ಎಸ್‌ಸಿಒ ಶೃಂಗಸಭೆ: ಮೋದಿ ಚೀನಾ ಭೇಟಿ, ಕ್ಸಿ-ಪುಟಿನ್ ಜೊತೆ ಮಾತುಕತೆ

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಚೀನಾದ ತಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ.
modi sco summit tianjin

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಚೀನಾದ ತಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ. ಎಸ್‌ಸಿಒ ಒಂದು ಪ್ರಾದೇಶಿಕ ರಾಜಕೀಯ, ಆರ್ಥಿಕ ಮತ್ತು ಭದ್ರತಾ ಗುಂಪಾಗಿದ್ದು, ಚೀನಾದಿಂದ ಸ್ಥಾಪನೆಯಾಗಿದೆ. ಈ ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರನ್ನು ಭೇಟಿಯಾದರು ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ರೊಂದಿಗೆ ಇಂದು ಮಾತುಕತೆಗೆ ಯೋಜನೆ ಹಾಕಿದ್ದಾರೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ರಷ್ಯಾ ತೈಲ ಖರೀದಿಯ ವಿರುದ್ಧ ಆಗಸ್ಟ್‌ನಲ್ಲಿ 50% ಸುಂಕ ವಿಧಿಸಿದ್ದಾರೆ, ಇದು ಏಷಿಯಾದಲ್ಲಿ ಅತಿ ಹೆಚ್ಚಿನ ಸುಂಕವಾಗಿದೆ. ಈ ಕ್ರಮವು ಭಾರತ-ರಷ್ಯಾ ಸಂಬಂಧಗಳ ಮೇಲೆ ಒತ್ತಡ ಹೇರಿದೆ.

2020ರ ಗಲ್ವಾನ್ ಕಣಿವೆ ಘರ್ಷಣೆಯ ನಂತರ ಭಾರತ-ಚೀನಾ ಸಂಬಂಧಗಳು ಕ್ಷೀಣಿಸಿದ್ದರಿಂದ ಮೋದಿಯ ಚೀನಾ ಭೇಟಿ ಇದೇ ಮೊದಲನೆಯದಾಗಿದೆ. ಕ್ಸಿ ಜಿನ್‌ಪಿಂಗ್‌ರೊಂದಿಗಿನ ಭೇಟಿಯಲ್ಲಿ ಗಡಿ ವಿವಾದವನ್ನು ಬಗೆಹರಿಸಲು ಮತ್ತು ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಒಪ್ಪಿಗೆ ಸೂಚಿಸಲಾಯಿತು. ಎರಡೂ ರಾಷ್ಟ್ರಗಳು “ಪಾಲುದಾರರೇ ಹೊರತು ಪೈಪೋಟಿಗಳಲ್ಲ” ಎಂದು ಶೀ ಹೇಳಿದರು. ಮೋದಿಯವರು ಗಡಿಯಲ್ಲಿ ಶಾಂತಿ ಕಾಪಾಡುವುದರ ಮಹತ್ವವನ್ನು ಹೇಳಿದರು. 2020ರ ಗಡಿ ಘರ್ಷಣೆಯಿಂದ ರದ್ದಾದ ಭಾರತ-ಚೀನಾ ನೇರ ವಿಮಾನ ಸಂಪರ್ಕವನ್ನು ಪುನರಾರಂಭಿಸಲು ಒಪ್ಪಿಗೆ ಸಿಕ್ಕಿದೆ.

ಅಮೆರಿಕಾದ ಸುಂಕವು ಭಾರತದ ಉಕ್ಕು, ಜವಳಿ ಮತ್ತು ಕೃಷಿ ಉತ್ಪನ್ನಗಳ ರಫ್ತಿನ ಮೇಲೆ ಗಂಭೀರ ಪರಿಣಾಮ ಬೀರಿದೆ., ಈ ಸುಂಕವು ಭಾರತದ ಆರ್ಥಿಕತೆಗೆ $48 ಬಿಲಿಯನ್ ನಷ್ಟವನ್ನು ಉಂಟುಮಾಡಬಹುದು ಎಂದು ಅಂದಾಜಿಸಲಾಗಿದೆ. ಇದರಿಂದ ಭಾರತ ತನ್ನ ರಷ್ಯಾ ತೈಲ ಖರೀದಿಯನ್ನು ಕಡಿಮೆ ಮಾಡಬಹುದು, ಆದರೆ ಅದು ಆಗ ದೇಶೀಯ ಇಂಧನ ಬೆಲೆ ಏರಿಕೆಗೆ ಕಾರಣವಾಗುತ್ತೆ. ಇದರಿಂದಾಗಿ ಭಾರತವು ರಷ್ಯಾದೊಂದಿಗೆ ತನ್ನ ಸಂಬಂಧವನ್ನು ಬಲಪಡಿಸುತ್ತಿದೆ. ಮೋದಿ ಮತ್ತು ಪುಟಿನ್ ಈ ಭೇಟಿಯಲ್ಲಿ ಶಕ್ತಿ ಸಹಕಾರ ಮತ್ತು ಭಾರತದ ರಫ್ತು ಹೆಚ್ಚಿಸುವ ಬಗ್ಗೆ ಚರ್ಚಿಸಲಿದ್ದಾರೆ.

ಇದನ್ನೂ ಓದಿ | ಅಮೇರಿಕಾ ಸುಂಕ ಭಾರತದ ಆರ್ಥಿಕತೆಗೆ ಯಾವ ರೀತಿ ಪರಿಣಾಮಬೀರುತ್ತದೆ?

ಎಸ್‌ಸಿಒ ಶೃಂಗಸಭೆಯಲ್ಲಿ 20ಕ್ಕೂ ಹೆಚ್ಚು ರಾಷ್ಟ್ರಾಧ್ಯಕ್ಷರು ಭಾಗವಹಿಸಿದ್ದರು. ಚೀನಾದ ಆತಿಥ್ಯದಲ್ಲಿ ನಡೆದ ಈ ಕಾರ್ಯಕ್ರಮವು ಜಾಗತಿಕ ಒಕ್ಕೂಟವನ್ನು ತೋರಿಸುತ್ತದೆ. ಈ ಶೃಂಗಸಭೆಯು ಅಮೆರಿಕಾದ ಏಕಪಕ್ಷೀಯ ನಿಯಂತ್ರಣವನ್ನು ಎದುರಿಸಲು ಒಂದು ಹೆಜ್ಜೆಯಾಗಿದೆ. ಮೋದಿಯವರು 2026ರ ಬಿಆರ್‌ಐಸಿಎಸ್ ಶೃಂಗಸಭೆಗೆ ಕ್ಸಿ ಜಿನ್‌ಪಿಂಗ್‌ರನ್ನು ಆಹ್ವಾನಿಸಿದರು, ಇದಕ್ಕೆ ಶೀ ಒಪ್ಪಿಗೆ ನೀಡಿದ್ದಾರೆ.

ಅಮೆರಿಕಾದ ಒತ್ತಡದ ನಡುವೆಯೂ ಭಾರತವು ಚೀನಾ ಮತ್ತು ರಷ್ಯಾದೊಂದಿಗೆ ಸಂಬಂಧ ಬಲಪಡಿಸುತ್ತಿದೆ. ಈ ಶೃಂಗಸಭೆಯು ಭಾರತಕ್ಕೆ ಜಾಗತಿಕ ವೇದಿಕೆಯಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಲು ಅವಕಾಶ ನೀಡಿದೆ.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »