ಬೆಂಗಳೂರಲ್ಲಿ ನಿಲ್ಲದ BMTC ಹಾವಳಿ: ಜನರಲ್ಲಿ ಹೆಚ್ಚಿದ ಆತಂಕ

ಬಿಎಂಟಿಸಿ ಬಸ್‌ಗಳಿಂದ ಆಗುತ್ತಿರುವ ದುರಂತಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೇ ಇವೆ. ಈ ಘಟನೆಗಳು ಸಾರ್ವಜನಿಕ ಸಾರಿಗೆ ಸುರಕ್ಷತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿವೆ.
 BMTC bus accidents 

ಭಾರತದ ಸಿಲಿಕಾನ್‌ ಸಿಟಿ ಎಂದೇ ಪ್ರಖ್ಯಾತಿ ಪಡೆದಿರುವ ಬೆಂಗಳೂರು, ಈಗ ತನ್ನ ಜನದಟ್ಟಣೆಯ ರಸ್ತೆಗಳಿಂದ ಟ್ರಾಫಿಕ್‌ ಸಿಟಿ ಎಂದೇ ಹೆಸರುವಾಸಿಯಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ, ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ (ಬಿಎಂಟಿಸಿ) ಬಸ್‌ಗಳಿಂದ ಆಗುತ್ತಿರುವ ದುರಂತಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೇ ಇವೆ. ಈ ಘಟನೆಗಳು ಸಾರ್ವಜನಿಕ ಸಾರಿಗೆ ಸುರಕ್ಷತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿವೆ. 

ಜಯನಗರ 4ನೇ ಬ್ಲಾಕ್‌ನಲ್ಲಿ  64ವರ್ಷದ ಸಂಪಂಗಿ ಎಂಬ ವೃದ್ಧೆಯೊಬ್ಬರು ಬಿಎಂಟಿಸಿ ಬಸ್‌ನ ಬಾಗಿಲಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾರೆ.  ಈ ಘಟನೆಯು ಬಿಎಂಟಿಸಿ ಬಸ್‌ಗಳ ಸುರಕ್ಷತೆಯ ಕೊರತೆಯನ್ನು ಮತ್ತೊಮ್ಮೆ ಒತ್ತಿಹೇಳಿದೆ.

ಜಯನಗರ 4ನೇ ಬ್ಲಾಕ್‌ ಘಟನೆಯ ವಿವರ

ಇಂದು (ಆಗಸ್ಟ್ 20) ಜಯನಗರ 4ನೇ ಬ್ಲಾಕ್‌ನಲ್ಲಿ ನಡೆದ ಈ ಘಟನೆಯಲ್ಲಿ, ಸಂಪಂಗಿ ಅವರು ಬಿಎಂಟಿಸಿ ಬಸ್‌ಗೆ ಏರುತ್ತಿರುವಾಗಲೇ ಚಾಲಕ ಬಾಗಿಲನ್ನು ಮುಚ್ಚಿದ್ದಾನೆ. ಇದರಿಂದಾಗಿ ಸಂಪಂಗಿಯವರ ಕೈ ಬಾಗಿಲಿನ ಒಳಗೆ ಸಿಲುಕಿದರೆ, ದೇಹ ಹೊರಗಡೆ ಉಳಿಯಿತು. ಬಸ್ ಚಲಿಸಿದಾಗ ಅವರು ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟರು.  ಈ ಘಟನೆಯು ಚಾಲಕನ ಎಡವಟ್ಟಿನಿಂದಾಗಿ ಸಂಭವಿಸಿದೆ ಎಂದು ಆರೋಪಿಸಲಾಗಿದ್ದು, ಈ ಕುರಿತು ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕ ಘಟನೆಯ ನಂತರ ಓಡಿಹೋಗಿದ್ದಾನೆ ಎಂದು ವರದಿಯಾಗಿದೆ.

ಬಿಎಂಟಿಸಿ ಬಸ್‌ ದುರಂತಗಳ ಸಂಖ್ಯೆ ಏರಿಕೆ

ಜಯನಗರದ ಈ ಘಟನೆ ಒಂದು ಪ್ರತ್ಯೇಕ ಘಟನೆಯಲ್ಲ. ಕಳೆದ ಕೆಲವು ದಿನಗಳಲ್ಲಿ ಬಿಎಂಟಿಸಿ ಬಸ್‌ಗಳಿಗೆ ಸಂಬಂಧಿಸಿದ ಹಲವು ದುರಂತಗಳು ಸಂಭವಿಸಿವೆ. ಈ ಘಟನೆಗಳು ಬಿಎಂಟಿಸಿ ಬಸ್‌ಗಳ ಚಾಲಕರ ತರಬೇತಿಯ ಕೊರತೆ, ಯಾಂತ್ರಿಕ ದೋಷಗಳು, ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಸುರಕ್ಷತಾ ಮಾನದಂಡಗಳ ಕುರಿತು ಗಂಭೀರ ಚಿಂತನೆಯನ್ನು ಹುಟ್ಟುಹಾಕಿವೆ. ಪೀಣ್ಯದಲ್ಲಿ ಸಂಭವಿಸಿದ್ದ ಘಟನೆಯಲ್ಲಿ, ಕಂಡಕ್ಟರ್ ರಮೇಶ್‌ಗೆ ಎಲೆಕ್ಟ್ರಿಕ್ ಬಸ್ ಚಾಲನೆಯ ಅನುಭವವಿರಲಿಲ್ಲ. ಬಿಎಂಟಿಸಿ ಚಾಲಕರಿಗೆ ಕಟ್ಟುನಿಟ್ಟಾದ ತರಬೇತಿ ಮತ್ತು ಪರೀಕ್ಷೆಗಳ ಅಗತ್ಯವಿದೆ. ಅಲ್ಲದೇ  ಘಟನೆಯ ನಂತರ ಚಾಲಕರು ಮತ್ತು ಕಂಡಕ್ಟರ್‌ಗಳು ಪರಾರಿಯಾಗುವುದು ಸಾಮಾನ್ಯವಾಗಿದೆ, ಇದು ಬೇಜವಾಬ್ದಾರಿಯ ಕೊರತೆಯನ್ನು ತೋರಿಸುತ್ತದೆ.

ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳನ್ನು ಚಾಲಕರಿಂದ ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. “ಎಲೆಕ್ಟ್ರಿಕ್ ಬಸ್‌ನಲ್ಲಿ ಪ್ರಯಾಣಿಸಿದವರಿಗೆ ಗೊತ್ತಿರುತ್ತದೆ, ಚಾಲಕ ಬಸ್ಸನ್ನು ರೇಸಿಂಗ್ ಕಾರಿನಂತೆ ಚಲಾಯಿಸುತ್ತಾನೆ. ಒಮ್ಮೊಮ್ಮೆ ಒಳಗೆ ನಿಲ್ಲಲು ಭಯವಾಗುತ್ತದೆ. ಕೆಲವೊಂದು ಬಾರಿ ವೃದ್ಧರನ್ನು ಲೆಕ್ಕಿಸದೆ ಹಾಗೆಯೇ ಹತ್ತಿದ ತಕ್ಷಣ ವೇಗವಾಗಿ ಚಲಾಯಿಸುತ್ತಾರೆ. ಹಲವರು ನಿಯಂತ್ರಣ ತಪ್ಪಿ ಬಸ್ಸಿನಲ್ಲಿ ಬಿದ್ದಿರುವ ಉದಾಹರಣೆಗಳು ತುಂಬಾ ಇವೆ. 

ಬಿಎಂಟಿಸಿ ಅಧಿಕಾರಿಗಳು ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಗಿರುವ ಕ್ರಮಗಳು ಸಾಕಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಸರ್ಕಾರವು ಚಾಲಕರಿಗೆ ಕಟ್ಟುನಿಟ್ಟಾದ ತರಬೇತಿ, ವಾಹನಗಳ ನಿಯಮಿತ ತಪಾಸಣೆ, ಮತ್ತು ಆಟೋಮೇಟಿಕ್ ಬಾಗಿಲು ಸುರಕ್ಷತಾ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು.

ಇದನ್ನೂ ಓದಿ | ಕಾಂಗ್ರೆಸ್ ಸಮರ್ಪಣಾ ಸಂಕಲ್ಪ: ಬಳ್ಳಾರಿಗೆ 800ಕ್ಕೂ ಹೆಚ್ಚು ಬಸ್‌ಗಳು

ಬಿಎಂಟಿಸಿ ಬಸ್‌ಗಳು ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬೆನ್ನೆಲುಬಾಗಿವೆ. ಆದರೆ, ಈ ದುರಂತಗಳು ಸಾರ್ವಜನಿಕರಲ್ಲಿ ಭಯ ಮತ್ತು ಅಪನಂಬಿಕೆಯನ್ನು ಹುಟ್ಟುಹಾಕಿವೆ. ಸಂಪಂಗಿಯವರ   ಸಾವು ಒಂದು ಎಚ್ಚರಿಕೆಯ ಕರೆಯಾಗಿದೆ. ಬಿಎಂಟಿಸಿ ಮತ್ತು ಕರ್ನಾಟಕ ಸರ್ಕಾರವು ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಚಾಲಕರ ತರಬೇತಿಯನ್ನು ಸುಧಾರಿಸಿ, ಜನರ ಜೀವವನ್ನು ರಕ್ಷಿಸುವ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇದು ಕೇವಲ ನೀತಿಯ ಸಮಸ್ಯೆಯಲ್ಲ, ಇದು ಜನರ ಜೀವನದ ಪ್ರಶ್ನೆಯಾಗಿದೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »