಿ ತಂತ್ರಾಂಶದ ವಿಶಿಷ್ಟತೆಗಳು
- ಸಂಪೂರ್ಣ ಕನ್ನಡ ತಂತ್ರಾಂಶ
- ನುಡಿ ಕೀಲಿಮಣಿಯ ಆಂತರಿಕ ಬೆಂಬಲ
- ಪಿಡಿಎಫ್ ಎಕ್ಸ್ಪೋರ್ಟ್
- ಮಾರ್ಕ್ಡೌನ್ ಎಕ್ಸ್ಪೋರ್ಟ್
- ವಾಯ್ಸ್ ಟೈಪಿಂಗ್ (ವಾಗ್ ಅಕ್ಷರ)
- ಆಫ್ ಲೈನ್ ಉಪಯೋಗ
- ಮುಕ್ಕ ಅಥವಾ ಉಚಿತವಾಗಿ ಬಳಸಬಹುದು
“ಆಂಡ್ರಾಯ್ಡ್ ಗೆ ನುಡಿ ಎಡಿಟರ್ ತಂತ್ರಾಂಶ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗಣಕಪರಿಷತ್ತು ತಯಾರಿ ನಡೆಸುತ್ತಿದೆ. ನುಡಿ ಆ್ಯಪ್ ತಯಾರಾದರೆ ನಾವು ಕನ್ನಡ ಡಾಕ್ಯುಮೆಂಟ್ ಎಡಿಟರ್ ಮತ್ತು ಕೀಬೋರ್ಡ್ ಗಳನ್ನೂ ಮೊಬೈಲ್ ನಲ್ಲಿ ಬಳಸಬಹುದು” ಎಂದು ಮೂರ್ತಿಯವರು ತಿಳಿಸಿದ್ದಾರೆ.
ಲೇಖಕ – ಅರುಣ್ ಸಿ ಕಲ್ಲಪ್ಪನವರ್







