“ಗೂಗಲ್ ನಮ್ಮೊಂದಿಗೆ ಚರ್ಚೆಗೆ ಬಂದಿದ್ದರೆ ನಾವು ಟೀಕೆ ಮಾಡಬಹುದಿತ್ತು. ಚರ್ಚೆಗೆ ಬಂದ ಯಾವ ಕಂಪನಿಯನ್ನೂ ನಾವು ಬಿಟ್ಟಿಲ್ಲ” ಎಂದು ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆಯವರು ಇಂದು ಬೆಂಗಳೂರಿನಲ್ಲಿ ಮಾತನಾಡುತ್ತ ಹೇಳಿದರು.
ಗೂಗಲ್ AI ಹಬ್ ವಿಶಾಖಪಟ್ಟಣಂಗೆ (ಆಂಧ್ರಪ್ರದೇಶ) ಹೋದ ವಿಚಾರದ ಬಗ್ಗೆ ಬಿಜೆಪಿಯನ್ನು ತೀವ್ರವಾಗಿ ಟೀಕಿಸಿ. ಬಿಜೆಪಿಯವರು ಸರಳವಾಗಿ ಮುಚ್ಚಿ ಹಾಕುತ್ತಾರೆ. ಆಂಧ್ರ ಸರ್ಕಾರಕ್ಕೆ ಕೇಂದ್ರ ₹22,000 ಕೋಟಿ ಇನ್ಸೆಂಟಿವ್ ಕೊಡುತ್ತಿದೆ. 25% ಭೂಮಿ ರಿಯಾಯಿತಿ, ವಿದ್ಯುತ್ ಮತ್ತು ನೀರು ಉಚಿತ, 100% ರಾಜ್ಯ ಜಿಎಸ್‌ಟಿ ಮರುಪಾವತಿ ಕೊಡುತ್ತಿದ್ದಾರೆ. ಇದನ್ನು ಬಿಜೆಪಿ ಹೇಳಲ್ಲ ಎಂದು ಕಿಡಿಕಾರಿದರು.
ಗೂಗಲ್ ಪೇರೆಂಟ್ ಕಂಪನಿ ಆಲ್ಫಾಬೆಟ್ $15 ಬಿಲಿಯನ್ (ಸುಮಾರು ₹1.26 ಲಕ್ಷ ಕೋಟಿ) ಹೂಡಿಕೆ ಮಾಡಿ ವಿಶಾಖಪಟ್ಟಣಂನಲ್ಲಿ AI ಹಬ್ ನಿರ್ಮಿಸುತ್ತಿದೆ. ಇದು ಭಾರತದ ಮೊದಲ AI ಡೇಟಾ ಹಬ್ ಆಗಲಿದ್ದು, ಗೂಗಲ್‌ನ ಪೂರ್ಣ AI ಸ್ಟ್ಯಾಕ್ ಮತ್ತು ಸೇವೆಗಳನ್ನು ತರುತ್ತದೆ. ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗೆ ಗೂಗಲ್ CEO ಸುಂದರ್ ಪಿಚೈ ಚರ್ಚಿಸಿದ್ದಾರೆ. ಈ ಹೂಡಿಕೆಯಿಂದ ಆಂಧ್ರದಲ್ಲಿ 20,000 ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಹೇಳಲಾಗಿದೆ.
ಇದನ್ನೂ ಓದಿ | “ತೊಂದರೆ ಕೊಡುವ ಸಂಘಟನೆಗಳ ನಿಷೇಧ”: ಸಿಎಂ ಸಿದ್ದರಾಮಯ್ಯ
ನಾವು ಗೂಗಲ್‌ಗೆ ಪ್ರಸ್ತಾಪ ಕಳುಹಿಸಿದ್ದೇವೆ, ಆದರೆ ಅವರು ಚರ್ಚೆಗೆ ಬರಲಿಲ್ಲ. ಬಿಜೆಪಿ ನಾಯಕರು ಕರ್ನಾಟಕ ಸರ್ಕಾರವನ್ನು ದೂಷಿಸುತ್ತಾರೆ. ಆದರೆ ಆಂಧ್ರಕ್ಕೆ ಕೇಂದ್ರದಿಂದ ₹22,000 ಕೋಟಿ ಸಹಾಯ, ವಿದ್ಯುತ್-ನೀರು ಉಚಿತ, ಭೂಮಿ ರಿಯಾಯಿತಿ ಮತ್ತು ಜಿಎಸ್‌ಟಿ ಮರುಪಾವತಿಯನ್ನು ಮರೆಮಾಚುತ್ತಾರೆ. ನಮ್ಮ ಸರ್ಕಾರ ಇದೇ ಕೊಟ್ಟಿದ್ದರೆ ಬಿಜೆಪಿ ದಿವಾಳಿ ಎಂದು ಹೇಳುತ್ತಿತ್ತು ಎಂದರು.







