ಸರ್ಕಾರಿ ವ್ಯವಸ್ಥೆಯಲ್ಲಿ ಅರ್ಜಿ ಕೊಟ್ಟ ಮೇಲೆ, ಸೇವೆಯನ್ನು ಒದಗಿಸಬೇಕು ಎಂಬಂತಾಗಿದೆ. ಅಧಿಕಾರಿಗಳ ಮನಸ್ಸಿನಲ್ಲಿ ಇದೇ ಭಾವನೆ ಇದೆ. ಸಾಮಾನ್ಯ ಜನರಲ್ಲೂ ಇದೇ ಭಾವನೆ ಇದೆ. ಈ ಮನಸ್ಥಿತಿ ಬದಲಾಗಬೇಕು. ಅರ್ಜಿ ನೀಡದೆಯೇ ಸರ್ಕಾರ ಸೌಲಭ್ಯಗಳನ್ನು ಅವರ ಮನೆ ಬಾಗಿಲಿಗೇ ತಲುಪಿಸುವ ಪ್ರಯತ್ನವಾಗಿ, ‘ಸರ್ಕಾರಿ ಸೇವೆ ಮನೆ ಬಾಗಿಲಿಗೆ’ ನಡೆಯುತ್ತಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಬುಧವಾರ ಮಂಡ್ಯ ತಾಲೂಕು ದುದ್ದ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ, ‘ಸರ್ಕಾರಿ ಸೇವೆ ಮನೆ ಬಾಗಿಲಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ದುದ್ದ ಗ್ರಾಮ ಪಂಚಾಯಿತಿಯಲ್ಲಿ 1310 ಮನೆಗಳಿವೆ, 5880 ಜನರ ವಾಸವಾಗಿದ್ದಾರೆ. ಈಗಾಗಲೇ ಶೇಕಡ 90 ಜನರ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಇಂದು ಇಲ್ಲಿ ಆಗಮಿಸಿರುವ ತಾಲೂಕು ಮಟ್ಟದ ಎಲ್ಲ ಇಲಾಖಾಧಿಕಾರಿಗಳು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಡಲಿದ್ದಾರೆ ಎಂದು ಹೇಳಿದರು.

“ನಾನು ಶಾಸಕನಾದ ಮೇಲೆ ಕೆಲ ತಿಂಗಳ ಕಾಲ ಗಮನಿಸಿದ ಸಂಗತಿಯೇನೆಂದರೆ, ಜನ ಸಮಸ್ಯೆಗಳೊಂದಿಗೆ ನನ್ನ ಬಳಿ ಬಂದಾಗ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸುತ್ತಿದೆ. ಹೀಗೆ ಐದು ವರ್ಷಗಳಲ್ಲಿ ಹೆಚ್ಚೆಂದರೆ 5 ರಿಂದ 10 ಸಾವಿರ ಜನರು ನನ್ನ ಬಳಿ ಬಂದು ಪರಿಹಾರ ಪಡೆದುಕೊಳ್ಳಬಹುದು. ಆದರೆ ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆ ಶಾಸಕರ ಕಚೇರಿಗೆ ಬರಲು ಆಗುವುದೇ ಇಲ್ಲ ಎಂಬುದು ಮನವರಿಕೆಯಾಯಿತು” ಎಂದರು.
‘ಸರ್ಕಾರಿ ವ್ಯವಸ್ಥೆಯಲ್ಲಿ ಅರ್ಜಿ ಕೊಟ್ಟ ಮೇಲೆ, ಸೇವೆಯನ್ನು ಒದಗಿಸಬೇಕು ಎಂಬಂತಾಗಿದೆ. ಇದು ಅಧಿಕಾರಿಗಳ ಮನಸ್ಸಿನಲ್ಲಿ ಇದೇ ಭಾವನೆ ಇದೆ. ಸಾಮಾನ್ಯ ಜನರಲ್ಲೂ ಇದೇ ಭಾವನೆ ಇದೆ. ಅರ್ಜಿ ನೀಡದೆಯೇ ಸರ್ಕಾರ ಸೌಲಭ್ಯಗಳನ್ನು ಅವರ ಮನೆ ಬಾಗಿಲಿಗೇ ತಲುಪಿಸುವ ಪ್ರಯತ್ನವಾಗಿ, ‘ಸರ್ಕಾರಿ ಸೇವೆ ಮನೆ ಬಾಗಿಲಿಗೆ’ ನಡೆಯುತ್ತಿದೆ’ ಎಂದು ಹೇಳಿದರು.
ಇದನ್ನೂ ಓದಿ | ಪಂಚಾಯಿತಿ ಹ್ಯಾಕಾಥಾನ್: ಸರ್ಕಾರಿ ಸೇವೆ ಜನರ ಬಳಿಗೆ ಒಯ್ದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ
“ಈ ಕಾರ್ಯಕ್ರಮದ ಅಂಗವಾಗಿ ಪ್ರತಿ ಮನೆ ಬಾಗಿಲಿಗೆ ಹೋಗಿ ಮಾಹಿತಿ ಸಂಗ್ರಹಿಸಿ, ನಂತರ ಕಂಪ್ಯೂಟರ್ ಮೂಲಕ ಮಾಹಿತಿ ದಾಖಲಿಸುತ್ತಿದ್ದೆವು. ಈಗ ದುದ್ದ ಗ್ರಾಮ ಪಂಚಾಯಿತಿ ಸಮೀಕ್ಷೆಗೆ ನಾವೇ ಒಂದು ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದ್ದು, ಅದರ ಮೂಲಕ ಮಾಹಿತಿ ಸಂಗ್ರಹಿಸಲಾಯಿತು. ಈಗ, ಈ ಮಾಹಿತಿ ಆಧಾರದ ಮೇಲೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುತ್ತಾರೆ. ಮುಂದಿನ ಪಂಚಾಯಿತಿ ಕಾರ್ಯಕ್ರಮದ ಹೊತ್ತಿಗೆ, ಜನರೇ ತಮ್ಮ ಸಮಸ್ಯೆಗಳ ಬಗ್ಗೆ, ತಮಗೆ ಅಗತ್ಯವಿರುವ ಸೇವೆಗಳ ಬಗ್ಗೆ ಮಾಹಿತಿ ದಾಖಲಿಸುವ ಸರಳ ವ್ಯವಸ್ಥೆಯನ್ನು ಪರಿಚಯಿಸಲು ಯೋಚಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಂಡ್ಯ ತಹಸೀಲ್ದಾರ್ ವಿಶ್ವನಾಥ್, ಮಂಡ್ಯ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಮಚಂದ್ರ, ಉಪಾಧ್ಯಕ್ಷರಾದ ಲಕ್ಷ್ಮಮ್ಮ ಹಾಗೂ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







