ಭಾರತದಲ್ಲಿ ಸತತ 3ನೇ ವರ್ಷ ಸರ್ಕಾರಿ ಶಾಲಾ ದಾಖಲಾತಿಯಲ್ಲಿ ಕುಸಿತ 

ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ದಾಖಲಾತಿ ಸತತ 3ನೇ ವರ್ಷವೂ ಕುಸಿದಿದ್ದು, ಕೇಂದ್ರ ಶಿಕ್ಷಣ ಸಚಿವಾಲಯದ UDISE+ 2024-25 ವರದಿಯು ಈ ಬಗ್ಗೆ ಗಮನಾರ್ಹ ಚಿತ್ರಣ ನೀಡಿದೆ.
 India school enrollment decline 
ಚಿತ್ರ ಕೃಪೆ : Deccan Herald

ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ದಾಖಲಾತಿ ಸತತ 3ನೇ ವರ್ಷವೂ ಕುಸಿದಿದ್ದು, ಕೇಂದ್ರ ಶಿಕ್ಷಣ ಸಚಿವಾಲಯದ ಯೂನಿಫೈಡ್ ಡಿಸ್ಟ್ರಿಕ್ಟ್ ಇನ್ಫಾರ್ಮೇಶನ್ ಸಿಸ್ಟಮ್ ಫಾರ್ ಎಜ್ಯುಕೇಶನ್ ಪ್ಲಸ್ (UDISE+) 2024-25 ವರದಿಯು ಈ ಬಗ್ಗೆ ಗಮನಾರ್ಹ ಚಿತ್ರಣ ನೀಡಿದೆ. 2024-25ರಲ್ಲಿ ಒಟ್ಟು ಶಾಲಾ ದಾಖಲಾತಿಯು 24.69 ಕೋಟಿಗೆ ಇಳಿದಿದ್ದು, 2023-24ರ 24.8 ಕೋಟಿ ಮತ್ತು 2022-23ರ 25.17 ಕೋಟಿಗೆ ಹೋಲಿಸಿದರೆ 11 ಲಕ್ಷ ವಿದ್ಯಾರ್ಥಿಗಳ ಕುಸಿತವನ್ನು ದಾಖಲಿಸಿದೆ. ಈ ಕುಸಿತವು ಜನವರಿ 2024ರಲ್ಲಿ ಬಿಡುಗಡೆಯಾದ ಶಿಕ್ಷಣ ಸ್ಥಿತಿಗತಿ ವರದಿಯೊಂದಿಗೆ ಸಾಮ್ಯತೆ ಹೊಂದಿದ್ದು, ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಏರಿಕೆಯಾಗಿದ್ದ ದಾಖಲಾತಿಗಳು ಈಗ ಸಾಂಕ್ರಾಮಿಕ-ಪೂರ್ವ ಮಟ್ಟಕ್ಕೆ ಇಳಿದಿವೆ ಎಂದು ಸೂಚಿಸುತ್ತದೆ.

UDISE+ ವರದಿ:

ಸರಕಾರಿ ಮತ್ತು ಸರಕಾರಿ-ಅನುದಾನಿತ ಶಾಲೆಗಳಲ್ಲಿ ದಾಖಲಾತಿಯು ಗಣನೀಯವಾಗಿ ಕಡಿಮೆಯಾಗಿದೆ. 2022-23ರಲ್ಲಿ 13.6 ಕೋಟಿಯಷ್ಟಿದ್ದ ಸರಕಾರಿ ಶಾಲೆಗಳ ದಾಖಲಾತಿಯು 2024-25ರಲ್ಲಿ 12.1 ಕೋಟಿಗೆ ಕುಸಿದಿದೆ, ಇದು 4.6% ರಷ್ಟು ಇಳಿಕೆಯಾಗಿದೆ. ಇದಕ್ಕೆ ವಿರುದ್ಧವಾಗಿ, ಖಾಸಗಿ ಶಾಲೆಗಳ ದಾಖಲಾತಿಯು 2022-23ರ 8.4 ಕೋಟಿಯಿಂದ 2024-25ರಲ್ಲಿ 9.5 ಕೋಟಿಗೆ ಏರಿಕೆಯಾಗಿದ್ದು, 5.8% ಬೆಳವಣಿಗೆ ದಾಖಲಿಸಿದೆ. ಒಟ್ಟಾರೆ ದಾಖಲಾತಿಯಲ್ಲಿ ಖಾಸಗಿ ಶಾಲೆಗಳ ಪಾಲು 2024-25ರಲ್ಲಿ 39% ತಲುಪಿದ್ದು, 2018-19ರ ಬಳಿಕ ಇದು ಗರಿಷ್ಠ ಮಟ್ಟವಾಗಿದೆ.

ಅತಿ ಹೆಚ್ಚಿನ ಕುಸಿತವು 3 ರಿಂದ 11 ವರ್ಷ ವಯಸ್ಸಿನ ಮಕ್ಕಳ ದಾಖಲಾತಿಯಲ್ಲಿ ಕಂಡುಬಂದಿದೆ, ಇದು 2023-24ರ 12.09 ಕೋಟಿಯಿಂದ 2024-25ರಲ್ಲಿ 11.84 ಕೋಟಿಗೆ ಇಳಿದಿದ್ದು, 24.93 ಲಕ್ಷದಷ್ಟು ಕಡಿಮೆಯಾಗಿದೆ. ವಿಶೇಷವಾಗಿ, 1 ರಿಂದ 5ನೇ ತರಗತಿಯ ದಾಖಲಾತಿಯು 10.78 ಕೋಟಿಯಿಂದ 10.44 ಕೋಟಿಗೆ ಕುಸಿದಿದೆ, ಇದು 34 ಲಕ್ಷ ವಿದ್ಯಾರ್ಥಿಗಳ ಇಳಿಕೆಯನ್ನು ತೋರಿಸುತ್ತದೆ. ಆದರೆ, ಮಾಧ್ಯಮಿಕ (6-8ನೇ ತರಗತಿ) ಮತ್ತು ಉನ್ನತ ಮಾಧ್ಯಮಿಕ (9-12ನೇ ತರಗತಿ) ಹಂತಗಳಲ್ಲಿ ದಾಖಲಾತಿಯು ಕ್ರಮವಾಗಿ 5.7 ಲಕ್ಷ ಮತ್ತು 8.1 ಲಕ್ಷದಷ್ಟು ಏರಿಕೆಯಾಗಿದೆ.

ಸಚಿವಾಲಯದ ಅಧಿಕಾರಿಗಳು ಈ ಕುಸಿತಕ್ಕೆ ಭಾರತದ ಒಟ್ಟು ಫಲವತ್ತತೆ ದರ (TFR) 2006ರ 2.8ರಿಂದ 2022ರಲ್ಲಿ 2.0ಕ್ಕೆ ಇಳಿದಿದೆ, ಇದು ಶಾಲಾ ವಯಸ್ಸಿನ ಮಕ್ಕಳ ಸಂಖ್ಯೆಯಲ್ಲಿ ಕಡಿಮೆಯಾಗಿರುವುದನ್ನು ಸೂಚಿಸುತ್ತದೆ. ಜೊತೆಗೆ, ಖಾಸಗಿ ಶಾಲೆಗಳ ಕಡೆಗೆ , ಆದಾಯ ಕಡಿಮೆಯಾದ ಕಾರಣದಿಂದ ಕೆಲವು ಮಕ್ಕಳ ಶಾಲಾ ತೊರೆತ ಮತ್ತು ಆಧಾರ್ ಆಧಾರಿತ ಡೇಟಾ ಸಂಗ್ರಹಣೆಯಿಂದ ಡೂಪ್ಲಿಕೇಟ್ ದಾಖಲಾತಿಗಳ ತೆಗೆದುಹಾಕುವಿಕೆಯೂ ಈ ಕುಸಿತಕ್ಕೆ ಕಾರಣವಾಗಿವೆ. 2022-23ರಿಂದ ಆಧಾರ್ ಸೀಡಿಂಗ್ 75.5% ರಿಂದ 2024-25ರಲ್ಲಿ 89.4%ಕ್ಕೆ ಏರಿಕೆಯಾಗಿದ್ದು, 19.7 ಕೋಟಿ ವಿದ್ಯಾರ್ಥಿಗಳು ತಮ್ಮ ಆಧಾರ್ ವಿವರಗಳನ್ನು ಒದಗಿಸಿದ್ದಾರೆ.

ಇದನ್ನೂ ಓದಿ | ಭಾರತದ CMಗಳ ಆರ್ಥಿಕ ಸ್ಥಿತಿಗತಿ ಪಟ್ಟಿ ಬಿಡುಗಡೆ: ಸಿದ್ದುಗೆ 3ನೇ ಸ್ಥಾನ  

ಸರಕಾರಿ ಶಾಲೆಗಳ ಸಂಖ್ಯೆಯೂ 2023-24ರ 10.18 ಲಕ್ಷದಿಂದ 2024-25ರಲ್ಲಿ 10.13 ಲಕ್ಷಕ್ಕೆ ಕಡಿಮೆಯಾಗಿದೆ, ಆದರೆ ಖಾಸಗಿ ಶಾಲೆಗಳ ಸಂಖ್ಯೆ 3.31 ಲಕ್ಷದಿಂದ 3.79 ಲಕ್ಷಕ್ಕೆ ಏರಿಕೆಯಾಗಿದೆ. ಇದಕ್ಕೆ ವಿರುದ್ಧವಾಗಿ, ಒಟ್ಟು ಶಿಕ್ಷಕರ ಸಂಖ್ಯೆಯು 2024-25ರಲ್ಲಿ 1.01 ಕೋಟಿಗೆ ಏರಿಕೆಯಾಗಿದ್ದು, ಶಿಕ್ಷಕ-ವಿದ್ಯಾರ್ಥಿ ಅನುಪಾತವು ಎಲ್ಲಾ ಹಂತಗಳಲ್ಲಿ ಸುಧಾರಣೆ ಕಂಡಿದೆ.  

ಡ್ರಾಪ್‌ಔಟ್ ದರಗಳು ಕೂಡ ಕಡಿಮೆಯಾಗಿವೆ. ಪೂರ್ವ ಪ್ರಾಥಮಿಕ ಹಂತದಲ್ಲಿ 2023-24ರ 3.7% ರಿಂದ 2024-25ರಲ್ಲಿ 2.3%ಕ್ಕೆ, ಮಾಧ್ಯಮಿಕ ಹಂತದಲ್ಲಿ 5.2% ರಿಂದ 3.5%ಕ್ಕೆ, ಮತ್ತು ಉನ್ನತ ಮಾಧ್ಯಮಿಕ ಹಂತದಲ್ಲಿ 10.9% ರಿಂದ 8.2%ಕ್ಕೆ ಇಳಿಕೆಯಾಗಿದೆ. 

Share:

ಮತ್ತಷ್ಟು ಸುದ್ದಿ

ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮ

ಅಲೆದಾಟ ಮುಕ್ತ ಆಡಳಿತದತ್ತ ಮೇಲುಕೋಟೆ ಮನೆ ಬಾಗಿಲಿಗೇ ಬಂದ ‘ಸರ್ಕಾರಿ ಸೇವೆ’ ಕಾರ್ಯಕ್ರಮ  ತಂತ್ರಜ್ಞಾನದ ಅರಿವನ್ನು ಆಡಳಿತ ಯಂತ್ರಕ್ಕೆ ವರ್ಗಾಯಿಸಿದ

ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಲು ಮನವಿ

ಕಾಂಗ್ರೆಸ್‌ ಹೈಕಮಾಂಡ್‌ಗೆ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ಒತ್ತಾಯ ಮೈಸೂರು: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ

ಮುಂದೆ ಓದಿ »

ಬೆಂಗಳೂರಿನಲ್ಲಿ ಮೇ 25 ರಂದು 3ನೇ ಕರ್ನಾಟಕ ಸಂಘಟಕರ ಸಮಾವೇಶ

ಸಾಂಸ್ಕೃತಿಕ ನೀತಿ ಜಾರಿ ಮತ್ತು ಅಕಾಡೆಮಿಗಳ ಬಲವರ್ಧನೆಗೆ ಆಗ್ರಹಿಸಿ ರಂಗಕರ್ಮಿಗಳು ಹಾಗೂ ಸಾಂಸ್ಕೃತಿಕ ಸಂಘಟಕರ ಬೃಹತ್‌ ಸಮಾಲೋಚನೆ ಬೆಂಗಳೂರು: ಕರ್ನಾಟಕ

ಮುಂದೆ ಓದಿ »

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »